ETV Bharat / bharat

ಸಂಸತ್​ಗೆ ಘೇರಾವ್ ಹಾಕುವ ಯಾವುದೇ ಯೋಜನೆಯಿಲ್ಲ.. ಹೊರಗೆ ಪ್ರತಿಭಟನೆ ನಡೆಸುತ್ತೇವಷ್ಟೇ ಎಂದ SMK! - ದೆಹಲಿ ಪೊಲೀಸರು

ಅಧಿವೇಶನ ನಡೆಯುವ ವೇಳೆ ನಾವು ಸಂಸತ್​ಗೆ ಮುತ್ತಿಗೆ ಹಾಕಲ್ಲ, ಹೊರಗೆ ಪ್ರತಿಭಟನೆ ನಡೆಸುತ್ತೇವೆ ಅಷ್ಟೇ ಎಂದು ಎಸ್​​ಎಂಕೆ ತಿಳಿಸಿದೆ.

SMK
SMK
author img

By

Published : Jul 20, 2021, 6:42 AM IST

ನವದೆಹಲಿ: ಜುಲೈ 19 ರಿಂದ ಸಂಸತ್​ ಅಧಿವೇಶನ ಪ್ರಾರಂಭವಾಗಿರುವ ಹಿನ್ನೆಲೆ ಯುನೈಟೆಡ್​​​ ಕಿಸಾನ್ ಮೋರ್ಚಾ ಸಂಘಟನೆ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ. ಇಂದಿನಿಂದ (ಜುಲೈ 20) ರಿಂದ ಎಸ್​ಕೆಎಂ ಸಂಘಟನೆಯ ಐವರು ಕಾರ್ಯಕರ್ತರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಲಿದ್ದಾರೆ.

ರೈತರ ಬೇಡಿಕೆಗಳ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತುವಂತೆ ವಿಪಕ್ಷಗಳಿಗೆ ಪತ್ರ ಬರೆಯಲಾಗುವುದು ಎಂದು ಎಸ್​ಕೆಎಂ ತಿಳಿಸಿದೆ. ಕಳೆದ ಎಂಟು ತಿಂಗಳಿನಿಂದಲೂ ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತರ ಆಂದೋಲನ ಮತ್ತು ಅವರ ಬೇಡಿಕೆಗಳನ್ನು ಈಡೇರಿಸಲು ವಿಪಕ್ಷಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕು.

ಪ್ರತಿಪಕ್ಷಗಳು ಸಂಸತ್​​ನಲ್ಲಿ ಅನಗತ್ಯ ವಿಚಾರಗಳನ್ನು ಮಾತಾಡುವುದು, ರೈತ ಆಂದೋಲನದ ಬಗ್ಗೆ ದನಿ ಎತ್ತದಿರುವುದು ತರವಲ್ಲ. ಸಂಸತ್​ನೊಳಗೆ ಅವರು ನಮ್ಮ ಪರ ಮಾತಾಡಬೇಕು. ನಾವು ಹೊರಗೆ ಪ್ರತಿಭಟನೆ ಮಾಡುತ್ತೇವೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್ ಹೇಳಿದ್ದಾರೆ.

ಜುಲೈ 22 ರಿಂದ ಸಂಸತ್​ಗೆ ಘೇರಾವ್ ಹಾಕುವ ಯಾವುದೇ ಉದ್ದೇಶ ರೈತರಿಗಿಲ್ಲ. ಈ ನಿಟ್ಟಿನಲ್ಲಿ ದೆಹಲಿ ಪೊಲೀಸರು ದಾರಿ ತಪ್ಪಿಸುವ ಪ್ರಚಾರ ಮಾಡುತ್ತಿದ್ದಾರೆ. ರೈತರ ಗುಂಪು ಜಂತರ್ ಮಂತರ್​ಗೆ ಹೋಗಿ ಪ್ರತಿಭಟನೆ ನಡೆಸಲು ಯೋಜಿಸಿದೆ. ನಿತ್ಯ ಹೊಸ ಹೊಸ ತಂಡ ಹೋಗಿ ಪ್ರತಿಭಟನೆ ನಡೆಸಲಿರುವ ಮಾಹಿತಿಯನ್ನು ನಾವು ದೆಹಲಿ ಪೊಲೀಸರಿಗೆ ತಿಳಿಸಿದ್ದೇವೆ.

ದೆಹಲಿ ಪೊಲೀಸರು ಈ ವಿಷಯವನ್ನು ಸಂಸತ್​ಗೆ ಘೇರಾವ್​​ ಹಾಕುವುದು ಎಂದುಕೊಂಡರೆ, ಅಪಾರ್ಥವಾಗುತ್ತದೆ. ನಮ್ಮ ಕಾರ್ಯಕ್ರಮವನ್ನು ನಾವು ಈ ಮೊದಲೇ ಘೋಷಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ದೇಶದ ಗಣ್ಯರ ಫೋನ್‌ ಹ್ಯಾಕಿಂಗ್‌ ತಲ್ಲಣ; ಆಡಳಿತ, ವಿಪಕ್ಷಗಳ ಏಟು, ಏದುರೇಟು ಹೇಗಿತ್ತು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.