ETV Bharat / bharat

ಸಿಬಿಐ ಹೆಸರಲ್ಲಿ ನಕಲಿ ಅಧಿಕಾರಿಗಳ ದಾಳಿ: ಚಿನ್ನಾಭರಣ, ನಗದು ದೋಚಿ ಪರಾರಿ

author img

By

Published : Dec 14, 2021, 5:58 PM IST

ಹೈದರಾಬಾದ್​ನ ಅಪಾರ್ಟ್‌ಮೆಂಟ್​ವೊಂದಕ್ಕೆ ನುಗ್ಗಿದ ನಕಲಿ ಸಿಬಿಐ ಅಧಿಕಾರಿಗಳು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ.

Fake CBI officials raid At Gachibowli
ಅಪಾರ್ಟ್‌ಮೆಂಟ್​​ನಲ್ಲಿ ಸಿಬಿಐ ಹೆಸರಲ್ಲಿ ನಕಲಿ ಅಧಿಕಾರಿಗಳ ದಾಳಿ

ಹೈದರಾಬಾದ್ (ತೆಲಂಗಾಣ​): ಸಿಬಿಐ ಹೆಸರಲ್ಲಿ ನಕಲಿ ಅಧಿಕಾರಿಗಳ ದಾಳಿ ನಡೆಸಿ ಅರ್ಧ ಗಂಟೆಯೊಳಗೆ 1,340 ಗ್ರಾಂ ಚಿನ್ನಾಭರಣ, 50 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿರುವ ಘಟನೆ ತೆಲಂಗಾಣದ ಹೈದರಾಬಾದ್​ನ ಗಚ್ಚಿಬೌಲಿ ಪ್ರದೇಶದಲ್ಲಿ ನಡೆದಿದೆ.

ಗಚ್ಚಿಬೌಲಿಯಲ್ಲಿರುವ ಆರೆಂಜ್ ಕೌಂಟಿ ಅಪಾರ್ಟ್‌ಮೆಂಟ್​​ನಲ್ಲಿ ಭುವನಾ ತೇಜ ಇನ್ಫ್ರಾ ಡೆವಲಪರ್ಸ್ ಮಾಲೀಕ ಸುಬ್ರಮಣ್ಯಂ ಅವರು ವಾಸಿಸುವ ಫ್ಲಾಟ್ ಸಂಖ್ಯೆ 110ಕ್ಕೆ ನಕಲಿ ಸಿಬಿಐ ಅಧಿಕಾರಿಗಳು ನುಗ್ಗಿದ್ದಾರೆ. ಮೊದಲು ಸುಬ್ರಮಣ್ಯಂ ಹಾಗೂ ಅವರ ಕುಟುಂಬ ಸದಸ್ಯರ ಬಳಿ ಇದ್ದ ಮೊಬೈಲ್​ ಫೋನ್​​​​ಗಳನ್ನು ವಶಪಡಿಸಿಕೊಂಡ ಕಿರಾತಕರು, ಚಿನ್ನಾಭರಣ, ನಗದು ಲೂಟಿ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಇದನ್ನೂ ಓದಿ: ಕಾರಿನಲ್ಲಿ ಹಿಂಬಾಲಿಸಿ ಯುವತಿಯೊಂದಿಗೆ ಅಸಭ್ಯ ವರ್ತನೆ : ಆರೋಪಿ ಅರೆಸ್ಟ್!

ಅನುಮಾನಗೊಂಡ ಸುಬ್ರಮಣ್ಯಂ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.