ETV Bharat / bharat

ಉಲ್ಫಾ ಮುಖ್ಯಸ್ಥ ಪರೇಶ್ ಬರುವಾ ಚರ್ಚೆಗೆ ಕರೆದ ಅಸ್ಸೋಂ ನೂತನ ರಾಜ್ಯಪಾಲ... - etv bharat kannada

ಅಸ್ಸೋಂನ ನೂತನ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್​ನ ಮುಖ್ಯಸ್ಥ ಪರೇಶ್ ಬರುವಾ ಅವರಿಗೆ ಮಾತುಕತೆಗೆ ಬರುವಂತ ಆಹ್ವಾನಿಸಿದ್ದಾರೆ.

gulab chand kataria assam governor
ಉಲ್ಫಾ ಮುಖ್ಯಸ್ಥ ಪರೇಶ್ ಬರುವಾ ಅವರನ್ನು ಚರ್ಚೆಗೆ ಕರೆದ ಅಸ್ಸಾಂನ ನೂತನ ರಾಜ್ಯಪಾಲ...
author img

By

Published : Mar 4, 2023, 10:54 PM IST

ನವದೆಹಲಿ: ಅಸ್ಸೋಂನ ನೂತನ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ಉಲ್ಫಾ-ಇಂಡಿಪೆಂಡೆಂಟ್) ಮುಖ್ಯಸ್ಥ ಪರೇಶ್ ಬರುವಾ ಅವರಿಗೆ ಚರ್ಚೆಗೆ ಬಂದು ರಾಜ್ಯದ ಬೆಳವಣಿಗೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಅಸ್ಸೋಂನ 29 ನೇ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಈಟಿವಿ ಭಾರತ್‌ಗೆ ನೀಡಿದ ಮೊದಲ ಸಂದರ್ಶನದಲ್ಲಿ ಕಟಾರಿಯಾ ಮಾತನಾಡಿ, ಕುಂದುಕೊರತೆಗಳನ್ನು ಪರಿಹರಿಸಲು ಚರ್ಚೆ ಏಕೈಕ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ.

’’ಉಲ್ಫಾ ಮಾತುಕತೆಗೆ ಬರಬೇಕು. ಯಾವುದೇ ಕುಂದುಕೊರತೆಗಳಿದ್ದರೆ, ಅವರು ಮಾತುಕತೆಗೆ ಬಂದು ಚರ್ಚಿಸಬೇಕು ಎಂದು ನಾನು ಬಯಸುತ್ತೇನೆ‘‘ ಎಂದು ಕಟಾರಿಯಾ ಹೇಳಿದ್ದಾರೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈಗಾಗಲೇ ಸಂಭಾವ್ಯ ಮಾತುಕತೆಗಾಗಿ ಕ್ರಮವನ್ನು ಪ್ರಾರಂಭಿಸಿದ ನಂತರ ಉಲ್ಫಾ-ಐ ನೊಂದಿಗೆ ಶಾಂತಿ ಮಾತುಕತೆಗಾಗಿ ಚೆಂಡು ಈಗಾಗಲೇ ಉರುಳಲು ಪ್ರಾರಂಭಿಸಿರುವುದರಿಂದ ಈ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ. ಆದರೆ ಉಲ್ಫಾ-ಐ ಬೇಡಿಕೆಯಂತೆ ಸಾರ್ವಭೌಮತ್ವದ ವಿಷಯವು ಶಾಂತಿ ಮಾತುಕತೆ ಪ್ರಕ್ರಿಯೆಯಲ್ಲಿ ತೊಡಕನ್ನುಂಟುಮಾಡಿದೆ.

ಸರ್ಕಾರದೊಂದಿಗೆ ಸಹಕರಿಸುವಂತೆ ಜನರಲ್ಲಿ ಮನವಿ: ಅಸ್ಸೋಂನ ಸರ್ವಾಂಗೀಣ ಅಭಿವೃದ್ಧಿಯನ್ನು ಖಚಿತಪಡಿಸುವುದು ತಮ್ಮ ಮುಖ್ಯ ಗುರಿಯಾಗಿದೆ ಎಂದು ಕಟಾರಿಯಾ ಹೇಳಿದ್ದಾರೆ. "ನಾನು ಅಸ್ಸಾಂನ ಜನರನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸಲು ಬಯಸುತ್ತೇನೆ. ಅಭಿವೃದ್ಧಿಗಾಗಿ ಪ್ರತಿಯೊಬ್ಬರಿಗೂ ಅವಕಾಶ ಸಿಗಬೇಕು" ಎಂದಿರುವ ಕಟಾರಿಯಾ, ಅಭಿವೃದ್ಧಿ ಚಟುವಟಿಕೆಗಳಲ್ಲಿ ಸರ್ಕಾರದೊಂದಿಗೆ ಸಹಕರಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ವಿಶ್ವವಿದ್ಯಾನಿಲಯಗಳ ಅಭಿವೃದ್ಧಿಗೆ ನಾನು ಒತ್ತು ನೀಡುತ್ತೇನೆ: ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯನ್ನು ಖಚಿತಪಡಿಸುವುದು ತನ್ನ ಆದ್ಯತೆಯಾಗಿದೆ ಎಂದು ಕಟಾರಿಯಾ ಹೇಳಿದರು. "ಅಸ್ಸೋಂನಲ್ಲಿ ಶಿಕ್ಷಣ ಮತ್ತು ವಿಶ್ವವಿದ್ಯಾನಿಲಯಗಳ ಅಭಿವೃದ್ಧಿಗೆ ನಾನು ಒತ್ತು ನೀಡುತ್ತೇನೆ. ಹೊಸ ಶಿಕ್ಷಣ ನೀತಿಯಡಿಯಲ್ಲಿ ಶಿಕ್ಷಣ ಕ್ಷೇತ್ರದ ಪ್ರಗತಿಯನ್ನು ನಾನು ಮೇಲ್ವಿಚಾರಣೆ ಮಾಡುತ್ತೇನೆ" ಎಂದು ಅವರು ಇದೇ ವೇಳೆ ಆ ರಾಜ್ಯದ ಜನರಿಗೆ ಭರವಸೆ ನೀಡಿದರು.

ರಾಜ್ಯವನ್ನು ನಂಬರ್ ಒನ್ ಮಾಡಲು ನಾನು ಪ್ರಯತ್ನಿಸುತ್ತೇನೆ: ಕಳೆದ ಎಂಟರಿಂದ ಒಂಬತ್ತು ವರ್ಷಗಳಲ್ಲಿ ಈಶಾನ್ಯ ರಾಜ್ಯಗಳು ಸರಣಿ ಅಭಿವೃದ್ಧಿ ಚಟುವಟಿಕೆಗಳಿಗೆ ಸಾಕ್ಷಿಯಾಗುತ್ತಿವೆ ಎಂದು ಪ್ರತಿಪಾದಿಸಿದ ಕಟಾರಿಯಾ, "ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಅಸ್ಸೋಂ ರಾಜ್ಯವನ್ನು ನಂಬರ್ ಒನ್ ಮಾಡಲು ನಾನು ಪ್ರಯತ್ನಿಸುತ್ತೇನೆ" ಎಂದು ಹೇಳಿದರು.

ಎಲ್ಲ ನೆರೆಯ ರಾಜ್ಯಗಳೊಂದಿಗೆ ಸೌಹಾರ್ದಯುತ ಮತ್ತು ಸ್ನೇಹಪರ ವಾತಾವರಣ ಇರಬೇಕು ಎಂದು ಅವರು ಒತ್ತಿ ಹೇಳಿದರು. "ಎಲ್ಲಾ ಏಳು ಈಶಾನ್ಯ ರಾಜ್ಯಗಳ ನಡುವೆ ತಿಳಿವಳಿಕೆ ಮತ್ತು ಸೌಹಾರ್ದಯುತ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ಈಶಾನ್ಯದ ಎಲ್ಲ ರಾಜ್ಯಗಳಲ್ಲಿ ಸಾಕಷ್ಟು ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿವೆ. ಅದು ರಸ್ತೆ, ಸಂವಹನ, ಮೂಲಸೌಕರ್ಯವಾಗಿರಲಿ, ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ" ಎಂದು ಕಟಾರಿಯಾ ಹೇಳಿದರು.

ಇದನ್ನೂ ಓದಿ:ಸುಳ್ಳು ಸುದ್ದಿ ಹಬ್ಬಿಸಿದವರು ದೇಶ ವಿರೋಧಿಗಳು ಎಂದ ಸ್ಟಾಲಿನ್: ಪತ್ರಿಕೆ ಸಂಪಾದಕ ಸೇರಿ ಮೂವರ ವಿರುದ್ಧ ಕೇಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.