ETV Bharat / bharat

ಇಂದು ಭಾರತ್ ಬಂದ್ ಅಂತ್ಯ, ಮುಂದುವರೆದ ಹೋರಾಟ: ನಾಳೆ ಬಾರುಕೋಲು ಚಳವಳಿಗೆ ನಿರ್ಧಾರ

protest
protest
author img

By

Published : Dec 8, 2020, 6:19 AM IST

Updated : Dec 8, 2020, 4:52 PM IST

16:48 December 08

ನಾಳೆ ಬಾರುಕೋಲು ಚಳವಳಿಗೆ ನಿರ್ಧಾರ

ಬೆಂಗಳೂರು: ರಾಜ್ಯದ ಹಲವೆಡೆ ಬಂದ್​ಗೆ ಬೆಂಬಲ  ವ್ಯಕ್ತವಾಗಿದ್ದು, ನಗರದ ಮೈಸೂರ್ ಬ್ಯಾಂಕ್ ಸರ್ಕಲ್, ಟೌನ್ ಹಾಲ್​ ಎದುರು ಸೇರಿದ್ದ ರೈತ ಸಂಘಟನೆಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಇವತ್ತಿಗೆ ಪ್ರತಿಭಟನೆಯನ್ನು ಮುಕ್ತಾಯಗೊಳಿಸಿ,‌ ನಾಳೆಗೆ ಬಾರುಕೋಲು ಚಳವಳಿ ಮಾಡಲು ನಿರ್ಧರಿಸಿದ್ದಾರೆ. ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಾಳೆ  ಬಾರುಕೋಲು ಚಳವಳಿ ನಡೆಯಲಿದೆ. 

16:14 December 08

ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ

ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ
ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ

ಮಂಗಳೂರು: ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ರಸ್ತೆ ತಡೆ ಕಾರ್ಯಕ್ರಮ ನಡೆಸಲಾಯಿತು. ಕೇಂದ್ರ ಸರ್ಕಾರದ ಮೂರು ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್​ಗೆ ಸುಳ್ಯ ಹಾಗೂ ಕಡಬದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 25 ನಿಮಿಷಗಳ ಕಾಲ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟಿಸಲಾಯಿತು. ಬಳಿಕ ಉಪ ತಹಸೀಲ್ದಾರ್ ಮನೋಹರ್ ಕೆ.ಟಿ.ಮೂಲಕ ರಾಷ್ಟ್ರಪತಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು. 

16:13 December 08

ಚಳ್ಳಕೆರೆ ಪಟ್ಟಣದಲ್ಲಿ ಎತ್ತಿನಗಾಡಿಯಲ್ಲಿ ಬಂದು ರೈತರ ಪ್ರತಿಭಟನೆ

ಚಿತ್ರದುರ್ಗ: ಚಳ್ಳಕೆರೆ ಪಟ್ಟಣದಲ್ಲಿ ರೈತರು ಎತ್ತಿನಗಾಡಿಯಲ್ಲಿ ಬಂದು ಪ್ರತಿಭಟನೆ ನಡೆಸಿದರು. ತಕ್ಷಣವೇ ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನ ವಾಪಾಸ್‌ ಪಡೆಯುವಂತೆ  ರೈತರು ಆಗ್ರಹಿಸಿದರು.  

15:57 December 08

ಹಗರಿಬೊಮ್ಮನಹಳ್ಳಿಯಲ್ಲಿ ಹಾಗೂ ಕೊಟ್ಟೂರಿನಲ್ಲಿ ಬಂದ್ ಭಾಗಶಃ ಯಶಸ್ವಿ

ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಹಾಗೂ ಕೊಟ್ಟೂರಿನಲ್ಲಿ ಬಂದ್ ಭಾಗಶಃ ಯಶಸ್ವಿಯಾಗಿದೆ. ಎರಡೂ ಪಟ್ಟಣಗಳಲ್ಲಿ ಪ್ರಮುಖ ವೃತ್ತಗಳಲ್ಲಿ ರೈತ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳ ಜಾರಿ ವಿರೋಧಿಸಿ ರಸ್ತೆ ತಡೆ ನಡೆಸಿದರು.

15:56 December 08

ಭಾರತ ಬಂದ್‌ಗೆ ಹಾವೇರಿ ಜಿಲ್ಲೆಯಲ್ಲಿ ಭಾರೀ ಬೆಂಬಲ

ಹಾವೇರಿ: ರೈತಪರ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್‌ಗೆ ಹಾವೇರಿ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿದೆ. ಬಂದ್ ಬೆಂಬಲಿಸಿ ವಿವಿಧ ರೈತ ಸಂಘಟನೆಗಳು ಹಾವೇರಿಯಲ್ಲಿ ಪ್ರತಿಭಟನೆ ನಡೆಸಿದವು. ವ್ಯಾಪಾರ-ವಹಿವಾಟು ಆರಂಭಿಸಿದ್ದ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು. ನಂತರ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರೈತಪರ ಸಂಘಟನೆಗಳು ರಸ್ತೆ ತಡೆ ನಡೆಸಿದರು. ರೈತರ ಪ್ರತಿಭಟನೆಗೆ ಕಾಂಗ್ರೆಸ್, ಎಸ್ಎಫ್ಐ, ದಲಿತ ಸಂಘರ್ಷ ಸಮಿತಿ, ಲೈಂಗಿಕ ಅಲ್ಪಸಂಖ್ಯಾತರ ಸಂಘ ಹಾಗೂ ವಕೀಲರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಪಾಲ್ಗೊಂಡಿದ್ದವು.  

15:51 December 08

ಬೀದರ್​ನಲ್ಲಿ ಹೆದ್ದಾರಿ ತಡೆದು ರೈತರು ಪ್ರತಿಭಟನೆ: ರೈತರು-ಪೊಲೀಸರ ನಡುವೆ ವಾಗ್ವಾದ

ಬೀದರ್: ತಾಲೂಕಿನ ಅಣದೂರು ಗ್ರಾಮದ ಬಳಿಯಲ್ಲಿ ಬೀದರ್-ಕಲಬುರಗಿ ಹೆದ್ದಾರಿ ತಡೆದು ರೈತರು ಪ್ರತಿಭಟನೆ ಮಾಡಲು ಮುಂದಾದಾಗ ಪೊಲೀಸರು ಇದಕ್ಕೆ ತಡೆಯೊಡ್ಡಿದರು. ಈ ಮಧ್ಯೆ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಬೆಳಿಗ್ಗೆಯಿಂದಲೂ ಜಿಲ್ಲೆಯಾದ್ಯಂತ ಸಾರಿಗೆ ಸಂಚಾರ, ಅಂಗಡಿ ಮುಗ್ಗಟ್ಟು, ವ್ಯಾಪಾರ ವಹಿವಾಟು ಸೇರಿದಂತೆ ಸಾರ್ವಜನಿಕ ಸಂಚಾರ ಸಾಮಾನ್ಯವಾಗಿದ್ದು, ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ರೈತ ಸಂಘಟನೆಗಳ ಮುಖಂಡರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

15:45 December 08

ಕೊರಳಿಗೆ ಹಗ್ಗಹಾಕಿಕೊಂಡು ರೈತನ ಪ್ರತಿಭಟನೆ

ಕೊರಳಿಗೆ ಹಗ್ಗಹಾಕಿಕೊಂಡು ರೈತನ ಪ್ರತಿಭಟನೆ
ಕೊರಳಿಗೆ ಹಗ್ಗಹಾಕಿಕೊಂಡು ರೈತನ ಪ್ರತಿಭಟನೆ

ಹುಬ್ಬಳ್ಳಿ: ಭಾರತ್ ಬಂದ್ ಹಿನ್ನೆಲೆ ರೈತನೋರ್ವ ಕೊರಳಿಗೆ ಹಗ್ಗ ಹಾಕಿಕೊಂಡು ಚನ್ನಮ್ಮ ವೃತ್ತದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದ ಡಿ.ಜಿ.ಜಂತ್ಲಿ ಎಂಬ ರೈತ ಕೊರಳಿಗೆ ಹಗ್ಗ ಹಾಕಿಕೊಂಡು ವಿನೂತನ ಪ್ರತಿಭಟನೆ ನಡೆಸಿದರು. 

15:30 December 08

ಇದು ರೈತರ ಹೋರಾಟವನ್ನು ದಿಕ್ಕು ತಪ್ಪಿಸುತ್ತಿರುವಂತಹ ರಾಜಕೀಯ ಪಕ್ಷಗಳ ಬಂದ್: ಸಂಸದೆ ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ಇವತ್ತಿನ ಭಾರತ್ ಬಂದ್ ಕೇವಲ ರೈತರ ಬಂದ್​ ಸಲ್ಲ. ಇದು ರೈತರ ಹೋರಾಟವನ್ನು ದಿಕ್ಕು ತಪ್ಪಿಸುತ್ತಿರುವಂತಹ ರಾಜಕೀಯ ಪಕ್ಷಗಳ ಬಂದ್. ಯಾವ ಬಿಲ್​ ಅನ್ನು ಹಿಂದೆ ಪ್ರಣಾಳಿಕೆಯಲ್ಲಿ ಮಂಡನೆ ಮಾಡುತ್ತೇವೆ ಅಂದಿತ್ತೋ ಅದೇ ಬಿಲ್​ಗಾಗಿ ಇಂದು ಪ್ರತಿಭಟನೆ ನಡೆಯುತ್ತಿದೆ. ಮೋದಿ ಸರ್ಕಾರವನ್ನು ವಿರೋಧ ಮಾಡುವ ಷಡ್ಯಂತರದಿಂದ ಈ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. 

15:29 December 08

ಕಲಬುರಗಿಯಲ್ಲಿ ಬಸ್ ಸಂಚಾರ ಸ್ಥಗಿತದಿಂದ ಪ್ರಯಾಣಿಕರ ಪರದಾಟ

ಕಲಬುರಗಿ: ಭಾರತ್ ಬಂದ್ ಬೆಂಬಲಿಸಿ ಕಲಬುರಗಿಯಲ್ಲಿ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು‌‌. ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಹಾಗೂ ಇತರೆ ರೈತ, ಕಾರ್ಮಿಕ ಸಂಘಟನೆಗಳು, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಜರುಗಿತು. ಈ ವೇಳೆ ನಗರದ ಕೇಂದ್ರ ಬಸ್ ನಿಲ್ದಾಣದ ಮುಂದೆ ಮುಖ್ಯ ರಸ್ತೆ ತಡೆ ನಡೆಸಿ ಸಂಚಾರ ಸ್ಥಗಿತಗೊಳಿಸಲಾಯಿತು. ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್​ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಕೆಲ ಕಾಲ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಯಿತು. 

15:16 December 08

ವಾಟಾಳ್‌ ನಾಗರಾಜ್ ಪೊಲೀಸರ ವಶಕ್ಕೆ

ವಾಟಾಳ್‌ ನಾಗರಾಜ್ ಪೊಲೀಸರ ವಶಕ್ಕೆ

ಬೆಂಗಳೂರು :ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್ ಹಾಗೂ ಕನ್ನಡ ಪರ ಹೋರಾಟಗಾರರನ್ನ ಪೊಲೀಸರು ವಶಕ್ಕೆ ಪಡೆದರು. 

15:09 December 08

ಭದ್ರತೆ ಪರಿಶೀಲನೆ ನಡೆಸಿದ ಹು-ಧಾ ಪೋಲಿಸ್ ಆಯುಕ್ತ ಲಾಬೂರಾಮ್

ಹುಬ್ಬಳ್ಳಿ: ಭಾರತ್ ಬಂದ್ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಚನಮ್ಮ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿದ ಹು-ಧಾ ಪೋಲಿಸ್ ಆಯುಕ್ತ ಲಾಬೂರಾಮ್ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದರು.

15:07 December 08

ರೈತ ವಿರೋಧಿ ಕಾನೂನು ಜಾರಿಗೊಳಿಸಿದ ಸರ್ಕಾರಗಳು ಹೇಳ ಹೆಸರಿಲ್ಲದೆ ಬಿದ್ದು ಹೋಗಿವೆ: ಐವನ್ ಡಿಸೋಜ

ಮಂಗಳೂರು: ರೈತ ವಿರೋಧಿ, ಜನ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿರುವ ಹಿಂದಿನ ಸರ್ಕಾರಗಳು ಹೇಳ ಹೆಸರಿಲ್ಲದೆ ಬಿದ್ದು ಹೋಗಿವೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೂ ಬಾಳ್ವಿಕೆ ಇಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತ ವಿರೋಧಿ ಕಾನೂನು ಜಾರಿಗೆ ತರುತ್ತಿವೆ. ಆದ್ದರಿಂದ ಗೊತ್ತು ಗುರಿ ಇಲ್ಲದೆ ದಾರಿ ತಪ್ಪಿದ ಈ ಎರಡೂ ಸರ್ಕಾರಗಳ ವಿರುದ್ಧ ಇಂದು ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಹೇಳಿದರು.

14:51 December 08

ಪಿಎಂ ಮೋದಿ ರೈತರ ವಿರುದ್ಧ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ: ಸಿಎಂ

ಬೆಂಗಳೂರು: ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಬಂದ್‌ಗೆ ಯಾರೂ ಬೆಂಬಲ ನೀಡುತ್ತಿಲ್ಲ. ರಾಜ್ಯ ಮತ್ತು ಕೇಂದ್ರವು ರೈತ ಪರವಾಗಿದೆ. ಪಿಎಂ ರೈತರ ವಿರುದ್ಧ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ರಾಜಕೀಯ ಕಾರಣಗಳಿಗಾಗಿ ಬಂದ್‌ಗೆ ಕರೆ ನೀಡುವುದು ಸರಿಯಲ್ಲ. ಕಾನೂನು ಉಲ್ಲಂಘಿಸಿದರೆ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುತ್ತಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

14:37 December 08

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತರಿಗೆ ಮರಣ ಶಾಸನ: ವಾಟಾಳ್ ನಾಗರಾಜ್

ಕೃಷಿ ಕಾಯ್ದೆಗಳು ರೈತರಿಗೆ ಮರಣ ಶಾಸನ: ವಾಟಾಳ್ ನಾಗರಾಜ್

ಬೆಂಗಳೂರು: ಇಂದು ದೇಶಾದ್ಯಂತ ಕರೆ ನೀಡಿರುವ ಭಾರತ್ ಬಂದ್​ ವಿಚಾರವಾಗಿ ಮಾತನಾಡಿದ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತರಿಗೆ ಮರಣ ಶಾಸನ. ರೈತರನ್ನು ಹತ್ತಿಕ್ಕುವಂತಹ ಕೆಟ್ಟ ಕಾಯ್ದೆ. ಇಡೀ ದೇಶವನ್ನೇ ಖಾಸಗಿಯವರಿಗೆ ಮಾರುವಂತಹ ವ್ಯವಸ್ಥೆ. ಇದನ್ನು ವಿರೋಧಿಸಿ ರೈತರು ಕರೆ ನೀಡಿರುವ ಭಾರತ್ ಬಂದ್​ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

14:36 December 08

ಕೊಡಗಿನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ

ಕೊಡಗು: ಮಡಿಕೇರಿಯಲ್ಲಿ ರೈತ ಸಂಘದಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಸ್ತೆ ತಡೆ ತೆರವುಗೊಳಿಸಲು ಮುಂದಾದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರ ನಡೆ ಖಂಡಿಸಿದ ರೈತರು ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು.  

14:35 December 08

ಭಾರತ್ ಬಂದ್ ಬೆಂಬಲಿಸಿ ಕೊಪ್ಪಳದಲ್ಲಿ ಪ್ರತಿಭಟನೆ

ಕೊಪ್ಪಳ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ಕರೆ ನೀಡಲಾಗಿದ್ದ ಭಾರತ್ ಬಂದ್ ಬೆಂಬಲಿಸಿ ಕೊಪ್ಪಳದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಂಟಿಯಾಗಿ ಪ್ರತಿಭಟನೆ ನಡೆಸಿದರು‌. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಾಂಗ್ರೆಸ್ ಪಕ್ಷ, ಎಐಡಿವೈಓ ಕಾರ್ಯಕರ್ತರು ಜಂಟಿಯಾಗಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

14:20 December 08

ಈ ಹಿಂದೆ ತಾವೇ ಬೆಂಬಲಿಸಿದ್ದ ಕೃಷಿ ಸುಧಾರಣೆಗಳಿಗೆ ಈಗ ಪ್ರತಿಪಕ್ಷಗಳ ವಿರೋಧ: ಸಚಿವ ಸುಧಾಕರ್

  • ಈ ಹಿಂದೇ ತಾವೇ ಬೆಂಬಲಿಸಿದ್ದ ಸುಧಾರಣೆಗಳ್ನು ಈಗ ವಿನಾಕಾರಣ ವಿರೋಧಿಸುತ್ತಿರುವ ವಿಪಕ್ಷಗಳ ನಡೆ ರಾಜಕೀಯ ದುರುದ್ದೇಶದಿಂದ ಕೂಡಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರ ರೈತರ ಹಿತಾಸಕ್ತಿ ಕಾಪಾಡಲು ಕಟಿಬದ್ಧವಾಗಿದ್ದು ಪಟ್ಟಭದ್ರ ಹಿತಾಸಕ್ತಿಗಳ ಅಪಪ್ರಚಾರದ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತದೆ. (4/4)#FarmersWithModi pic.twitter.com/dAr0MdSyaY

    — Dr Sudhakar K (@mla_sudhakar) December 8, 2020 " class="align-text-top noRightClick twitterSection" data=" ">

ಬೆಂಗಳೂರು: ಈ ಹಿಂದೆ ತಾವೇ ಬೆಂಬಲಿಸಿದ್ದ ಕೃಷಿ ಸುಧಾರಣೆಗಳನ್ನು ಈಗ ಪ್ರತಿಪಕ್ಷಗಳು ವಿನಾಕಾರಣ ವಿರೋಧಿಸುತ್ತಿವೆ. ಪಟ್ಟಭದ್ರ ಹಿತಾಸಕ್ತಿಗಳ ಅಪಪ್ರಚಾರದ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

14:15 December 08

ಜೆಡಿಎಸ್ ಶಾಸಕರಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ

ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ಜೆಡಿಎಸ್ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಪ್ರತಿಭಟನೆ ಬೆನ್ನಲ್ಲೇ ಜೆಡಿಎಸ್​ನಿಂದಲೂ ಪ್ರತಿಭಟನೆ‌ ನಡೆಸಲಾಯಿತು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಹಿರಿಯ ನಾಯಕ ಬಸವರಾಜ್ ಹೊರಟ್ಟಿ, ಪುಟ್ಟರಾಜ್, ಶ್ರೀಕಂಠೇಗೌಡ, ಶಿವಲಿಂಗೇಗೌಡ, ತಿಪ್ಪೇಸ್ವಾಮಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

14:13 December 08

ರೈತರ ಬೇಡಿಕೆ ಈಡೇರಿಕೆಗೆ ಡಿಸಿ ಮೂಲಕ ಪ್ರಧಾನಿಗೆ ಮನವಿ

ಶಿವಮೊಗ್ಗ: ಭಾರತ್ ಬಂದ್​ಗೆ ಬೆಂಬಲಿಸಿ ಹೋರಾಟ ನಿರತ ರೈತರ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

13:20 December 08

ಕೆ.ಆರ್ ಪುರ: ತಲೆ ಮೇಲೆ ಗೋಣಿಚೀಲ ಹೊದ್ದು ಪ್ರತಿಭಟನೆ

ತಲೆ ಮೇಲೆ ಗೋಣಿಚೀಲ ಹೊದ್ದು ಪ್ರತಿಭಟನೆ
ತಲೆ ಮೇಲೆ ಗೋಣಿಚೀಲ ಹೊದ್ದು ಪ್ರತಿಭಟನೆ

ಕೆ.ಆರ್ ಪುರ: ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸುವ ಹಿನ್ನೆಲೆ ತಲೆ ಮೇಲೆ ಗೋಣಿಚೀಲವನ್ನು ಹೊದ್ದು, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ನಂತರ ರೈತರನ್ನು ಪೊಲೀಸರು ವಶಕ್ಕೆ ಪಡೆದರು.  

13:20 December 08

ನಡು ರಸ್ತೆಯಲ್ಲಿ ಪಲಾವ್ ತಯಾರಿಸುವ ಮೂಲಕ ಪ್ರತಿಭಟನೆ

ಧಾರವಾಡ: ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್​ಗೆ ಧಾರವಾಡದ ಜುಬಿಲಿ ವೃತ್ತದಲ್ಲಿ ರೈತ ಸಂಘಟನೆಗಳು ಅಡುಗೆ ಮಾಡುವ ಮೂಲಕ ಪ್ರತಿಭಟನೆ ಮಾಡಿದರು. ನಡು ರಸ್ತೆಯಲ್ಲಿನಲ್ಲಿ ಪಲಾವ್ ತಯಾರಿಸುವ ಮೂಲಕ ವಿಭಿನ್ನವಾಗಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದರು.  

13:09 December 08

ಅನ್ನದ ತಟ್ಟೆ ಹಿಡಿದವನ ಬಾಯಿ, ಕಣ್ಣು ಮುಚ್ಚಿ ರೈತರ ಆಕ್ರೋಶ

ಬೆಂಗಳೂರು: ನಗರದ ವಿವಿಧೆಡೆ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಮೈಸೂರು ಬ್ಯಾಂಕ್ ವೃತ್ತದ ಮಧ್ಯೆ ರಸ್ತೆಯಲ್ಲಿ‌ ಕುಳಿತು ಕುರುಬೂರು ಶಾಂತಕುಮಾರ್ ಹಾಗೂ ಬೆಂಬಲಿಗರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಅನ್ನದ ತಟ್ಟೆ ಹಿಡಿದು ತಿನ್ನಲು ಕುಳಿತವನ ಬಾಯಿ ಹಾಗೂ ಕಣ್ಣು ಮುಚ್ಚಿ ಪ್ರತಿಭಟನೆ ನಡೆಸಿದರು. 'ಅನ್ನ ಕಿತ್ತು ಕೊಳ್ಳುವ ಸರ್ಕಾರಕ್ಕೆ ಧಿಕ್ಕಾರ' ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

13:08 December 08

ರೈತ ಮುಖಂಡರ ಅರೆ ಬೆತ್ತಲೆ ಪ್ರತಿಭಟನೆ

ರೈತ ಮುಖಂಡರ ಅರೆ ಬೆತ್ತಲೆ ಪ್ರತಿಭಟನೆ
ರೈತ ಮುಖಂಡರ ಅರೆ ಬೆತ್ತಲೆ ಪ್ರತಿಭಟನೆ

ಹುಬ್ಬಳ್ಳಿ: ನಗರದಲ್ಲಿ ರೈತ ಮುಖಂಡರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಘೋಷಣೆ ಕೂಗಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು. 

13:00 December 08

ಚಿಕ್ಕಮಗಳೂರು: ಮೋದಿ, ಶಾ, ಬಿಎಸ್​ವೈ ಅಣಕು ಶ್ರದ್ಧಾಂಜಲಿ

ಚಿಕ್ಕಮಗಳೂರು: ಇಂದು ಭಾರತ ಬಂದ್​ಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಸಿಎಂ ಯಡಿಯೂರಪ್ಪ ಅವರ ಭಾವಚಿತ್ರಕ್ಕೆ ಪ್ರತಿಭಟನಾ ನಿರತರು ಅಣಕು ಶ್ರದ್ದಾಂಜಲಿ ಸಲ್ಲಿಸಿದರು. ಪ್ರತಿಭಟನೆ ವೇಳೆ ನಡು ರಸ್ತೆಯಲ್ಲಿ ಮೂವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.  

12:52 December 08

ಅನ್ನದಾತರ ಹೋರಾಟಕ್ಕೆ ಚಿಣ್ಣರ ಸಾಥ್

ಅನ್ನದಾತರ ಹೋರಾಟಕ್ಕೆ ಚಿಣ್ಣರ ಸಾಥ್
ಅನ್ನದಾತರ ಹೋರಾಟಕ್ಕೆ ಚಿಣ್ಣರ ಸಾಥ್

ಚಾಮರಾಜನಗರ: ರೈತರು ನಡೆಸುತ್ತಿದ್ದ ಹೋರಾಟಕ್ಕೆ ಚಿಣ್ಣರು ಸಾಥ್ ನೀಡಿದರು. ಕೆಎಸ್ಆ್​ಟಿಸಿ ಬಸ್ ನಿಲ್ದಾಣದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ಎಸ್​ಡಿಪಿಐ, ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಮಕ್ಕಳನ್ನು ಕುದುರೆಗಾಡಿಯಲ್ಲಿ, ಬೈಕ್​ನಲ್ಲಿ ಕರೆತಂದು ರೈತರ ಪರ ಘೋಷಣೆಗಳನ್ನು ಕೂಗಿದರು.

12:44 December 08

ಕೈಗೆ ಕಪ್ಪು ಪಟ್ಟಿ ಧರಿಸಿ ಅಧಿವೇಶನದಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕರು

ಬೆಂಗಳೂರು: ಇಂದು ದೇಶಾದ್ಯಂತ ರೈತಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಬೀದಿಗಳಿದು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ನಡುವೆ ಕಾಂಗ್ರೆಸ್​ ನಾಯಕರು ಕೂಡ ಭಾರತ್​ ಬಂದ್​ಗೆ ಬೆಂಬಲ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್​ ನಾಯಕರು ವಿಧಾನಸೌಧದ ಆವರಣದಲ್ಲಿ ಗಾಂಧಿ ಪ್ರತಿಮೆ ಮುಂದೆ ಕೂತು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಜಮೀರ್ ಅಹಮದ್, ಕೆ ಜೆ ಜಾಜ್೯ , ರಾಮಲಿಂಗಾ ರೆಡ್ಡಿ, ಮಾಜಿ ಡಿಸಿಎಂ ಪರಮೇಶ್ವರ್, ಎಂಎಲ್​ಸಿ ಬಿ.ಕೆ.ಹರಿಪ್ರಸಾದ್, ನಾರಾಯಣಸ್ವಾಮಿ, ಯು.ಬಿ.ವೆಂಕಟೇಶ್ ಇನ್ನೂ ಮೊದಲಾದವರು ಭಾಗಿಯಾಗಿದ್ದರು. ಅಲ್ಲದೆ ವಿಧಾನಮಂಡಲ ಕಲಾಪದಲ್ಲಿಯೂ ಸಹ ಕಪ್ಪು ಪಟ್ಟಿ ಧರಿಸಿ ಪಾಲ್ಗೊಂಡಿದ್ದಾರೆ.

12:05 December 08

ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನ

ಬೆಂಗಳೂರು: ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ರೈತ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮೌರ್ಯ ಸರ್ಕಲ್​ನಿಂದ ಮೈಸೂರು ಬ್ಯಾಂಕ್ ಸರ್ಕಲ್​ ಕಡೆಗೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದಾರೆ. ಈ ವೇಳೆ ವಿಧಾನಸೌಧದ ಕಡೆಗೆ ರೈತರು ನುಗ್ಗಲು ಹೊರಟಾಗ ಪೊಲೀಸರು ಅವರನ್ನು ತಡೆದರು. ಈ ವೇಳೆ ಪೊಲೀರು ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು. ಇದೇ ವೇಳೆ ರೈತರೊಬ್ಬರು ಅಸ್ವಸ್ಥರಾಗಿ ಕುಸಿದು ಬಿದ್ದರು. ಬಳಿಕ ಮತ್ತೆ ಮೈಸೂರು ಬ್ಯಾಂಕ್ ಸರ್ಕಲ್​ನತ್ತ ಮೆರವಣಿಗೆ ಹೊರಟಿತು. ಮಳೆ ನಡುವೆಯೇ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ.

11:57 December 08

ರಸ್ತೆ ತಡೆಗೆ ಎಎಸ್ಪಿ ಆಕ್ಷೇಪ: ಪೊಲೀಸರು-ಪ್ರತಿಭಟನಾ ನಿರತರ ನಡುವೆ ವಾಗ್ವಾದ

ರಸ್ತೆ ತಡೆಗೆ ಎಎಸ್ಪಿ ಆಕ್ಷೇಪ
ರಸ್ತೆ ತಡೆಗೆ ಎಎಸ್ಪಿ ಆಕ್ಷೇಪ

ಬಳ್ಳಾರಿ: ನಗರದ ಗಡಿಗಿ ಚನ್ನಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡರು ಕೈಗೊಂಡಿದ್ದ ಪ್ರತಿಭಟನೆಯ ವೇಳೆ ಜಿಲ್ಲಾ ಪೊಲೀಸರು ಹಾಗೂ ಪ್ರತಿಭಟನಾ ನಿರತ ಕಾಂಗ್ರೆಸ್ ಮುಖಂಡರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ರಸ್ತೆ ತಡೆಗೆ ಕಾಂಗ್ರೆಸ್ ಕಾರ್ಯಕರ್ತರು ಮುಂದಾದಾಗ ಸ್ಥಳಕ್ಕಾಗಮಿಸಿದ ಎಎಸ್ಪಿ ಬಿ.ಎನ್.ಲಾವಣ್ಯ ಅವರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

11:57 December 08

ರಾಯಚೂರಿನಲ್ಲಿ ಭಾರತ್ ಬಂದ್ ಬೆಂಬಲಿಸಿ ಬೈಕ್ ರ‍್ಯಾಲಿ

ರಾಯಚೂರು: ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ನಾನಾ ಸಂಘಟನೆಗಳು ಭಾರತ್ ಬಂದ್​ಗೆ ಬೆಂಬಲ ಸೂಚಿಸುವೆ. ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಬೈಕ್ ರ‍್ಯಾಲಿ ನಡೆಸಿದರು. ನಗರದ ತೀನ್ ಕಂದೀಲ್, ಪಟೇಲ್ ರೋಡ್, ಮಾರುಕಟ್ಟೆ ಬಳಿ ತೆರೆದಿದ್ದ ಅಂಗಡಿಗಳನ್ನು ಪ್ರತಿಭಟನಾಕಾರರು ಮುಚ್ಚುವಂತೆ ಮನವಿ ಮಾಡಿದರು. ನಗರದಲ್ಲಿ ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಖಾಸಗಿ ವಾಹನಗಳು, ಆಟೋ, ಬಸ್ ಸಂಚಾರ ಎಂದಿನಂತೆ ನಡೆಯುತ್ತಿವೆ. ಕೆಲವೆಡೆ ಅಂಗಡಿಗಳು ತೆರೆದಿದ್ದು, ಇನ್ನೂ ಕೆಲವೆಡೆ ಬಾಗಿಲು ಮುಚ್ಚಿವೆ.

11:57 December 08

ಹಾವೇರಿಯಲ್ಲಿ ಬಂದ್ ಬೆಂಬಲಿಸಿ ಪ್ರತಿಭಟನೆ

ಹಾವೇರಿ: ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ರೈತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಹೊಸಮನಿ ಸಿದ್ದಪ್ಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟರು. ಅಂಗಡಿಗಳನ್ನ ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲಿಸುವಂತೆ ಪ್ರತಿಭಟನಾಕಾರರು ಮನವಿ ಮಾಡಿದರು. ಬಂದ್​ ನಡುವೆಯೂ ಸಾರಿಗೆ ಬಸ್, ಖಾಸಗಿ ವಾಹನಗಳು ಹಾಗೂ ಆಟೋರಿಕ್ಷಾಗಳು ಎಂದಿನಂತೆ ಸಂಚರಿಸುತ್ತಿವೆ.  

11:37 December 08

ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಿವಿಧ ಸಂಘಟನೆಗಳ ಪ್ರತಿಭಟನೆ

ಬೆಂಗಳೂರು : ಮೈಸೂರು ಬ್ಯಾಂಕ್ ಸರ್ಕಲ್ ಬಳಿ AIDYO, SUCI ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಭಾರತ್ ಬಂದ್​ಗೆ ಎಡಪಕ್ಷಗಳ ಬೆಂಬಲ ಸೂಚಿಸಿವೆ. ಪ್ರತಿಭಟನೆಯಲ್ಲಿ 50 ಕ್ಕೂ ಹೆಚ್ಚು ಜನ ಭಾಗಿಯಾಗಿದ್ದು,100 ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಪಶ್ಚಿಮ ವಿಭಾಗದ  ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ಭೇಟಿ ನೀಡಿ, ಭದ್ರತೆ ಪರಿಶೀಲನೆ ನಡೆಸಿದರು.  

11:37 December 08

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಟ್ಟದ ಬಂದ್ ಬಿಸಿ

ದೇವನಹಳ್ಳಿ : ಕೃಷಿ ಕಾಯ್ದೆ ಹಿಂಪಡೆಯುವಂತೆ ರೈತ ಸಂಘಟನೆಗಳು ಭಾರತ್ ಬಂದ್​ಗೆ ಕರೆ ನೀಡಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ಎಂದಿನಂತೆ ಸಹಜವಾಗಿ ವಿಮಾನ ನಿಲ್ದಾಣ ಕಾರ್ಯ ನಿರ್ವಹಿಸುತ್ತಿದೆ. ಏರ್​ಪೋರ್ಟ್​ನಿಂದ ಬೆಂಗಳೂರಿನ ವಿವಿಧ ಭಾಗಗಳಿಗೆ ಮತ್ತು ರಾಜ್ಯದ  ವಿವಿಧ ಜಿಲ್ಲೆ ಮತ್ತು ಇತರೆ ರಾಜ್ಯಗಳಿಗೆ ಸಂಚರಿಸುವ ವಾಯು ವಜ್ರ ಬಸ್​ಗಳು ಎಂದಿನಂತೆ ಸಂಚರಿಸುತ್ತಿವೆ. ಹಾಗೆಯೇ ಏರ್​ಪೋರ್ಟ್​ ಟ್ಯಾಕ್ಸಿ, ಓಲಾ ಮತ್ತು ಉಬರ್  ಸಹ ಸಂಚರಿಸುತ್ತಿವೆ.  

11:15 December 08

ಮೈಸೂರಿನಲ್ಲಿ ಬ್ಯಾಂಕ್, ಅಂಚೆ ಕಚೇರಿ ಬಂದ್ ಮಾಡಿಸಿದ ಕಾಂಗ್ರೆಸ್ ಕಾರ್ಯಕರ್ತರು

ಮೈಸೂರು:  ಕರ್ತವ್ಯ ನಿರ್ವಹಿಸುತ್ತಿದ್ದ ಎಸ್​ಬಿಐ ಬ್ಯಾಂಕ್ ಹಾಗೂ ಅಂಚೆ ಕಚೇರಿಗೆ ತೆರಳಿದ ಕಾಂಗ್ರೆಸ್ ಪಕ್ಷದ ಮುಖಂಡರು, ಕಚೇರಿ ಮುಚ್ಚಿಸಿ ರೈತರ ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

11:15 December 08

ಚಿತ್ರದುರ್ಗದಲ್ಲಿ ತಲೆ ಮೇಲೆ ಕಲ್ಲು ಹೊತ್ತು ವಿನೂತನ ಪ್ರತಿಭಟನೆ

ಚಿತ್ರದುರ್ಗ: ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ತಲೆ ಮೇಲೆ ಕಲ್ಲು ಹೊತ್ತು ವಿನೂತನ ಪ್ರತಿಭಟನೆ ನಡೆಸಿದರು. ನಗರದ ಗಾಂಧಿ ವೃತ್ತದಲ್ಲಿ ರೈತ ಸಂಘಟನೆ ಮುಖಂಡರು ತಲೆ ಮೇಲೆ ಕಲ್ಲು ಹೊತ್ತುಕೊಂಡು ಪ್ರತಿಭಟಿಸಿದರು. 

ಮತ್ತೊಂದೆಡೆ ರೈತಪರ ಸಂಘಟನೆಗಳು ಜಾನಪದ ವಾದ್ಯ ಬಾರಿಸುವ ಮೂಲಕ ದೇಶದಲ್ಲಿ ಮೋದಿ ಸರ್ಕಾರ ರೈತ ವಿರೋಧಿಯಾಗಿದೆ. ಕಾರ್ಪೊರೇಟ್ ಕಂಪನಿಗಳನ್ನ ಬೆಳೆಸಲು ಹುನ್ನಾರ ನಡೆಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.  

11:14 December 08

ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್ ವಿನೂತನ ಪ್ರತಿಭಟನೆ

ದಾವಣಗೆರೆ: ರೈತರು ಕರೆ ನೀಡಿರುವ ಬಂದ್​ಗೆ ಬೆಂಬಲಿಸುವಂತೆ ಕಬ್ಬು ಬೆಳೆಗಾರರ ಸಂಗಘದ ಪದಾಧಿಕಾರಿಗಳು ವಿನೂತನವಾಗಿ ಪ್ರತಿಭಟಿಸಿದರು. ದಾವಣಗೆರೆ ನಗರದ ಹದಡಿ ರಸ್ತೆಯಾದಂತ್ಯ ಆಟೋ ಚಾಲಕರಿಗೆ, ಅಂಗಡಿಯವರಿಗೆ ಹಾಗೂ ಹೋಟೆಲ್ ಮಾಲೀಕರಿಗೆ ಊಟದ ಪ್ಯಾಕೇಟ್ ನೀಡುವ ಮೂಲಕ ಅನ್ನದಾತರ ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು. ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್​ ಹಮ್ಮಿಕೊಂಡಿದ್ದರು.  

10:50 December 08

ಟೌನ್​ಹಾಲ್‌ನಲ್ಲಿ ಆರಂಭವಾದ ಪ್ರತಿಭಟನೆ : ಎತ್ತಿನ ಗಾಡಿ ಮೂಲಕ ಆಗಮಿಸಿದ ರೈತರು

ಬೆಂಗಳೂರು: ರೈತರು ಸೇರಿದಂತೆ ಕಾರ್ಮಿಕ ಹಾಗೂ ಕನ್ನಡಪರ ಸಂಘಟನೆಗಳು ಸೇರದಂತೆ, ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕೋಡಿಹಳ್ಳಿ ಚಂದ್ರಶೇಖರ್, ಮುಖ್ಯಮಂತ್ರಿ ಚಂದ್ರು, ಸಿಐಟಿಯು ವರಲಕ್ಷ್ಮಿ ಸೇರಿದಂತೆ ಹಲವರು ಭಾಗಿಯಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಟೌನ್ ಹಾಲ್ ಮುಂಭಾಗ ಎತ್ತಿನ ಗಾಡಿಯ ಮೂಲಕ ತಾವು ಬೆಳೆದ ಸೊಪ್ಪು, ತರಕಾರಿ, ಹಣ್ಣು ಹೊತ್ತು ತಂದ ರೈತರು ಪ್ರತಿಭಟನೆಯಲ್ಲಿ ಭಾಗಿಯಾದರು.

10:50 December 08

ರೈತರ ಪ್ರತಿಭಟನೆಯಲ್ಲಿ ಭಾಗಿಯಾದ ಯೋಧ

ರೈತರ ಪ್ರತಿಭಟನೆಯಲ್ಲಿ ಭಾಗಿಯಾದ ಯೋಧ
ರೈತರ ಪ್ರತಿಭಟನೆಯಲ್ಲಿ ಭಾಗಿಯಾದ ಯೋಧ

ಹುಬ್ಬಳ್ಳಿ: ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್​ಗೆ ಹುಬ್ಬಳ್ಳಿಯಲ್ಲಿ ಯೋಧ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಕುಂದಗೋಳ ತಾಲೂಕಿನ ಬರದ್ವಾಡದ ರಮೇಶ್ ಮಾಡಳ್ಳಿ ಎನ್ನುವ  ಯೋಧ ರೈತರಿಗೆ ಸಾಥ್ ನೀಡಿದರು. ಅಸ್ಸೋಂನ ಆರ್.ಆರ್.ವಿಂಗ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಅವರು ಪ್ರತಿಭಟನೆ ಬೆಂಬಲಸಿ, ಹಸಿರು ಶಾಲು ಹೊದ್ದು, ಬಾರು ಕೋಲು ಹಿಡಿದು ಬೆಂಬಲ ಸೂಚಿಸಿದರು‌. ಆಗ ಪೊಲೀಸರು ರಮೇಶ್ ಅವರನ್ನು ವಶಕ್ಕೆ ಪಡೆದರು.

10:37 December 08

ಮೈಸೂರು ಬ್ಯಾಂಕ್ ಸರ್ಕಲ್​ನಿಂದ ಫ್ರೀಡಂ ಪಾರ್ಕ್​ವರೆಗೆ ಪ್ರತಿಭಟನಾ ಮೆರವಣಿಗೆ: ನೂರಾರು ರೈತರು ಭಾಗಿಯಾಗುವ ಸಾಧ್ಯತೆ

ಬೆಂಗಳೂರು: ನಗರದ ಮೌರ್ಯ ಸರ್ಕಲ್​ನಲ್ಲಿ ಐಕ್ಯ ಹೋರಾಟ ಸಮಿತಿಯಿಂದ ನಿನ್ನೆಯಿಂದಲೇ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಯುತ್ತಿದೆ. ಇಲ್ಲಿಂದ ಮೈಸೂರು ಬ್ಯಾಂಕ್ ಸರ್ಕಲ್, ಫ್ರೀಡಂ ಪಾರ್ಕ್​ಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ದೇಶಾದ್ಯಂತ ರೈತರ ಪ್ರತಿಭಟನೆ ಆರಂಭವಾಗಿದೆ. ರಾಜ್ಯದ ಹೋಬಳಿ, ತಾಲೂಕು, ಪ್ರತಿ ಹಳ್ಳಿಗಳಲ್ಲಿ ಪ್ರತಿಭಟನೆ ನಡೆದಿದೆ. ಮಳೆಯಿಂದ ಬೆಂಗಳೂರಲ್ಲಿ ರೈತರು ಒಗ್ಗೂಡುತ್ತಿರುವುದು ತಡವಾಗುತ್ತಿದೆ. ಕೆಲವು ಕಡೆ ರಸ್ತೆ ತಡೆ ನಡೆಯುತ್ತಿದೆ. ಮಾರುಕಟ್ಟೆಗಳು ಬಂದ್ ಆಗುತ್ತಿವೆ. ಎಲ್ಲಾ ರೈತರು ಮೈಸೂರು ಬ್ಯಾಂಕ್ ಸರ್ಕಲ್​ಗೆ ತೆರಳಿ, ಅಲ್ಲಿಂದ ಫ್ರೀಡಂ ಪಾರ್ಕ್ ವರೆಗೆ  ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

10:36 December 08

ಚಾಮರಾಜನಗರದಲ್ಲಿ ವಾಹನ ಸಂಚಾರ ಆರಂಭ

ಚಾಮರಾಜನಗರ: ವಿವಿಧ ಸಂಘಟನೆಗಳು ನಡೆಸುತ್ತಿರುವ ಹೋರಾಟದ ಕಾವು ಕಡಿಮೆಯಾದ ಹಿನ್ನೆಲೆಯಲ್ಲಿ ವಾಹನ ಸಂಚಾರ ಯಥಾಸ್ಥಿತಿಗೆ ಮರಳುತ್ತಿದ್ದು, ಕೆಎಸ್ಆರ್​ಟಿಸಿ ಸಂಚಾರ ಪುನಾರಂಭಗೊಂಡಿದೆ. ವಾಹನ ಸಂಚಾರ, ಆಟೋ, ಲಾರಿಗಳ ಸಂಚಾರ ಆರಂಭವಾಗಿದೆ. ಮಧ್ಯಾಹ್ನ 12 ಗಂಟೆಯ ಬಳಿಕ ಕಾಂಗ್ರೆಸ್, ಬಿಎಸ್​ಪಿ ಹಾಗೂ ಎಸ್​ಡಿಪಿಐ ಸಂಘಟನೆಯ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸುವ ಸಾಧ್ಯತೆಯಿದೆ.

10:36 December 08

ದಾವಣಗೆರೆಯಲ್ಲಿ ಭಾರತ್ ಬಂದ್​ಗೆ ಕಾಂಗ್ರೆಸ್ ಬೆಂಬಲ

ದಾವಣಗೆರೆ: ಭಾರತ್ ಬಂದ್​ಗೆ ಕಾಂಗ್ರೆಸ್ ಪಕ್ಷ ಕೈ ಜೋಡಿಸಿದ್ದು, ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಹಾನಗರ ಪಾಲಿಕೆ ಸದಸ್ಯರು ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

10:35 December 08

ಶಿವಮೊಗ್ಗದಲ್ಲಿ ಎಪಿಎಂಸಿಯ ಸಗಟು ತರಕಾರಿ ಮಾರುಕಟ್ಟೆ ಸಂಪೂರ್ಣ ಬಂದ್

ಶಿವಮೊಗ್ಗ: ಭಾರತ್ ಬಂದ್​ಗೆ ಬೆಂಬಲವಾಗಿ ಶಿವಮೊಗ್ಗ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಗಟು ತರಕಾರಿ ಮಾರುಕಟ್ಟೆಯನ್ನು ಬಂದ್ ಮಾಡಿದೆ. ಶಿವಮೊಗ್ಗದ ವಿನೋಬ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯು ಇಂದು ಸಂಪೂರ್ಣ ವಹಿವಾಟು ಬಂದ್ ಮಾಡಿದೆ.

10:11 December 08

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್​ಗೆ ನೀರಸ ಪ್ರತಿಕ್ರಿಯೆ

ಮಂಗಳೂರು: ನೂತನ ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್​ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಸಂಪೂರ್ಣ ಬಂದ್ ಮಾಡುವಂತೆ ಯಾವುದೇ ಸಂಘಟನೆಗಳು ಕರೆ ನೀಡಿಲ್ಲ. ಜಿಲ್ಲೆಯಾದ್ಯಂತ ಜನಜೀವನ ಸಹಜ ಸ್ಥಿತಿಯಲ್ಲಿದೆ. ವಾಹನಗಳ ಸಂಚಾರ ಎಂದಿನಂತಿದ್ದು, ಬಂದ್​ಗೆ ಬೆಂಬಲ ಸೂಚಿಸಿ ವಿವಿಧ ಸಂಘಟನೆಗಳು ನಂತೂರು ಸರ್ಕಲ್​ನಲ್ಲಿ  ಕೆಲ ಹೊತ್ತು ರಸ್ತೆ ತಡೆ ನಡೆಸುವ ಸಾಧ್ಯತೆಯಿದೆ. 

10:06 December 08

ಹುಬ್ಬಳ್ಳಿ: ರಸ್ತೆ ಹಾಗೂ ಬಸ್ ತಡೆ ನಡೆಸುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡ ಡಿಸಿಪಿ

ತರಾಟೆಗೆ ತೆಗೆದುಕೊಂಡ ಡಿಸಿಪಿ

ಹುಬ್ಬಳ್ಳಿ: ಡಿಪೋದಿಂದ ಹೊರ ಬರುವ ಬಸ್ ಹಾಗೂ ರಸ್ತೆ ತಡೆ ನಡೆಸುತ್ತಿದ್ದವರನ್ನು ಡಿಸಿಪಿ ಬಸರಗಿ ತರಾಟೆಗೆ ತೆಗೆದುಕೊಂಡರು. ರಸ್ತೆ ತಡೆ ಕೈ ಬಿಡದಿದ್ದರೆ ವಶಕ್ಕೆ ಪಡೆಯುವುದಾಗಿ ಡಿಸಿಪಿ ಎಚ್ಚರಿಕೆ ನೀಡಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾ ನಿರತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.  

10:01 December 08

ಬೆಂಗಳೂರಿನಲ್ಲಿ ಡಿಸಿಪಿ ಅನುಚೇತ್ ಸಿಟಿ ರೌಂಡ್ಸ್

ಬೆಂಗಳೂರು: ಬಂದ್ ಹಿನ್ನೆಲೆ ನಗರದ ಮೌರ್ಯ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್, ಟೌನ್ ಹಾಲ್ ಬಳಿ ರೈತರ ಪ್ರತಿಭಟನೆ ನಡೆಯಲಿದೆ. ನಗರದ ವಿವಿಧೆಡೆಯಿಂದ ಬೆಳಗ್ಗೆ 9 ಗಂಟೆಗೆ ಮೌರ್ಯ ಸರ್ಕಲ್ ಹಾಗೂ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ರೈತರು ಸೇರುವ ಕಾರಣ ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಭೇಟಿ ನೀಡಿ, ಭದ್ರತೆ ಕುರಿತು ಪರಿಶೀಲನೆ ನಡೆಸಿದರು. 

09:51 December 08

ಭಾರತ್ ಬಂದ್​ಗೆ ರಾಯಚೂರು ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ

ಪೊಲೀಸರು ಹಾಗೂ ಪ್ರತಿಭಟನಾ ನಿರತರ ನಡುವೆ ಮಾತಿನ ಚಕಮಕಿ

ರಾಯಚೂರು: ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ‌ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಬಸ್ ಸಂಚಾರವನ್ನ ತಡೆಯಲು ಮುಂದಾದರರು. ಇದರಿಂದ ಪೊಲೀಸರು ಹಾಗೂ ಪ್ರತಿಭಟನಾ ನಿರತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಭಾರತ್ ಬಂದ್​ಗೆ ರಾಯಚೂರು ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ.

09:48 December 08

ಬಸ್ ಹಾಗೂ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿದ ಪ್ರತಿಭಟನಾ ನಿರತರು

ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿದ ಪ್ರತಿಭಟನಾ ನಿರತರು

ಧಾರವಾಡ: ಭಾರತ್ ಬಂದ್ ಹಿನ್ನೆಲೆ ಧಾರವಾಡದಲ್ಲಿ ಬಸ್ ನಿಲ್ದಾಣಕ್ಕೆ ನುಗ್ಗಿದ ಪ್ರತಿಭಟನಾ ನಿರತರು ಬಸ್ ಹಾಗೂ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ. 

09:47 December 08

ಮೈಸೂರಿನಲ್ಲಿ ಬಂದ್​ಗೆ ಮಿಶ್ರ ಪ್ರತಿಕ್ರಿಯೆ

ಮೈಸೂರು: ಭಾರತ್ ಬಂದ್​ಗೆ ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು, ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಬಸ್ ನಿಲ್ದಾಣದ ಬಳಿ ಬಸ್ ತಡೆದು ಪ್ರತಿಭಟನೆ ನಡೆಸಿದರು. ರೈತ ಸಂಘಟನೆಗಳು ಮೆರವಣಿಗೆ ನಡೆಸಲು ಸಿದ್ಧತೆ ನಡೆಸಿದ್ದು, ಬಸ್ ಸಂಚಾರ ವಿರಳವಾಗಿದೆ. ನಗರ ಸಾರಿಗೆ ಬಸ್​ಗಳು ನಿಲ್ದಾಣದಲ್ಲಿಯೇ ನಿಂತಿವೆ. ಮಾರುಕಟ್ಟೆಗಳು ತೆರೆದಿದ್ದರೂ ಜನ ಸಂಚಾರ ಸಂಪೂರ್ಣವಾಗಿ ಕಡಿಮೆಯಾಗಿದೆ. ಹೋಟೆಲ್ ಮಾಲೀಕರು ಬಂದ್​ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ಹೋಟೆಲ್​ಗಳು ತೆರೆದಿವೆ.

09:40 December 08

ಕಲಬುರಗಿ: ಕೇಂದ್ರ ಬಸ್ ನಿಲ್ದಾಣದ ಮುಂದೆ ಬಸ್ ತಡೆದು ಪ್ರತಿಭಟನೆ

ಕಲಬುರಗಿ: ಬೆಳ್ಳಂ ಬೆಳಗ್ಗೆಯೇ ರಸ್ತೆಗಿಳಿದ ಪ್ರತಿಭಟನಾಕಾರರು ಕೇಂದ್ರ ಬಸ್ ನಿಲ್ದಾಣದ ಮುಂದೆ ಬಸ್ ತಡೆದು ಪ್ರತಿಭಟನೆ ನಡೆಸಿದರು. ಮುಂಜಾಗೃತಾ ಕ್ರಮವಾಗಿ ನಗರದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ನಿಯೋಜಿಸಲಾಗಿದೆ.  2 ಕೆಎಸ್​ಆರ್​ಪಿ, 3 ಡಿಎಆರ್ ತುಕಡಿ ಸೇರಿದಂತೆ ನಗರದಲ್ಲಿ 1 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 

09:36 December 08

ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಹುಲ್ಲಿಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಹುಬ್ಬಳ್ಳಿ: ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್​ಗೆ ಹುಬ್ಬಳ್ಳಿಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. 25ಕ್ಕೂ ಹೆಚ್ಚು ಸಂಘಟನೆಗಳು ಬಂದ್​ಗೆ ಬೆಂಬಲಿಸಿವೆ. ಇಂದು ಬೆಳಗ್ಗೆಯಿಂದಲೇ ಹೋರಾಟಗಾರರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಹುಲ್ಲಿಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೊಸೂರು ವೃತ್ತ, ಹಳೆ ಬಸ್ ನಿಲ್ದಾಣದ ಎದುರು ಪ್ರತಿಭಟನಾ ನಿರತರು ರಸ್ತೆ ಮೇಲೆ ಮಲಗಿ ಸಂಚಾರ ತಡೆಯಲು ಯತ್ನಿಸಿದರು.

09:35 December 08

ಭಾರತ್ ಬಂದ್​ಗೆ ಬಾಗೇಪಲ್ಲಿ ತಾಲೂಕಿನಲ್ಲಿ ಉತ್ತಮ ಬೆಂಬಲ

ಬಾಗೇಪಲ್ಲಿ ತಾಲೂಕಿನಲ್ಲಿ ಉತ್ತಮ ಬೆಂಬಲ
ಬಾಗೇಪಲ್ಲಿ ತಾಲೂಕಿನಲ್ಲಿ ಉತ್ತಮ ಬೆಂಬಲ

ಚಿಕ್ಕಬಳ್ಳಾಪುರ :  ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‌ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.

09:22 December 08

ಚಾಮರಾಜನಗರ: ಡಂಗೂರ ಸಾರಿ, ಅಂಗಡಿ ಮುಚ್ಚಲು ಮನವಿ ಮಾಡಿದ ಪ್ರತಿಭಟನಾ ನಿರತರು

ಡಂಗೂರ ಸಾರಿದ ಪ್ರತಿಭಟನಾ ನಿರತರು
ಡಂಗೂರ ಸಾರಿದ ಪ್ರತಿಭಟನಾ ನಿರತರು

ಚಾಮರಾಜನಗರ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವಂತೆ ಒತ್ತಾಯಿಸಿ ನಗರದಲ್ಲಿ ಹೋರಾಟಗಾರರು ಡಂಗೂರ ಸಾರಿ ಆಕ್ರೋಶ ಹೊರಹಾಕಿದರು‌. ಎಸ್​ಡಿಪಿಐ ಮುಖಂಡ ಅಬ್ರಾರ್ ಅಹಮ್ಮದ್ ಹಾಗೂ ದಲಿತ ಸಂಘಟನೆ ಮುಖಂಡ ಸಿ.ಎಂ.ಕೃಷ್ಣಮೂರ್ತಿ ನೇತೃತ್ವದಲ್ಲಿ ಹತ್ತಾರು ಹೋರಾಟಗಾರರು ನಗರಾದ್ಯಂತ ಡಂಗೂರ ಸಾರಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

09:07 December 08

ಬೆಂಗಳೂರಿನಲ್ಲಿ ತುಂತುರು ಮಳೆ: ರೈತರ ಪ್ರತಿಭಟನೆಗೆ ಅಡ್ಡಿ ಸಾಧ್ಯತೆ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದ್ದು, ಡಿ.10 ರ ವರೆಗೂ ಸಾಧಾರಣ ಮಳೆಯಾಗಲಿದೆ. ನಗರದಲ್ಲಿ ತುಂತುರು ಮಳೆಯಾಗುತ್ತಿರುವ ಕಾರಣ ವಿವಿಧ ಭಾಗಗಳಿಂದ ಹೊರಡಲಿರುವ ರೈತ ಸಂಘಟನೆಗಳ ಪ್ರತಿಭಟನಾ ಮೆರವಣಿಗೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. 

08:57 December 08

ಚಾಮರಾಜನಗರದಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಹೆದ್ದಾರಿ ತಡೆ: ಪ್ರಯಾಣಿಕರ ಪರದಾಟ

ಚಾಮರಾಜನಗರ: ಭಾರತ್ ಬಂದ್​ಗೆ ಚಾಮರಾಜನಗರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ನಗರದ ಭುವನೇಶ್ವರಿ ವೃತ್ತದಲ್ಲಿ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಟೈರ್​ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು.

08:21 December 08

ಆಂಧ್ರ, ಒಡಿಶಾ, ಮಹಾರಾಷ್ಟ್ರದಲ್ಲಿ ತೀವ್ರಗೊಂಡ ಪ್ರತಿಭಟನೆ

ಒಡಿಶಾ
ಒಡಿಶಾ

ಆಂಧ್ರಪ್ರದೇಶ: ರೈತ ಸಂಘಗಳು ಕರೆ ನೀಡಿರುವ ಭಾರತ ಬಂದ್‌ಗೆ ಬೆಂಬಲವಾಗಿ ವಿಜಯವಾಡದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.   

ಒಡಿಶಾ: ಭುವನೇಶ್ವರದ ರೈಲು ನಿಲ್ದಾಣದಲ್ಲಿ ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಗಳು ಮತ್ತು ರೈತ ಸಂಘಗಳು ರೈಲುಗಳನ್ನು ತಡೆದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.  

ಮಹಾರಾಷ್ಟ್ರ: ಬುಲ್ಖಾನಾ ಜಿಲ್ಲೆಯ ಮಲ್ಕಾಪುರದಲ್ಲಿ ರೈಲುಗಳ ಸಂಚಾರವನ್ನು ತಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ.  

08:04 December 08

ಹೊಸಪೇಟೆಯಲ್ಲಿ ಸಹಜ ಜೀವನ

ಹೊಸಪೇಟೆ : ಹೊಸಪೇಟೆಯಲ್ಲಿ ಎಂದಿನಂತೆ ಸಹಜ ಜೀವನ ನಡೆಯುತ್ತಿದೆ.‌ ನಗರದ ಪ್ರಮುಖ ರೋಟರಿ ವೃತ್ತದಲ್ಲಿ ಹೋಟೆಲ್, ಬೇಕರಿ ಸೇರಿದಂತೆ ಇನ್ನಿತರ ಅಂಗಡಿಗಳು ತರೆದುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿವೆ. ಇಲ್ಲಿವರೆಗೂ ರೈತರ ಸಂಘಟನೆಗಳ ಕಾರ್ಯಕರ್ತರು ರಸ್ತೆಗೆ ಇಳಿದಿಲ್ಲ.‌ ಬಂದ್ ಬಿಸಿ ಇನ್ನು ಅಷ್ಟೊಂದು ಕಾಣಿಸುತ್ತಿಲ್ಲ.‌ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ.‌

08:03 December 08

ಉರಳು ಸೇವೆ, ಲಗಾಟಿ ಹೊಡೆದು ರೈತರ ರೈತರ ಆಕ್ರೋಶ

ಬೆಳಗಾವಿ:  ಕುಂದಾನಗರಿಯ ಹಲವು ಸಂಘಟನೆಗಳು ರೋಡಿಗಿಳಿದಿವೆ. ಹೋರಾಟಗಾರರು ವಿನೂತನ ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ಬೆಳಗಾವಿ ಬಸ್ ನಿಲ್ದಾಣದ ಎದುರು ಉರುಳು ಸೇವೆ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಬಸ್ ಸಂಚಾರ ತಡೆದು ಅರೆಬೆತ್ತಲೆಯಾಗಿ ರೈತ ಹೋರಾಟಗಾರಾರದ  ವಾಸುದೇವ ಸರ್ಕಾರದ ವಿರುದ್ಧ ಕಿಡಿ ಕಾರಿದರು.  

08:02 December 08

ರಸ್ತೆಗಿಳಿದ ರೈತ‌ ಸಂಘಟನೆಗಳು, ಪ್ರತಿಕೃತಿ ದಹನ

ದಾವಣಗೆರೆ : ಬೆಳ್ಳಂಬೆಳಿಗ್ಗೆ ರಸ್ತೆಗಿಳಿದ ರೈತ ಸಂಘಟನೆಗಳು ಹಾಗು ಎಡಪಂಥಿಯ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಹಾಕಿ ಕಾಯ್ದೆಗಳನ್ನು ವಾಪಾಸ್ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ದಾವಣಗೆರೆಯ ಹದಡಿ ರಸ್ತೆಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ‌ ನಡೆಸಿದ್ದು, ಪ್ರಧಾನಿ ಮೋದಿಯ ಪ್ರತಿಕೃತಿ ದಹನ ಮಾಡಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೆಎಎಸ್​ಆರ್ ಟಿಸಿಗೆ ನುಗ್ಗಿದ ರೈತ ಸಂಘಟನೆ ಮುಖಂಡರು ಹಾಗೂ ಕರುನಾಡ ಸೇನೆ ಕಾರ್ಯಕರ್ತರು ಬಲವಂತವಾಗಿ ಬಸ್ ಸಂಚಾರ, ಸ್ಥಗಿತಗೊಳಿಸಿದರು. ಮಾತ್ರವಲ್ಲ ಹೊಟೇಲ್ ಹಾಗೂ ಅಂಗಡಿಗಳನ್ನು ಮುಚ್ಚಿಸಿದರು.    

ಇನ್ನು ಬೆಳಿಗ್ಗೆ ಊರಿಗೆ ಹೋಗಲು ಬಸ್ ಸಿಗುತ್ತದೆ ಎಂದುಕೊಂಡು ಬಂದವರು ಪರದಾಡುವಂತಾಯಿತು. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಿಂದ ಹದಿನೈದು ಮಂದಿ ಹೂವಿನ ಮಾರುಕಟ್ಟೆಗೆ ಸೇವಂತಿಗೆ ತಂದಿದ್ದರು‌. ಹೋರಾಟಗಾರರು ಬಸ್ ಸಂಚಾರ ಸ್ಥಗಿತಗೊಳಿಸುತ್ತಿದ್ದಂತೆ ನಡೆದುಕೊಂಡು ಊರಿಗೆ ಹೋಗುತ್ತೇವೆ ಎಂದು ಅಳಲು ತೋಡಿಕೊಂಡಿದ್ದಾರೆ. 

08:01 December 08

ಧಾರವಾಡ:  ಧಾರವಾಡದಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.  ಜುಬ್ಲಿ ವೃತ್ತದಲ್ಲಿ ಬೆಳಿಗ್ಗೆಯಿಂದ ಸೇರಿರುವ ರೈತಪರ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಬಸ್ ಸಂಚಾರ, ವಾಹನ ಸಂಚಾರ ಕೂಡಾ ಸಂಪೂರ್ಣವಾಗಿ ಬಂದ್ ಆಗಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

07:50 December 08

ಗದಗ ಎಪಿಎಂಸಿ ಬೆಂಬಲ, ಅಂಗಡಿ ಮುಂಗಟ್ಟುಗಳು ಎಂದಿನಂತೆ....

ಗದಗ : ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್​ಗೆ ಗದಗ ಜಿಲ್ಲೆಯ ಎಪಿಎಂಸಿ ಯಿಂದ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಪಿಎಂ ಅಂಗಡಿ, ದಲಾಲ್ ಅಂಗಡಿಗಳು ಬಂದ್ ಆಗಿದ್ದರಿಂದ ಎಪಿಎಂಸಿ ಬಿಕೋ ಎನ್ನುತ್ತಿತ್ತು. ಸುಮಾರು 100 ಕ್ಕೂ ಹೆಚ್ಚು ಲಾರಿಗಳು ಅಂಗಡಿಗಳಲ್ಲಿಯೇ ನಿಲ್ಲಿಸಿದ್ದಾರೆ‌.  

ಹಮಾಲರು, ದಲ್ಲಾಳಿಗಳು, ವರ್ತಕರು, ಖರೀದಿ ವರ್ತಕರ, ಕಾರ್ಮಿಕರು ಬಂದ್​ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಪಿಎಂಸಿ‌ ಮಾರುಕಟ್ಟೆ, ವ್ಯಾಪಾರ, ವಹಿವಾಟು, ಎಲ್ಲವೂ ಬಂದ್ ಇದೆ. ಎಪಿಎಂಸಿ ಬಂದ್ ಮಾಡುವ ಮೂಲಕ ರೈತ ಸಂಘಟನೆ ಗಳಿಗೆ ಬೆಂಬಲ ನೀಡುತ್ತಿವೆ.  

07:49 December 08

ಬೆಣ್ಣೆನಗರಿಯಲ್ಲಿಯೂ ಹೋರಾಟದ ಕಿಚ್ಚು

ದಾವಣಗೆರೆ: ಕೃಷಿ ಸಂಬಂಧಿತ ಮಸೂದೆಗಳ ತಿದ್ದುಪಡಿ ವಿರೋಧಿಸಿ ದೇಶವ್ಯಾಪಿ ಕರೆ ನೀಡಿರುವ ಭಾರತ ಬಂದ್ ಬೆಂಬಲಿಸಿ ದಾವಣಗೆರೆಯಲ್ಲಿಯೂ ಪ್ರತಿಭಟನೆ ನಡೆಸಲಾಗುತ್ತಿದೆ. ನಗರದ ಹದಡಿ ರಸ್ತೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು, ರೈತರು ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

07:46 December 08

ಹಾವೇರಿಯಲ್ಲಿ ಎಂದಿನಂತೆ ಸಂಚಾರ ವ್ಯವಸ್ಥೆ

ಚಿಕ್ಕಮಗಳೂರು

ಹಾವೇರಿ : ನಗರದಲ್ಲಿ ಎಂದಿನಂತೆ  ಸಾರಿಗೆ ಬಸ್, ಆಟೋ ಹಾಗೂ ಖಾಸಗಿ ವಾಹನಗಳು ಸಂಚಾರ ನಡೆಸುತ್ತಿವೆ. ಇನ್ನು ಬೆಳಿಗ್ಗೆ ಹತ್ತು ಗಂಟೆಗೆ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ.  

07:45 December 08

ಕೋಲಾರದಲ್ಲಿ ವಿಭಿನ್ನ ಪ್ರತಿಭಟನೆ

ಕೋಲಾರ

ಕೋಲಾರ:  ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್‌ಗೆ ಕೋಲಾರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈ ಹಿನ್ನೆಲೆ ಕೋಲಾರದಲ್ಲಿ ಬೆಳಂಬೆಳಗ್ಗೆ ರಸ್ತೆಗಳಿದು ಹೋರಾಟಕ್ಕೆ ಮುಂದಾಗಿರುವ ವಿವಿಧ ಸಂಘಟನೆಗಳ ಮುಖಂಡರು. ನಗರದ ಹೊಸ ಬಸ್ ನಿಲ್ದಾಣದಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲಿ ಬೆಂಕಿ ಹಾಕಿ ವಿಭಿನ್ನ ರೀತಿಯ ಪ್ರತಿಭಟನೆ ಮಾಡಿ ಬಂದ್​ಗೆ ಬೆಂಬಲ ಸೂಚಿಸಿದ್ರು. ಒಂದೆಡೆ ಗ್ಯಾಸ್ ಸ್ಟೌ ಇಟ್ಟು ರಸ್ತೆಯಲ್ಲೆ ಟೀ ಮಾಡಿ ಆಕ್ರೋಶ ಹೊರ ಹಾಕಿದ್ರೆ, ಜೋಳ ಹಾಗೂ ಕಡಲೆ ಕಾಯಿ ಬೇಯಿಸಿ ಹಂಚುವ ಮೂಲಕ ಕಾಯ್ದೆಯನ್ನ ವಿರೋಧ ಮಾಡಿದ್ರು ಹಾಗೂ ದೆಹಲಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ರು.  

07:43 December 08

ಬಂದ್​ಗೆ ಅಡ್ಡಿಯಾದ ಮಳೆ

ಚಿತ್ರದುರ್ಗ

ಚಿತ್ರದುರ್ಗ: ಕೋಟೆನಾಡಿನಲ್ಲಿ ತಡರಾತ್ರಿಯಿಂದ ಸುರಿಯುತ್ತಿರುವ ಚಿಟಿ ಜಿಟಿ ಮಳೆ ಪರಿಣಾಮವಾಗಿ ಭಾರತ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ‌‌. ನಗರದ ಗಾಂಧಿ ವೃತದಲ್ಲಿ ರೈತರ ಪರಸಂಘಟನೆಗಳು, ಲಾರಿ ಮಾಲೀಕರು, ದಲಿತ ಪರ‌ ಸಂಘಟನೆಗಳು, ಕಮ್ಯುನಿಸ್ಟ್ ಸಂಘಟನೆಗಳು‌ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳ ಒಕ್ಕೂಟಗಳು ಕೇಂದ್ರ ಸರ್ಕಾರ ಕೃಷಿಕರಿಗೆ ಮಾರಕವಾಗುವ ಕಾಯ್ದೆ ತಿದ್ದುಪಡಿ ಜಾರಿ ಮಾಡುತ್ತೀವೆ ಎಂದು ರೈತ ವಿರೋಧಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಬೀದಿಗಳಿದು ಪ್ರತಿಭಟನೆ ನಡೆಸಲು ಮುಂದಾಗಿದ್ದವು.  

ಬೆಳಗಿನಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಇಂದಿನ ಬಂದ್‌ಗೆ ಕೊಂಚ ಅಡ್ಡಿ ಪಡಿಸಿದೆ ಎಂದು ಹೇಳಬಹುದು. ಇತ್ತ ಪ್ರಮುಖ ರಸ್ತೆಗಳಲ್ಲಿ ಎಂದಿನಂತೆ ಆಟೋ, ಬಸ್ ಸಂಚಾರ ಆರಂಭವಾಗಿದ್ದು, ಈಗಾಗಲೇ ಚಿತ್ರದುರ್ಗ ಪ್ರಮುಖ ಬೀದಿಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತಗೆ 500 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ  ನಿಯೋಜನೆ ಮಾಡಲಾಗಿದೆ.

07:42 December 08

ಕೆ.ಆರ್ ಮಾರುಕಟ್ಟೆಯಲ್ಲಿ ಎಂದಿನಂತೆ ಜನಜೀವನ:

ಬೆಂಗಳೂರು: ಕೇಂದ್ರದ ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತರು ಭಾರತ ಬಂದ್​ಗೆ ಕರೆ ನೀಡಿದ್ದು, ನಗರದ ಮಾರುಕಟ್ಟೆಗಳು ಸಂಪೂರ್ಣ ಸ್ತಬ್ಧವಾಗುವ ನಿರೀಕ್ಷೆಯಿತ್ತು. ಆದರೆ, ಕೆ.ಆರ್ ಮಾರುಕಟ್ಟೆಯಲ್ಲಿ ಬೆಳ್ಳಂಬೆಳ್ಳಗ್ಗೆ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಮಳೆಯನ್ನೂ ಲೆಕ್ಕಿಸದೆ ವ್ಯಾಪಾರಸ್ಥರು ಹೂವು, ತರಕಾರಿ ಮಾರಾಟದಲ್ಲಿ ತೊಡಗಿದ್ದು, ಗ್ರಾಹಕರು ಖರೀದಿಸುತ್ತಿದ್ದಾರೆ.  

ಶಿವಾಜಿನಗರ ಮಾರುಕಟ್ಟೆಯಲ್ಲೂ ವ್ಯಾಪಾರ-ವಹಿವಾಟು ಮುಂದುವರಿದಿದೆ. ತರಕಾರಿ ಹಾಗೂ ಮೀನು ಮಾರುಕಟ್ಟೆಯಲ್ಲಿ ಎಂದಿನಂತೆ ಪರಿಸ್ಥಿತಿ ಇದೆ. ಆಟೋ, ಬಸ್, ಇತರ ವಾಹನಗಳ ಓಡಾಟ ಇರುವುದರಿಂದ ಮಾರುಕಟ್ಟೆಯಲ್ಲಿ ಎಂದಿನಂತೆ ಜನಜಂಗುಳಿ ಇದೆ. ಬೀದಿ ಬದಿ ವ್ಯಪಾರಿಗಳಿಂದ ಬಂದ್​ ಗೆ ಸಂಪೂರ್ಣ ಬೆಂಬಲ ಘೋಷಿಸಿದ್ರೂ ಕೂಡಾ ಕೆ.ಆರ್ ಮಾರುಕಟ್ಟೆ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರದಲ್ಲಿ ತೊಡಗಿದ್ದಾರೆ. 

07:41 December 08

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದ್ ಬಿಸಿ ಇಲ್ಲ

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದ್ ಬಿಸಿ ತಟ್ಟಿಲ್ಲ. ಈ ರೈಲ್ವೆ ನಿಲ್ದಾಣದಿಂದ ಜನ ಬಹುತೇಕ ಕಡೆಗೆ ಪ್ರಯಾಣ ಮಾಡುತ್ತಾರೆ. ಸದ್ಯ ಎಂದಿನಂತೆ ಊರುಗಳತ್ತ ಪ್ರಯಾಣ ಮಾಡಲು ಜನ ಮುಂಜಾನೆ ಆಗಮಿಸುತ್ತಿದ್ದು,  9 ಗಂಟೆಯ ಮೇಲೆ ರೈಲ್ವೆ ನಿಲ್ದಾಣದ ಸ್ಪಷ್ಟ ಚಿತ್ರಣ ಸಿಗಲಿದೆ.

ಸದ್ಯಕ್ಕೆ ಎಂದಿನಂತೆ ಜನರ ಆಗಮನವಿದ್ದು, ರೈಲ್ವೆ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ಯಾರು ಮುತ್ತಿಗೆ ಹಾಕದ ರೀತಿ ಬೇಕಾದ ವ್ಯವಸ್ಥೆ ಮಾಡಿದ್ದಾರೆ.  

07:29 December 08

ಜನ್ಮದಿನ ಬೇಡ ಎಂದ ಸೋನಿಯಾಗಾಂಧಿ, ಬಂದ್​ಗೆ ಬೆಂಬಲ ನೀಡೋಲ್ಲ ಎಂದ ದೀದಿ

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜನ್ಮದಿನ ನಾಳೆ ಇದ್ದು,  ದೇಶದಲ್ಲಿ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸದಿರಲು ತೀರ್ಮಾನಿದ್ದಾರೆ.  ಇನ್ನು ಪ. ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಕೂಡ ಪ್ರತಿಭಟನೆಗೆ ನೈತಿಕ ಬೆಂಬಲ ಬೀಡಿದ್ದಾರೆ. ಆದರೆ ರೈತರ ಪ್ರತಿಭಟನೆಗೆ ಬೆಂಬಲ ಇದೆ, ಬಂದ್ಗೆ ಬೆಂಬಲ ಇಲ್ಲ ಎಂದು ತಿಳಿಸಿದ್ದಾರೆ.    

07:28 December 08

ಕಾರವಾರದಲ್ಲಿ ಬಂದ್ ನೀರಸ ಪ್ರತಿಕ್ರಿಯೆ

ಕಾರವಾರ

ಕಾರವಾರ:  ಬಂದ್​ಗೆ ಗಡಿನಾಡು ಕಾರವಾರದಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗತೊಡಗಿದೆ. ಕಾರವಾರದಲ್ಲಿ ಎಂದಿನಂತೆ ಜನಜೀವನ ಯಥಾ ಸ್ಥಿತಿಗೆ ಮರಳುತ್ತಿದ್ದು, ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ತೆರೆದುಕೊಳ್ಳತೊಡಗಿವೆ. ಗೋವಾ ಸೇರಿದಂತೆ ಹೊರ ರಾಜ್ಯಗಳಿಗೆ ಹಾಗೂ ಜಿಲ್ಲೆಯ ಇತರೆಡೆ ತೆರಳುವ ಬಸ್ ಗಳು ಸಂಚರಿಸುತ್ತಿವೆ. ಅಲ್ಲದೆ ಆಟೋ ಸಂಚಾರ ಕೂಡ ಆರಂಭಗೊಂಡಿದ್ದು, ಹೊಟೆಲ್ ಸೇರಿದಂತೆ ಮಳಿಗೆಗಳು ನಿಧಾನವಾಗಿ ತೆರೆದುಕೊಳ್ಳತೊಡಗಿವೆ.

ಇನ್ನು ಬಂದ್ ಗೆ ಕಾಂಗ್ರೆಸ್, ಸಿಐಟಿಯು, ಕರ್ನಾಟಕ ರೈತ ಪ್ರಾಂತ ಸಂಘದಿಂದ ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿಗೆ ಮನವಿ ನೀಡಲು ಸಜ್ಜಾಗಿವೆ

06:55 December 08

ಗಣಿಜಿಲ್ಲೆಯಲ್ಲಿ ನೈತಿಕ ಬೆಂಬಲ

ಬಳ್ಳಾರಿ

ಬಳ್ಳಾರಿ:   ಭಾರತ ಬಂದ್​ಗೆ ಗಣಿ ಜಿಲ್ಲೆಯ ನಾನಾ ಸಂಘಟನೆ ಗಳು ನೈತಿಕ ಬೆಂಬಲ ನೀಡಲು ನಿರ್ಧರಿಸಿವೆ. ಈ ದಿನ ಗಣಿಜಿಲ್ಲೆಯಲ್ಲಿ ಯಾವುದೇ ಬಂದ್  ಆಚರಿಸದಿರಲು ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ನಿರ್ಧರಿಸಿದ್ದು, ಕೇವಲ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಲಿವೆ.

06:52 December 08

ಕೇಂದ್ರದ ನೂತನ ಕೃಷಿ ಕಾಯ್ದೆ ವಿರೋಧಿಸಿ ಬಂದ್ : ರಾಜಧಾನಿಯಲ್ಲಿ ಖಾಕಿ ಸರ್ಪಗಾವಲು

ಬೆಂಗಳೂರು: ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನ ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆಗಳು ಭಾರತ್ ಬಂದ್​ಗೆ ಕರೆ ನೀಡಿದ್ದು, ಇಂದು ಜನ ಜೀವನದಲ್ಲಿ ಬಹಳಷ್ಟು ವ್ಯತ್ಯಸಗಳು ಕಂಡು ಬರಲಿದೆ.  ಒಂದೆಡೆ ವಿಧಾನ ಮಂಡಲ ಚಳಿಗಾಳದ ಅಧಿವೇಶನ ನಡುವೆಯೆ ಭಾರತ್ ಬಂದ್ ನಡೆಸುವ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ ಬಿಸಿ‌ಮುಟ್ಟಿಸಲು ರೈತರು ಹೊರಟಿದ್ದಾರೆ.

ಹೆಚ್ಚು ಜನ ಪ್ರತಿಭಟನೆಯಲ್ಲಿ ಭಾಗಿಯಾಗುವ ಕಾರಣ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಸಿಟಿಯಲ್ಲಿ ಸುಮಾರು 15ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಿದ್ದು, ಐವರು ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳು, ಎಸಿಪಿಗಳು, 35ಕೆ.ಎಸ್ ಆರ್ ಪಿ , 32ಸಿ ಎ ರ್ ತುಕಡಿ ನಿಯೋಜನೆ ಮಾಡಿದ್ದು, ಹೊಯ್ಸಳ , ಚೀತ ಗಸ್ತು ತಿರುಗಲಿದೆ ಹಾಗೆ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್,ಕಾನ್ಸ್ಟೇಬಲ್ ಗಳು ಭದ್ರತೆಯಲ್ಲಿ ಭಾಗಿಯಾಗಿದ್ದಾರೆ.

06:47 December 08

ಕೊಪ್ಪಳದಲ್ಲಿ ಟೈರ್​ ಸುಟ್ಟು ಆಕ್ರೋಶ

ಕೊಪ್ಪಳ: ನಗರದ ಕೇಂದ್ರೀಯ ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳು ರೈತರ ವಿರೋಧಿಯಾಗಿವೆ. ಮೋದಿ ಸರ್ಕಾರ ರೈತ, ಕಾರ್ಮಿಕರ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು. 

06:45 December 08

ಬೆಳಗಿನ ಜೀವನ ಸಾಮಾನ್ಯ, ರಸ್ತೆಗಿಳಿದ ಕೆಎಸ್ಆರ್​ಟಿಸಿ

ಚಾಮರಾಜನಗರ:   ಭಾರತ ಬಂದ್​ಗೆ ಚಾಮರಾಜನಗರದಲ್ಲಿ ಬೆಳಗಿನ ಜನ ಜೀವನ ಸಾಮಾನ್ಯವಾಗಿತ್ತು. ಕೆಎಸ್ಆರ್​ಟಿಸಿಯು ಬಂದ್ ಗೆ ನೈತಿಕವಾಗಿ ಬೆಂಬಲ ಕೊಟ್ಟಿರುವುದರಿಂದ ರಸ್ತೆಗಿಳಿದಿದ್ದು ಈಗಾಗಲೇ ಕಾರ್ಯಚಟುವಟಿಕೆ ಆರಂಭಿಸಿದೆ. ಇನ್ನು, ಪೆಟ್ರೊಲ್ ಬಂಕ್ ಗಳು, ನಂದಿನಿ ಹಾಲಿನ ಕೇಂದ್ರಗಳು, ಪೇಪರ್ ಅಂಗಡಿಗಳು ತೆರೆದಿವೆ. ಜೊತೆಗೆ, ಸರಕು ಸಾಗಾಣೆ ವಾಹನಗಳು ಕೂಡ ಸಂಚಾರ ನಡೆಸುತ್ತಿವೆ.

ಬಿಗಿ ಬಂದೋಬಸ್ತ್:  

ಎಎಸ್ಪಿ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಜಿಲ್ಲಾಕೇಂದ್ರದಲ್ಲಿ ಒಬ್ಬರು ಡಿವೈಎಸ್ಪಿ, ನಾಲ್ವರು ಪೊಲೀಸ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, 10 ಮಂದಿ ಎಎಸ್ಐ, 45 ಮಂದಿ ಪೊಲೀಸ್ ಕಾನ್ಸ್‌ಟೇಬಲ್​​ಗಳು, 1 ಕೆಎಸ್ಆರ್​ಪಿ ವಾಹನ, 3 ಡಿಆರ್ ಹಾಗೂ 20 ಹೋಂ ಗಾರ್ಡ್​ಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.

06:13 December 08

ಭಾರತ್​ ಬಂದ್‌ಗೆ ಜನರಿಂದ​ ಮಿಶ್ರ ಪ್ರತಿಕ್ರಿಯೆ​

ಕೃಷಿ ತಿದ್ದುಪಡಿ ಕಾಯ್ದೆ ವಾಪಸ್​ ಪಡೆಯುವಂತೆ ಇಂದು ಭಾರತ್​  ಬಂದ್​ಗೆ ಕರೆ ನೀಡಲಾಗಿದೆ. ದೇಶದ 300 ಕ್ಕೂ ಹೆಚ್ಚು ರೈತ ಸಂಘಟನೆಗಳು ಭಾರತ್​ ಬಂದ್​​ಗೆ ಕರೆ ನೀಡಿವೆ.​  

Last Updated : Dec 8, 2020, 4:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.