ETV Bharat / bharat

ದಕ್ಷಿಣ ಆಫ್ರಿಕಾದಲ್ಲಿ ಬಳಸಿದ ಇವಿಎಂ ಕರ್ನಾಟಕದಲ್ಲಿ ಬಳಸಿಲ್ಲ: ಕಾಂಗ್ರೆಸ್‌ ಆರೋಪಕ್ಕೆ ಚುನಾವಣಾ ಆಯೋಗದ ಸ್ಪಷ್ಟನೆ

author img

By

Published : May 12, 2023, 12:33 PM IST

Updated : May 12, 2023, 2:12 PM IST

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಳಸಲಾದ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು (ಇವಿಎಂ) ದಕ್ಷಿಣ ಆಫ್ರಿಕಾದಲ್ಲಿ ಈ ಹಿಂದೆ ಉಪಯೋಗಿಸಲಾಗಿತ್ತು ಎಂಬ ಕಾಂಗ್ರೆಸ್ ಆರೋಪವನ್ನು ಭಾರತ ಚುನಾವಣಾ ಆಯೋಗ ತಳ್ಳಿಹಾಕಿದೆ.

Election Commission
ಸುರ್ಜೇವಾಲಾ ಆರೋಪಕ್ಕೆ ಚು.ಆಯೋಗ ಸ್ಪಷ್ಟನೆ

ನವದೆಹಲಿ: ಮೇ 10ರಂದು ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಳಸಲಾದ ವಿದ್ಯುನ್ಮಾನ ಮತ ಯಂತ್ರಗಳನ್ನು (ಇವಿಎಂ) ಈ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಉಪಯೋಗಿಸಲಾಗಿತ್ತು ಎಂಬ ಕಾಂಗ್ರೆಸ್‌ ಪಕ್ಷದ ಆರೋಪವನ್ನು ಕೇಂದ್ರ ಚುನಾವಣಾ ಆಯೋಗ (ಇಸಿಐ) ಗುರುವಾರ ಅಲ್ಲಗಳೆದಿದೆ. ಇಂತಹ ಸುಳ್ಳು ವದಂತಿಗಳನ್ನು ಹರಡುವವರನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಕಾಂಗ್ರೆಸ್‌ಗೆ ಸೂಚಿಸಿದೆ.

ಈ ಕುರಿತು ಪಕ್ಷದ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಪತ್ರ ಬರೆದಿರುವ ಆಯೋಗ "ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್‌ ಇಂಡಿಯಾ ಲಿಮಿಟೆಡ್ (ಇಸಿಐಎಲ್) ತಯಾರಿಸಿರುವ ಹೊಸ ಇವಿಎಂಗಳನ್ನು ಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲಿ ಬಳಕೆ ಮಾಡಲಾಗಿದೆ" ಎಂದು ಸ್ಪಷ್ಟಪಡಿಸಿದೆ. ಇವಿಎಂಗಳನ್ನು ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಿಲ್ಲ/ ಇಸಿ ಯಾವುದೇ ದೇಶದಿಂದ ಇವಿಎಂಗಳನ್ನು ಆಮದು ಮಾಡಿಕೊಂಡಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಸಲಾಗುವುದಿಲ್ಲ ಎಂಬ ಅಂಶವನ್ನು ದಕ್ಷಿಣ ಆಫ್ರಿಕಾದ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ರಾಷ್ಟ್ರೀಯ ಮತ್ತು ಪ್ರಾಂತೀಯ ಚುನಾವಣೆ ಇಲ್ಲಸ್ಟ್ರೇಟೆಡ್ ಬುಕ್‌ಲೆಟ್ ಮೂಲಕ ಸುಲಭವಾಗಿ ಪರಿಶೀಲಿಸಬಹುದು" ಎಂದು ಆಯೋಗ ಸ್ಪಷ್ಟಪಡಿಸಿದೆ.

ಇವಿಎಂಗಳ ಕುರಿತಾಗಿ ತಪ್ಪು ಮಾಹಿತಿ ಹಬ್ಬಿಸುತ್ತಿರುವ ಮೂಲಗಳನ್ನು ಪಕ್ಷ ಬಹಿರಂಗಪಡಿಸಬೇಕು. ಈ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಮೇ 15ರ ಸಂಜೆ 5 ಗಂಟೆ ಒಳಗೆ ಕಾಂಗ್ರೆಸ್ ದೃಢಪಡಿಸಬೇಕು. ಮತಯಂತ್ರಗಳನ್ನು ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಿರಲಿಲ್ಲ. ಆ ರಾಷ್ಟ್ರವು ಚುನಾವಣೆಯಲ್ಲಿ ಮತಯಂತ್ರಗಳನ್ನು ಬಳಕೆ ಮಾಡುವುದೂ ಇಲ್ಲ ಎಂದು ಆಯೋಗ ಇನ್ನೊಂದು ಬಾರಿ ಸ್ಪಷ್ಟಪಡಿಸಿದೆ.

ಇಸಿಐಎಲ್‌ ತಯಾರಿಸಿರುವ ಹೊಸ ಮತಯಂತ್ರಗಳನ್ನು ಮಾತ್ರ ಕರ್ನಾಟಕದಲ್ಲಿ ಬಳಕೆ ಮಾಡಲಾಗುತ್ತದೆ ಎಂಬ ಬಗ್ಗೆ ಕಾಂಗ್ರೆಸ್‌ ಪಕ್ಷಕ್ಕೆ ಮಾಹಿತಿ ಇತ್ತು. ಇವಿಎಂಗಳ ಸಾಗಣೆ ಹಾಗೂ ಅವುಗಳ ಬಳಕೆಯ ಪ್ರತಿ ಹಂತದಲ್ಲಿಯೂ ಕಾಂಗ್ರೆಸ್‌ ಪ್ರತಿನಿಧಿಗಳು ಇದ್ದರು ಎಂದು ಆಯೋಗ ಹೇಳಿದೆ. ಭಾರತದ ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ, ಕರ್ನಾಟಕ ಚುನಾವಣೆಗೆ ಬಳಸಲಾಗುವ ಇವಿಎಂಗಳಿಗೆ ಸಂಬಂಧಿಸಿದ ಮೇಲಿನ ಪ್ರಮಾಣಿತ ಕಾರ್ಯಾಚರಣಾ ಕಾರ್ಯ ವಿಧಾನವು ಪ್ರತಿ ಹಂತದಲ್ಲೂ ಐಎನ್‌ಸಿ ಪ್ರತಿನಿಧಿಗಳು ಭಾಗವಹಿಸಿದ್ದ ದೃಢೀಕರಣವನ್ನು ಹೊಂದಿದೆ ಎಂದು ತಿಳಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಬಳಸಲಾಗಿದ್ದ ಮತಯಂತ್ರಗಳನ್ನೇ ಕರ್ನಾಟಕ ಚುನಾವಣೆಯಲ್ಲಿ ಮರು ಬಳಕೆ ಮಾಡಲಾಗುತ್ತಿದೆ ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿ ಕಾಂಗ್ರೆಸ್‌ ಮೇ 8ರಂದು ಆಯೋಗಕ್ಕೆ ಪತ್ರ ಬರೆದು, ಕೆಲ ಸ್ಪಷ್ಟೀಕರಣ ಕೇಳಿತ್ತು. ಈ ಆರೋಪಗಳಿಗೆ ಚುನಾವಣಾ ಆಯೋಗ ಪ್ರತಿಕ್ರಿಯಿಸಿದೆ.

ಇವಿಎಂ ಪ್ರೋಟೋಕಾಲ್ ಪ್ರಕಾರ, "ಎಲ್ಲ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳ ಪ್ರತಿನಿಧಿಗಳಿಗೆ ಇವಿಎಂಗಳನ್ನು ಸ್ವೀಕರಿಸುವ ಸ್ಥಳದ ಬಗ್ಗೆ ತಿಳಿಸಲಾಗುತ್ತದೆ ಮತ್ತು ಪ್ರಕ್ರಿಯೆಯನ್ನು ವಿಡಿಯೋಗ್ರಾಫ್ ಮಾಡಲಾಗುತ್ತದೆ. ವಾಸ್ತವವಾಗಿ, ಇವಿಎಂಗಳೊಂದಿಗೆ ಸಂಪರ್ಕ ಹೊಂದಿದ ಪ್ರತಿಯೊಂದು ಪ್ರಕ್ರಿಯೆಯಲ್ಲಿ ಪಕ್ಷದ ಪ್ರತಿನಿಧಿಗಳು ಹಾಜರಿರಲು ಕೇಳಲಾಗುತ್ತದೆ. ಇದು ಯಾದೃಚ್ಛಿಕಗೊಳಿಸುವಿಕೆ ಅಣಕು ಮತದಾನದ ಕಾರ್ಯಾರಂಭ" ಎಂದು ಆಯೋಗ ಹೇಳಿದೆ.

ಒಂದೇ ಹಂತದ ಕರ್ನಾಟಕ ವಿಧಾನಸಭೆಗೆ ಮೇ 10 ರಂದು ಮತದಾನ ನಡೆದಿದ್ದು, ಶನಿವಾರ ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ಇವಿಎಂ ಯಂತ್ರಗಳ ದುರುಪಯೋಗ ಆಗಲ್ಲ.. ಕಾಂಗ್ರೆಸ್ ಮನವಿ ತಿರಸ್ಕಾರ: ಮುಖ್ಯ ಚುನಾವಣಾ ಆಯುಕ್ತರ ಸ್ಟಷ್ಟನೆ

Last Updated : May 12, 2023, 2:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.