ETV Bharat / bharat

ತನ್ನಿಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯಗೆ ಶರಣಾದ ತಂದೆ!

ಮಹೇಶ್ ಎನ್ನುವಾತ ತನ್ನ ಇಬ್ಬರು ಮಕ್ಕಳಾದ ಮೋನು ಮತ್ತು ಟಿಂಕು ಜೊತೆ ಮನೆಯಿಂದ ಹೊರಹೋಗಿದ್ದರು. ನಂತರ ಮೂವರೂ ನಾಪತ್ತೆಯಾಗಿದ್ದಾರೆ. ಪೊಲೀಸ್​ ತನಿಖೆ ಆರಂಭವಾದ ಬಳಿಕ ಮಕ್ಕಳ ಶವಗಳು ಪತ್ತೆಯಾಗಿದೆ. ಇದೀಗ ತಂದೆಯ ಮೃತ ದೇಹ ಕೂಡ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಡೆತ್​ ನೋಟ್​ನಲ್ಲಿ ತನ್ನ ಮಕ್ಕಳನ್ನು ಕೊಲೆ ಮಾಡಿರುವುದಾಗಿ ಮಹೇಶ್ ಒಪ್ಪಿಕೊಂಡಿದ್ದಾನೆ.

Father had killed innocent children
ಇಬ್ಬರು ಮಕ್ಕಳನ್ನು ಕೊಲೆಗೈದ ತಂದೆ ಆತ್ಮಹತ್ಯಗೆ ಶರಣು!
author img

By

Published : Aug 21, 2021, 6:45 PM IST

ನವದೆಹಲಿ: ತನ್ನ ಇಬ್ಬರು ಮಕ್ಕಳನ್ನು ಕೊಲೆಗೈದ ತಂದೆ ಆತ್ಮಹತ್ಯಗೆ ಶರಣಾಗಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ನೋಯ್ಡಾದ ಸೆಕ್ಟರ್​ 34ರಲ್ಲಿ ​​ಖಾಸಗಿ ಶಾಲೆಯ ಬಳಿ ಆದ ಇಬ್ಬರು ಮುಗ್ಧ ಮಕ್ಕಳ ಹತ್ಯೆಗೆ ಕಾರಣವೇನು ಎಂಬುದು ತಿಳಿದಿಲ್ಲ.

ಆದ್ರೆ, ಬಸಾಯಿ ಗ್ರಾಮದಲ್ಲಿ ಆ ಮಕ್ಕಳ ತಂದೆ ನೇಣಿಗೆ ಶರಣಾಗಿದ್ದಾನೆ. ಆತ ಬರೆದಿಟ್ಟ ಡೆತ್​ ನೋಟ್​ನಲ್ಲಿ ತನ್ನ ಮಕ್ಕಳನ್ನು ಕೊಲೆ ಮಾಡಿರುವ ವಿಷಯ ಬಹಿರಂಗವಾಗಿದೆ.

ಬಸಾಯಿ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ತಂದೆ ಮಹೇಶನ ಮೃತದೇಹ ಪೊಲೀಸರಿಗೆ ಸಿಕ್ಕಿದೆ. ಎರಡು ದಿನಗಳ ಹಿಂದೆ ಎರಡು ಮಕ್ಕಳ ಶವಗಳು ಸೆಕ್ಟರ್ -34 ರಲ್ಲಿರುವ ಶಾಲೆಯ ಬಳಿ ಪತ್ತೆಯಾಗಿದ್ದವು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಮೂಲಕ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಆದರೆ, ನಾಪತ್ತೆಯಾದವರನ್ನು ಹುಡುಕುವಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಹಾಗಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ನೋಯ್ಡಾದ ಪೊಲೀಸ್​​​ ಸ್ಟೇಷನ್ ಸೆಕ್ಟರ್ -49 ವ್ಯಾಪ್ತಿಯ ಹೋಶಿಯಾರ್ಪುರ್ ಗ್ರಾಮದಲ್ಲಿ ವಾಸಿಸುತ್ತಿರುವ ಮಹೇಶ್, ತನ್ನ ಇಬ್ಬರು ಮಕ್ಕಳಾದ ಮೋನು ಮತ್ತು ಟಿಂಕು ಜೊತೆ ಮನೆಯಿಂದ ಹೊರಹೋಗಿದ್ದರು. ನಂತರ ಮೂವರೂ ನಾಪತ್ತೆಯಾಗಿದ್ದಾರೆ.

ನಂತರ ಪೊಲೀಸ್​ ತನಿಖೆ ಆರಂಭಿಸಿದಾಗ ಮಕ್ಕಳ ಶವಗಳು ಪತ್ತೆಯಾಗಿದ್ದವು. ಅದರ ಜಾಡು ಹಿಡಿದು ಸಾಗಿದ ಪೊಲೀಸರಿಗೆ ತಂದೆಯ ಮೃತ ದೇಹ ಕೂಡ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.