ಕಿಯೋಂಜರ್( ಒಡಿಶಾ): ರೆಫ್ರಿಜರೇಟರ್‌ನಲ್ಲಿ ಸ್ಫೋಟ ಸಂಭವಿಸಿದ ಹಿನ್ನೆಲೆ ಬೆಂಕಿ ತಗುಲಿ ದಂಪತಿಗಳು ಸಾವಿಗೀಡಾಗಿದ್ದು, ಒಂಬತ್ತು ವರ್ಷದ ಮಗ ಎಸ್ಕೇಪ್ ಆಗಿದ್ದಾನೆ. ಒಡಿಶಾದ ಕಿಯೋಂಜರ್ ಜಿಲ್ಲೆಯ ಬಲಾಡಾ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
ದಂಪತಿಯನ್ನು ಪೂರ್ಣಚಂದ್ರ ದೆಹುರಿ ಮತ್ತು ಅವರ ಪತ್ನಿ ಲಕ್ಷ್ಮಿ ಎಂದು ಗುರುತಿಸಲಾಗಿದೆ. ಒಂಬತ್ತು ವರ್ಷದ ಬಾಲಕನನ್ನು ಬರುನ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಇವರು ಮಲಗಿದ್ದಾಗ ರೆಫ್ರಿಜರೇಟರ್‌ನಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ಶೀಘ್ರದಲ್ಲೇ ಮನೆಗೆ ಬೆಂಕಿ ಆವರಿಸಿದೆ. ಬೆಂಕಿ ಹರಡುತ್ತಿದ್ದಂತೆ, ಬರುನ್ ಎಚ್ಚರಗೊಂಡು ಹೊರಗೆ ಓಡಿದ್ದಾನೆ.
ಆತ ತನ್ನ ಸಹೋದರನನ್ನು ರಕ್ಷಣೆಗೆ ಕೂಗಿ ಕೊಂಡಿದ್ದಾನೆ. ನೆರೆಹೊರೆಯವರು ದಂಪತಿಯನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ವಿಫಲರಾಗಿದ್ದಾರೆ.