ETV Bharat / bharat

ಸರ್ಕಾರದ ದಬ್ಬಾಳಿಕೆ ವಿರೋಧಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ: ಡೆತ್​ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡ ರೈತ - Baba Ram Singh committed suicide

ಆತ್ಮಹತ್ಯೆ
ಆತ್ಮಹತ್ಯೆ
author img

By

Published : Dec 16, 2020, 6:07 PM IST

Updated : Dec 16, 2020, 10:16 PM IST

18:02 December 16

ಕರ್ನಾಲ್ ಜಿಲ್ಲೆಯ ನಿಸ್ಸಿಂಗ್ ಪ್ರದೇಶದ ಸಿಂಘ್ರಾ ಗ್ರಾಮದ ಬಾಬಾ ರಾಮ್ ಸಿಂಗ್ ಎಂಬ ರೈತ ಸಿಂಘು ಗಡಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹರಿಯಾಣ: ಬುಧವಾರ ಸಂಜೆ ಸಿಂಘು ಗಡಿಯಲ್ಲಿ 65 ವರ್ಷದ ರೈತ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ರೈತನನ್ನು ಕರ್ನಾಲ್ ಜಿಲ್ಲೆಯ ನಿಸ್ಸಿಂಗ್ ಪ್ರದೇಶದ ಸಿಂಘ್ರಾ ಗ್ರಾಮದ ಬಾಬಾ ರಾಮ್ ಸಿಂಗ್ ಎಂದು ಗುರುತಿಸಲಾಗಿದೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ರೂ, ಆಸ್ಪತ್ರೆಗೆ ಬರುವುದರೊಳಗೆ ರಾಮ್​ ಸಿಂಗ್​​ ಸಾವನ್ನಪ್ಪಿದ್ದರು ಎಂದು ವೈದ್ಯರು ಹೇಳಿದ್ದಾರೆ. ಮೃತ ರೈತ ಪಂಜಾಬಿ ಭಾಷೆಯಲ್ಲಿ ಆತ್ಮಹತ್ಯೆ ಪತ್ರವನ್ನು ಸಹ ಬರೆದಿಟ್ಟಿದ್ದು, ಈ ಸಂಬಂಧ ಸೋನಿಪತ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ:ಸಿಂಘು ಗಡಿಯಲ್ಲಿ ಹೃದಯಾಘಾತದಿಂದ ಮತ್ತೋರ್ವ ರೈತ ಸಾವು

ಡೆತ್​ನೋಟ್​ನಲ್ಲಿ ಏನಿದೆ?: 

ರೈತರು ತಮ್ಮ ಹಕ್ಕುಗಳಿಗಾಗಿ ಬೀದಿಗಳಲ್ಲಿ ಕುಳಿತಿದ್ದಾರೆ. ಇದು ಬಹಳಷ್ಟು ನೋವುಂಟು ಮಾಡುತ್ತಿದೆ. ಸರ್ಕಾರ ರೈತರಿಗೆ ನ್ಯಾಯ ಕೊಡುತ್ತಿಲ್ಲ, ಅದು ದಬ್ಬಾಳಿಕೆ ಮಾಡುತ್ತಿದೆ. ಸರ್ಕಾರ ಹೀಗೆ ಕಿರುಕುಳ ನೀಡುವುದು ಪಾಪ, ಕಿರುಕುಳವನ್ನು ಸಹಿಸಿಕೊಳ್ಳುವುದು ಸಹ ಪಾಪವೇ ಆಗಿದೆ. ದಬ್ಬಾಳಿಕೆ ವಿರುದ್ಧ ಅನೇಕರು ತಮ್ಮ ಗೌರವಗಳನ್ನು ಹಿಂತಿರುಗಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ರೈತರ ಹಕ್ಕುಗಳಿಗಾಗಿ ಮತ್ತು ಸರ್ಕಾರದ ದಬ್ಬಾಳಿಕೆಯ ವಿರುದ್ಧ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸುಸೈಡ್​​ ನೋಟ್​​ನಲ್ಲಿ ಬಾಬಾ ರಾಮ್​ ಸಿಂಗ್ ಬರೆದುಕೊಂಡಿದ್ದಾರೆ. 

Last Updated : Dec 16, 2020, 10:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.