ETV Bharat / bharat

ಖ್ಯಾತ ಬಹುಭಾಷಾ ನಟಿ ಚಿತ್ರಾ ನಿಧನ.. ಚಿತ್ರರಂಗದ ಗಣ್ಯರ ಸಂತಾಪ - actress chitra died by heart attack

ಹೃದಯಾಘಾತದ ಹಿನ್ನೆಲೆ ಬಹುಭಾಷಾ ನಟಿ ಚಿತ್ರಾ(56) ನಿಧನರಾಗಿದ್ದಾರೆ. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಚಿತ್ರಾ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ.

Attakkalasam
ಖ್ಯಾತ ನಟಿ ಚಿತ್ರಾ ಹೃದಯಾಘಾತದಿಂದ ನಿಧನ
author img

By

Published : Aug 21, 2021, 3:03 PM IST

ಕೇರಳ: ಮಲಯಾಳಂನ ಖ್ಯಾತ ನಟಿ ಚಿತ್ರಾ ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದಾಗಿ ಚೆನ್ನೈನ ಅವರ ನಿವಾಸದಲ್ಲಿ ಚಿತ್ರಾ ಕೊನೆಯುಸಿರೆಳೆದಿದ್ದಾರೆ.

ಬಹುಭಾಷಾ ತಾರೆಯಾಗಿದ್ದ ಚಿತ್ರಾ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅತ್ತಕ್ಕಲಾಸಂ ಚಿತ್ರದಲ್ಲಿ ಅವರು ಮೋಹನ್ ಲಾಲ್ ಮತ್ತು ಪ್ರೇಮ್ ನಜೀರ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ನಂತರ, 'ಪೊನ್ನುಚಾಮಿ' ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಮಮ್ಮುಟ್ಟಿ, ಮೋಹನ್ ಲಾಲ್ ಮತ್ತು ಸುರೇಶ್ ಗೋಪಿ ಸೇರಿದಂತೆ ಅನೇಕ ಸ್ಟಾರ್​ ನಟರ ಜತೆ ಚಿತ್ರಾ ನಟಿಸಿದ್ದಾರೆ.

ಆಕೆಯ ಕೊನೆಯ ಚಿತ್ರ 2001ರಲ್ಲಿ ತೆರೆಕಂಡ ದಿಲೀಪ್ ಸೂತ್ರಧರನ್. ತಮಿಳು ಚಿತ್ರರಂಗದಲ್ಲಿ ಸಹ ಛಾಪು ಮೂಡಿಸಿದ್ದ ಚಿತ್ರಾ, ಶಿವಾಜಿ ಗಣೇಶನ್, ಕಮಲ್ ಹಾಸನ್, ಶರತ್ ಕುಮಾರ್ ಮತ್ತು ಪ್ರಭು ಅವರೊಂದಿಗೂ ನಟಿಸಿ ಸೈ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲ, ತೆಲುಗು, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ಸಹ ನಟಿಸಿದ್ದಾರೆ.

ಚಿತ್ರಾ ವಿಜಯ ರಾಘವನ್​ ಅವರನ್ನು ಮದುವೆಯಾದ ನಂತರ ಸಿನಿಮಾ ಕ್ಷೇತ್ರಕ್ಕೆ ಗುಡ್​ ಬೈ ಹೇಳಿ ತಮಿಳು ಧಾರಾವಾಹಿಗಳಲ್ಲಿ ನಟನೆ ಶುರು ಮಾಡಿದ್ದರು. ಹೃದಯಾಘಾತದಿಂದ ನಿಧನರಾದ ಚಿತ್ರ ಅವರ ಅಂತ್ಯಕ್ರಿಯೆ ಇಂದು ಸಂಜೆ ಚೆನ್ನೈನ ಸಾಲಿಗ್ರಾಮದಲ್ಲಿ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.