ETV Bharat / bharat

ವಿಡಿಯೋ ಕಾಲ್​​​ ಸ್ವೀಕರಿಸಿ ಹಳ್ಳಕ್ಕೆ ಬಿದ್ದ ಬಿಲ್ಡರ್​: ಅಶ್ಲೀಲ ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ

ನಿರ್ಮಾಣ ಕ್ಷೇತ್ರದ ಹೆಸರಾಂತ ಕಂಪನಿಯೊಂದರ ನಿರ್ದೇಶಕರಿಗೆ ಕರೆಮಾಡಿದ ಮಹಿಳೆ, ಅಶ್ಲೀಲವಾಗಿ ವರ್ತಿಸಿ ಆ ವಿಡಿಯೋ ಬಳಕೆ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ.

ಅಶ್ಲೀಲ ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ
ಅಶ್ಲೀಲ ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ
author img

By

Published : Aug 11, 2022, 8:15 PM IST

ಮುಂಬೈ( ಮಹಾರಾಷ್ಟ್ರ): ಇತ್ತೀಚೆಗೆ ವಿಡಿಯೋ ಅಥವಾ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಫಿಂಗ್ ಮಾಡಿ ಸುಲಿಗೆ ಮಾಡುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂಬೈನ ಅಂಧೇರಿ ಪ್ರದೇಶದಲ್ಲಿಯೂ ಇಂತಹದ್ದೇ ಘಟನೆ ನಡೆದಿದೆ.

ನಿರ್ಮಾಣ ಕ್ಷೇತ್ರದ ಹೆಸರಾಂತ ಕಂಪನಿಯೊಂದರ ನಿರ್ದೇಶಕರನ್ನು ಈ ರೀತಿಯಲ್ಲಿ ಬೆದರಿಸಲಾಗಿದೆ. ಆರೋಪಿಯು ನಿರ್ದೇಶಕನ ಹೆಸರಿನಲ್ಲಿ ಎರಡು ನಕಲಿ ಸಾಮಾಜಿಕ ಖಾತೆಗಳನ್ನು ತೆರೆದು ನಿರ್ದೇಶಕರ ಚಿಕ್ಕಪ್ಪ ಮತ್ತು ಇತರ ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ನಂತರ ಈ ವಿಡಿಯೋ ಹಾಗೂ ಫೋಟೋಗಳನ್ನು ಅವರಿಗೆ ಕಳುಹಿಸುವ ಮೂಲಕ ಮಾನಹಾನಿ ಮಾಡಿದ್ದಾನೆ. ಬಿಲ್ಡರ್ ದೂರಿನ ಆಧಾರದ ಮೇಲೆ ಜುಹು ಪೊಲೀಸರು ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಘಟನೆ ನಡೆದಿದ್ದು ಹೇಗೆ: 26 ವರ್ಷದ ದೂರುದಾರರು ಪ್ರಸಿದ್ಧ ನಿರ್ಮಾಣ ಕಂಪನಿಯ ನಿರ್ದೇಶಕರಾಗಿದ್ದಾರೆ. ಇವರು ಇನ್​​ಸ್ಟಾ ದಲ್ಲಿ ಖಾತೆಯನ್ನು ಹೊಂದಿದ್ದಾರೆ. ಭಾನುವಾರ ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಯೊಬ್ಬರಿಂದ ಫ್ರೆಂಡ್​ ರಿಕ್ವೆಸ್ಟ್​ ಸ್ವೀಕರಿಸಿದ್ದರು. ಆ ವಿನಂತಿಯನ್ನು ಸ್ವೀಕರಿಸಿದ ನಂತರ ಮಹಿಳೆ ನಾನು ಯಾರು ಎಂದು ಗೊತ್ತೇ ಎಂದು ಕೇಳಿದ್ದಾಳೆ. ನಂತರ ನಿರ್ದೇಶಕ ಮತ್ತು ಅಪರಿಚಿತ ಮಹಿಳೆ ಪರಸ್ಪರ ಸಂದೇಶ ಕಳುಹಿಸಲು ಪ್ರಾರಂಭಿಸಿದ್ದಾರೆ.

ನಂತರ ವಿಡಿಯೋ ಕರೆ ಮಾಡಬಹುದೇ ಎಂದು ಮಹಿಳೆ ಕೇಳಿದ್ದಾಳೆ. ಅದಕ್ಕೇನಂತೆ ಮಾಡಿ ಎಂದಾಗ ದುರಂತವೇ ಸಂಭವಿಸಿದೆ. ಮಹಿಳೆ ಅವರಿಗೆ ವಿಡಿಯೋ ಕಾಲ್ ಮಾಡಿದ್ದಾಳೆ. ವಿಡಿಯೋ ಕಾಲ್​ನಲ್ಲಿ ಆಕೆ ಅಸಭ್ಯವಾಗಿ ವರ್ತಿಸಿದ್ದಾಳೆ. ಇದನ್ನು ನೋಡಿ ನಿರ್ದೇಶಕರು ಕರೆ ಕಡಿತಗೊಳಿಸಿದ್ದಾರೆ. ನಂತರ ಅದೇ ವಿಡಿಯೋ ಇಟ್ಟುಕೊಂಡು ಅದನ್ನು ಅಶ್ಲೀಲವಾಗಿ ಎಡಿಟ್​ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

70 ಸಾವಿರ ರೂ. ಹಣ ನೀಡದಿದ್ದರೆ ಮಾನಹಾನಿ ಮಾಡುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ. ಆರೋಪಿ ಮಹಿಳೆಗೆ ಸುಲಿಗೆ ಹಣವನ್ನು ಕೊಡದಿದ್ದಾಗ ವಿಡಿಯೋವನ್ನು ನಿಮ್ಮ ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡಿದ್ದಾಳೆ. ಘಟನೆ ಹಿನ್ನೆಲೆಯಲ್ಲಿ ಜುಹು ಪೊಲೀಸರಿಗೆ ದೂರು ನೀಡಲಾಗಿದ್ದು, ಅದರಂತೆ ಪೊಲೀಸರು ಸುಲಿಗೆ, ಬೆದರಿಕೆ ಮತ್ತು ಮಾಹಿತಿ ತಂತ್ರಜ್ಞಾನ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಇದನ್ನೂ ಓದಿ: 1,540 ಸಹೋದರಿಯರು, ಒಂದು ವಾರ ರಾಖಿ ಹಬ್ಬ: ಸೂರತ್​ ಉದ್ಯಮಿಯ ಸಹೋದರ ಪ್ರೀತಿ ಅನನ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.