ETV Bharat / bharat

'ಸೈಕಲ್ ಗರ್ಲ್​' ಜ್ಯೋತಿ ಕುಮಾರಿ ತಂದೆ ಹೃದಯಾಘಾತದಿಂದ ಕೊನೆಯುಸಿರು! - ಲಾಕ್​ಡೌನ್​

2020ರ ಲಾಕ್​ಡೌನ್​ ಸಮಯದಲ್ಲಿ ತಂದೆಯನ್ನು ತನ್ನ ಸೈಕಲ್​ನಲ್ಲಿ ಕೂರಿಸಿಕೊಂಡು 1200 ಕಿ.ಮೀ ಸೈಕಲ್​ ತುಳಿದುಕೊಂಡು ಮನೆ ಸೇರಿದ್ದ 'ಸೈಕಲ್ ಗರ್ಲ್​' ಜ್ಯೋತಿ ಕುಮಾರಿ ತಂದೆ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

jyothi
jyothi
author img

By

Published : May 31, 2021, 5:00 PM IST

ದರ್ಭಂಗ/ ಬಿಹಾರ: ಮೊದಲ ಲಾಕ್​​ಡೌನ್ ಸಮಯದಲ್ಲಿ ಗುರುಗ್ರಾಮದಿಂದ ದರ್ಬಂಗ್​ಗೆ ​​ 1200 ಕಿ.ಮೀ ಸೈಕ್ಲಿಂಗ್ ಮಾಡಿ ಸುದ್ದಿಯಾಗಿದ್ದ 'ಸೈಕಲ್ ಗರ್ಲ್​' ಜ್ಯೋತಿ ಕುಮಾರಿ ತಂದೆ ಮೋಹನ್ ಪಾಸ್ವಾನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಎಂಟನೇ ತರಗತಿ ವಿದ್ಯಾರ್ಥಿನಿ ಜ್ಯೋತಿ ತನ್ನ ತಂದೆಯನ್ನು ಲಾಕ್​ಡೌನ್​ ಸಮಯದಲ್ಲಿ ಗುರುಗ್ರಾಮದಿಂದ 1200 ಕಿಲೋಮೀಟರ್ ಸೈಕಲ್​​ನಲ್ಲಿ ಕೂರಿಸಿಕೊಂಡು ದರ್ಭಂಗಕ್ಕೆ ಬಂದಿದ್ದಳು. ಆರು ದಿನಗಳ ಕಾಲ ಸೈಕಲ್​​ ತುಳಿದು ಅನಾರೋಗ್ಯಕ್ಕೊಳಗಾಗಿದ್ದ ತಂದೆಯನ್ನು ಈ ಬಾಲಕಿ ಮನೆಗೆ ಕರೆದುಕೊಂಡು ಬಂದಿದ್ದಳು.

ಅವಳ ಈ ಸಾಧನೆಗೆ ಎಲ್ಲಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಕೂಡ ಜ್ಯೋತಿ ಕಾರ್ಯಕ್ಕೆ ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಅತ್ಯಾಧುನಿಕ ರಾಷ್ಟ್ರೀಯ ಸೈಕ್ಲಿಂಗ್ ಅಕಾಡೆಮಿಯಲ್ಲಿ ಸೈಕಲ್ ಫೆಡರೇಶನ್ ಆಫ್ ಇಂಡಿಯಾ ಜ್ಯೋತಿಗೆ ಸೈಕ್ಲಿಂಗ್​ ಮಾಡಲು ಅವಕಾಶ ನೀಡಿತು ಆದರೆ ಈ ಪ್ರಸ್ತಾಪವನ್ನು ಜ್ಯೋತಿ ನಿರಾಕರಿಸಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.