ETV Bharat / bharat

ಹೈಡ್ರೋಜನ್ ಸಿಲಿಂಡರ್ ಸ್ಫೋಟ: ಮೂವರು ಕಾರ್ಮಿಕರು ಸಜೀವ ದಹನ - ಸ್ಫೋಟದ ತೀವ್ರತೆಗೆ ಬೆಚ್ಚಿದ ಜನರು

ಮಹಾರಾಷ್ಟ್ರದಲ್ಲಿ ಹೈಡ್ರೋಜನ್​ ಸಿಲಿಂಡರ್​ ಸ್ಫೋಟಗೊಂಡು ಮೂವರು ಸಜೀವ ದಹನವಾದ ದುರ್ಘಟನೆ ನಡೆದಿದೆ. ಇದರಲ್ಲಿ 12 ಕಾರ್ಮಿಕರು ತೀವ್ರ ಗಾಯಗೊಂಡಿದ್ದಾರೆ.

explosion-of-a-hydrogen-cylinder-in-maharastra
ಹೈಡ್ರೋಜನ್ ಸಿಲಿಂಡರ್ ಸ್ಫೋಟ
author img

By

Published : Sep 28, 2022, 7:35 PM IST

ವಸಾಯಿ, ಮಹಾರಾಷ್ಟ್ರ: ಇಲ್ಲಿನ ಕಾರ್ಖಾನೆಯೊಂದರಲ್ಲಿ ಸಿಲಿಂಡರ್​ಗಳು ಸ್ಫೋಟಗೊಂಡು ಉಂಟಾದ ಬೆಂಕಿಯಲ್ಲಿ ಮೂವರು ಕಾರ್ಮಿಕರು ಸಜೀವ ದಹನವಾದ ದುರ್ಘಟನೆ ಇಂದು ಸಂಜೆ ನಡೆದಿದೆ. ಘಟನೆಯಲ್ಲಿ 12 ಜನರು ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.

ಮಹಾರಾಷ್ಟ್ರದ ವಾಕಿಪಾಡಾದಲ್ಲಿರುವ ಇಂದುಜಾ ಕಾರ್ಖಾನೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಿಸಿಲಿನ ತಾಪವೋ ಅಥವಾ ಏನೋ ಅವಘಡದಿಂದಾಗಿ ಹೈಡ್ರೋಜನ್​ ತುಂಬಿದ್ದ ಸಿಲಿಂಡರ್​ಗಳು ಸಿಡಿದಿವೆ. ಇದರಿಂದ ಇಡೀ ಕಾರ್ಖಾನೆ ಬೆಂಕಿಯಿಂದ ಧಗಧಗಿಸಿದೆ.

ಹೈಡ್ರೋಜನ್ ಸಿಲಿಂಡರ್ ಸ್ಫೋಟ

ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬೆಂಕಿಗೆ ತುತ್ತಾಗಿದ್ದಾರೆ. ಇದರಲ್ಲಿ ಮೂವರು ದುರಾದೃಷ್ಟವಶಾತ್​ ಸಜೀವ ದಹನವಾಗಿದ್ದಾರೆ. 12 ಕ್ಕೂ ಅಧಿಕ ಜನರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಫೋಟದ ತೀವ್ರತೆಗೆ ಬೆಚ್ಚಿದ ಜನರು: ಇನ್ನು ಸಿಲಿಂಡರ್​ಗಳ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಕಾರ್ಖಾನೆ ಪಕ್ಕದ ಮನೆಗಳು ಅದುರಿ, ಕಿಟಕಿಯ ಗಾಜುಗಳು ಒಡೆದು ಹೋಗಿವೆ. ಭಾರಿ ಸದ್ದಿನಿಂದ ಜನರು ಬೆಚ್ಚಿ ಬಿದ್ದಿದ್ದಾರೆ. 1 ಕಿ.ಮೀ ದೂರದವರೆಗೂ ಸ್ಫೋಟದ ಸದ್ದು ಕೇಳಿ ಬಂದಿದೆ. ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಹತೋಟಿಗೆ ತಂದಿದ್ದಾರೆ. ಕಂಪನಿಯಲ್ಲಿ ಒಟ್ಟು 50 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಇಂದು 25 ರಿಂದ 30 ಕಾರ್ಮಿಕರು ಮಾತ್ರ ಹಾಜರಿದ್ದರು.

ಓದಿ: ಯಾದಗಿರಿ: ಸಿಡಿಲು ಬಡಿದು ತಾಯಿ ಮಕ್ಕಳಿಬ್ಬರು ಸೇರಿ ನಾಲ್ವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.