ಹೈದರಾಬಾದ್: ಚಲನಚಿತ್ರ ನಿರ್ಮಾಪಕ ಫರ್ಹಾನ್ ಅಖ್ತರ್ ಮತ್ತು ನಟಿ - ನಿರೂಪಕಿ ಶಿಬಾನಿ ದಾಂಡೇಕರ್ ಬುಧವಾರ ತಮ್ಮ ವಿವಾಹ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಫರ್ಹಾನ್ ಮತ್ತು ಶಿಬಾನಿ ನಾಲ್ಕು ವರ್ಷಗಳ ಡೇಟಿಂಗ್ ನಂತರ ಮುಂಬೈಗೆ ಸಮೀಪವಿರುವ ಗಿರಿಧಾಮ ಖಂಡಾಲಾದ ಫಾರ್ಮ್‌ಹೌಸ್‌ನಲ್ಲಿ ಅವರ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ನವ ಜೀವನಕ್ಕೆ ಕಾಲಿಟ್ಟರು. ಚಿತ್ರಕಥೆಗಾರರಾದ ಜಾವೇದ್ ಅಖ್ತರ್ ಮತ್ತು ಹನಿ ಇರಾನಿ ಅವರ ಪುತ್ರ, ಫರ್ಹಾನ್ ಈ ಹಿಂದೆ ಪ್ರಸಿದ್ಧ ಕೇಶ ವಿನ್ಯಾಸಕಿ ಅಧುನಾ ಭಬಾನಿ ಅವರನ್ನು ವಿವಾಹವಾಗಿದ್ದರು. ಮದುವೆಯಾದ 16 ವರ್ಷಗಳ ನಂತರ ಅವರು ವಿಚ್ಛೇದನ ಪಡೆದಿದ್ದರು. ಫರ್ಹಾನ್ ಇಬ್ಬರು ಪುತ್ರಿಯರಾದ ಶಕ್ಯಾ(21) ಮತ್ತು ಅಕಿರಾ(15) ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ ಫರ್ಹಾನ್ ಅವರು ತಮ್ಮ ಪುತ್ರಿಯರಾದ ಶಕ್ಯಾ ಮತ್ತು ಅಕಿರಾ ಅವರು ಮತ್ತು ಶಿಬಾನಿ ಪ್ರತಿಜ್ಞೆ ಮಾಡುವಾಗ ಹೂವಿನ ಬೊಕ್ಕೆಗಳನ್ನು ಹಿಡಿದಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಚಿತ್ರದಲ್ಲಿ, ಫರ್ಹಾನ್ ತನ್ನ ಹೆಣ್ಣುಮಕ್ಕಳೊಂದಿಗೆ ಸಂತೋಷದ ಚಿತ್ರಕ್ಕಾಗಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಫರ್ಹಾನ್ ಮತ್ತು ಶಿಬಾನಿ ಮದುವೆಯಲ್ಲಿ ಶಕ್ಯಾ ಮತ್ತು ಅಕಿರಾ ಕೂಡ ಡ್ಯಾನ್ಸ್ ಮಾಡಿದ್ದಾರೆ.

ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಒಟ್ಟಿಗೆ ನಟಿಸಿರುವ ಜೀ ಲೇ ಜರಾ ಎಂಬ ರೋಡ್ ಟ್ರಿಪ್ ಚಲನಚಿತ್ರದೊಂದಿಗೆ ಫರ್ಹಾನ್ ನಿರ್ದೇಶನಕ್ಕೆ ಮರಳಿದ್ದರು. 2013 ರ ಹಿಟ್ ಹಿಂದಿ ಕಾಮಿಡಿ ಕ್ವೀನ್‌ನ ಮಲಯಾಳಂ ಮತ್ತು ತೆಲುಗು ರಿಮೇಕ್‌ಗಳಲ್ಲಿ ಶಿಬಾನಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ನಟಿ ಕಂಗನಾ ರಣಾವತ್ಗೆ ಸಮನ್ಸ್ ಜಾರಿ ಮಾಡಿದ ಬಠಿಂಡಾ ಕೋರ್ಟ್