ETV Bharat / bharat

ಸಾಲ ಮರುಪಾವತಿಗೆ ಜಮೀನು, ಮನೆ ಕೇಳಿದ ಸಾಲದಾತ: ಖಿನ್ನತೆಗೊಳಗಾಗಿ ರೈತ ಆತ್ಮಹತ್ಯೆ

author img

By

Published : Jun 16, 2022, 4:21 PM IST

ಮನೆ ಸೇರಿದಂತೆ ಸಂಪೂರ್ಣ ಭೂಮಿಗೆ ಬೇಡಿಕೆ ಇಟ್ಟಿದ್ದ ಲೇವಾದೇವಿಗಾರನಿಂದ ನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಜಸ್ಥಾನದಲ್ಲಿ ಖಿನ್ನತೆಗೊಳಗಾಗಿ ರೈತ ಆತ್ಮಹತ್ಯೆ

ಕರೌಲಿ (ರಾಜಸ್ಥಾನ): ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕರೌಲಿ ಜಿಲ್ಲೆಯ ನಡೌಟಿ ಉಪವಿಭಾಗದ ಸೋಪ್ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ಲೇವಾದೇವಿದಾರ ತನ್ನ ತಂದೆಗೆ ತೀವ್ರ ಕಿರುಕುಳ ನೀಡಿದ್ದಾನೆ ಎಂದು ಮೃತನ ಮಗ ಆರೋಪಿಸಿದ್ದಾನೆ.

ಮೃತರನ್ನು ಕಮಲರಾಮ್ ಮೀನಾ ಎಂದು ಗುರುತಿಸಲಾಗಿದೆ. ಪೊಲೀಸರು ಮೃತದೇಹವನ್ನು ತಮ್ಮ ವಶಕ್ಕೆ ಪಡೆದು ನಡೌಟಿ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನಿಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ಮೃತ ಹರಿಚರಣ್ ಮೀನಾ ಅವರ ಪುತ್ರ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 10-12 ವರ್ಷಗಳ ಹಿಂದೆ ಸಾಲಗಾರನಿಂದ ನಮ್ಮ ತಂದೆ 3.5 ಲಕ್ಷ ರೂಪಾಯಿ ಪಡೆದಿದ್ದರು. ಸಾಲ ವಾಪಸ್​ ನೀಡುವಂತೆ ತಂದೆಗೆ ನಿಂದಿಸಿ ಹಲ್ಲೆ ನಡೆಸಿದ್ದು, ನಿತ್ಯ ಕಿರುಕುಳ ನೀಡುತ್ತಿದ್ದ ಎಂದು ಹರಿಚರಣ್ ಹೇಳಿದ್ದಾರೆ.

ಸಾಲ ನೀಡಿದವ ಮನೆ ಸೇರಿದಂತೆ ಭೂಮಿಗೆ ಬೇಡಿಕೆ ಇಟ್ಟಿದ್ದಾನೆ. ಅದರಂತೆ 18 ಬಿಘಾ ಭೂಮಿ ನೀಡಲು ತಂದೆ ಸಿದ್ಧವಾಗಿದ್ದರು. ಆದರೆ ಇದೇ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಯುಪಿ ಬುಲ್ಡೋಜರ್ ಕ್ರಮ ನಿಲ್ಲಿಸಲಾಗದು, ಆದ್ರೆ ಕಾನೂನು ವ್ಯಾಪ್ತಿಯಲ್ಲಿರಬೇಕು: ಸುಪ್ರೀಂಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.