ಮೇಷ: ಈ ವಾರ ನಿಮಗೆ ಸಾಮಾನ್ಯ ವಾರ ಎನಿಸಲಿದೆ. ನಿಮ್ಮ ಕುಟುಂಬದ ಪರಿಸ್ಥಿತಿಯನ್ನು ನೀವು ಅರಿತುಕೊಳ್ಳುವಿರಿ ಹಾಗೂ ನಿಮ್ಮ ಜವಾಬ್ದಾರಿಗಳಿಗೆ ಹೆಗಲು ನೀಡುವಿರಿ. ಜೊತೆಗೆ ಮನೆಯಲ್ಲಿ ಒಂದಷ್ಟು ಕೆಲಸ ಮಾಡುವಿರಿ. ಕೆಲವೊಂದು ಕಾರ್ಯಕ್ರಮಗಳು ಸೇರಿದಂತೆ ಮನೆಯಲ್ಲಿ ಸಂತಸ ನೆಲೆಸಲಿದೆ. ಅತಿಥಿಗಳು ಬರಲಿದ್ದಾರೆ. ಉತ್ಸಾಹವು ನೆಲೆಸಲಿದೆ. ಮನೆಯಲ್ಲಿ ಆನಂದೋಲ್ಲಾಸ ನೆಲೆಸಲಿದೆ. ಸಂಬಳಕ್ಕೆ ದುಡಿಯುವವರು ತಮ್ಮ ಕೆಲಸದಲ್ಲಿ ಸಾಕಷ್ಟು ಸಮಯವನ್ನು ಕಳೆಯಲಿದ್ದಾರೆ ಹಾಗೂ ಸಂಪೂರ್ಣ ಗಮನ ನೀಡಿ ತಮ್ಮ ಕೆಲಸ ಮಾಡಲಿದ್ದಾರೆ. ಈ ಕಠಿಣ ಶ್ರಮದ ಕಾರಣ ಅವರು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ತುಂಬಾ ಒಳ್ಳೆಯದು. ನಿಮ್ಮ ವ್ಯವಹಾರ ಪಾಲುದಾರರು ನಿಮ್ಮ ಪಾಲಿನ ದೊಡ್ಡ ಆಸ್ತಿ ಎನಿಸಲಿದ್ದಾರೆ ಹಾಗೂ ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವ ವಿಚಾರದಲ್ಲಿ ದೊಡ್ಡ ಕೊಡುಗೆದಾರ ಎನಿಸಲಿದ್ದಾರೆ. ಅವರ ಮೂಲಕ ಸಾಕಷ್ಟು ಪ್ರಯೋಜನಗಳನ್ನು ಪಡೆಯಲಿದ್ದೀರಿ ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಚೆನ್ನಾಗಿರಲಿದೆ. ಪ್ರೇಮಿಗಳ ಬದುಕಿನಲ್ಲಿ ಮಂಕುತನ ಕಾಣಿಸಿಕೊಳ್ಳಬಹುದು. ಈ ಮಂಕುತನವನ್ನು ದೂರ ಮಾಡಲು ನಿಮ್ಮ ಪ್ರೇಮಿಯ ಜೊತೆ ನೀವು ಮಾತನಾಡಬೇಕು. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ, ವಾರದ ಆರಂಭಿಕ ದಿನಗಳು ಉತ್ತಮ. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಆನಂದಿಸಲಿದ್ದಾರೆ.
ವೃಷಭ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನೀವು ಸಾಕಷ್ಟು ಆತ್ಮವಿಶ್ವಾಸ ಹೊಂದಿರಲಿದ್ದು ಜನರ ನಡುವೆ ಆಕರ್ಷಣೆಯ ಬಿಂದು ಎನಿಸಲಿದ್ದೀರಿ. ಜನರು ನಿಮ್ಮತ್ತ ಆಕರ್ಷಿತರಾಗಲಿದ್ದಾರೆ. ನಿಮ್ಮ ಆತ್ಮೀಯ ಮಿತ್ರರೊಂದಿಗೆ ಪಾರ್ಟಿ ಮಾಡುವುದನ್ನು ನೀವು ಆನಂದಿಸಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಆರೋಗ್ಯಕ್ಕೆ ಗಮನ ನೀಡಬೇಕು. ಏಕೆಂದರೆ ವಿಪರೀತ ಕೆಲಸದ ಒತ್ತಡದ ಕಾರಣ ನಿಮ್ಮ ಅರೋಗ್ಯ ಹದಗೆಡುವ ಸಾಧ್ಯತೆ ಇದೆ. ನಿಮ್ಮನ್ನು ನೀವು ಉತ್ತೇಜಿಸಲು ಮತ್ತು ಸಂತಸದಿಂದ ಇರಲು ಯತ್ನಿಸಲಿದ್ದೀರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರ ಅನುಕೂಲಕರ ಎನಿಸಲಿದೆ. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಅಲ್ಲದೆ, ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಅನಗತ್ಯ ಖರ್ಚುವೆಚ್ಚಗಳನ್ನು ಮಾಡಬೇಡಿ. ಏಕೆಂದರೆ, ಇದರಿಂದಾಗಿ ದೀರ್ಘ ಕಾಲದಲ್ಲಿ ನಿಮಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ವಿವಾಹಿತ ಜೋಡಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಸಂಬಂಧದಲ್ಲಿ ಪ್ರಣಯ ಮತ್ತು ಸುಖೋಷ್ಣತೆ ನೆಲೆಸಲಿದೆ. ನೀವಿಬ್ಬರೂ ಒಟ್ಟಿಗೆ ಜವಾಬ್ದಾರಿಯನ್ನು ಈಡೇರಿಸಲಿದ್ದೀರಿ. ಪ್ರಣಯ ಸಂಬಂಧದಲ್ಲಿರುವವರಿಗೆ ಈ ವಾರವು ಅತ್ಯುತ್ತಮ ಎನಿಸಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಆನಂದಿಸಲಿದ್ದಾರೆ ಹಾಗೂ ಈ ವಾರವು ಪ್ರಯಾಣಿಸಲು ಅನುಕೂಲಕರ.
ಮಿಥುನ: ಈ ವಾರ ಒಟ್ಟಾರೆ ನಿಮಗೆ ಒಳ್ಳೆಯದು. ಆದರೆ ಈ ವಾರದಲ್ಲಿ ನಿಮ್ಮ ಖರ್ಚುವೆಚ್ಚಗಳಲ್ಲಿ ಉಂಟಾಗುವ ಹೆಚ್ಚಳವು ನಿಮ್ಮ ಚಿಂತೆಗೆ ಕಾರಣವೆನಿಸಲಿದೆ. ಈ ವಿಚಾರದಲ್ಲಿ ನೀವು ಗಮನ ಹರಿಸುವುದು ಒಳ್ಳೆಯದು. ಇಲ್ಲದಿದ್ದರೆ ಈ ಹೊರೆಯನ್ನು ಸಂಭಾಳಿಸುವುದು ಕಷ್ಟಕರವಾದೀತು. ಈ ವಾರದಲ್ಲಿ ಆದಾಯವು ಸಾಮಾನ್ಯ ಮಟ್ಟದಲ್ಲಿರಲಿದೆ. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಆದರೆ ಸಮಸ್ಯೆಯ ಸುಳಿಯಲ್ಲಿ ಸಿಲುಕದಂತೆ ನೀವು ಎಚ್ಚರಿಕೆಯಿಂದ ಇರಬೇಕು ಹಾಗೂ ನಿಮ್ಮ ಕುರಿತು ಎಚ್ಚರಿಕೆ ವಹಿಸಬೇಕು. ಸಂಬಳಕ್ಕೆ ದುಡಿಯುವವರು ತಮ್ಮ ಕಠಿಣ ಶ್ರಮದ ಕಾರಣ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಅಲ್ಲದೆ ಕೆಲಸದಲ್ಲಿ ನೀವು ಮುಂದೆ ಸಾಗಲಿದ್ದೀರಿ ಹಾಗೂ ಜನರ ಮೆಚ್ಚುಗೆ ಗಳಿಸಲಿದ್ದೀರಿ. ವ್ಯಾಪಾರೋದ್ಯಮಿಗಳು ಈ ವಾರದಲ್ಲಿ ಸರ್ಕಾರದಿಂದ ಕೆಲವೊಂದು ಅದ್ಭುತ ಪ್ರಯೋಜನಗಳನ್ನು ಪಡೆಯಲಿದ್ದಾರೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಒತ್ತಡದಿಂದ ಕೂಡಿರಲಿದೆ. ಅಲ್ಲದೆ, ಬಾಂಧವ್ಯದ ಸಮಸ್ಯೆಗಳು ಉಂಟಾಗಬಹುದು. ಇದರಿಂದ ಹೊರಬರಲು ಯತ್ನಿಸಿ. ಸಂಬಂಧದಲ್ಲಿರುವ ಜನರು ಉತ್ತಮ ಫಲಿತಾಂಶ ಪಡೆಯಬಹುದು. ವಿದ್ಯಾರ್ಥಿಗಳ ಪಾಲಿಗೆ ಕಲಿಕೆಯು ಸುಲಭವೆನಿಸಲಿದೆ. ವಾರದ ನಡುವಿನ ಮತ್ತು ಕೊನೆಯ ಕೆಲವು ದಿನಗಳು ಪ್ರಯಾಣಿಸಲು ಉತ್ತಮ.
ಕರ್ಕಾಟಕ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನೀವು ಕಠಿಣ ಶ್ರಮ ಪಡಲಿದ್ದು ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಈ ಸಮಯದಲ್ಲಿ ಕೆಲವರು ವಿದೇಶಕ್ಕೆ ಹೋಗಬಹುದು. ಒಂದಷ್ಟು ಹಣವನ್ನು ಹೂಡಿಕೆ ಮಾಡುವ ಮೂಲಕ ನಿಮ್ಮ ವ್ಯವಹಾರಕ್ಕೆ ವೇಗ ನೀಡಲಿದ್ದೀರಿ ಹಾಗೂ ಭವಿಷ್ಯದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಅರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಚೆನ್ನಾಗಿರಲಿದೆ. ಪ್ರಣಯ ಸಂಬಂಧದಲ್ಲಿರುವವರಿಗೆ ತಮ್ಮ ಸಂಬಂಧವನ್ನು ಆರಾಧಿಸಲು ಅವಕಾಶ ದೊರೆಯಲಿದೆ. ನಿಮ್ಮ ಸಂಬಂಧದಲ್ಲಿ ಪ್ರಣಯ ಮತ್ತು ಪ್ರೇಮವು ನೆಲೆಸಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದ ನಡುವೆ ವಿರಮಿಸಲು ಅವಕಾಶ ದೊರೆಯಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಕುಟುಂಬದ ವಾತಾವರಣವು ಚೆನ್ನಾಗಿರಲಿದೆ. ವಾರದ ನಡುವಿನ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ತುಂಬಾ ಒಳ್ಳೆಯದು. ನಿಮ್ಮ ಕೆಲಸವನ್ನು ನೀವು ಆನಂದಿಸಲಿದ್ದು ಇದಕ್ಕೆ ಬದ್ಧತೆ ತೋರಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಈ ವಾರವು ಒಳ್ಳೆಯ ಫಲಿತಾಂಶ ತರಲಿದೆ.
ಸಿಂಹ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ಕೆಲಸದಲ್ಲಿ ನೀವು ತಲ್ಲೀನರಾಗಲಿದ್ದು, ನಿಮ್ಮ ಕೆಲಸವನ್ನು ನೀವು ಸಂಪೂರ್ಣವಾಗಿ ಆನಂದಿಸಲಿದ್ದೀರಿ. ನಿಮ್ಮ ಕೌಟುಂಬಿಕ ಜೀವನವು ಚೆನ್ನಾಗಿರಲಿದೆ. ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಕೆಲಸದಲ್ಲಿ ನಿಮಗೆ ಸಹಾಯ ಮಾಡಲಿದ್ದಾರೆ. ವ್ಯವಹಾರ ನಡೆಸುವವರು ತಮ್ಮ ವ್ಯವಹಾರದಲ್ಲಿ ಲಾಭ ಗಳಿಸಲಿದ್ದಾರೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ನೀವು ಸರ್ಕಾರಿ ಕೆಲಸದಲ್ಲಿ ಲಾಭ ಪಡೆಯಲಿದ್ದೀರಿ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕಿನಲ್ಲಿ ಒಂದಷ್ಟು ಒತ್ತಡ ಉಂಟಾಗಬಹುದು. ಸಂಬಂಧದಲ್ಲಿರುವ ಜನರು ಸಾಕಷ್ಟು ಯಶಸ್ಸನ್ನು ಗಳಿಸಲಿದ್ದಾರೆ. ಇದರಿಂದ ನಿಮಗೆ ಸಂತಸ ಲಭಿಸಲಿದೆ. ಅಲ್ಲದೆ ನಿಮ್ಮ ಪ್ರಣಯ ಸಂಗಾತಿಗೆ ಇನ್ನಷ್ಟು ಆಪ್ತರಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಕಲಿಕೆಯು ಸುಲಭವೆನಿಸಲಿದೆ ಹಾಗೂ ಒಳ್ಳೆಯ ಮಾರ್ಗದರ್ಶಕರಿಂದ ಮಾರ್ಗದರ್ಶನ ದೊರೆಯಲಿದೆ. ವಾರದ ಕೊನೆಯ ದಿನಗಳು ಪ್ರಯಾಣಿಸಲು ಅನುಕೂಲಕರ.
ಕನ್ಯಾ: ಈ ವಾರವು ನಿಮ್ಮ ಪಾಲಿಗೆ ಸಾಧಾರಣ ಫಲ ನೀಡಲಿದೆ. ಆದರೆ ವಾರದ ಆರಂಭವು ಅತ್ಯುತ್ತಮ ಎನಿಸಲಿದೆ. ನಿಮ್ಮ ಯಾವುದಾದರೂ ಒಂದು ದೊಡ್ಡ ಪ್ರಾಜೆಕ್ಟ್ ಯಶಸ್ವಿಯಾಗಲಿದೆ ಹಾಗೂ ನಿಮ್ಮ ಆತ್ಮವಿಶ್ವಾಸವನ್ನು ನೀವು ಮರಳಿ ಪಡೆಯಲಿದ್ದೀರಿ. ನಿಮ್ಮ ಅದೃಷ್ಟವು ನಿಮ್ಮ ಪರವಾಗಿ ಇರಲಿದೆ. ಇದರಿಂದಾಗಿ ಕಡಿಮೆ ಪ್ರಯತ್ನ ಮಾಡಿದರೂ ನಿಮಗೆ ಯಶಸ್ಸು ದೊರೆಯಲಿದೆ. ಉದ್ಯೋಗದಲ್ಲಿರುವವರು ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಲಿದ್ದಾರೆ ಹಾಗೂ ಹಿರಿಯರ ನೆಚ್ಚಿನ ವ್ಯಕ್ತಿ ಎನಿಸಲಿದ್ದಾರೆ. ವಾರದ ಆರಂಭಿಕ ದಿನಗಳು ಪ್ರಯಾಣಿಸುವುದಕ್ಕೆ ಅನುಕೂಲಕರ. ಉನ್ನತ ಶಿಕ್ಷಣದ ವಿಚಾರದಲ್ಲಿ ವಿದ್ಯಾರ್ಥಿಗಳು ಅದೃಷ್ಟಶಾಲಿ ಎನಿಸಲಿದ್ದಾರೆ ಹಾಗೂ ತಮ್ಮ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಅಲ್ಲದೆ ನಿಮ್ಮ ಜೀವನ ಸಂಗಾತಿಯ ಜೊತೆಗೆ ಎಲ್ಲಾದರೂ ಹೋಗಲು ನೀವು ಯೋಜನೆ ರೂಪಿಸಬಹುದು. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಸಾಕಷ್ಟು ಪ್ರಣಯಭರಿತ ಎನಿಸಲಿದೆ ಹಾಗೂ ಪ್ರತಿ ಕ್ಷಣವನ್ನು ಇವರು ಆನಂದಿಸಲಿದ್ದಾರೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಹೀಗಾಗಿ ಕೆಲಸದಲ್ಲಿ ನೀವು ಸಾಕಷ್ಟು ಆಸಕ್ತಿ ತೋರಲಿದ್ದೀರಿ.
ತುಲಾ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನೀವು ಪ್ರವಾಸಕ್ಕೆ ಹೋಗುವುದು ಒಳ್ಳೆಯದಲ್ಲ. ನಿಮ್ಮ ಹಣದ ವಿಚಾರದಲ್ಲಿ ಏರುಪೇರು ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ವಾರದ ನಡುವಿನ ದಿನಗಳು ನಿಮ್ಮ ಪಾಲಿಗೆ ಉತ್ತಮವೆನಿಸಲಿವೆ. ಅದೃಷ್ಟವು ನಿಮ್ಮ ಪಾಲಿಗಿದೆ. ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ವಾರದ ಕೊನೆಯ ದಿನಗಳು ಸಹ ಉತ್ತಮ ಫಲ ನೀಡಲಿವೆ. ಸಮಯವನ್ನು ನೀವು ಚೆನ್ನಾಗಿ ಬಳಸಿಕೊಳ್ಳಲಿದ್ದೀರಿ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ ಹಾಗೂ ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಪ್ರೇಮದ ಬದುಕು ಸಾಮರಸ್ಯದಿಂದ ಕೂಡಿರಲಿದೆ. ಅದರೆ ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಸಣ್ಣಪುಟ್ಟ ಸವಾಲುಗಳು ಎದುರಾಗಬಹುದು. ವ್ಯವಹಾರದಲ್ಲಿ ತೊಡಗಿರುವವರಿಗೆ ಏನಾದರೂ ಹೊಸತನ್ನು ಯೋಚಿಸಲು ಈ ವಾರವು ತುಂಬಾ ಒಳ್ಳೆಯದು. ನಿಮ್ಮ ವ್ಯವಹಾರವನ್ನು ಮುಂದಕ್ಕೆ ಹೇಗೆ ಕೊಂಡೊಯ್ಯಬಹುದು ಎಂಬುದನ್ನು ನೀವು ಯೋಚಿಸಲಿದ್ದೀರಿ. ಉದ್ಯೋಗದಲ್ಲಿರುವವರು ಈ ವಾರದಲ್ಲಿ ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಹೀಗಾಗಿ, ಎಚ್ಚರಿಕೆಯಿಂದ ಇರಿ ಹಾಗೂ ಇತರರ ಹುನ್ನಾರಗಳಿಗೆ ಬಲಿಯಾಗಬೇಡಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಉನ್ನತ ಶಿಕ್ಷಣದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ವಾರದ ಮಧ್ಯದ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.
ವೃಶ್ಚಿಕ: ಈ ವಾರವು ನಿಮಗೆ ಸಂತಸ ತರಲಿದೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಈ ವಾರವನ್ನು ನೀವು ಸಂತಸದಿಂದ ಕಳೆಯಲಿದ್ದೀರಿ ಹಾಗೂ ಹೊಸ ಚೇತನವನ್ನು ನೀವು ಅನುಭವಿಸುವುದರಿಂದ ನಿಮ್ಮ ಸುತ್ತಲಿನ ಜನರಲ್ಲಿ ಉಲ್ಲಾಸದ ಚಿಲುಮೆಯನ್ನು ಹರಿಸಲಿದ್ದೀರಿ. ನೀವು ಇತರರಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಬಹುದು ಎಂದು ನೀವು ಭಾವಿಸುವಿರಿ. ಅಲ್ಲದೆ, ಹೀಗೆಯೇ ನೀವು ನಡೆದುಕೊಳ್ಳುವಿರಿ. ಪ್ರಣಯ ಸಂಬಂಧದಲ್ಲಿರುವವರಿಗೆ ಈ ವಾರವು ಅತ್ಯುತ್ತಮ ವಾರವೆನಿಸಲಿದೆ. ನಿಮ್ಮ ಪ್ರಯತ್ನದ ಮೂಲಕ ಪ್ರೇಮ ಸಂಬಂಧಕ್ಕೆ ಇನ್ನಷ್ಟು ಮೆರುಗು ನೀಡಲಿದ್ದೀರಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನದಲ್ಲಿ ತೃಪ್ತಿ ನೆಲೆಸಲಿದೆ. ಸಂಬಂಧದಲ್ಲಿ ಪ್ರೇಮ ಮತ್ತು ಪ್ರಯಣಕ್ಕೆ ಪ್ರಾಮುಖ್ಯತೆ ನೀಡಬೇಕು. ನಿಮ್ಮ ಪ್ರೇಮ ಸಂಗಾತಿಯನ್ನು ಇನ್ನಷ್ಟು ಅರಿತುಕೊಳ್ಳಲು ನಿಮಗೆ ಅವಕಾಶ ದೊರೆಯಲಿದೆ. ಈ ವಾರವು ವ್ಯಾಪಾರೋದ್ಯಮಿಗಳಿಗೆ ಸಾಕಷ್ಟು ಲಾಭದಾಯಕ ಎನಿಸಲಿದೆ. ಏಕೆಂದರೆ, ನಿಮ್ಮ ಯೋಜನೆಗಳು ಯಶಸ್ವಿಯಾಗಲಿದ್ದು ಉತ್ತಮ ಲಾಭ ತಂದು ಕೊಡಲಿವೆ. ಸಂಬಳಕ್ಕೆ ದುಡಿಯುವವರ ಬದುಕಿನಲ್ಲಿ ಈ ವಾರದಲ್ಲಿ ಹೆಚ್ಚೇನೂ ಬದಲಾವಣೆ ಉಂಟಾಗದು. ಕಚೇರಿಯ ಯಾವುದೇ ರಾಜಕೀಯದಿಂದ ದೂರವಿರಲು ಯತ್ನಿಸಿ. ಈ ವಾರವು ವಿದ್ಯಾರ್ಥಿಗಳಿಗೆ ಏನಾದರೂ ಹೊಸತನ್ನು ತರಲಿದೆ. ಯಶಸ್ಸನ್ನು ಪಡೆಯುವುದಕ್ಕಾಗಿ ನಿಮ್ಮ ಶಿಕ್ಷಣಕ್ಕೆ ನೀವು ಗಮನ ನೀಡಬೇಕು. ವಾರದ ಆರಂಭಿಕ ಮತ್ತು ಕೊನೆಯ ದಿನ ಪ್ರಯಾಣಿಸಲು ಉತ್ತಮ.
ಧನು: ಈ ವಾರ ನಿಮಗೆ ಅತ್ಯಂತ ನಿರ್ಣಾಯಕ ಎನಿಸಲಿದೆ. ನಿಮ್ಮ ಕೆಲಸಕ್ಕೆ ಗಮನ ನೀಡಿ. ಸರಿಯಾಗಿ ವಿವೇಚನೆಯಿಂದ ವರ್ತಿಸಿ. ಯಾವುದೇ ದೊಡ್ಡ ಹೂಡಿಕೆ ಮಾಡಲು ಇದು ಸಕಾಲವಲ್ಲ. ನಿಮ್ಮ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ. ಇಲ್ಲದಿದ್ದರೆ ನೀವು ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ. ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯಲು ಇಚ್ಛಿಸುವುದಾದರೆ ನಿಮ್ಮ ದಾಖಲೆ ಪತ್ರಗಳು ಸರಿಯಾಗಿರುವಂತೆ ನೋಡಿಕೊಳ್ಳಿ. ಸಂಬಂಧದಲ್ಲಿರುವವರಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ವಿವಾಹಿತ ವ್ಯಕ್ತಿಗಳ ಬದುಕಿನಲ್ಲಿ ಒತ್ತಡ ಕಾಣಿಸಿಕೊಳ್ಳಬಹುದು. ಯಾವುದೇ ಆಘಾತಭರಿತ ಸನ್ನಿವೇಶದಿಂದ ನಿಮ್ಮನ್ನು ನೀವು ದೂರವಿಡುವುದು ಒಳ್ಳೆಯದು. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ಉತ್ತಮ ವಾರವೆನಿಸಲಿದೆ. ಹೊಸ ಟೆಂಡರ್ ಅಥವಾ ಸ್ಥಗಿತಗೊಂಡಿದ್ದ ಯಾವುದೇ ಕಾಮಗಾರಿಗೆ ಪುನಶ್ಚೇತನ ಲಭಿಸುವ ಕಾರಣ ಸರ್ಕಾರದಿಂದ ಪ್ರಯೋಜನ ದೊರೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ಕಾಲ. ನಿಮ್ಮ ಸಹೋದ್ಯೋಗಿಗಳು ನಿಮಗೆ ಸಹಕರಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಇದು ಸಕಾಲ. ಈ ವಾರದ ಕೊನೆಯ ದಿನವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.
ಮಕರ: ಈ ವಾರ ನಿಮಗೆ ಭಾಗಶಃ ಫಲದಾಯಕ ಎನಿಸಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಪ್ರೇಮ ಬದುಕಿನ ಬಗ್ಗೆ ಸಾಕಷ್ಟು ಕಾಳಜಿ ಮತ್ತು ಆಸಕ್ತಿ ತೋರಲಿದ್ದೀರಿ. ನಿಮ್ಮ ಪ್ರೇಮಿಗೆ ನೀವು ಒಳ್ಳೆಯ ಉಡುಗೊರೆಯೊಂದನ್ನು ನೀಡಲಿದ್ದು, ಅವರು ಈ ಕುರಿತು ಪ್ರಶಂಸೆ ವ್ಯಕ್ತಪಡಿಸಲಿದ್ದಾರೆ. ನೀವು ಅವರ ಸಾಂಗತ್ಯವನ್ನು ಇಷ್ಟಪಡುವಂತೆಯೇ ಅವರೂ ಸಹ ನಿಮ್ಮ ಸಾಂಗತ್ಯವನ್ನು ಇಷ್ಟಪಡುತ್ತಾರೆ ಎಂಬುದನ್ನು ಅರಿತು ನಿಮಗೆ ಸಂತಸವಾಗಲಿದೆ. ಈ ವಾರವು, ವಿಪತ್ತಿನಲ್ಲಿ ಸಿಲುಕಿಕೊಂಡಿರುವ ವಿವಾಹಿತರಿಗೆ ಒಂದಷ್ಟು ನಿರಾಳತೆಯನ್ನು ಒದಗಿಸಲಿದೆ. ನಿಮ್ಮ ಜೀವನ ಸಂಗಾತಿಯ ಮೂಲಕ ಏನಾದರೂ ಹೊಸತನ್ನು ತಿಳಿದುಕೊಳ್ಳಲು ನಿಮಗೆ ಅವಕಾಶ ದೊರೆಯಲಿದೆ. ಇದು ನಿಜಕ್ಕೂ ನಿಮ್ಮ ನೆರವಿಗೆ ಬರಲಿದೆ. ಆದಾಯದಲ್ಲಿ ಹೆಚ್ಚಳ ಉಂಟಾಗುವ ಕಾರಣ ನಿಮ್ಮ ಮನಸ್ಸಿಗೆ ಸಮಾಧಾನ ದೊರೆಯಲಿದೆ. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ಕಾಲ. ನಿಮ್ಮ ಕೆಲಸಕ್ಕೆ ನೀವು ಗಮನ ನೀಡಲಿದ್ದೀರಿ ಹಾಗೂ ನಿಮ್ಮ ಕಾರ್ಯ ದಕ್ಷತೆಯ ಕುರಿತು ನಿಮಗೆ ಆತ್ಮವಿಶ್ವಾಸವಿರಲಿದೆ. ವ್ಯಾಪಾರೋದ್ಯಮಿಗಳಿಗೆ, ಪ್ರಯಾಣದ ಸಂದರ್ಭದಲ್ಲಿ ಏನಾದರೂ ಹೊಸ ಮತ್ತು ಒಳ್ಳೆಯ ವಿಚಾರಗಳು ಹೊಳೆಯಬಹುದು. ನಿಮ್ಮ ಕೆಲಸದಲ್ಲಿ ಶೀಘ್ರ ಪ್ರಗತಿ ಉಂಟಾಗಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಆನಂದಿಸಲಿದ್ದಾರೆ. ಇದು ಅವರಿಗೆ ಉತ್ತಮ ಫಲಿತಾಂಶ ತಂದು ಕೊಡಲಿದೆ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.
ಕುಂಭ: ಈ ವಾರವು ಕುಂಭ ರಾಶಿಯವರಿಗೆ ತುಂಬಾ ಒಳ್ಳೆಯ ವಾರ ಎನಿಸಲಿದೆ. ವಾರದ ಆರಂಭದಲ್ಲಿ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಕೌಟುಂಬಿಕ ಬದುಕು ತೃಪ್ತಿಕರವೆನಿಸಲಿದ್ದು, ಇದು ನಿಮ್ಮ ಮುಖದಲ್ಲಿ ನಗುವನ್ನು ಮರಳಿ ತರಲಿದೆ. ವಾರದ ಮಧ್ಯದಲ್ಲಿ ನೀವು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಇದು ನಡೆಯಲಿದೆ. ವಾರದ ಕೊನೆಗೆ ನೀವು ಸಮಯವನ್ನು ನಿಮ್ಮ ಕುಟುಂಬದ ಸದಸ್ಯರ ಜೊತೆ ಚೆನ್ನಾಗಿ ಕಳೆಯಲಿದ್ದೀರಿ. ಇದರಿಂದಾಗಿ ನಿಮ್ಮ ಕೌಟುಂಬಿಕ ಬದುಕಿನಲ್ಲಿ ಸುಧಾರಣೆ ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮ್ಮ ಕೆಲಸದಲ್ಲಿ ಪ್ರಗತಿ ಉಂಟಾಗಲಿದೆ. ವ್ಯಾಪಾರೋದ್ಯಮಿಗಳು ತಮ್ಮ ಕೆಲಸವನ್ನು ಹೊಸ ವಿಧಾನದಲ್ಲಿ ರೂಪಿಸಲು ಯತ್ನಿಸಬೇಕು. ನಿಮಗೆ ಇದರಿಂದ ಲಾಭ ದೊರೆಯಲಿದೆ. ಆದಾಯ ಹರಿದು ಬರಲಿದೆ. ಲಾಭದಲ್ಲಿ ಹೆಚ್ಚಳ ಉಂಟಾಗಲಿದೆ. ಖರ್ಚುವೆಚ್ಚಗಳು ನಿಯಂತ್ರಣದಲ್ಲಿ ಉಳಿಯಲಿವೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ವಾರದ ಮಧ್ಯ ಭಾಗವು ಪ್ರಯಾಣಕ್ಕೆ ಅನುಕೂಲಕರ.
ಮೀನ: ಮೀನ ರಾಶಿಯವರ ಪಾಲಿಗೆ ಈ ವಾರವು ಅತ್ಯುತ್ತಮ. ಧನಾತ್ಮಕ ಮನೋಭಾವದಿಂದ ನೀವು ಕೆಲಸ ಮುಗಿಸಲಿದ್ದು ಎಲ್ಲರಿಗಿಂತ ಮುಂದೆ ಸಾಗಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕಠಿಣ ಶ್ರಮದ ಮೂಲಕ ತಮ್ಮದೇ ಆದ ಅಸ್ಮಿತೆಯನ್ನು ರೂಪಿಸಲಿದ್ದಾರೆ. ಅವರ ಪ್ರಯತ್ನಗಳು, ಅವರ ಜೊತೆ ಕೆಲಸ ಮಾಡುವ ಜನರ ನಂಬಿಕೆ ಗಳಿಸಲು ಸಹಾಯ ಮಾಡಲಿವೆ. ನಿಮ್ಮ ನಡವಳಿಕೆಯು ನಿಮ್ಮ ನೆರವಿಗೆ ಬರಲಿದೆ ಹಾಗೂ ನಿಮ್ಮ ಸಹೋದ್ಯೋಗಿಗಳು ಸಂಪೂರ್ಣವಾಗಿ ನಿಮ್ಮನ್ನು ಬೆಂಬಲಿಸಲಿದ್ದಾರೆ. ವ್ಯಾಪಾರೋದ್ಯಮಿಗಳು ಈ ವಾರದಲ್ಲಿ ತಮ್ಮ ಪ್ರಯತ್ನದ ಫಲ ಪಡೆಯಲಿದ್ದಾರೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ನಿಮ್ಮ ವಿವೇಚನೆಯ ಮೂಲಕ ನಿಮ್ಮ ಜೀವನ ಸಂಗಾತಿಯ ಮನಸ್ಸನ್ನು ನೀವು ಅರ್ಥ ಮಾಡಿಕೊಳ್ಳುವಿರಿ ಹಾಗೂ ಅವರ ಸಂತಸದ ಕುರಿತು ಮಾತನಾಡುವಿರಿ. ನಿಮ್ಮ ಪ್ರೇಮಿಗೆ ನೀವು ಅದ್ಭುತ ಕೊಡುಗೆಯನ್ನು ನೀಡಲಿದ್ದೀರಿ. ಅಲ್ಲದೆ, ಅವರ ಜೊತೆಗೆ ಎಲ್ಲಾದರೂ ಭೇಟಿ ನೀಡಲಿದ್ದೀರಿ. ಹಳೆಯ ಮಿತ್ರರನ್ನು ಭೇಟಿಯಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನೀವು ಕಠಿಣ ಶ್ರಮ ಪಡಬೇಕು. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.