ನವದೆಹಲಿ : ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಇನ್ನಷ್ಟು ಅನ್ನದಾತರು ಇಂದು ದೆಹಲಿಯತ್ತ ಹೆಜ್ಜೆ ಹಾಕುತ್ತಿರೋದ್ರಿಂದ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆ ಈಗಾಗಲೇ ಹಲವು ಗಡಿ ಭಾಗಗಳಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಈ ನಡುವೆ ರೈತರು ದೆಹಲಿ ಸಂಪರ್ಕಿಸುವ ಮೂರು ಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಗುರ್ಗಾಂವ್ ಹಾಗೂ ಜಜ್ಜರ್ ಬಹದ್ದೂರ್ಗಢ ಗಡಿಯನ್ನು ಬಂದ್ ಮಾಡಲಾಗಿದೆ. ಇದಲ್ಲದೆ ದೆಹಲಿ ನೋಯ್ಡಾ ಹೆದ್ದಾರಿಯನ್ನೂ ಸಹ ರೈತರು ಬಂದ್ ಮಾಡಿದ್ದು, ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
-
Farmers protest at Delhi-Noida border near Gautam Budh Dwar on Delhi-Noida Link Road, over Centre's farm laws pic.twitter.com/tLXbyH6tIq
— ANI (@ANI) December 2, 2020 " class="align-text-top noRightClick twitterSection" data="
">Farmers protest at Delhi-Noida border near Gautam Budh Dwar on Delhi-Noida Link Road, over Centre's farm laws pic.twitter.com/tLXbyH6tIq
— ANI (@ANI) December 2, 2020Farmers protest at Delhi-Noida border near Gautam Budh Dwar on Delhi-Noida Link Road, over Centre's farm laws pic.twitter.com/tLXbyH6tIq
— ANI (@ANI) December 2, 2020
ಅಲ್ಲದೆ ರೈತರು ಹೆದ್ದಾರಿ ತಡೆದು ಪ್ರತಿಭಟಿಸುತ್ತಿರುವ ಹಿನ್ನೆಲೆ ನಗರದಲ್ಲಿ ತೀವ್ರ ರೀತಿಯ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೂರಿದ್ದು, ವಾಹನ ಸವಾರರಿಗೆ ಬದಲಿ ಮಾರ್ಗ ಬಳಸಲು ಸೂಚಿಸಲಾಗಿದೆ.
ಪ್ರತಿಭಟನೆಗೆ ಸಾಥ್ ನೀಡಿದ ಭೀಮ್ ಆರ್ಮಿ, ಶಾಹೀನ್ಭಾಗ್ ದೀದಿ
ನಿನ್ನೆ ರೈತರ ಪ್ರತಿಭಟನೆಗೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ನೂರಾರು ಬೆಂಬಲಿಗರೊಂದಿಗೆ ದೆಹಲಿ-ಗಾಜಿಪುರ ಗಡಿಯಲ್ಲಿ ಪ್ರತಿಭಟನೆಯಲ್ಲಿ ಸೇರಿಕೊಂಡಿದ್ದಾರೆ. ಈ ವೇಳೆ ಹೊಸ ರೈತ ವಿರೋಧಿ ಕಾನೂನುಗಳನ್ನು ಶೀಘ್ರವೇ ಹಿಂಪಡೆಯಬೇಕು ಆಗ್ರಹಿಸಿದ್ದಾರೆ.
ಇವರಲ್ಲದೆ ಸಿಎಎ ವಿರೋಧಿ ಹೋರಾಟಲ್ಲಿ ಕಾಣಿಸಿಕೊಂಡು ಟೈಮ್ಸ್ ನಿಯತಕಾಲಿಕೆಯ ಮುಖಪುಟದಲ್ಲಿ ಪ್ರಭಾವಿ ಮಹಿಳೆಯಾಗಿ ಕಾಣಿಸಿದ್ದ ಬಿಲ್ಕಿಸ್ ದಾದಿ ಸಹ ರೈತರಿಗೆ ಬೆಂಬಲ ನೀಡಲು ದೆಹಲಿಗೆ ಆಗಮಿಸುತ್ತಿದ್ದರು. ಈ ವೇಳೆ ಸಿಂಘು ಗಡಿಯಲ್ಲಿ ಅವರನ್ನ ತಡೆ ಹಿಡಿಯಲಾಗಿದೆ.
ಮಂಗಳವಾರ ಮಧ್ಯಾಹ್ನದ ವೇಳೆ ನೋಯ್ಡಾ ದೆಹಲಿ ಗಡಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ರೈತರು, ಉತ್ತರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದ್ದಾರೆ.
ಇದರೊಟ್ಟಿಗೆ ದೆಹಲಿ ಪ್ರವೇಶಿಸುವ ಇನ್ನೂ ಐದು ಗಡಿ ಕೇಂದ್ರಗಳನ್ನು ನಿರ್ಬಂಧಿಸುವುದಾಗಿ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲ, ಕೆಲ ಗಡಿ ಭಾಗಗಳಲ್ಲಿ ಪ್ರತಿಭಟನಾಕಾರರನ್ನು ಅಲ್ಲಿಂದ ಕಳುಹಿಸಲಾಗಿದ್ದು, ಸಂಚಾರ ಮುಕ್ತ ಮಾಡಲಾಗಿದೆ.
ರೈತರು ನಡೆಸುತ್ತಿರುವ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕಾ ಕ್ರಮವಾಗಿ ಗಡಿಗಳಲ್ಲಿ ವಾಹನ ತಪಾಸಣೆ ಕೂಡ ತೀವ್ರಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.