ETV Bharat / bharat

Fire to Garlic : ದರ ಇಳಿಕೆಯಿಂದ ಬೇಸತ್ತ ರೈತನಿಂದ ನೂರು ಕೆಜಿ ಬೆಳ್ಳುಳ್ಳಿಗೆ ಬೆಂಕಿ

ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ಬೋನಸ್ ಬೇಕಾಗಿಲ್ಲ ಎಂದಿರುವ ಶಂಕರ್, ನಮ್ಮ ಬೆಳೆಗೆ ನ್ಯಾಯಯುತ ಬೆಲೆ ಸಿಕ್ಕರೆ ಸಾಕು ಎಂದು ಆಕ್ರೋಶ ವ್ಯಕ್ತಪಡಿಸಿ, ಬೆಳ್ಳುಳ್ಳಿಗೆ ಬೆಂಕಿ ಇಟ್ಟಿದ್ದಾನೆ..

author img

By

Published : Dec 19, 2021, 8:26 PM IST

farmer sets one quintal of garlic on fire in Ujjain
Fire to Garlic : ದರ ಇಳಿಕೆಯಿಂದ ಬೇಸತ್ತ ರೈತನಿಂದ ನೂರು ಕೆಜಿ ಬೆಳ್ಳುಳ್ಳಿಗೆ ಬೆಂಕಿ

ಉಜ್ಜೈನ್, ಮಧ್ಯಪ್ರದೇಶ : ದರ ಕುಸಿತದ ಕಾರಣದಿಂದ ಅಸಮಾಧಾನಗೊಂಡ ರೈತರು ಸುಮಾರು ನೂರು ಕೆಜಿ ಬೆಳ್ಳುಳ್ಳಿಯನ್ನು ಬೆಂಕಿ ಇಟ್ಟು ನಾಶಪಡಿಸಿದ ಘಟನೆ ಮಧ್ಯಪ್ರದೇಶದ ಉಜ್ಜೈನ್​ನಲ್ಲಿ ಶನಿವಾರ ನಡೆದಿದೆ.

ಉಜ್ಜೈನ್​ನ ಮಂಡಸೌರ್ ಕೃಷಿ ಉಪಾಜ್ ಮಂಡಿಯಲ್ಲಿ ಈ ಘಟನೆ ನಡೆದಿದೆ. ಬೆಳ್ಳುಳ್ಳಿ ಬೆಳೆಯಲು ಸುಮಾರು ಎರಡೂವರೆ ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಕೇವಲ 1 ಲಕ್ಷ ರೂಪಾಯಿ ಬೆಲೆಗೆ ಮಾರಾಟವಾಗುತ್ತಿದೆ ಎಂದು ಕೃಷಿಕರಾದ ಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತನಿಂದ ಬೆಳ್ಳುಳ್ಳಿಗೆ ಬೆಂಕಿ

ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ಬೋನಸ್ ಬೇಕಾಗಿಲ್ಲ ಎಂದಿರುವ ಶಂಕರ್, ನಮ್ಮ ಬೆಳೆಗೆ ನ್ಯಾಯಯುತ ಬೆಲೆ ಸಿಕ್ಕರೆ ಸಾಕು ಎಂದು ಆಕ್ರೋಶ ವ್ಯಕ್ತಪಡಿಸಿ, ಬೆಳ್ಳುಳ್ಳಿಗೆ ಬೆಂಕಿ ಇಟ್ಟಿದ್ದಾನೆ.

ಘಟನೆಯ ನಂತರ ಮಂಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಯಶೋಧರ್ಮನ್, ಪೊಲೀಸ್ ಠಾಣೆಯ ಉಸ್ತುವಾರಿ ಜೀತೇಂದ್ರ ಪಾಠಕ್ ಬೆಲೆ ಕುಸಿತದಿಂದ ಬೇಸತ್ತ ರೈತ ಸುಮಾರು ಒಂದು ಕಿಲೋ ಬೆಳ್ಳುಳ್ಳಿಯನ್ನು ಬೆಂಕಿ ಇಟ್ಟು ನಾಶಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕಳ್ಳ ಪ್ರೊಫೆಸರ್.. 30 ಮೊಬೈಲ್​ಗಳನ್ನು ಕದ್ದಿದ್ದಾರೆ ಮೆಡಿಕಲ್​ ಕಾಲೇಜಿನ ಈ ಪ್ರಾಧ್ಯಾಪಕ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.