ETV Bharat / bharat

ವಾರದ ರಾಶಿ ಫಲ: ಈ ವಾರ ಯಾರ ಭವಿಷ್ಯ ಹೇಗೆ? - ಮೀನ ರಾಶಿ

ಮೇ 28 ರಿಂದ ಜೂನ್​ 3 ರವರೆಗಿನ ರಾಶಿ ಭವಿಷ್ಯ.

Weekly Horoscope
ವಾರದ ಭವಿಷ್ಯ
author img

By

Published : May 28, 2023, 6:58 AM IST

ಮೇಷ: ಈ ವಾರ ನಿಮಗೆ ಅತ್ಯಂತ ಪ್ರಮುಖ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನದಲ್ಲಿ ಸುಧಾರಣೆ ತರಲು ತಮ್ಮೆಲ್ಲ ಪ್ರಯತ್ನವನ್ನು ಮಾಡಲಿದ್ದಾರೆ. ಆದರೆ ಇದು ಕಾರ್ಯಗತವಾಗಲು ಸಾಕಷ್ಟು ಸಮಯ ಬೇಕಾದೀತು. ಪ್ರೇಮ ಸಂಬಂಧದಲ್ಲಿರುವವರು ವಾರದ ಆರಂಭದಲ್ಲಿ ಸಾಕಷ್ಟು ಪ್ರಣಯ ಮತ್ತು ಸೃಜನಶೀಲತೆಯನ್ನು ತೋರಲಿದ್ದಾರೆ. ವಾರ ಕಳೆದಂತೆ ನಿಮ್ಮ ಕಾರ್ಯನಿರತತೆಯು ನಿಮ್ಮ ಸಂಬಂಧವನ್ನು ಬಾಧಿಸಲಿದೆ. ಆದರೆ ವಾರದ ಕೊನೆಯ ದಿನಗಳಲ್ಲಿ, ನಿಮ್ಮ ಸಂಬಂಧದಲ್ಲಿ ಪ್ರೇಮವು ಹೆಚ್ಚಲಿದೆ. ನಿಮ್ಮ ಪ್ರೇಮಿಯೊಂದಿಗೆ ಎಲ್ಲಾದರೂ ಹೋಗಲು ನಿಮಗೆ ಅವಕಾಶ ದೊರೆಯಲಿದೆ. ನೀವು ನಿಮ್ಮ ಪ್ರಣಯ ಸಂಗಾತಿಯನ್ನು ನಿಮ್ಮ ಕುಟುಂಬದ ಸದಸ್ಯರಿಗೆ ಪರಿಚಯಿಸಬಹುದು. ನಿಮ್ಮ ಜಾಣ್ಮೆಯನ್ನು ಬಳಸಿ ಅನೇಕ ಪ್ರಯೋಜನಗಳನ್ನು ಪಡೆಯಲು ನಿಮಗೆ ಸಾಧ್ಯವಾಗಲಿದೆ. ಸರ್ಕಾರಿ ವಲಯದಿಂದ ಏನಾದರೂ ದೊಡ್ಡದಾದ ಸೌಲಭ್ಯವು ನಿಮ್ಮನ್ನು ಕಾಯುತ್ತಿದೆ. ಅದನ್ನು ಅಳವಡಿಸಿಕೊಳ್ಳಲು ಯತ್ನಿಸಿ. ವ್ಯವಹಾರದ ದೃಷ್ಟಿಯಿಂದ ಈ ವಾರವು ಒಳ್ಳೆಯದು. ಈ ಹಿಂದೆ ನೀವು ಮಾಡಿದ ಪ್ರಯತ್ನಗಳು ಮತ್ತು ಈಗ ಮಾಡಲಿರುವ ಪ್ರಯತ್ನಗಳು ನಿಮಗೆ ಸಾಕಷ್ಟು ಲಾಭವನ್ನು ನೀಡಲಿವೆ. ನಿಮ್ಮ ಕೆಲಸದ ಕುರಿತು ಮೆಚ್ಚುಗೆ ವ್ಯಕ್ತವಾಗಲಿದೆ. ಉದ್ಯೋಗದಲ್ಲಿರುವವರು ಕೆಲಸದ ಸ್ಥಳದಲ್ಲಿ ವಿವಾದ ಮತ್ತು ಕೋಪದಿಂದ ದೂರವಿರಬೇಕು. ಆಗ ಮಾತ್ರವೇ ಎಲ್ಲವೂ ಸರಾಗವಾಗಿ ನಡೆಯುತ್ತದೆ ಹಾಗೂ ಕೆಲಸವು ಚೆನ್ನಾಗಿರಲಿದೆ.

ವೃಷಭ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಆದರೆ ವೈವಾಹಿಕ ಬದುಕಿನಲ್ಲಿ ಒತ್ತಡ ಹೆಚ್ಚಲಿದೆ. ನಿಮ್ಮ ಸೊಕ್ಕಿನ ಸ್ವಭಾವವು ನಿಮ್ಮ ವೈವಾಹಿಕ ಬದುಕಿನಲ್ಲಿ ಸಮಸ್ಯೆಯನ್ನು ಹೆಚ್ಚಿಸಬಹುದು. ಈ ಕುರಿತು ಎಚ್ಚರಿಕೆಯಿಂದ ಇರಿ. ಪ್ರೇಮ ಸಂಬಂಧದಲ್ಲಿರುವ ಜನರು ಸುಂದರ ಸ್ಥಳಗಳಿಗೆ ಪ್ರಯಾಣಿಸಬಹುದು. ಪರಸ್ಪರ ಸಾಮಿಪ್ಯತೆಯೂ ಹೆಚ್ಚಲಿದೆ. ನಿಮ್ಮ ಸಂಬಂಧವನ್ನು ಅರಿತುಕೊಂಡು ಇನ್ನಷ್ಟು ಸಾಮಿಪ್ಯವನ್ನು ಸಾಧಿಸಲಿದ್ದೀರಿ. ಕಠಿಣ ಶ್ರಮದ ಕಾರಣ ನಿಮಗೆ ಒಳ್ಳೆಯ ಯಶಸ್ಸು ದೊರೆಯಲಿದೆ. ಆದರೆ ಏನಾದರೂ ವಿಷಯದ ಕುರಿತ ಮಾನಸಿಕ ಭೀತಿಯು ನಿಮ್ಮನ್ನು ಕಾಡಬಹುದು. ಈ ಚಿಂತೆಯಲ್ಲಿ ಮುಳುಗುವ ಬದಲಿಗೆ ಅವುಗಳನ್ನು ಇತರರೊಂದಿಗೆ ಹಂಚಿಕೊಂಡರೆ ಅದು ನಿಮ್ಮ ಪಾಲಿಗೆ ಪ್ರಯೋಜನಕಾರಿಯಾದೀತು. ಕೆಲಸದಲ್ಲಿ ನಿಮ್ಮ ಸ್ಥಾನವು ಭದ್ರಗೊಳ್ಳಲಿದೆ. ಮಾನಸಿಕ ಒತ್ತಡ ಹೊರತುಪಡಿಸಿದರೆ ಬೇರೆ ಯಾವುದೇ ಸಮಸ್ಯೆ ಕಾಣಿಸಿಕೊಳ್ಳದು. ನೀವಾಗಿಯೇ ಯಾವುದೇ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ವ್ಯವಹಾರದ ವಿಚಾರದಲ್ಲಿ ಈ ವಾರವು ಪ್ರಗತಿಯನ್ನು ತಂದು ಕೊಡಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ.

ಮಿಥುನ: ಈ ವಾರ ನಿಮಗೆ ಅನುಕೂಲಕರವಾಗಿದೆ. ವಿವಾಹಿತ ವ್ಯಕ್ತಿಗಳ ಒತ್ತಡವು ದೂರಗೊಳ್ಳಲಿದೆ ಹಾಗೂ ನಿಮ್ಮ ಸಂಬಂಧದಲ್ಲಿ ಪ್ರೇಮ ಮತ್ತು ಪ್ರಣಯ ಹೆಚ್ಚಲಿದೆ. ಮಗುವಿನ ಕುರಿತು ಒಂದಷ್ಟು ಚರ್ಚೆಯನ್ನು ಮಾಡಲಿದ್ದೀರಿ. ಪ್ರೇಮ ಸಂಬಂಧದ ಕುರಿತು ಮಾತನಾಡುವುದಾದರೆ, ಈ ವಾರವು ಅನುಕೂಲಕರವಲ್ಲ. ಹೀಗಾಗಿ ಸಮಯವನ್ನು ಎಚ್ಚರಿಕೆಯಿಂದ ಕಳೆಯಿರಿ. ಅಲ್ಲದೆ ಹೆಚ್ಚು ಮಾತನಾಡಬೇಡಿ. ವಾರದ ಆರಂಭಿಕ ದಿನಗಳಲ್ಲಿ ನೀವು ದೀರ್ಘ ಪ್ರವಾಸಕ್ಕೆ ಹೋಗಬಹುದು. ವ್ಯವಹಾರದ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದ್ದು ನಿಮ್ಮ ಪ್ರಗತಿ ಉಂಟಾಗಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರವು ಅನುಕೂಲಕರ. ನಿಮ್ಮ ಕೆಲಸದಲ್ಲಿ ನಿಮ್ಮ ಸ್ಥಾನವನ್ನು ನೀವು ಭದ್ರಗೊಳಿಸಲಿದ್ದೀರಿ. ಕೆಲಸ ಮಾಡುವಾಗ ಸಂತಸವನ್ನು ಅನುಭವಿಸಲಿದ್ದೀರಿ. ಇದು ನಿರಂತರವಾಗಿ ಕಾರ್ಯಕ್ಷಮತೆಯಲ್ಲಿ ಸುಧಾರಣೆಯನ್ನು ತರಬಹುದು. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಈಗ ಅಧ್ಯಯನದ ಕುರಿತು ಹೆಚ್ಚಿನ ಶ್ರಮ ಪಡಬೇಕು. ನೀವು ಕಠಿಣ ಶ್ರಮ ಪಡಬೇಕು. ಆಗ ಮಾತ್ರವೇ ಉತ್ತಮ ಫಲಿತಾಂಶ ಪಡೆಯಲಿದ್ದೀರಿ.

ಕರ್ಕಾಟಕ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಜೀವನ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವರ ಅಭಿಪ್ರಾಯವನ್ನು ಅರಿತುಕೊಳ್ಳಲು ಯತ್ನಿಸಿ. ಆಗ ಮಾತ್ರವೇ ನಿಮ್ಮ ಸಂಬಂಧದಲ್ಲಿ ಸ್ಥಿರತೆ ಕಂಡು ಬರಲಿದೆ. ಪ್ರೇಮ ಸಂಬಂಧದ ಕುರಿತು ಮಾತನಾಡುವುದಾದರೆ, ನಿಮ್ಮ ಪ್ರೇಮಿಯ ಮಾತನ್ನು ಆಲಿಸುವುದರಿಂದ ಮತ್ತು ಅವರ ಜೊತೆಗೆ ಸಮಯ ಕಳೆಯುವುದರಿಂದ ಸಂಬಂಧದಲ್ಲಿನ ಸಮಸ್ಯೆಗಳು ನಿವಾರಣೆಯಾಗಲಿವೆ. ಅವರಿಗೆ ಒಂದಷ್ಟು ಸಮಯವನ್ನು ನೀಡಿರಿ ಹಾಗೂ ಅವರ ವರ್ತನೆಯಲ್ಲಿ ಬದಲಾವಣೆ ಉಂಟಾಗಲು ಕಾರಣವೇನು ಎಂಬುದನ್ನು ಅರಿತುಕೊಳ್ಳಲು ಯತ್ನಿಸಿ. ವಾರದ ಆರಂಭದಲ್ಲಿ, ಕುಟುಂಬಕ್ಕೆ ಹೊಸ ವ್ಯಕ್ತಿಗಳ ಆಗಮನದ ಕಾರಣ ಉತ್ಸುಕತೆಯು ಕಾಣಿಸಿಕೊಳ್ಳಲಿದೆ. ಅಲ್ಲದೆ ಪರಸ್ಪರ ಆಸಕ್ತಿ ತೋರಲಿದ್ದೀರಿ. ಮನೆಯ ವಾತಾವರಣವು ಚೆನ್ನಾಗಿರಲಿದೆ. ಖರ್ಚುವೆಚ್ಚಗಳು ಹಾಗೆಯೇ ಮುಂದುವರಿಯಲಿವೆ. ಆದರೆ ಆದಾಯವು ಚೆನ್ನಾಗಿರಲಿದೆ. ಸರ್ಕಾರಿ ಉದ್ಯೋಗದಲ್ಲಿರುವವರು ಒಳ್ಳೆಯ ಲಾಭಗಳಿಸಲಿದ್ದಾರೆ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವವರು, ತಮ್ಮ ಜಾಣ್ಮೆಯ ಕಾರಣ ಉತ್ತಮಗಳಿಕೆ ಮಾಡಲಿದ್ದಾರೆ. ಅಲ್ಲದೆ ಉತ್ತಮ ಪ್ರೋತ್ಸಾಹಕವೂ ದೊರೆಯಲಿದೆ.

ಸಿಂಹ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಒತ್ತಡ ಅನುಭವಿಸಬಹುದು. ಹೀಗಾಗಿ ಅವರ ಅನ್ಯೋನ್ಯತೆಯಲ್ಲಿ ಕೊರತೆ ಉಂಟಾಬಹುದು. ಹೀಗಾಗಿ ಈ ಒತ್ತಡದಿಂದ ದೂರವಿರಿ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ನಿಮ್ಮ ಮನಸ್ಸಿನಲ್ಲಿ ಪರಸ್ಪರ ಪ್ರೇಮ ಭಾವನೆ ಇರಲಿದೆ. ನಿಮ್ಮ ಕೆಲಸದ ವಿಚಾರದಲ್ಲಿ ನೀವು ಸಮರ್ಪಣಾ ಭಾವವನ್ನು ತೋರಲಿದ್ದೀರಿ. ಇದು ನಿಮಗೆ ಕೆಲಸಕ್ಕೆ ದೃಢತೆಯನ್ನು ಒದಗಿಸಲಿದೆ. ನಿಮಗೆ ಇಷ್ಟವಿಲ್ಲದಿದ್ದರೂ ನಿಮ್ಮ ಬಾಸ್‌ ನಿಮಗೆ ಪ್ರಶಂಸೆಯ ಮಳೆಗರೆಯಲಿದ್ದಾರೆ. ಆದರೂ, ಈ ಸಮಯದಲ್ಲಿ ನಿಮ್ಮ ವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ಇದರಿಂದಾಗಿ ನಿಮ್ಮ ಮನೋಸ್ಥಿತಿಯಲ್ಲಿ ಏರುಪೇರು ಉಂಟಾಗಬಹುದು. ಆದರೆ ಆದಾಯವು ಚೆನ್ನಾಗಿರಲಿದೆ. ಹೊಸ ಸಾಧನವನ್ನು ಖರೀದಿಸಲು ನಿಮಗೆ ಅವಕಾಶ ಸಿಗಬಹುದು. ನೀವು ನಿಮ್ಮ ಕುಟುಂಬದ ಸದಸ್ಯರ ಅಗತ್ಯತೆಗಳನ್ನು ಈಡೇರಿಸುವುದಕ್ಕಾಗಿ ಏನಾದರೂ ವಿಶೇಷವಾದುದನ್ನು ನೀವು ಮಾಡಲಿದ್ದೀರಿ. ಎಲ್ಲಾದರೂ ದೂರಕ್ಕೆ ಸಾಗಲು ಕುಟುಂಬದಲ್ಲಿ ಯೋಜನೆ ರೂಪಿಸುವ ಸಾಧ್ಯತೆ ಇದೆ. ವ್ಯಾಪಾರೋದ್ಯಮಿಗಳು ಸ್ವಲ್ಪ ತಾಳ್ಮೆ ತೋರಬೇಕು.

ಕನ್ಯಾ: ಈ ವಾರದಲ್ಲಿ ನಿಮ್ಮ ಆಕಾಂಕ್ಷೆಗಳು ಈಡೇರಲಿವೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನ ಸವಾಲುಗಳಿಂದ ಹೊರ ಬರಲಿದ್ದಾರೆ ಹಾಗೂ ತಮ್ಮ ಮನಸ್ಸಿನಲ್ಲಿ ಇರುವುದೆಲ್ಲವನ್ನು ತಮ್ಮ ಜೀವನ ಸಂಗಾತಿಯೊಂದಿಗೆ ಹಂಚಿಕೊಳ್ಳಲಿದ್ದಾರೆ. ಇದರಿಂದಾಗಿ ನಿಮ್ಮ ಮನಸ್ಸು ತಿಳಿಗೊಳ್ಳಲಿದೆ ಹಾಗೂ ಸಂಬಂಧದಲ್ಲಿ ಅನ್ಯೋನ್ಯತೆ ಕಾಣಿಸಿಕೊಳ್ಳಲಿದೆ. ಈ ವಾರದಲ್ಲಿ, ಪ್ರೇಮದ ಜೀವನದಲ್ಲಿ ಸಾಕಷ್ಟು ಏರುಪೇರು ಕಾಣಿಸಿಕೊಳ್ಳಲಿದೆ. ಹೀಗಾಗಿ ಪ್ರೇಮ ಜೀವನವು ಸಾಮಾನ್ಯವಾಗಿರಲಿದೆ. ನಿಮ್ಮ ಪ್ರೇಮಿಯ ಕುರಿತು ನೀವು ಕಾಳಜಿ ವಹಿಸಬೇಕಾದೀತು. ನಿಮ್ಮ ಮನಸ್ಸಿನಲ್ಲಿ ಯಾವುದೇ ಇಚ್ಛೆ ಇರಲಿ, ಕಾಲ ಕಳೆದಂತೆ ಇದು ಈಡೇರಲಿದೆ. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದ್ದು ನಿಮ್ಮ ಮನಸ್ಸಿನಲ್ಲಿ ಶಾಂತಿ ನೆಲೆಸಲಿದೆ. ಈ ವಾರದಲ್ಲಿ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ನೀವು ಇದಕ್ಕೆ ಗಮನ ಹರಿಸುವುದು ಅಗತ್ಯ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಕೆಲವೊಂದು ಹೊಸ ಪ್ರಯೋಗಗಳನ್ನು ಮಾಡಲಿದ್ದಾರೆ. ನಿಮ್ಮ ಯಾರಾದರೂ ಒಬ್ಬ ಸಂಗಾತಿಯ ಸಹಾಯದಿಂದ ನಿಮ್ಮ ಕೆಲಸಕ್ಕೆ ವೇಗ ನೀಡಲು ನೀವು ಯತ್ನಿಸಬಹುದು. ಇದು ನಿಮ್ಮ ಪಾಲಿಗೆ ಪ್ರಯೋಜನಕಾರಿ ಎನಿಸಲಿದೆ.

ತುಲಾ: ಈ ವಾರ ನಿಮಗೆ ಪ್ರಯೋಜನಕಾರಿ ಎನಿಸಲಿದೆ. ವಿವಾಹಿತ ವ್ಯಕ್ತಿಗಳಿಗೆ ತಮ್ಮ ಕೌಟುಂಬಿಕ ಬದುಕಿನಲ್ಲಿ ಸವಾಲುಗಳು ಎದುರಾಗಬಹುದು. ಭೋಲೆನಾಥನ ಪೂಜೆಯನ್ನು ಮಾಡಿರಿ. ನೀವು ಆದಾಯವನ್ನುಗಳಿಸುವುದು ಮಾತ್ರವಲ್ಲದೆ ನಿಮ್ಮ ಜನರೊಂದಿಗೆ ಆತ್ಮೀಯತೆಯನ್ನು ಸಾಧಿಸಲಿದ್ದೀರಿ. ನಿಮ್ಮ ಪ್ರಯಾಣವು ಯಶಸ್ವಿಯಾಗಲಿದೆ. ಇದು ನಿಮಗೆ ಲಾಭದ ದಾರಿಯನ್ನು ತೆರೆಯಲಿದೆ. ಉದ್ಯೋಗದಲ್ಲಿರುವವರು ಒಂದಷ್ಟು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಎದುರಾಳಿಗಳು ನಿಮ್ಮ ವಿರುದ್ಧ ಷಡ್ಯಂತ್ರ ಹೂಡಬಹುದು. ಅವರ ಕುರಿತು ಎಚ್ಚರಿಕೆಯಿಂದ ಇರಿ. ಎಚ್ಚರಿಕೆಯಿಂದ ಹೆಜ್ಜೆ ಇಡುವುದು ನಿಮಗೆ ಒಳ್ಳೆಯದು. ವ್ಯವಹಾರ ನಡೆಸಲು ಈ ಸಮಯ ಅನುಕೂಲಕರ. ಈಗ ನಿಮ್ಮ ವ್ಯವಹಾರವು ಸಾಕಷ್ಟು ಬೆಳೆಯಲಿದೆ. ನೀವು ಪ್ರಗತಿಯನ್ನು ಸಾಧಿಸಲಿದ್ದೀರಿ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನಕ್ಕೆ ಸಾಕಷ್ಟು ಗಮನ ನೀಡಲಿದ್ದಾರೆ. ಇದು ಅವರಿಗೆ ಒಳ್ಳೆಯ ಫಲಿತಾಂಶವನ್ನು ನೀಡಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ವೃಶ್ಚಿಕ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ಆದರೂ ವಿವಾಹಿತ ವ್ಯಕ್ತಿಗಳು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಜೀವನ ಸಂಗಾತಿಯ ವರ್ತನೆಯಲ್ಲಿ ಅಹಂ ಕಾಣಿಸಿಕೊಳ್ಳಬಹುದು. ಇದರಿಂದಾಗಿ ನಿಮ್ಮ ಸಂಬಂಧದಲ್ಲಿ ತೊಂದರೆಗಳು ಕಾಣಿಸಿಕೊಳ್ಳಬಹುದು. ಇಂತಹ ಸನ್ನಿವೇಶದಲ್ಲಿ, ಸಂಬಂಧದಲ್ಲಿ ಯಾವುದೇ ರೀತಿಯ ಅಡಚಣೆಗಳು ಉಂಟಾಗದಂತೆ ಅವರೊಂದಿಗೆ ಪ್ರೀತಿ ಮತ್ತು ಕಾಳಜಿಯಿಂದ ಮಾತನಾಡಿ. ನಿಮ್ಮ ನಡುವೆ ಪ್ರೀತಿಯು ನೆಲೆಸಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಉತ್ತಮ ವಾರವೆನಿಸಲಿದೆ. ನಿಮ್ಮ ಪ್ರೇಮಿಯು ಅವರ ಮನಸ್ಸಿನ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ಅದು ನಿಮ್ಮಲ್ಲಿ ಅನ್ಯೋನ್ಯತೆಯನ್ನು ಉಂಟು ಮಾಡಲಿದೆ. ನಿಮ್ಮ ಕೆಲಸದ ಕಡೆಗೆ ನೀವು ಹೆಚ್ಚಿನ ಗಮನ ನೀಡಲಿದ್ದೀರಿ. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ಭಡ್ತಿಯ ಅವಕಾಶ ಉಂಟಾಗಬಹುದು. ಹೀಗಾಗಿ ಯಾವುದೇ ತಪ್ಪನ್ನು ಮಾಡಬೇಡಿ. ವ್ಯಾಪಾರೋದ್ಯಮಿಗಳಿಗೆ ಇದು ಸಕಾಲ. ಸರ್ಕಾರಿ ವಲಯದಿಂದ ಏನಾದರೂ ಪ್ರಯೋಜನ ದೊರೆಯುವ ಸಾಧ್ಯತೆ ಇದೆ.

ಧನು: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ನೆಮ್ಮದಿಯಿಂದ ಸಾಗಲಿದೆ. ಪರಸ್ಪರರ ಹೃದಯದಲ್ಲಿ ಪ್ರೇಮವು ಅಂಕುರಿಸಲಿದೆ. ನಿಮ್ಮ ಸಂಬಂಧದ ವಿಚಾರದಲ್ಲಿ ಸಮಯವು ಚೆನ್ನಾಗಿದೆ. ನಿಮ್ಮ ಪ್ರೇಮ ಜೀವನದಲ್ಲಿರುವ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪರಸ್ಪರ ಅನ್ಯೋನ್ಯತೆಯು ಹೆಚ್ಚಲಿದೆ ಹಾಗೂ ನಿಮ್ಮ ಸಂಬಂಧದಲ್ಲಿ ಸುಧಾರಣೆ ತರಲು ನೀವು ಯತ್ನಿಸಲಿದ್ದೀರಿ. ಅವಿವಾಹಿತರಿಗೆ ವಿವಾಹದ ಪ್ರಸ್ತಾಪ ಸಿಗಬಹುದು. ಹಠಾತ್‌ ಆಗಿ ನಿಮಗೆ ಅದೃಷ್ಟದ ಬಲ ದೊರೆಯಲಿದೆ. ಇದರಿಂದ ನೀವು ಉಬ್ಬಿ ಹೋಗುವುದಿಲ್ಲ. ಹಣವನ್ನು ಹಠಾತ್‌ ಆಗಿ ಪಡೆಯಬಹುದು. ನೀವು ಹಿರಿಯರ ಅಥವಾ ಪೂರ್ವಜರ ಆಸ್ತಿಯನ್ನು ಪಡೆಯಬಹುದು. ನಿಮ್ಮ ಒಡಹುಟ್ಟಿದವರು ಸಹಾಯ ಪಡೆಯಲಿದ್ದಾರೆ. ಸದ್ಯಕ್ಕೆ ನೀವು ಆಲಸ್ಯವನ್ನು ತ್ಯಜಿಸಬೇಕು. ಇದು ನಿಮಗೆ ಉದ್ಯೋಗದಲ್ಲಿ ಉತ್ತಮ ಫಲಿತಾಂಶವನ್ನು ನೀಡಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಯಶಸ್ಸನ್ನು ಗಳಿಸಲಿದ್ದಾರೆ. ಕಚೇರಿಯಲ್ಲಿ ನೀವು ಸಂತಸ ಅನುಭವಿಸಲಿದ್ದೀರಿ. ನಿಮ್ಮ ಕೆಳಗೆ ಕೆಲಸ ಮಾಡುತ್ತಿರುವ ವ್ಯಕ್ತಿಗಳೊಂದಿಗೆ ಚೆನ್ನಾಗಿ ವರ್ತಿಸಲಿದ್ದೀರಿ.

ಮಕರ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಅತ್ತೆ ಮಾವಂದಿರಿಂದ ನೀವು ಶುಭ ಸುದ್ದಿಯನ್ನು ಪಡೆಯಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಸಂಘರ್ಷ ನಿವಾರಣೆಯಾಗಬಹುದು. ಪರಸ್ಪರ ಅರಿತುಕೊಳ್ಳಲು ನೀವು ಯತ್ನಿಸಲಿದ್ದೀರಿ. ಇದರಿಂದಾಗಿ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಈ ವಾರದಲ್ಲಿ ಪ್ರೇಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ನಿಮ್ಮ ಪ್ರೇಮಿಯು ನಿಮ್ಮೊಂದಿಗೆ ಭಿನ್ನವಾಗಿ ವರ್ತಿಸಬಹುದು. ಇದನ್ನು ನೀವು ಇಷ್ಟಪಡದೆ ಇರಬಹುದು. ಪರಸ್ಪರ ಚರ್ಚೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಸ್ವಲ್ಪ ತಾಳ್ಮೆ ತೋರಬೇಕು. ಸಮಯವು ಇದಕ್ಕೆ ಅನುಕೂಲಕರವಾಗಿಲ್ಲ. ಕೆಲಸದಲ್ಲಿ ಸುಧಾರಣೆ ತರಲು ಯತ್ನಿಸಿ. ವ್ಯವಹಾರಕ್ಕೆ ಇದು ಸಕಾಲ. ಹೊಸ ಯೋಜನೆಯ ಕುರಿತು ಸದ್ಯಕ್ಕೆ ಕೆಲಸ ಮಾಡಲು ಪ್ರಾರಂಭಿಸಬೇಡಿ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯತ್ನಿಸಬೇಡಿ. ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಇಚ್ಛಿಸುವುದಾದರೆ, ವಾರದ ಮಧ್ಯಭಾಗವು ಒಳ್ಳೆಯದು. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಈ ವಾರವು ಅವರ ಪಾಲಿಗೆ ಮಧ್ಯಮ ಫಲಿತಾಂಶ ನೀಡಲಿದೆ.

ಕುಂಭ: ಈ ವಾರ ನಿಮಗೆ ಮಿಶ್ರ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು, ತಮ್ಮ ಕೌಟುಂಬಿಕ ಬದುಕಿನ ವಾತಾವರಣವನ್ನು ತಿಳಿಯಾಗಿಸಲು ಮತ್ತು ಶಾಂತಿ ಕಾಪಾಡಲು ತಮ್ಮೆಲ್ಲ ಪ್ರಯತ್ನವನ್ನು ಮಾಡಲಿದ್ದಾರೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಸಂಬಂಧವನ್ನು ನಿಮ್ಮ ಪ್ರೇಮಿಯೊಂದಿಗೆ ಆನಂದಿಸಲು ನಿಮಗೆ ಸಾಧ್ಯವಾಗಲಿದೆ. ಪ್ರಯಾಣವು ಮಾನಸಿಕ ತೃಪ್ತಿಯನ್ನು ನೀಡಲಿದೆ. ವಾರದ ಮಧ್ಯದಲ್ಲಿ ಮತ್ತು ಕೊನೆಯಲ್ಲಿ ನೀವು ದೀರ್ಘ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ಕಾಲ. ನಿಮ್ಮ ಕಠಿಣ ಶ್ರಮಕ್ಕೆ ಯಶಸ್ಸು ದೊರೆಯಲಿದೆ. ಹೊಸ ನಿಯೋಜನೆಗಳಲ್ಲಿ ಕೆಲಸ ಮಾಡಲು ನಿಮಗೆ ಅವಕಾಶ ದೊರೆಯಲಿದೆ. ನಿಮ್ಮ ಸ್ಥಾನ ಮತ್ತು ವರ್ಚಸ್ಸನ್ನು ವೃದ್ಧಿಸಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಈ ವಾರವನ್ನು ಆನಂದಿಸಲಿದ್ದಾರೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಏಕಾಗ್ರತೆ ತೋರಬೇಕು. ಸ್ಪರ್ಧೆಗಾಗಿ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಇನ್ನಷ್ಟು ಪ್ರಯತ್ನ ಪಡಬೇಕು. ಆಗ ಮಾತ್ರವೇ ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸಬಹುದು.

ಮೀನ: ಈ ವಾರ ಒಟ್ಟಾರೆ ನಿಮಗೆ ಒಳ್ಳೆಯ ಫಲ ಲಭಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿ ಸಾಗಲಿದೆ. ಆದರೆ ನಿಮ್ಮ ಜೀವನ ಸಂಗಾತಿಯ ಮಾತುಗಳಿಗೆ ನೀವು ಗಮನ ನೀಡಬೇಕು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ಪ್ರೇಮಿಯ ಜೊತೆ ನೀವು ವಾಕ್‌ಗೆ ಹೋಗಬಹುದು. ವಾರದ ಆರಂಭಿಕ ದಿನಗಳಲ್ಲಿ ವಿದೇಶದಿಂದ ಶುಭ ಸುದ್ದಿಯನ್ನು ಪಡೆಯಲಿದ್ದೀರಿ. ಕೆಲವರು ವಿದೇಶಕ್ಕೆ ಹೋಗಲು ಅವಕಾಶ ಪಡೆಯಬಹುದು. ಈ ಸಂದರ್ಭದಲ್ಲಿ ಕೆಲವರು ಆಸ್ತಿ ಖರೀದಿಸಬಹುದು ಅಥವಾ ಮನೆಯನ್ನು ಕಟ್ಟಬಹುದು. ಇದು ನಿಮ್ಮ ಹಳೆಯ ಇಚ್ಛೆಯನ್ನು ಈಡೇರಿಸಲಿದೆ. ಇದು ನಿಮಗೆ ಸಂತಸ ನೀಡಲಿದೆ. ಸದ್ಯಕ್ಕೆ ನಿಮಗೆ ಖರ್ಚುವೆಚ್ಚಗಳು ಉಂಟಾಗಬಹುದು. ಆದರೆ ಈ ಖರ್ಚುವೆಚ್ಚಗಳು ನಿಮಗೆ ಸಂತಸ ನೀಡಲಿವೆ. ವಾರದ ಮಧ್ಯದಲ್ಲಿ, ನಿಮ್ಮ ಖರ್ಚುವೆಚ್ಚದಲ್ಲಿ ಸ್ವಲ್ಪ ಇಳಿಕೆ ಉಂಟಾಗಲಿದೆ. ನಿಮ್ಮ ಕುರಿತು ನೀವು ಯೋಚಿಸಲಿದ್ದೀರಿ. ಏನನ್ನುಗಳಿಸಿದ್ದೀರಿ, ಏನನ್ನು ಕಳೆದುಕೊಂಡಿದ್ದೀರಿ ಎಂಬ ಕುರಿತು ನೀವು ಪರ್ಯಾಲೋಚನೆ ನಡೆಸಲಿದ್ದೀರಿ. ಪರ್ಯಾಲೋಚನೆಯಲ್ಲಿಯೇ ನಿಮ್ಮ ಹೆಚ್ಚಿನ ಕಾಲ ಕಳೆದು ಹೋಗಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ.

ಇದನ್ನೂ ಓದಿ: ಭಾನುವಾರದ ರಾಶಿ ಭವಿಷ್ಯ: ಇಂದು ಈ ರಾಶಿಯವರು ಪ್ರೀತಿ ಪಾತ್ರರೊಂದಿಗೆ ಆನಂದಿಸುತ್ತಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.