ಕೋಲ್ಕತ್ತಾ(ಪಶ್ಚಿಮ ಬಂಗಾಳ): ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗೆ ನೇತಾಜಿ ರಿಸರ್ಚ್ ಬ್ಯೂರೋ 2022ನೇ ಸಾಲಿನ ನೇತಾಜಿ ಪ್ರಶಸ್ತಿಯನ್ನು ಭಾನುವಾರ ಪ್ರದಾನ ಮಾಡಿದೆ.
ಸ್ವಾತಂತ್ರ್ಯ ಹೋರಾಟಗಾರ ಸುಭಾಸ್ ಚಂದ್ರ ಬೋಸ್ ಅವರ 125ನೇ ಜನ್ಮದಿನದಂದು ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕೋಲ್ಕತ್ತಾದಲ್ಲಿರುವ ಜಪಾನ್‌ನ ಕಾನ್ಸುಲ್ ಜನರಲ್ ನಕಮುರಾ ಯುಟಕಾ ಅವರು ರಾಷ್ಟ್ರೀಯ ಐಕಾನ್‌ನ ಎಲ್ಜಿನ್ ರೋಡ್ ನಿವಾಸದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಬೆ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಾನ್ಸುಲ್ ಜನರಲ್ ಓದಿದ ಸಂದೇಶದಲ್ಲಿ ಅಬೆ ಅವರು ಕೃತಜ್ಞತೆ ಸಲ್ಲಿಸಿದ್ದರು. ಅಲ್ಲದೇ ಜಪಾನ್‌ನ ಮಾಜಿ ಪ್ರಧಾನಿಯಾಗಿ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯನಾಗಿ ನನ್ನ ಸಾಮರ್ಥ್ಯದಲ್ಲಿ, ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿಗೆ ಕೊಡುಗೆ ನೀಡುವುದನ್ನು ಮುಂದುವರಿಸಲು ನಾನು ನನ್ನ ಕೈಲಾದಷ್ಟು ಮಾಡಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಈ ಹಿಂದೆ ಮಾಡಿದ ತಪ್ಪುಗಳನ್ನು ಈಗ ಸರಿಪಡಿಸಲಾಗುತ್ತಿದೆ: ಪ್ರಧಾನಿ ಮೋದಿ
ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಜಪಾನ್ ಮತ್ತು ಭಾರತದ ಸ್ನೇಹ ಹಾಗೂ ಜಾಗತಿಕ ಪಾಲುದಾರಿಕೆಯು ಮತ್ತಷ್ಟು ಬಲಗೊಳ್ಳಲಿದೆ ಎಂದು ಅಬೆ ಹೇಳಿದ್ದಾರೆ.
ಸುಭಾಸ್ ಚಂದ್ರ ಬೋಸ್ ಅವರ ಮೊಮ್ಮಗ ಮತ್ತು ನೇತಾಜಿ ರಿಸರ್ಚ್ ಬ್ಯೂರೋದ ನಿರ್ದೇಶಕ ಪ್ರೊ. ಸುಗತ ಬೋಸ್ ಅವರು ಅಬೆ ಅವರನ್ನು ಸ್ವಾತಂತ್ರ್ಯದ ಐಕಾನ್‌ನ ಮಹಾನ್ ಅಭಿಮಾನಿ ಎಂದು ಬಣ್ಣಿಸಿದ್ದಾರೆ.
ಭಾರತದಲ್ಲಿ ಜಪಾನ್‌ನ ರಾಯಭಾರಿ ಸತೋಶಿ ಸುಜುಕಿ ಅವರು ದೆಹಲಿಯಿಂದ ವಾಸ್ತವಿಕವಾಗಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸುಗತ ಬೋಸ್, ದೇಶದ ಹೊಸ ತಲೆಮಾರು ಮಹಾನ್ ದೇಶಭಕ್ತರ ಆದರ್ಶಗಳಿಂದ ಪಾಠಗಳನ್ನು ಕಲಿಯಬೇಕೆಂದು ನಾನು ಬಯಸುತ್ತೇನೆ ಎಂದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ