ನವದೆಹಲಿ : 13 ವರ್ಷದೊಳಗಿನ ಮಕ್ಕಳು ಕೂಡ ಇನ್‌ಸ್ಟಾಗ್ರಾಂ ಬಳಕೆ ಮಾಡಬಹುದು. ಅಷ್ಟೇ ಅಲ್ಲ, ಇದನ್ನು ಪೋಷಕರು ನಿಯಂತ್ರಣ ಮಾಡಬಹುದಾಗಿದೆ ಎಂದು ಫೇಸ್‌ಬುಕ್ ತಿಳಿಸಿದೆ. ಈ ಸಂಬಂಧ ಜನಪ್ರಿಯ ಫೋಟೋ ಹಂಚಿಕೆ ಅಪ್ಲಿಕೇಶನ್‌ನ ಆವೃತ್ತಿಯನ್ನು ಅನ್ವೇಷಿಸಲಾಗುತ್ತಿದೆ ಎಂದು ಇನ್‌ಸ್ಟಾಗ್ರಾಂ ಮುಖ್ಯಸ್ಥ ಆಡಮ್ ಮೊಸ್ಸೆರಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ತಮ್ಮ ಸ್ನೇಹಿತರೊಂದಿಗೆ ಮುಂದುವರಿಯಲು ಸಹಾಯ ಮಾಡುವ ಅಪ್ಲಿಕೇಶನ್‌ಗಳಿಗೆ ಸೇರಬಹುದೇ ಎಂದು ಮಕ್ಕಳು ಪೋಷಕರನ್ನು ಕೇಳುತ್ತಿದ್ದಾರೆ ಎಂದು ಬರೆದಿದ್ದಾರೆ.
ನಾವು ಮೆಸೆಂಜರ್ ಕಿಡ್ಸ್ ಮಾಡಿದಂತೆಯೇ ಪೋಷಕರ ನಿಯಂತ್ರಣವಿರುವ ಇನ್‌ಸ್ಟಾಗ್ರಾಂನ ಒಂದು ಆವೃತ್ತಿಯನ್ನು ಅನ್ವೇಷಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಮೊಸ್ಸೆರಿ ಅವರು ಉಪಾಧ್ಯಕ್ಷ ಪಾವ್ನಿ ದಿವಾಂಜಿ ಅವರೊಂದಿಗೆ ಇನ್‌ಸ್ಟಾಗ್ರಾಂ ಫಾರ್ ಕಿಡ್ಸ್ ಯೋಜನೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.
ಫೇಸ್‌ಬುಕ್ 2017ರಲ್ಲಿ 6-12ನೇ ವಯಸ್ಸಿನ ಮಕ್ಕಳಿಗಾಗಿ ಮೆಸೆಂಜರ್ ಚಾಟ್ ಪ್ಲಾಟ್‌ಫಾರ್ಮ್‌ನ ಪ್ರಾರಂಭಿಸಿತ್ತು. ಹಾಗೆ ಈ ವಾರದ ಆರಂಭದಲ್ಲಿ ಹೊಸ ವೈಶಿಷ್ಟ್ಯ ಪರಿಚಯಿಸಿ ಇದು 18 ವರ್ಷದೊಳಗಿನ ಜನರಿಗೆ ಸಂದೇಶಗಳನ್ನು ಕಳುಹಿಸುವುದನ್ನು ತಡೆಯುವ ಹಾಗೆ ಮಾಡಲಾಗಿದೆ.
ವಯಸ್ಕರರು ಇವರಿಗೆ ನೇರ ಸಂದೇಶ ಕಳುಹಿಸುವುದನ್ನು ನಿಷೇಧಿಸಿದ್ದೇವೆ. ಹಾಗೆ ಸುರಕ್ಷತಾ ಅಂಶಗಳನ್ನು ಪರಿಚಯಿಸಲಿದ್ದು, ವಯಸ್ಕರು ಅನುಮಾನಾಸ್ಪದ ನಡವಳಿಕೆಯನ್ನು ಪ್ರದರ್ಶಿಸಿದಾಗ ಮಕ್ಕಳಿಗೆ ಈ ಬಗ್ಗೆ ಮಾಹಿತಿ ತಲುಪಲಿದೆಯಂತೆ.
ಹಾಗೆಯೇ ಹದಿಹರೆಯದ ಬಳಕೆದಾರರಿಗೆ ಸಂದೇಶ ಕಳುಹಿಸುವ ವಯಸ್ಕರಿಗೆ ವರದಿ ಮಾಡುವ ಅಥವಾ ನಿರ್ಬಂಧಿಸುವ ಆಯ್ಕೆಯನ್ನೂ ನೀಡಲಿದೆ. ಇನ್ನು, ಇನ್‌ಸ್ಟಾಗ್ರಾಂ ಜಾಗತಿಕವಾಗಿ 1 ಬಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ.