ETV Bharat / bharat

ಕುಟುಂಬ ವಿರೋಧಿಸಿ ಪ್ರೀತಿ.. ಮಗಳ ಮೇಲೆ ಗುಂಡಿನ ಸುರಿಮಳೆಗೈದ ಪಾಪಿ ತಂದೆ - ಮಗಳ ಮೇಲೆ ಪಾಪಿ ತಂದೆ ಗುಂಡು

ಕುಟುಂಬದ ವಿರೋಧ ಕಟ್ಟಿಕೊಂಡು ಪ್ರೀತಿ ಮಾಡಿದ್ದ ಮಗಳ ಮೇಲೆ ಪಾಪಿ ತಂದೆ ಗುಂಡು ಹಾರಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

FATHER SHOOTS DAUGHTER IN PATNA
FATHER SHOOTS DAUGHTER IN PATNA
author img

By

Published : Aug 20, 2022, 6:28 PM IST

ಪಾಟ್ನಾ(ಬಿಹಾರ): ದೇಶದಲ್ಲಿ ಮರ್ಯಾದೆಗೇಡು ಹತ್ಯೆಯಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸದ್ಯ ಬಿಹಾರದ ಪಾಟ್ನಾದಲ್ಲಿ ಅಂತಹ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಕುಟುಂಬದ ವಿರೋಧ ಕಟ್ಟಿಕೊಂಡು ಪ್ರೀತಿ ಮಾಡಿದ್ದಕ್ಕಾಗಿ ಮಗಳ ಮೇಲೆಯೇ ಪಾಪಿ ತಂದೆ ಗುಂಡು ಹಾರಿಸಿ, ಕೊಲೆಗೆ ಯತ್ನ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಬಿಹಾರದ ರಾಜಧಾನಿ ಪಾಟ್ನಾದ ನೌಬತ್​​​ಪುರದಲ್ಲಿ ಈ ಘಟನೆ ನಡೆದಿದೆ. ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಕ್ಕಾಗಿ ತಂದೆಯೇ ಮಗಳ ಮೇಲೆ ಐದು ಸಲ ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವತಿ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನೌಬತ್​​ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ರಿಷಿ ದೇವಿಪ್ರಸಾದ್​ ತನ್ನ 21 ವರ್ಷದ ಮಗಳ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ.ಯುವತಿಯ ದೇಹದೊಳಗೆ ಐದು ಗುಂಡುಗಳು ತಾಗಿದ್ದು, ಸದ್ಯ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಘಟನೆ ಬೆನ್ನಲ್ಲೇ ಆರೋಪಿ ರಿಷಿ ದೇವಿಪ್ರಸಾದ್​ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವೈದ್ಯರು, ಯುವತಿಯ ದೇಹದಲ್ಲಿ ಐದು ಗುಂಡುಗಳು ಪತ್ತೆಯಾಗಿದ್ದು, ಈಗಾಗಲೇ ಅವುಗಳನ್ನ ಹೊರತೆಗೆಯಲಾಗಿದೆ. ಸದ್ಯ ವೆಂಟಿಲೇಟರ್​​ನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದ ಸಹೋದರಿ ಮಗಳ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಭೂಪ

ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಳೆದ ಕೆಲ ದಿನಗಳಿಂದ ತಂದೆ-ಮಗಳ ನಡುವೆ ಪ್ರೀತಿ ವಿಚಾರವಾಗಿ ಜಗಳ ನಡೆಯುತ್ತಿತ್ತು. ಇಂದು ಅದು ತಾರಕ್ಕೇರಿದೆ. ಈ ವೇಳೆ ಮಗಳ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಇದರ ಬಗ್ಗೆ ಮಾತನಾಡಿರುವ ಸಂತ್ರಸ್ತೆಯ ತಾಯಿ ಮನೋರಮಾ ದೇವಿ, ತಂದೆ ಆಕಸ್ಮಿಕವಾಗಿ ಗುಂಡು ಹಾರಿಸಿದ್ದಾರೆಂದು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಎಸ್​ಎಚ್​ಒ ರಂಜಿತ್ ಕುಮಾರ್​​​ ನೇತೃತ್ವದ ಪೊಲೀಸ್ ತಂಡ ತಲುಪಿದ್ದು, ಪ್ರಾಥಮಿಕ ಮಾಹಿತಿ ಕಲೆ ಹಾಕಿದೆ. ಆರೋಪಿಯ ಬಂಧನ ಮಾಡಲು ಈಗಾಗಲೇ ಶೋಧಕಾರ್ಯ ನಡೆಸಲಾಗ್ತಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.