ETV Bharat / bharat

ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ.. ಆರು ಮಂದಿ ಸ್ಥಳದಲ್ಲೇ ಸಾವು

author img

By

Published : Jul 9, 2023, 4:56 PM IST

Updated : Jul 9, 2023, 6:45 PM IST

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶ್ರೀಕಾಳಹಸ್ತಿಯಲ್ಲಿ ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿದ್ದಾರೆ.

ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ
ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ

ಚಿತ್ತೂರು (ಆಂಧ್ರಪ್ರದೇಶ) : ಇಲ್ಲಿನ ತಿರುಪತಿ ಜಿಲ್ಲೆಯ (ಹಿಂದೆ ಚಿತ್ತೂರು ಜಿಲ್ಲೆಯಲ್ಲಿತ್ತು) ಶ್ರೀಕಾಳಹಸ್ತಿಯಲ್ಲಿ ಮಾರಣಾಂತಿಕ ರಸ್ತೆ ಅಪಘಾತ ಸಂಭವಿಸಿದೆ. ಮಿತ್ತಕಂಡ್ರಿಗಾದಲ್ಲಿ ಕಾರು ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಆರು ಮಂದಿ ಸಾವನ್ನಪ್ಪಿದ್ದಾರೆ. ಈ ಜನರು ವಿಜಯವಾಡ ನಗರದವರು ಎಂಬುದು ತಿಳಿದುಬಂದಿದೆ. ತಿರುಮಲ ಶ್ರೀವಾರಿಯ ದರ್ಶನ ಮುಗಿಸಿ ಶ್ರೀಕಾಳಹಸ್ತಿಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ಲಾರಿಯಡಿಗೆ ಗುದ್ದಿದೆ.

ಅಪಘಾತದ ವೇಳೆ ಕಾರಿನಲ್ಲಿ 7 ಜನರಿದ್ದರು. ಶ್ರೀಕಾಳಹಸ್ತಿಯಿಂದ ತಿರುಪತಿ ಕಡೆಗೆ ಹೋಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಶ್ರೀಕಾಳಹಸ್ತಿ ಏರಿಯಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರನ್ನು ರಮೇಶ್, ನರಸಿಂಹಮೂರ್ತಿ, ಅಕ್ಷಯ, ರಾಜ್ಯಲಕ್ಷ್ಮಿ, ಶ್ರೀಲತಾ ಮತ್ತು ವೆಂಕಟರಮಣಮ್ಮ ಎಂದು ಗುರುತಿಸಲಾಗಿದೆ.

ಯುಪಿಯಲ್ಲೂ ಸಂಭವಿಸಿತ್ತು ಭೀಕರ ಅಪಘಾತ.. ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಖೇರಗಢ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ (3-7-2023) ಸೋಮವಾರ ತಡರಾತ್ರಿ ಸೈಯಾನ್​ ಖೇರಗಢ ರಸ್ತೆಯಲ್ಲಿ ಟೆಂಪೋ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಪರಿಣಾಮ ಟೆಂಪೋದಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದರು. ಘಟನೆಯ ನಂತರ ಕಾರಿನ ಚಾಲಕ ಪರಾರಿಯಾಗಿದ್ದು ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದರು.

ಅಂದು ರಾತ್ರಿ 11.30 ರ ಸುಮಾರಿಗೆ ಹತ್ತು ಮಂದಿ ಇದ್ದ ಟೆಂಪೋ ಸೈಯಾನ್​ನಿಂದ ಖೇರಗಡಕ್ಕೆ ಹೋಗುತ್ತಿತ್ತು. ಈ ವೇಳೆ ಎದುರಿನಿಂದ ಬಂದ ಕಾರು ಟೆಂಪೋಗೆ ಡಿಕ್ಕಿ ಹೊಡೆದಿತ್ತು. ಖೇರಗಢ ಪೊಲೀಸ್ ಠಾಣೆ ವ್ಯಾಪ್ತಿಯ ನಾಗಲಾ ಉದಯ ಗ್ರಾಮದ ನಿವಾಸಿ ಟೆಂಪೋ ಸವಾರ ಜಯಪ್ರಕಾಶ್, ಪತ್ನಿ ಬ್ರಜೇಶ್ದೇವಿ, 12 ವರ್ಷದ ಮಗ ಸುಮಿತ್ ಹಾಗು ವೃದ್ಧ ಬ್ರಜ್ ಮೋಹನ್ ಶರ್ಮಾ, ಟೆಂಪೋ ಚಾಲಕ ಭೋಲಾ ನಿವಾಸಿ ಅಯೆಲಾ ಮತ್ತು ಖೇರಗಢದ ಮನೋಜ್ (30) ಎಂಬುವವವರು ಸಾವನ್ನಪ್ಪಿದ್ದರು. ಇನ್ನುಳಿದ ನಾಲ್ವರು ಗಾಯಾಳುಗಳಿಗೆ ಎಸ್‌.ಎನ್. ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಖೇರಗಢ ಎಸಿಪಿ ಮಹೇಶ್ ಕುಮಾರ್ ಮಾಹಿತಿ ನೀಡಿದ್ದರು.

ಕಾರು ಚಾಲಕ ಬಂಟಿ ಹಾಗು ಆತನ ಗೆಳೆಯರಾದ ಪಿಂಕು ಮತ್ತು ಬನಿಯಾ ಎಂಬವರೊಂದಿಗೆ ಖೇರಘರ್‌ನಲ್ಲಿ ಸಂತೋಷ ಕೂಟ ಆಯೋಜಿಸಿದ್ದನಂತೆ. ಇದಾದ ನಂತರ ಬಂಟಿ ಇಬ್ಬರನ್ನೂ ಹಳ್ಳಿಯಲ್ಲಿ ಬಿಟ್ಟು ಕಾರಿನಲ್ಲಿ ಮನೆಗೆ ಬರುತ್ತಿದ್ದ. ಚಾಲಕ ಬಂಟಿ ಪಾನಮತ್ತನಾದ್ದರಿಂದ ಘಟನೆ ಸಂಭವಿಸಿತ್ತು. ಪಿಂಕು ಮತ್ತು ಬನಿಯಾ ಎಂಬಿಬ್ಬರನ್ನು ಬಂಧಿಸಲಾಗಿತ್ತು. ಕಾರು ಚಾಲಕನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದರು.

ಭಕ್ತರಿದ್ದ ವ್ಯಾನ್​ಗೆ ಎಸ್​ಯುವಿ ಕಾರು ಡಿಕ್ಕಿ : ಜುಲೈ 2ರಂದು ಲಖನೌ ಮತ್ತು ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಖಾಡೆಚಾ ಗ್ರಾಮದ ಮುಂಭಾಗ ಭಕ್ತರಿದ್ದ ವ್ಯಾನ್‌ಗೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿತ್ತು. ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಭಕ್ತ ಸಾವನ್ನಪ್ಪಿದ್ದು, ಸುಮಾರು 8 ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಹರಿಶಂಕರ್, ಕೌಶಲ್, ಚಾಲಕ ನೀರಜ್ ರಾಥೋಡ್, ದೀಪಕ್ ಮೌರ್ಯ, ಹಿಮಾಂಶು, ವಿನೀತ್ ಕುಮಾರ್, ಸೋನು ಪುತ್ರ ಗೋವರ್ಧನ್, ಸತ್ಯೇಂದ್ರ ಗಾಯಾಳುಗಳಾಗಿದ್ದರು. ರಿಂಕು (28)ಎನ್ನುವರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದರು. ಮಕಾನ್‌ಪುರ ಹೊರಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಬಿಲ್ಹೌರ್ ಸಿಎಚ್‌ಸಿಗೆ ದಾಖಲಿಸಿದ್ದರು.

ಇದನ್ನೂ ಓದಿ: ಟೆಂಪೋ- ಕಾರು ಭೀಕರ ರಸ್ತೆ ಅಪಘಾತ: ಪತಿ, ಪತ್ನಿ, ಮಗ ಸೇರಿ 6 ಮಂದಿ ಸಾವು, ಹಲವರಿಗೆ ಗಾಯ

Last Updated : Jul 9, 2023, 6:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.