ETV Bharat / bharat

ಚಿನಾರ್​ ಕಾರ್ಪ್ಸ್​ನ ಫೇಸ್​ಬುಕ್​, ಇನ್​​ಸ್ಟಾಗ್ರಾಂ​ ಮೇಲೆ ನಿರ್ಬಂಧ

ಗಡಿಯಾಚೆಗೆ ಹಾಗೂ ಕಾಶ್ಮೀರದಲ್ಲಿನ ನೈಜ ಪರಿಸ್ಥಿತಿ ಕುರಿತಾಗಿ ಜನರಿಗೆ ಮಾಹಿತಿ ನೀಡಲು ರಚನೆ ಮಾಡಲಾಗಿರುವ ಚಿನಾರ್​ ಕಾರ್ಪ್ಸ್​ನ ಫೇಸ್​ಬುಕ್​, ಇನ್​​ಸ್ಟಾಗ್ರಾಂ​ ಮೇಲೆ ಇದೀಗ ನಿರ್ಬಂಧ ವಿಧಿಸಲಾಗಿದೆ.

Instagram block handles of Chinar Corps
Instagram block handles of Chinar Corps
author img

By

Published : Feb 9, 2022, 2:57 AM IST

ಶ್ರೀನಗರ(ಜಮ್ಮು-ಕಾಶ್ಮೀರ): ಚಿನಾರ್ ಕಾರ್ಪ್ಸ್ ಎಂದೂ ಕರೆಯಲ್ಪಡುವ ಸೇನೆಯ ಶ್ರೀನಗರ ಮೂಲದ XV ಕಾರ್ಪ್ಸ್‌ನ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳ ಮೇಲೆ ಕಳೆದ 10 ದಿನಗಳಿಂದ ನಿರ್ಬಂಧ ವಿಧಿಸಲಾಗಿದೆ.

ಗಡಿಯಾಚೆಗಿನ ವಿಷಯಗಳ ಬಗ್ಗೆ ಹಾಗೂ ಕಾಶ್ಮೀರದಲ್ಲಿನ ನೈಜ ಪರಿಸ್ಥಿತಿ ಜನರಿಗೆ ತಿಳಿಸುವ ಉದ್ದೇಶದಿಂದ ಈ ಸಾಮಾಜಿಕ ಜಾಲತಾಣ ರಚನೆ ಮಾಡಲಾಗಿದ್ದು, ಕಳೆದ ಒಂದು ವಾರದಿಂದ ನಿರ್ಬಂಧಕ್ಕೊಳಪಟ್ಟಿವೆ. ಇದಕ್ಕೆ ಸಂಬಂಧಿಸಿಂತೆ ದೂರು ನೀಡಿದ ಹೊರತಾಗಿ ಕೂಡ ಅಧಿಕಾರಿಗಳು ಯಾವುದೇ ರೀತಿಯ ಮಾಹಿತಿ ಹಂಚಿಕೊಂಡಿಲ್ಲ ಎಂದು ತಿಳಿದು ಬಂದಿದೆ.

ಗಣರಾಜ್ಯೋತ್ಸವ ದಿನದಿಂದಲೂ ಈ ಪೇಜ್​​ಗಳ ಮೇಲೆ ನಿರ್ಬಂಧ ಹೇರಲಾಗಿದ್ದು, ಫೇಸ್​ಬುಕ್​​ ಹ್ಯಾಂಡಲ್​​ನಲ್ಲಿ 24,000ಕ್ಕೂ ಹೆಚ್ಚು ಅನುಯಾಯಿಗಳು ಮತ್ತು ಇನ್​​ಸ್ಟಾಗ್ರಾಂನಲ್ಲಿ 43,000 ಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

ಇದನ್ನೂ ಓದಿರಿ: 'ಕನ್ನಡಿಗ' ಬಳಿಕ 'ರಮ್ಯ ರಾಮಸ್ವಾಮಿ' ಆಗಲಿದ್ದಾರೆ ಕ್ರೇಜಿಸ್ಟಾರ್!

ಯಾವ ಕಾರಣಕ್ಕಾಗಿ ಇವುಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂಬುದರ ಕುರಿತು ಇಲ್ಲಿಯವರೆಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಫೇಸ್​ಬುಕ್​ಗೆ ಪತ್ರ ಬರೆಯಲಾಗಿದ್ದು, ಇಲ್ಲಿಯವರೆಗೆ ಪ್ರತಿಕ್ರಿಯೆ ಬಂದಿಲ್ಲ. ಇದೊಂದು ಯೋಜಿತ ಸಂಚು ಎಂದು ಮೆಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.