ಕುಲ್ಲು: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಗನ ನೆನಪನ್ನು ಚಿರಸ್ಥಾಯಿಯನ್ನಾಗಿಸಲು ಪೋಷಕರು ಮನೆಯ ಮುಂದೆಯೇ ಆತನ ಪ್ರತಿಮೆ ಸ್ಥಾಪಿಸಿದ್ದಾರೆ.
ಕುಲ್ಲು ಜಿಲ್ಲೆಯ ಖರ್ಹಾಲ್ ಕಣಿವೆಯ ಪುಯಿಡ್ ಗ್ರಾಮದ ನಿವಾಸಿ ಬಾಲಕೃಷ್ಣ ಎಂಬ ಯೋಧ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕುಪ್ವಾರಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಇವರು ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ವರ್ಷ ಭಯೋತ್ಪಾದಕರ ಗುಂಡಿನ ಕಾಳಗದಲ್ಲಿ ಬಾಲಕೃಷ್ಣ ಹುತಾತ್ಮರಾಗಿದ್ದಾರೆ. ಸೈನಿಕ ಹುತಾತ್ಮನಾಗಿ ಒಂದು ವರ್ಷ ಕಳೆದಿದ್ದು ಪೋಷಕರು ಪ್ರೀತಿಯ ಪುತ್ರನಿಗಾಗಿ ಪ್ರತಿಮೆ ನಿರ್ಮಿಸಿ ಗೌರವ ಸಲ್ಲಿಸಿದ್ದಾರೆ.
ದೇಶಕ್ಕಾಗಿ ಪ್ರಾಣ ಮುಡಿಪಾಗಿಟ್ಟ ಮಗನ ಕಾರ್ಯಕ್ಕೆ ಗೌರವ ಸಲ್ಲಿಸಲು ಹುತಾತ್ಮ ಯೋಧನ ತಂದೆ-ತಾಯಿ ಅನೇಕ ಬಾರಿ ಸರ್ಕಾರಕ್ಕೆ ಪತ್ರ ಬರೆದು, ಸ್ಮಾರಕ ಸ್ಥಾಪನೆ ಮಾಡುವಂತೆ ಮನವಿ ಮಾಡಿದ್ದರು. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಖುದ್ದು ಪೋಷಕರೇ ಮಗನ ಪ್ರತಿಮೆಯನ್ನು ಮಾಡಿಸಿ ಮನೆಯ ಮುಂದೆ ಪ್ರತಿಷ್ಠಾಪನೆ ಮಾಡಿದ್ದಾರೆ.
ಯೋಧನ ತಂದೆಯ ಮಾತು..
'ಕುಲ್ಲು ಜಿಲ್ಲೆಯಲ್ಲಿ ಇಂತಹ ಅನೇಕ ಹುತಾತ್ಮ ಯೋಧರ ಕುಟುಂಬವಿದೆ. ಅವರಿಗೆ ಸರ್ಕಾರದಿಂದ ಯಾವುದೇ ಗೌರವ ಸಿಕ್ಕಿಲ್ಲ. ದೇಶ ಕಾಯುವ ಸೈನಿಕರಿಗೆ ಬೆಲೆ ಕೊಡುವ ಸಲುವಾಗಿ ದೆಹಲಿಯಲ್ಲಿ ತಮ್ಮ ಮಗನ ಪ್ರತಿಮೆ ಮಾಡಿಸಿ ಮನೆ ಮುಂದೆ ಪ್ರತಿಷ್ಠಾಪನೆ ಮಾಡಿದ್ದೇವೆ. ಈ ಮೂಲಕ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದೇವೆ' ಎನ್ನುತ್ತಾರೆ ಹುತಾತ್ನ ಯೋಧನ ತಂದೆ ಮಹೇಂದ್ರ ಸಿಂಗ್.
ಈ ಪ್ರತಿಮೆಯ ಪಕ್ಕದಲ್ಲೇ ಪಕ್ಕದಲ್ಲೇ ವಸ್ತು ಸಂಗ್ರಹಾಲಯವನ್ನು ಸ್ಥಾಪನೆ ಮಾಡಿದ್ದಾರೆ. ಇದರಲ್ಲಿ ಯೋಧ ಬಾಲಕೃಷ್ಣ ತರಬೇತಿಯಲ್ಲಿ ಬಳಸುತ್ತಿದ್ದ ವಸ್ತುಗಳು ಸೇರಿದಂತೆ ಸೈನ್ಯದಲ್ಲಿ ಬಲಿಸಿದ ವಸ್ತುಗಳನ್ನು ಇಡಲಾಗಿದೆ. ಈ ಮೂಲಕ ಜಿಲ್ಲೆಯ ಇತರೆ ಯುವಕರು ಸೇನೆ ಸೇರಲು ಹುತಾತ್ಮ ಯೋಧನ ತಂದೆ ಪ್ರೇರೇಪಿಸುತ್ತಿದ್ದಾರೆ.