ETV Bharat / bharat

'ಕುಟುಂಬವೇ ನನಗೆಲ್ಲ’ .. ಗಮನ ಸೆಳೆದ ಸುಧಾಮೂರ್ತಿ ಅಳಿಯ ರಿಷಿ ಸುನಕ್‌ ಪೋಸ್ಟ್​

author img

By

Published : Jul 25, 2022, 1:00 PM IST

Rishi Sunak's Instagram Post.. ಪತ್ನಿ ಮತ್ತು ಮಕ್ಕಳೊಂದಿಗಿನ ಫೋಟೋ ಹಂಚಿಕೊಂಡ ರಿಷಿ ಸುನಕ್​- ಕುಟುಂಬವೇ ನನಗೆಲ್ಲ ಎಂದು ಪೋಸ್ಟ್​- ಸುಧಾಮೂರ್ತಿ ಅಳಿಯನ ಪೋಸ್ಟ್​ ವೈರಲ್​

Rishi Sunak
ರಿಷಿ ಸುನಾಕ್‌

ನವದೆಹಲಿ: ಬ್ರಿಟನ್‌ನ ಪ್ರಧಾನಿ ಚುನಾವಣೆಯಲ್ಲಿ ಪ್ರಧಾನಿ ಹುದ್ದೆಗೆ ಸ್ಪರ್ಧೆಯಲ್ಲಿ ಇನ್ಫೋಸಿಸ್‌ನ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್‌ 'ಕುಟುಂಬವೇ ನನಗೆಲ್ಲ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಬ್ರಿಟನ್‌ನ ಮುಂದಿನ ಪ್ರಧಾನಿ ಮತ್ತು ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕರಾಗುವ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಬ್ರಿಟನ್‌ನ ಮಾಜಿ ಹಣಕಾಸು ಸಚಿವ ಹಾಗು ಭಾರತೀಯ ಮೂಲದ ರಿಷಿ ಸುನಕ್ ನಿನ್ನೆ ಬೃಹತ್​ ರ್‍ಯಾಲಿ ನಡೆಸಿದರು. ಈ ವೇಳೆ ಮೊದಲ ಬಾರಿಗೆ ಪತಿಯ ಪರ ಪ್ರಚಾರದಲ್ಲಿ ಪತ್ನಿ ಅಕ್ಷತಾ ಮೂರ್ತಿ ಹಾಗು ಪುತ್ರಿಯರಾದ ಕೃಷ್ಣ ಮತ್ತು ಅನುಷ್ಕಾ ಸಾಥ್​ ನೀಡಿದರು.

ಮಾಜಿ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅವರ ಜನ್ಮಸ್ಥಳವಾದ ಗ್ರಾಥಂನಲ್ಲಿ ನಿನ್ನೆ ನಡೆದ ಕಾರ್ಯಕ್ರಮದ ಫೋಟೋಗಳನ್ನು ತಮ್ಮ ಇನ್ಸ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ರಿಷಿ ಸುನಕ್, 'ನನಗೆ ಎಲ್ಲದೂ ಕುಟುಂಬವೇ, ಚುನಾವಣಾ ಪ್ರಚಾರದಲ್ಲಿ ನನ್ನ ಕುಟುಂಬ ಬೆಂಬಲ ನೀಡುತ್ತಿರುವುದಕ್ಕೆ ತುಂಬಾ ಕೃತಜ್ಞನಾಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

Rishi Sunak
ರಿಷಿ ಸುನಕ್‌ ಇನ್ಸ್​ಸ್ಟಾಗ್ರಾಮ್ ಪೋಸ್ಟ್​

ಬ್ರಿಟನ್‌ನ ಪ್ರಧಾನಿ ಆಯ್ಕೆಯ 5ನೇ ಸುತ್ತಿನ ಮತದಾನ ನಡೆದಿದ್ದು, ಸುನಕ್​ ಎಲ್ಲರಿಗಿಂತ ಹೆಚ್ಚು ಮತ ಪಡೆದುಕೊಂಡಿದ್ದಾರೆ. ಸೆಪ್ಟೆಂಬರ್ 5 ರಂದು ಯುಕೆ ಮುಂದಿನ ಪ್ರಧಾನಮಂತ್ರಿಯ ಹೆಸರು ಘೋಷಣೆ ಆಗಲಿದೆ.

ಇದನ್ನೂ ಓದಿ: ಪ್ರಧಾನಿಯಾದರೆ ಚೀನಾ ವಿರುದ್ಧ ಕಠಿಣ ಕ್ರಮ: ರಿಷಿ ಸುನಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.