ETV Bharat / bharat

ಅತ್ಯಂತ ನಿರಾಶದಾಯಕವಾದ ಬಜೆಟ್​, ಇದ್ರಲ್ಲಿ ಏನೂ ಇಲ್ಲ: ಕಾಂಗ್ರೆಸ್​ - ಬಜೆಟ್​ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಕೋವಿಡ್​ನಿಂದ ಜನರು ತತ್ತರಿಸಿ ಹೋಗಿದ್ದು, ನಾವು ಹಣದುಬ್ಬರವನ್ನು ಎದುರಿಸುತ್ತಿದ್ದೇವೆ. ಬಜೆಟ್​ನಲ್ಲಿ ಮಧ್ಯಮ ವರ್ಗದವರಿಗೆ ಯಾವುದೇ ತೆರಿಗೆ ವಿನಾಯಿತಿ ನೀಡಿಲ್ಲ. ಇದು ಅತ್ಯಂತ ನಿರಾಶದಾಯಕವಾದ ಬಜೆಟ್​ ಎಂದು ಕಾಂಗ್ರೆಸ್ ಟೀಕಿಸಿದೆ.

ಕಾಂಗ್ರೆಸ್​ ವಾಗ್ದಾಳಿ
ಕಾಂಗ್ರೆಸ್​ ವಾಗ್ದಾಳಿ
author img

By

Published : Feb 1, 2022, 2:38 PM IST

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2022-23 ಸಾಲಿನ ಬಜೆಟ್​ ಅತ್ಯಂತ ನಿರಾಶದಾಯಕವಾಗಿದೆ, ಇದು ಒದ್ದೆಯಾದ ಸ್ಕ್ವಿಬ್ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಬೇಸರ ವ್ಯಕ್ತಪಡಿಸಿದ್ದಾರೆ.

ಕೋವಿಡ್​ನಿಂದ ಜನರು ತತ್ತರಿಸಿದ್ದು, ನಾವು ಹಣದುಬ್ಬರವನ್ನು ಎದುರಿಸುತ್ತಿದ್ದೇವೆ. ಬಜೆಟ್​ನಲ್ಲಿ ಮಧ್ಯಮ ವರ್ಗದವರಿಗೆ ಯಾವುದೇ ತೆರಿಗೆ ವಿನಾಯಿತಿ ನೀಡಿಲ್ಲ. ಈ ಬಜೆಟ್ ಅಚ್ಛೇ ದಿನ್ ಎಂಬ ಮರೀಚಿಕೆಯನ್ನು ಇನ್ನಷ್ಟು ದೂರ ತಳ್ಳುವಂತಿದೆ. ಭಾರತಕ್ಕೆ 'ಅಚ್ಛೇ ದಿನ್' ಬರಲು ನಾವು ಇನ್ನೂ 25 ವರ್ಷ ಕಾಯಬೇಕು ಎಂದು ವಾಗ್ದಾಳಿ ನಡೆಸಿದರು.

2022ನೇ ಸಾಲಿನ ಈ ಬಜೆಟ್​ ಅತ್ಯಂತ ನಿರಾಶದಾಯಕವಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಎಂಜಿಎನ್‌ಆರ್‌ಇಜಿಎ) , ರಕ್ಷಣೆ, ತುರ್ತು ಆದ್ಯತೆಗಳ ಬಗ್ಗೆ ಬಜೆಟ್​ನಲ್ಲಿ ಪ್ರಸ್ತಾಪವಿಲ್ಲ ಎಂದು ಕಾಂಗ್ರೆಸ್ ಸಂಸದ ಆರೋಪಿಸಿದ್ದಾರೆ.

ಬಜೆಟ್‌ ಕುರಿತು ರಣದೀಪ್ ಸುರ್ಜೆವಾಲಾ ಪ್ರತಿಕ್ರಿಯೆ: ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಮ ವರ್ಗದವರಿಗೆ ಯಾವುದೇ ಪರಿಹಾರ ಕ್ರಮಗಳನ್ನು ಘೋಷಿಸದೆ ದ್ರೋಹ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ಟ್ವೀಟ್​ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ, ವೇತನ ಕಡಿತ ಮತ್ತು ಹೆಚ್ಚಿನ ಹಣದುಬ್ಬರದಿಂದಾಗಿ ನೌಕಕರು ಮತ್ತು ಮಧ್ಯಮ ವರ್ಗದ ಜನರು ತೊಂದರೆಗೀಡಾಗಿದ್ದಾರೆ. ಕೋವಿಡ್​ ಸಂಕಷ್ಟದ ಈ ಸಮಯದಲ್ಲಿ ಮಧ್ಯಮ ವರ್ಗವು ಕೇಂದ್ರದ ಪರಿಹಾರಕ್ಕಾಗಿ ಆಶಿಸುತ್ತಿದ್ದರು. ಆದರೆ ಕೇಂದ್ರ ಸರ್ಕಾರ ಮಧ್ಯಮ ವರ್ಗಕ್ಕೆ ದ್ರೋಹ ಬಗೆದಿದೆ. ಈ ಬಜೆಟ್​ನಲ್ಲಿ ಏನೂ ಇಲ್ಲ ಎಂದು ಹೇಳಿದ್ದಾರೆ.

ಯುವಜನತೆ, ರೈತರು, ಮಧ್ಯಮ ವರ್ಗದವರನ್ನು ನಿರ್ಲಕ್ಷಿಸಲಾಗಿದೆ. ಇದು ಕಾರ್ಪೊರೇಟ್ ಪರ ಮತ್ತು ಶ್ರೀಮಂತರ ಪರವಾದ ಬಜೆಟ್ ಎಂದು ಕಾಂಗ್ರೆಸ್ ನಾಯಕ ಮಾಣಿಕಂ ಟ್ಯಾಗೋರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.