ರಂಬನ್ (ಜಮ್ಮು ಮತ್ತು ಕಾಶ್ಮೀರ): ಜಿಲ್ಲೆಯ ಜಮ್ಮು ಮತ್ತು ಶ್ರೀನಗರ ಹೆದ್ದಾರಿಯ ನಶ್ರಿ ಟನಲ್ ಬಳಿ ಮೆಟಡೋರ್ ವಾಹನವೊಂದರಿಂದ ಅನುಮಾನಾಸ್ಪದ ಸ್ಪೋಟಕಗಳನ್ನು ಪೊಲೀಸರರು ವಶಪಡಿಸಿಕೊಂಡಿದ್ದಾರೆ.
ನಸ್ಹರಿ ಟನಲ್ ಬಳಿ ವಾಹನದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ವಶಕ್ಕೆ ಪಡೆದಿರುವ ಈ ಸ್ಪೋಟಕಗಳು ಈ ಸ್ಟಿಕಿ ಬಾಂಬ್ ಆಗಿದ್ದು, ಇದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ನಾವು ಟ್ರಕ್ ಮತ್ತು ಟಾಕ್ಸಿ ಚಾಲಕರು ಈ ಸ್ಟಿಕಿ ಬಾಂಬ್ ಅಪಾಯದ ಬಗ್ಗೆ ಅರ್ಥ ಮಾಡಿಕೊಳ್ಳಬೇಕಿದೆ. ಇದರ ಕುರಿತು ತನಿಖೆ ಆರಂಭವಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ
ರಾಷ್ಟ್ರೀಯ ಹೆದ್ದಾರಿಯ ನಸ್ಹರಿ ಟನಲ್ ಬಳಿಯ ಮೆಟಡೋರ್ನಲ್ಲಿ ಸ್ಫೋಟಕ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಮೆಟಡೋರ್ ಜಮ್ಮು ಮತ್ತು ಕಾಶ್ಮೀರದ ರಿಜಿಸ್ಟ್ರೇಶನ್ ನಂಬರ್ ಹೊಂದಿದೆ. ವಾಹನವನ್ನು ಬಟೊಟೆ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಪ್ರಯಾಣಿಕರಿಗೂ ಪ್ರಶ್ನಿಸಲಾಗಿದೆ. ವಾಹನದಲ್ಲಿ ಸ್ಫೋಟಕ ಹೇಗೆ ಬಂತು ಎಂದು ತಿಳಿದು ಬಂದಿಲ್ಲ ಎಂದರು.
ಇದನ್ನೂ ಓದಿ: ರೇಷನ್ ಅಂಗಡಿಗಳಲ್ಲೂ ದೊರೆಯಬೇಕು ಸ್ಯಾನಿಟರಿ ನ್ಯಾಪ್ಕಿನ್: ಬಂಗಾಳದ ಪ್ಯಾಡ್ಮ್ಯಾನ್ ಬೇಡಿಕೆ