ETV Bharat / bharat

ಕಾರ್ಖಾನೆಗಳ ತ್ಯಾಜ್ಯ ನೀರು ಸಂಸ್ಕರಿಸದೆ ಕೆರೆಗಳಿಗೆ ಹರಿಬಿಡುತ್ತಿರುವ ಆರೋಪ : ಹೈಕೋರ್ಟ್ ನೋಟಿಸ್ - ಕಾರ್ಖಾನೆಗಳ ಕೆಮಿಕಲ್ ಕೆರೆಗೆ

ಕಾರ್ಖಾನೆಗಳಿಂದ ಹರಿ ಬಿಡುತ್ತಿರುವ ಲೋಹ ಮಿಶ್ರಿತ ರಾಸಾಯನಿಕ ನೀರು ಮತ್ತು ಒಳಚರಂಡಿ ನೀರು, ಗಂಗಾಧರನಪಾಳ್ಯ ಕೆರೆ ಮತ್ತು ಕಣಗೊಂಡನಹಳ್ಳಿ ಸೇರುವುದನ್ನು ತಡೆಯಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ..

hc
hc
author img

By

Published : Oct 23, 2021, 3:38 PM IST

ಬೆಂಗಳೂರು : ನೆಲಮಂಗಲದಲ್ಲಿರುವ ಯುನೈಟೆಡ್ ಬ್ರೇವರೇಜಸ್ ಲಿಮಿಟೆಡ್ ಮತ್ತು ಕೆಬಿಡಿಎಲ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಗಳು ತ್ಯಾಜ್ಯ ನೀರನ್ನು ಸಂಸ್ಕರಿಸದೆ ಸಮೀಪದ ಕೆರೆಗಳಿಗೆ ಬಿಡುತ್ತಿವೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ನೆಲಮಂಗಲದ ಗಂಗಾಧರಪಾಳ್ಯ ನಿವಾಸಿ ಎಂ.ನಾರಾಯಣಸ್ವಾಮಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸರ್ಕಾರ, ಅರಣ್ಯ ಮತ್ತು ಪರಿಸರ ಇಲಾಖೆ, ಸಣ್ಣ ನೀರಾವರಿ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ, ನೆಲಮಂಗಲ ತಹಶೀಲ್ದಾರ್, ಕೆಂಪೇಗೌಡನಹಳ್ಳಿ ಪಿಡಿಒ, ಯುನೈಟೆಡ್ ಬ್ರೇವರೇಜಸ್ ಲಿಮಿಟೆಡ್ ಮತ್ತು ಕೆಬಿಡಿಎಲ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಿದೆ.

ಅರ್ಜಿದಾರರ ಆರೋಪವೇನು?: ಯುಬಿಎಲ್ ಮತ್ತು ಕೆಬಿಡಿಎಲ್ ಕಾರ್ಖಾನೆಗಳು ನೆಲಮಂಗಲದಲ್ಲಿ ಲಿಕ್ಕರ್ ಮತ್ತು ಡಿಸ್ಟಲರೀಸ್ ಉತ್ಪಾದನೆಯಲ್ಲಿ ತೊಡಗಿದ್ದು, ರಾಸಾಯನಿಕ ತ್ಯಾಜ್ಯ ನೀರನ್ನು ಸಂಸ್ಕರಿಸದೆ ಸಮೀಪದ ಕೆರೆಗಳಿಗೆ ಹರಿಸುತ್ತಿವೆ. ಪರಿಣಾಮ ಇಲ್ಲಿನ ಪರಿಸರ, ಕೃಷಿ ಚಟುವಟಿಕೆ ಹಾಗೂ ಪಶುಸಂಗೋಪನೆಗೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಕೆರೆ ಪ್ರದೇಶ ಸಂಪೂರ್ಣ ಮಲಿನಗೊಂಡಿದ್ದು, ಅಂತರ್ಜಲ ಹಾಳಾಗಿದೆ. ಜನ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಜತೆಗೆ ಸ್ಥಳೀಯ ಕಾರ್ಖಾನೆಗಳಿಂದ ನೆಲಮಂಗಲ ಕೆರೆ ಮತ್ತು ಹರಿಶಿನಕುಂಟೆ ಕೆರೆಯ ಪ್ರದೇಶ ಒತ್ತುವರಿಯಾಗಿದೆ.

ಆದ್ದರಿಂದ, ನೆಲಮಂಗಲ ಕೆರೆ ಮತ್ತು ಹರಿಶಿನಕುಂಟೆ ಕೆರೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ಕೆರೆ ಅಭಿವೃದ್ಧಿ ಪ್ರಾಧಿಕಾರ, ಸಣ್ಣ ನೀರಾವರಿ ಇಲಾಖೆಗೆ ನಿರ್ದೇಶಿಸಬೇಕು. ಈ ಎರಡು ಕೆರೆ ಪ್ರದೇಶ ಒತ್ತುವರಿ ತೆರವುಗೊಳಿಸಬೇಕು.

ಕಾರ್ಖಾನೆಗಳಿಂದ ಹರಿ ಬಿಡುತ್ತಿರುವ ಲೋಹ ಮಿಶ್ರಿತ ರಾಸಾಯನಿಕ ನೀರು ಮತ್ತು ಒಳಚರಂಡಿ ನೀರು, ಗಂಗಾಧರನಪಾಳ್ಯ ಕೆರೆ ಮತ್ತು ಕಣಗೊಂಡನಹಳ್ಳಿ ಸೇರುವುದನ್ನು ತಡೆಯಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.