ETV Bharat / bharat

ಕುಡಿತದ ಚಟಕ್ಕಾಗಿ ₹70 ಸಾವಿರ ಪಡೆದು ಹೆಣ್ಣು ಮಗು ಮಾರಾಟ ಮಾಡಿದ ತಂದೆ! - Father sells one month girl for liquor

70 ಸಾವಿರ ರೂಪಾಯಿಗೆ ಜನ್ಮ ನೀಡಿದ ಮಗುವನ್ನೇ ಪಾಪಿ ತಂದೆಯೊಬ್ಬ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

Father sells one month girl
Father sells one month girl
author img

By

Published : Apr 20, 2022, 4:42 PM IST

ನಾಗ್ಪುರ್​(ಮಹಾರಾಷ್ಟ್ರ): ಕುಡುಕ ತಂದೆಯೋರ್ವ ಸ್ವಂತ ಮಗುವನ್ನೇ ಹಣಕ್ಕಾಗಿ ಮಾರಾಟ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಮಗುವಿನ ತಾಯಿ ನೀಡಿರುವ ದೂರಿನ ಆಧಾರದ ಮೇಲೆ ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪತ್ನಿಗೆ ಬೆದರಿಕೆ ಹಾಕಿರುವ ಗಂಡ, ಒಂದು ತಿಂಗಳ ನವಜಾತ ಶಿಶುವನ್ನು 70 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾನೆ. ಇದರಲ್ಲಿ ಅನಾಥಾಶ್ರಮದಲ್ಲಿ ಕೆಲಸ ಮಾಡ್ತಿದ್ದ ಮಹಿಳಾ ಉದ್ಯೋಗಿ ಶಾಮೀಲಾಗಿದ್ದಾಳೆ. ಮಗು ಖರೀದಿ ಮಾಡಿರುವವರ ಬಗ್ಗೆ ಶೋಧಕಾರ್ಯ ಮುಂದುವರೆದಿದೆ.

ಉತ್ಕರ್ಷದದ ದಹಿವಾಲೆ ಪತ್ನಿ ರಾಣಿ ದುರ್ಗಾವತಿ ಕಳೆದ ತಿಂಗಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಕುಡಿತದ ಚಟದಿಂದ ಸಾಲ ಮಾಡಿಕೊಂಡಿದ್ದ ಉತ್ಕರ್ಷ್​ ಹಣಕ್ಕೋಸ್ಕರ ಈ ನಿರ್ಧಾರ ಮಾಡಿದ್ದಾನೆ. ಇದರ ಬೆನ್ನಲ್ಲೇ ಉಮ್ರೆಡ್​ನ ದಂಪತಿ ಸಂಪರ್ಕಿಸಿ 70 ಸಾವಿರಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ, ಮಗುವಿನ ತಾಯಿ ಇದಕ್ಕೆ ಒಪ್ಪಿಕೊಂಡಿಲ್ಲ. ಗಂಡನ ನಿರ್ಧಾರದ ವಿರುದ್ಧ ಪ್ರತಿಭಟನೆ ಸಹ ನಡೆಸಿದ್ದಾಳೆ. ಆದರೆ, ಆಕೆಯ ವಿರೋಧದ ಮದ್ಯೆ ಕೂಡ ಮಗುವಿನ ಮಾರಾಟ ಮಾಡಲಾಗಿದೆ.

ಇದನ್ನೂ ಓದಿ: ಸಾಂಪ್ರದಾಯಿಕ ಚಿಕಿತ್ಸೆಗಾಗಿ ಭಾರತಕ್ಕೆ ಬರುವವರಿಗಾಗಿ 'ಆಯುಷ್​ ವೀಸಾ' ಕೆಟಗರಿ ಆರಂಭ: ಮೋದಿ

ಇದರ ಬೆನ್ನಲ್ಲೇ ಪೊಲೀಸ್ ಠಾಣೆಗೆ ತೆರಳಿರುವ ರಾಣಿ, ಗಂಡನ ವಿರುದ್ಧ ದೂರು ದಾಖಲು ಮಾಡಿದ್ದಾಳೆ. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಳಾದ ಉತ್ಕರ್ಷ್​​ ಹಾಗೂ ಉಷಾ ಎಂಬಾಕೆಯನ್ನ ಬಂಧನ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.