ನವದೆಹಲಿ: ಕರ್ನಾಟಕದಲ್ಲಿ ಪುನರುಜ್ಜೀವನಗೊಂಡ ಕಾಂಗ್ರೆಸ್‌ನಿಂದ ಸೋಲು ಅನುಭವಿಸಿರುವ ಬಿಜೆಪಿ, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ರಾಜ್ಯ ಚುನಾವಣೆಗಳನ್ನು ಗೆಲ್ಲುವ ಮೂಲಕ ಸ್ವಲ್ಪ ವರ್ಚಸ್ಸು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಹತಾಶೆಗೊಂಡಿರುವ ಬಿಜೆಪಿಯು ತಿಂಗಳವರೆಗೆ ಪ್ಯಾನ್ - ಇಂಡಿಯಾ ಪ್ರಚಾರವಾದ 'ಮಹಾ ಜನ ಸಂಪರ್ಕ ಅಭಿಯಾನ'ವನ್ನು ಇಂದಿನಿಂದ ರಾಜಸ್ಥಾನದಲ್ಲಿ ಆರಂಭಿಸಿದೆ.
ಕರ್ನಾಟಕದಲ್ಲಿ ಹೀನಾಯ ಸೋಲಿನಿಂದ ಎಚ್ಚೆತ್ತುಕೊಂಡ ಬಿಜೆಪಿ: ಕರ್ನಾಟಕದಲ್ಲಿ ಬಿಜೆಪಿಯ ಹೀನಾಯ ಸೋಲಿನ ಹಿನ್ನೆಲೆ, ಪಕ್ಷವು ಈ ದಾಳಿಯಿಂದ ಅಲರ್ಟ್ ಆಗಿದ್ದು, ಈ ಸೋಲಿನಿಂದ ಹೊರಗೆ ಬರಲು ಚಿಂತಿಸುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಒಂಬತ್ತು ವರ್ಷಗಳ 'ಸಾಧನೆ'ಗಳನ್ನು ಎತ್ತಿ ತೋರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ರಾಜಸ್ಥಾನದ ಪ್ರಮುಖ ಸಾರ್ವಜನಿಕ ರ‍್ಯಾಲಿಯಲ್ಲಿ ಕಾಂಗ್ರೆಸ್ ವಿರುದ್ಧ ಪೂರ್ಣ ಪ್ರಮಾಣದ ವಾಗ್ದಾಳಿಯನ್ನು ಪ್ರಾರಂಭಿಸಿದ್ದಾರೆ.
ಆದರೆ ಪಕ್ಷದ ಮುಂದಿನ ಚುನಾವಣಾ ಭವಿಷ್ಯದ ಬಗ್ಗೆ ಪಕ್ಷದ ನಾಯಕರಿಗೆ ಅಷ್ಟೊಂದು ವಿಶ್ವಾಸವಿಲ್ಲ. ಮುಂಬರುವ ದಿನಗಳಲ್ಲಿ ರಾಜ್ಯ ಚುನಾವಣೆಗಳು ಪ್ರಾರಂಭವಾಗುವ ಮೊದಲು, ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿ ಒಂದು ತಿಂಗಳ ಅವಧಿಯ ಪ್ಯಾನ್-ಇಂಡಿಯಾ ಪ್ರಚಾರದ 'ಮಹಾ ಜನ ಸಂಪರ್ಕ ಅಭಿಯಾನ' ನಡೆಯಲಿದೆ. ಈ ಸಮಯದಲ್ಲಿ ಪಕ್ಷಕ್ಕೆ ಹೆಚ್ಚಿನ ಬೆಂಬಲ ಲಭಿಸಲಿದೆಯೋ ಅಥವಾ ಇಲ್ಲವೋ ಎಂಬ ಭಯ ಬಿಜೆಪಿಗೆ ಕಾಡುತ್ತಿದೆ.
'ಗ್ರ್ಯಾಂಡ್ ಫಿನಾಲೆ' ಮುನ್ನ ಬಿಜೆಪಿ ಭರ್ಜರಿ ಕಸರತ್ತು: ಮೇ 31ರಂದು ಪ್ರಾರಂಭವಾದ ಜನಸಂಪರ್ಕ ಅಭಿಯಾನವು ಜೂನ್ 30ರವರೆಗೆ ಮುಂದುವರಿಯುತ್ತದೆ. ಈ ಒಂಬತ್ತು ವರ್ಷಗಳ ಅವಧಿಯಲ್ಲಿ ಕೇಂದ್ರದಲ್ಲಿ ಚುಕ್ಕಾಣಿ ಹಿಡಿದಿರುವ ಪಕ್ಷದ ಸಾಧನೆಗಳನ್ನು ಪ್ರದರ್ಶಿಸಲು ದೇಶಾದ್ಯಂತ ವ್ಯಾಪಕ ಪ್ರಚಾರ ಜರುಗಲಿದೆ. 2024ರ ಸಾರ್ವತ್ರಿಕ ಚುನಾವಣೆಯ ಮುನ್ನ ಅಂದ್ರೆ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯದ ಚುನಾವಣೆಗಳು 'ಗ್ರ್ಯಾಂಡ್ ಫಿನಾಲೆ'ಗಿಂತ ಮೊದಲು ಈ ಚುನಾವಣೆಗಳನ್ನು 'ಸೆಮಿಫೈನಲ್' ಎಂದು ನೋಡುವ ಪಕ್ಷಕ್ಕೆ ಪರೀಕ್ಷಾ ಮೈದಾನವಾಗಿದೆ.
ಜೂನ್ 10ರಂದು ಮೋದಿ ಸಂಪುಟದಲ್ಲಿ ಪುನಾರಚನೆ ಸಾಧ್ಯತೆ: ಪಕ್ಷವು ಕೇಂದ್ರದಲ್ಲಿ ತನ್ನ ಒಂಬತ್ತು ವರ್ಷಗಳ ಸರ್ಕಾರವನ್ನು 'ಗರೀಬ್ ಕಲ್ಯಾಣ ವರ್ಷ' ಎಂದು ಕರೆಯುತ್ತಿದೆ. ಕೇಸರಿ ಪಕ್ಷದ ನಾಯಕರ ಪ್ರಕಾರ, ಕೇವಲ ಸಾಧನೆಗಳನ್ನು ಆಧರಿಸಿ 2024ರ ಯುದ್ಧವನ್ನು ಗೆಲ್ಲಲಾಗುವುದಿಲ್ಲ ಎಂದು ಅವರ ಪಕ್ಷಕ್ಕೆ ತಿಳಿದಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು. ಮೂಲಗಳ ಪ್ರಕಾರ, ಜೂನ್ 10ರ ಸುಮಾರಿಗೆ ಮೋದಿ ಸಂಪುಟದಲ್ಲಿ ಪುನಾರಚನೆ ನಡೆಯಲಿದೆ. ಚುನಾವಣೆಗೆ ಒಳಪಡುವ ರಾಜ್ಯಗಳಿಂದ ಕೆಲವು ಹೊಸ ಮುಖಗಳನ್ನು ಸೇರ್ಪಡೆಗೊಳ್ಳಲಿವೆ.
ಚುನಾವಣೆಯ ಪೂರ್ವದಲ್ಲಿ 51 ಮೆಗಾ ರ‍್ಯಾಲಿಗಳು: ಭಿನ್ನಾಭಿಪ್ರಾಯ ಮೊಳಕೆಯೊಡೆದಂತೆ ತಡೆದು, ರಾಜ್ಯಗಳ ಜನಪ್ರಿಯ ನಾಯಕರನ್ನು ಸಚಿವರನ್ನಾಗಿಸಿ ಕೇಂದ್ರಕ್ಕೆ ಕರೆತರುವ ಆಲೋಚನೆ ಇದೆ. ಬಿಜೆಪಿಯು ಅಜ್ಮೀರ್ ರ‍್ಯಾಲಿಗೆ ಆದ್ಯತೆ ನೀಡಿದ್ದು, 2024ರ ಚುನಾವಣೆಯ ಪೂರ್ವದಲ್ಲಿ 51 ಮೆಗಾ ರ‍್ಯಾಲಿಗಳ ಮೇಲೆ ಕಣ್ಣಿಟ್ಟಿದೆ. ಪಕ್ಷವು ಹೆಚ್ಚಿನ ಸಾಮಾನ್ಯ ಸಭೆಗಳನ್ನು ಯೋಜಿಸಲಿದೆ. ಕೇಸರಿ ಪಕ್ಷವು ತಾನು ನುಗ್ಗಲು ಬಯಸುವ ರಾಜ್ಯಗಳಿಂದ ಹೆಚ್ಚಿನ ನಾಯಕರನ್ನು ರಾಷ್ಟ್ರೀಯ ರಂಗಕ್ಕೆ ಕರೆತರಲು ಯೋಜಿಸುತ್ತಿದೆ. ಪಕ್ಷದ ಹಿರಿಯ ನಾಯಕರಾದ ಪಿಎಂ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
2024ರ ಸಾರ್ವತ್ರಿಕ ಚುನಾವಣೆ ಟಾರ್ಗೆಟ್ ಮಾಡಿದ ಬಿಜೆಪಿ: 2024ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆ, 543 ಲೋಕಸಭಾ ಸ್ಥಾನಗಳನ್ನು 144 ಕ್ಲಸ್ಟರ್‌ಗಳಾಗಿ ವಿಂಗಡಿಸಲಾಗಿದೆ. ಪ್ರತಿ ಕ್ಲಸ್ಟರ್‌ನಲ್ಲಿ ಎಂಟು ದಿನಗಳ ಕಾಲ ಎರಡು ಗುಂಪಿನ ನಾಯಕರು ಇರುತ್ತಾರೆ. ಈ ತಂಡಗಳಲ್ಲಿ ಕೇಂದ್ರ ಸಚಿವರು ಮತ್ತು ಪಕ್ಷದ ಹಿರಿಯ ಪದಾಧಿಕಾರಿಗಳು ಸೇರಿದಂತೆ ಒಟ್ಟು 288 ಪ್ರಮುಖ ನಾಯಕರು ಇರಲಿದ್ದಾರೆ.
ಅವರು 144 ಕ್ಲಸ್ಟರ್‌ಗಳಲ್ಲಿ 4,000ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಪ್ರತಿ ಲೋಕಸಭೆ ಕ್ಷೇತ್ರದಲ್ಲೂ ಇಂತಹ 1,000 ಪ್ರತಿಷ್ಠಿತ ನಾಯಕರು ಭೇಟಿ ಮಾಡುತ್ತಾರೆ. ಈ ಕಾರ್ಯಕ್ರಮಗಳಲ್ಲಿ ದೇಶಾದ್ಯಂತ 16 ಲಕ್ಷ ಬಿಜೆಪಿ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಸಚಿವ ಸಂಪುಟ ಪುನಾರಚನೆ ಕುರಿತು ಪಕ್ಷದ ಮುಖಂಡರು ಮೌನವಾಗಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚು ಮತ್ತು ಈ ಬಾರಿ ಸ್ಪರ್ಧೆ ಹೆಚ್ಚಿರುವುದರಿಂದ ಈ ಮೆಗಾ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮವನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಣಿಪುರದ ಕುಕಿ ಸಮುದಾಯದ ಜನರನ್ನು ಭೇಟಿ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ..