ಬೋಲಂಗೀರ್: ಬಡತನಕ್ಕೆ ಸೋತು ತಂದೆಯೊಬ್ಬ ತನ್ನ 5 ದಿನ ಗಂಡು ಮಗುವನ್ನು 2.5 ಲಕ್ಷಕ್ಕೆ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಒಡಿಶಾ ರಾಜ್ಯದ ಬೋಲಂಗೀರ್ ಜಿಲ್ಲೆಯ ತಿತ್ಲಗಢ ಬ್ಲಾಕ್ ವ್ಯಾಪ್ತಿಯ ಜಂಕಾರಪದ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಸಂಬಂಧ ತಿತ್ಲಗಢ ಠಾಣಾ ಪೊಲೀಸರು ಆರೋಪಿಗಳಾದ ನವಜಾತ ಶಿಶುವಿನ ತಂದೆ ಸಂತೋಷ್ ಪಟೇಲ್ ಹಾಗೂ ಮಧ್ಯವರ್ತಿ ಶೇಖ್ ರಂಜಾನ್ ಎಂಬುವವರನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.
ಮಾಹಿತಿ ಪ್ರಕಾರ, ಆರೋಪಿ ಸಂತೋಷ್ ಪಾಳೆ ಹಾಗೂ ಅವರ ಪತ್ನಿ ಪುಷ್ಪಾ ಪಾಳೆ ಅವರಿಗೆ ಈಗಾಗಲೇ ಮಕ್ಕಳಿದ್ದಾರೆ. ಬಡತನದಿಂದ ಬಳಲುತ್ತಿದ್ದು, ಅವರಿಗೆ ಈಗ ಮತ್ತೊಂದು ಮಗುವನ್ನು ಸಾಕುವ ಹಾಗೂ ಅದರ ಭಾರವನ್ನು ಹೊರುವ ಸಾಮರ್ಥ್ಯ ಇರಲಿಲ್ಲ. ಹೀಗಾಗಿ ದಂಪತಿ ಹುಟ್ಟಿದ ಮಗುವನ್ನು ಮಕ್ಕಳಿಲ್ಲದವರಿಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಸಂತೋಷ್ ಪಾಳೆ ತನ್ನ ನೆರೆಹೊರೆಯವರಾದ ಶೇಖ್ ರಂಜಾನ್ ಅವರ ಸಹಾಯದಿಂದ ತಮ್ಮ 5 ದಿನದ ಮಗುವನ್ನು ಒಬ್ಬ ವ್ಯಕ್ತಿಗೆ 2.5 ಲಕ್ಷ ಹಣಕ್ಕೆ ಮಾರಾಟ ಮಾಡಿದ್ದಾರೆ. ಆ ವ್ಯಕ್ತಿಯನ್ನು ಕಾಲಹಂಡಿಯ ರಾಜಾ ಎಂದು ಗುರುತಿಸಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ತಿತ್ರಲಗಢ ಪೊಲೀಸರು ಸಂತೋಷ್ ಪಾಳೆ ಮತ್ತು ಶೇಖ್ ರಂಜಾನ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ಬಂಧಿಸಿದ್ದಾರೆ.
ಮಧ್ಯವರ್ತಿ ಶೇಖ್ ರಂಜಾನ್ ಅವರ ಪತ್ನಿ ಜರೀನಾ ಬೇಗಂ ಅವರು ಈ ಆರೋಪವನ್ನು ಒಪ್ಪಿಕೊಂಡಿದ್ದು, ಭಬಾನಿಪಟ್ಟಣದ ರಾಜಾ ಅವರು ತಮ್ಮ ಪತಿ ಶೇಖ್ ಅವರು ಬಳಿ ನವಜಾತ ಶಿಶು ಇದ್ದರೆ ಹೇಳಿ, ಖರೀದಿಸುತ್ತೇನೆ ಎಂದು ಹೇಳಿದ್ದರು. ನಂತರ ಸಂತೋಷ್ ಪಟೇಲ್ ಅವರು ತಮ್ಮ ಮಗುವನ್ನು ಮಾರಾಟ ಮಾಡಲು ಶೇಖ್ ರಂಜಾನ್ ಅವರನ್ನು ಸಂಪರ್ಕಿಸಿದ್ದರು. ಮಗುವನ್ನು ಮಾರಾಟ ಮಾಡಲು ಮಗುವಿನ ತಂದೆಗೆ ಯಾವುದೇ ವಿರೋಧ ಇರಲಿಲ್ಲ. ಅವರು ತಮ್ಮ ಮಗುವನ್ನು ಮಕ್ಕಳಿಲ್ಲದವರಿಗೆ ಮಾರಾಟ ಮಾಡಿ, ಅವರಿಂದ ಸುಮಾರು 2.5 ಲಕ್ಷ ರೂಪಾಯಿ ನಗದನ್ನು ಪಡೆದಿದ್ದಾರೆ. ಇದರಲ್ಲಿ ತಮ್ಮ ಪತಿಯದ್ದು ಯಾವುದೇ ತಪ್ಪು ಇಲ್ಲ. ಆದರೆ ಪೊಲೀಸರು ತಮ್ಮ ಪತಿಯನ್ನು ಬಂಧಿಸಿ, ಪತಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ ಎಂದು ಜರೀನಾ ಬೇಗಂ ಆರೋಪಿಸಿದ್ದಾರೆ.
ಇದನ್ನೂ ಓದಿ: ಕಡುಬಡತನ ಹಿನ್ನೆಲೆ 21 ದಿನದ ಮಗು ಮಾರಾಟ ಮಾಡಿದ ತಾಯಿ.. ಆರು ಮಂದಿ ಬಂಧನ