ಹೈದರಾಬಾದ್(ತೆಲಂಗಾಣ) : ರಾಮಾನುಜಾಚಾರ್ಯರು ಸಮಾನತೆಯ ತತ್ವವನ್ನು ಸಾವಿರ ವರ್ಷಗಳ ಹಿಂದೆಯೇ ಬೋಧಿಸಿದ್ದರು. ಅವರ ಸಮತಾಮೂರ್ತಿಯನ್ನು ಜೀವನದಲ್ಲಿ ಒಂದು ಸಲವಾದರೂ ನೋಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮುಚಿಂತಲ್ ಎಂಬಲ್ಲಿ ಸ್ಥಾಪಿಸಲಾದ ಸಮಾನತಾವಾದಿ ರಾಮಾನುಜಾಚಾರ್ಯರ ಮೂರ್ತಿಯ ದರ್ಶನ ಪಡೆದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ರಾಮಾನುಜಾಚಾರ್ಯರು 120 ವರ್ಷ ಬದುಕಿದ್ದರು.
ಮನುಷ್ಯ 60 ವರ್ಷ ಬದುಕುವುದೇ ಕಷ್ಟ. ಇಂತಹ ಮಹಾನ್ ಚೇತನ ಮೂರ್ತಿಯನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು ಎಂದು ಹೇಳಿದ್ದಾರೆ.
ರಾಮನುಜಾಚಾರ್ಯರು ವೇದಗಳಲ್ಲಿ ಹೇಳಿದಂತೆಯೇ ಬದುಕಿದ್ದರು. ಸಾವಿರಾರು ವರ್ಷಗಳ ಹಿಂದೆಯೇ ಅವರು ಜನಾಂಗೀಯ ಮತ್ತು ಭಾಷಿಕ ಭೇದವನ್ನು ತೊಡೆದು ಹಾಕಲು ಪ್ರಯತ್ನಿಸಿದರು ಎಂದು ನೆನಪಿಸಿಕೊಂಡರು.
ಸಮತಾಮೂರ್ತಿ ಕೇಂದ್ರದ ಸಂಸ್ಥಾಪಕ ಚಿನ್ನ ಜೀಯಾರ್ ಸ್ವಾಮಿ ಗುಜರಾತ್ ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ. ಒಂದು ಗ್ರಾಮವನ್ನು ಪುನರ್ನಿರ್ಮಿಸಿದ್ದಾರೆ. ಸ್ವಾಮಿಗಳ ಸೌಜನ್ಯವನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು ಎಂದು ಅಮಿತ್ ಶಾ ಹೇಳಿದ್ದಾರೆ.
ಹೈದರಾಬಾದ್ಗೆ ಹೆಮ್ಮೆಯ ಕ್ಷೇತ್ರದಲ್ಲಿ 1035 ಕುಂಡಲಗಳೊಂದಿಗೆ ಮಹಾಯಜ್ಞ ನಡೆಸಲಾಗುತ್ತಿದೆ. ಇಂದು ಮತ್ತು ನಾಳೆ ಧರ್ಮಾಚಾರ್ಯ ವಿಚಾರ ಸಂಕಿರಣ ನಡೆಯಲಿದೆ.
ಓದಿ: ಪುಷ್ಕರ್ ಫ್ಲವರ್ ಬೀ ಹೈ, ಫೈರ್ ಬೀ ಹೈ.. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ರಿಂದ ಪುಷ್ಪ ಸಿನಿಮಾ ಡೈಲಾಗ್