ನವದೆಹಲಿ : ಕೋವಿಡ್ ಪ್ರಕರಣಗಳಲ್ಲಿ ಭಾರೀ ಏರಿಕೆಯ ಮಧ್ಯೆ ದೇಶದ ಜನರಿಗೆ ಸಾಕಷ್ಟು ದಾಸ್ತಾನು ಇಲ್ಲದೆ ಹೋದರೂ ಹೊರ ದೇಶಗಳಿಗೆ ಲಸಿಕೆ ರಫ್ತು ಮಾಡಿದ್ದಕ್ಕಾಗಿ ಸರ್ಕಾರದ ಮೇಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹರಿಹಾಯ್ದಿದ್ದಾರೆ.
ಲಸಿಕೆ ರಫ್ತುದಾರನಾಗಿದ್ದೂ ಬೇರೆ ದೇಶದಿಂದ ಲಸಿಕೆ ಆಮದುದಾರನಾಗುತ್ತಿರುವುದು ಆಘಾತಕಾರಿ. ಇದು 70 ವರ್ಷಗಳ ಪ್ರಯತ್ನಗಳನ್ನು ಹಾಳು ಮಾಡಿದೆ ಎಂದು ತಮ್ಮ ಟ್ವೀಟ್ನಲ್ಲಿ ಕಿಡಿಕಾರಿದ್ದಾರೆ.
ದೇಶವು ಸತತ ಮೂರನೇ ದಿನ 2 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳನ್ನು ದಾಖಲಿಸಿದೆ.
ಇದನ್ನೂ ಓದಿ: ದೇಶದ ಕೋವಿಡ್ ಪರಿಸ್ಥಿತಿ ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ!