ETV Bharat / bharat

ಜುಲೈ 18ರಂದು ಪ್ರಧಾನಿ ಉದ್ಘಾಟಿಸಿದ್ದ ಅಂಡಮಾನ್ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತ - ಫಾಲ್ಸ್ ಸೀಲಿಂಗ್‌

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಉದ್ಘಾಟಿಸಿದ್ದ ಅಂಡಮಾನ್‌ನ ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಫಾಲ್ಸ್ ಸೀಲಿಂಗ್‌ನ ಒಂದು ಭಾಗ ಗಾಳಿಗೆ ಕುಸಿದಿದೆ.

ವೀರ್ ಸಾವರ್ಕರ್ ಅಂ.ವಿಮಾನ ನಿಲ್ದಾಣ
ವೀರ್ ಸಾವರ್ಕರ್ ಅಂ.ವಿಮಾನ ನಿಲ್ದಾಣ
author img

By

Published : Jul 24, 2023, 1:49 PM IST

ಪೋರ್ಟ್ ಬ್ಲೇರ್ (ಅಂಡಮಾನ್​​ ಮತ್ತು ನಿಕೋಬಾರ್​): ಕೆಲವು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ ಅಂಡಮಾನ್‌ನ ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಫಾಲ್ಸ್ ಸೀಲಿಂಗ್‌ನ ಒಂದು ಭಾಗ ಭಾರಿ ಗಾಳಿ ನೆಲಕ್ಕುರುಳಿದೆ. ಸಿಸಿಟಿವಿ ಕ್ಯಾಮರಾಗಳನ್ನು ದುರಸ್ತಿಗೊಳಿಸಲು ಫಾಲ್ಸ್‌ ಸಡಿಲಗೊಳಿಸಿದ ನಂತರ ಈ ಘಟನೆ ನಡೆದಿದೆ.

ಟರ್ಮಿನಲ್ ಕಟ್ಟಡದ ಹೊರಗೆ ಟಿಕೆಟಿಂಗ್ ಕೌಂಟರ್ ಮುಂಭಾಗದ ಫಾಲ್ಸ್ ಸೀಲಿಂಗ್​ಅನ್ನು ಸಿಸಿಟಿವಿ ಕಾಮಗಾರಿಗಳ ಹೊಂದಾಣಿಕೆ ಮತ್ತು ಅಂತಿಮ ಜೋಡಣೆಗಾಗಿ ಸಡಿಲಗೊಳಿಸಲಾಗಿತ್ತು ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಅ​ನ್ನು ಇನ್ನೂ ಕಾರ್ಯಗತಗೊಳಿಸಬೇಕಾಗಿದೆ. ಇದೊಂದು ಸಣ್ಣ ಘಟನೆ. ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಕೆಲಸ ನಡೆಯುತ್ತಿದೆ. ಪ್ಯಾನಲ್‌ಗಳ ಹಿಂದೆ ಅಂತಹ ಕ್ಯಾಮರಾಗಳಿಗೆ ವೈರಿಂಗ್ ಮಾಡಬೇಕಿಗಿದೆ. ಕೆಲವು ಫಿಕ್ಸಿಂಗ್ ಸಮಸ್ಯೆಗಳಿರಬಹುದು. ನಾವು ಸಮಸ್ಯೆ ಸರಿಪಡಿಸಿದ್ದೇವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ವೀರ್ ಸಾವರ್ಕರ್ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ಮೋದಿ ಜುಲೈ 18ರಂದು ಉದ್ಘಾಟಿಸಿದ್ದರು. ಜುಲೈ 22ರ ರಾತ್ರಿ, ಭಾರಿ ಗಾಳಿ ಬೀಸಿದ್ದು ಫಾಲ್ಸ್ ಸೀಲಿಂಗ್‌ನ ಒಂದು ಭಾಗ ಕೆಳಗೆ ಬಿದ್ದಿದೆ. ಟರ್ಮಿನಲ್ ಕಟ್ಟಡದೊಳಗಿನ ಫಾಲ್ಸ್ ಸೀಲಿಂಗ್ ಹಾಗೆಯೇ ಇದೆ. ಟರ್ಮಿನಲ್‌ನೊಳಗೆ ಯಾವುದೇ ಹಾನಿ ಸಂಭವಿಸಿಲ್ಲ" ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದ ನಂತರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಪ್ರವಾಸಿಗರ ಹರಿವು 2014ರಿಂದ ದ್ವಿಗುಣಗೊಂಡಿದೆ. ಮುಂದಿನ ವರ್ಷಗಳಲ್ಲಿ ದ್ವೀಪಸಮೂಹದಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಯಿಂದಾಗಿ ಇನ್ನೂ ಹೆಚ್ಚಾಗಲಿದೆ. ಟರ್ಮಿನಲ್ ಕಟ್ಟಡವು ಶೆಲ್ ಆಕಾರದಲ್ಲಿದೆ, ಇದು ದ್ವೀಪಸಮೂಹದ ನೈಸರ್ಗಿಕ ಪರಿಸರವನ್ನು ಮತ್ತಷ್ಟು ಅಂದಗೊಳಿಸಿದೆ. ಪ್ರಯಾಣಿಕರ ದಟ್ಟಣೆ ಹೆಚ್ಚಾದ ಕಾರಣ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು 707.73 ಕೋಟಿ ರೂ ಅಂದಾಜು ವೆಚ್ಚದಲ್ಲಿ ಹೊಸ ಟರ್ಮಿನಲ್ ಕಟ್ಟಡವನ್ನು ನಿರ್ಮಿಸಿದೆ.

  • The Prime Minister will inaugurate anything these days — even if it’s unfinished or substandard infrastructure (highways, airports, bridges, trains, etc)

    More than willing ministers anxious to boost their Sensex with him oblige.

    It’s the taxpayers and citizens who pay the cost.… https://t.co/TGUg128dsz

    — Jairam Ramesh (@Jairam_Ramesh) July 23, 2023 " class="align-text-top noRightClick twitterSection" data=" ">

ಕಾಂಗ್ರೆಸ್​ ವಾಗ್ದಾಳಿ: ಈ ಘಟನೆ ಕುರಿತು ರಾಷ್ಟ್ರೀಯ ಕಾಂಗ್ರೆಸ್​ ಪಕ್ಷ ಮೋದಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂವಹನಗಳ ಉಸ್ತುವಾರಿ ಜೈರಾಮ್ ರಮೇಶ್ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಫಾಲ್ಸ್ ಸೀಲಿಂಗ್‌ ಬಿದ್ದಿರುವ ವಿಡಿಯೋ, ಫೋಟೋವನ್ನು ರಿಟ್ವೀಟ್​ ಮಾಡಿ, ಇತ್ತೀಚಿಗೆ ಮೋದಿಯವರು ಅಪೂರ್ಣ ಅಥವಾ ಕಳಪೆ ಮೂಲಸೌಕರ್ಯದ ಕಟ್ಟಡ, ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಸೇತುವೆಗಳು, ರೈಲುಗಳನ್ನು ಉದ್ಘಾಟನೆ ಮಾಡುತ್ತಾರೆ ಎಂದುಲ ಟೀಕಿಸಿದ್ದಾರೆ.

ಇದನ್ನೂ ಓದಿ: Gyanvapi Survey: ಜ್ಞಾನವಾಪಿ ಮಸೀದಿಯೋ, ಮಂದಿರವೋ? ಬಿಗಿ ಪೊಲೀಸ್‌ ಭದ್ರತೆಯಲ್ಲಿ ASI ತಜ್ಞರಿಂದ ವೈಜ್ಞಾನಿಕ ಸಮೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.