ETV Bharat / bharat

ಸೇಲಂನ ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮುಗಿದ ರೆಮ್ಡಿಸಿವಿರ್ ಔಷಧ ವಿತರಣೆ ಆರೋಪ - ಅವಧಿ ಮುಗಿದ ರೆಮ್ಡಿಸಿವಿರ್ ಔಷಧ ವಿತರಣೆ

ಸೇಲಂ ಜಿಲ್ಲೆಯ ಸೇಲಂ ಜಿಲ್ಲಾ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರ ಪತ್ರಿಕಾ ಪ್ರಕಟಣೆಯ ಪ್ರಕಾರ, 478 ಜನರು ಹೊಸದಾಗಿ ಸೋಂಕಿಗೆ ಒಳಗಾಗಿದ್ದಾರೆ ಮತ್ತು ಇಬ್ಬರು ಸಾವನ್ನಪ್ಪಿದ್ದಾರೆ..

remdesivir
remdesivir
author img

By

Published : Apr 24, 2021, 6:23 PM IST

ಸೇಲಂ: ತಮಿಳುನಾಡಿನ ಸೇಲಂನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕೋವಿಡ್​ ರೋಗಿಗಳಿಗೆ ನೀಡಲಾಗುವ ಜೀವರಕ್ಷಕ ಎಂದೇ ಹೇಳುವ ರೆಮ್ಡಿಸಿವಿರ್​ ಔಷಧ​ ನೀಡಲಾಗುತ್ತಿದ್ದು, ಇದು ಅವಧಿ ಮುಗಿದ ಇಂಜಕ್ಷನ್​ ಎಂಬ ಆರೋಪ ಕೇಳಿ ಬಂದಿದೆ.

ಸೇಲಂ ಸರ್ಕಾರಿ ಆಸ್ಪತ್ರೆಯಲ್ಲಿ, ಅವಧಿ ಮುಗಿದ ರೆಮ್ಡಿಸಿವಿರ್ ಔಷಧಿಯನ್ನು ರೋಗಿಗಳಿಗೆ ನೀಡಲಾಗುತ್ತಿದೆ ಎಂಬ ಮಾಹಿತಿಯಿದೆ.

ರೋಗನಿರೋಧಕ ಶಕ್ತಿ ಹೆಚ್ಚಿಸಲು ಬಳಸುವ ಈ ಔಷಧ ಬಾಟಲಿಯ ಹೊರಭಾಗಕ್ಕೆ ಅವಧಿ ಮುಗಿದ ದಿನಾಂಕವನ್ನು ಆರು ತಿಂಗಳವರೆಗೆ ವಿಸ್ತರಿಸಿ ಹೊಸ ಲೇಬಲ್ ಅಂಟಿಸಿ ಅದನ್ನೇ ಸೋಂಕಿತರಿಗೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಈಟಿವಿ ಭಾರತ ಸೇಲಂ ಸರ್ಕಾರಿ ಆಸ್ಪತ್ರೆಯ ಡೀನ್ ಮತ್ತು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಲು ಪ್ರಯತ್ನಿಸಿದೆ. ಆದರೆ, ದುರದೃಷ್ಟವಶಾತ್, ನಮ್ಮ ಕರೆಗಳಿಗೆ ಯಾವುದೇ ಉತ್ತರ ಬಂದಿಲ್ಲ.

ಸೇಲಂ ಜಿಲ್ಲೆಯ ಸೇಲಂ ಜಿಲ್ಲಾ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರ ಪತ್ರಿಕಾ ಪ್ರಕಟಣೆಯ ಪ್ರಕಾರ, 478 ಜನರು ಹೊಸದಾಗಿ ಸೋಂಕಿಗೆ ಒಳಗಾಗಿದ್ದಾರೆ ಮತ್ತು ಇಬ್ಬರು ಸಾವನ್ನಪ್ಪಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ, ಸೋಂಕಿಗೆ ಒಳಗಾದ 37,980 ಜನರಲ್ಲಿ, 34, 607 ಜನರನ್ನು ಗುಣಪಡಿಸಲಾಗಿದೆ ಮತ್ತು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಜಿಲ್ಲೆಯಲ್ಲಿ 2,886 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ 487 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.