ETV Bharat / bharat

ಈ ವಾರ ನಿಮಗೆ ಎದುರಾಗುವ ಸವಾಲುಗಳೇನು? ಇಲ್ಲಿದೆ ವಾರದ ಭವಿಷ್ಯ - ಈ ವಾರ ನಿಮಗೆ ಎದುರಾಗುವ ಸವಾಲುಗಳೇನು.

ಅಕ್ಬೋಬರ್‌ 3ರಿಂದ 9ರವರೆಗಿನ ನಿಮ್ಮ ವಾರ ಭವಿಷ್ಯ ಹೀಗಿದೆ..

etv-bharat-weekly-horoscope-
ಇಲ್ಲಿದೆ ವಾರದ ಭವಿಷ್ಯ
author img

By

Published : Oct 3, 2021, 8:29 AM IST

ಮೇಷ: ಈ ವಾರ ನೀವು ಸಾಧಾರಣ ಫಲ ಪಡೆಯಲಿದ್ದೀರಿ. ನಿಮ್ಮ ಮಗುವಿನ ಬಗ್ಗೆ ನೀವು ಸಾಕಷ್ಟು ಯೋಚಿಸಲಿದ್ದೀರಿ. ಆಕೆಯ/ಆತನ ಭವಿಷ್ಯದ ಕುರಿತ ಚಿಂತನೆಗಳು ನಿಮ್ಮನ್ನು ಕಾಡಬಹುದು. ನೀವು ವಿದ್ಯಾರ್ಥಿಯಾಗಿದ್ದಲ್ಲಿ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲಿದ್ದೀರಿ. ನೀವು ಸರ್ಕಾರಿ ಕೆಲಸಕ್ಕೆ ಆಯ್ಕೆಯಾಗುವುದರಲ್ಲಿ ಯಶಸ್ವಿಯಾಗಬಹುದು. ನಿಮ್ಮ ಅನಾರೋಗ್ಯ ಕಾಡಬಹುದು. ಹೀಗಾಗಿ ನೀವು ಕೆಲವೊಂದು ಕೆಲಸಗಳನ್ನು ಮುಂದೂಡಬೇಕಾದೀತು. ಉದ್ಯೋಗದಲ್ಲಿರುವವರು ತಮ್ಮ ಬಾಸ್​​ಗೆ ನೇರವಾಗಿ ಮಾತನಾಡಬೇಕು. ಸದ್ಯದ ಸಮಸ್ಯೆಗಳನ್ನು ನೀವು ನಿಮ್ಮ ಮೇಲಾಧಿಕಾರಿ ಗಮನಕ್ಕೆ ತರಬೇಕು. ನಿಮ್ಮ ಕೆಲಸದಲ್ಲಿ ನೀವು ಲಾಭ ಗಳಿಸಲಿದ್ದೀರಿ. ಇದು ಯಾವುದಾದರೂ ಸರ್ಕಾರಿ ಇಲಾಖೆಗೆ ಸಂಬಂಧಿಸಿರಬಹುದು. ನೀವು ಹೊಸ ಆನಂದವನ್ನು ಹುಡುಕಲು ಪ್ರಯತ್ನಿಸಲಿದ್ದೀರಿ. ಇದಕ್ಕಾಗಿ ನೀವು ಹಣವನ್ನೂ ಖರ್ಚು ಮಾಡಲಿದ್ದೀರಿ.

ವೃಷಭ: ಈ ವಾರ ನೀವು ‌ತುಂಬಾ ಸಂತಸದಿಂದ ಕಾಲ ಕಳೆಯಲಿದ್ದೀರಿ. ನಿಮ್ಮ ಕುಟುಂಬವು ಸಾಧಿಸುವ ಪ್ರಗತಿಯ ಕುರಿತು ನಿಮಗೆ ಸಂತಸ ಉಂಟಾಗಲಿದೆ. ಇದರಿಂದಾಗಿ ನಿಮಗೆ ಇನ್ನೂ ಚೆನ್ನಾಗಿ ಕೆಲಸ ಮಾಡುವ ಇಚ್ಛೆ ಉಂಟಾಗಬಹುದು. ನಿಮ್ಮ ವೈವಾಹಿಕ ಬದುಕಿನ ಕುರಿತು ನಿಮಗೆ ಸಂತಸ ಉಂಟಾಗಲಿದೆ. ನಿಮ್ಮ ಜೀವನ ಸಂಗಾತಿಯು ಪ್ರಣಯಭರಿತ ಚಿಂತನೆಗಳ ಮೂಲಕ ನಿಮ್ಮನ್ನು ಉತ್ತೇಜಿಸಲಿದ್ದಾರೆ. ಪ್ರೇಮಿಗಳ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಸಂಬಂಧದಲ್ಲಿ ನಿಮಗೆ ಹೆಚ್ಚಿನ ನಂಬಿಕೆ ಇರಬೇಕು ಹಾಗೂ ಅನಗತ್ಯ ವಿಚಾರಗಳನ್ನು ಮರೆತು ಮುಂದೆ ಸಾಗಬೇಕು. ವ್ಯವಹಾರದಲ್ಲಿನ ನಿಮ್ಮ ಪ್ರಯತ್ನಗಳು ಉತ್ತಮ ಫಲಿತಾಂಶ ನೀಡಲಿವೆ. ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ನೀವು ಗಳಿಕೆಯನ್ನು ಮಾಡಲಿದ್ದೀರಿ. ನಿಮ್ಮ ಸಾಲವನ್ನು ಮರುಪಾವತಿಸಲು ನೀವು ಪ್ರಾರಂಭಿಸಲಿದ್ದು ಇದು ನಿಮಗೆ ಒಂದಷ್ಟು ನೆಮ್ಮದಿ ನೀಡಲಿದೆ. ಉದ್ಯೋಗಿಗಳಿಗೆ ಇದು ಉತ್ತಮ ಕಾಲವೆನಿಸಲಿದೆ. ನೀವು ನಿಮ್ಮ ಕೆಲಸಕ್ಕೆ ಹೆಚ್ಚಿನ ಗಮನ ನೀಡಲಿದ್ದೀರಿ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದ್ದು ಸಮಸ್ಯೆಗಳಿಂದ ಹೊರ ಬರಲಿದ್ದೀರಿ.

ಮಿಥುನ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ವಾರದ ಪ್ರಾರಂಭದಲ್ಲಿ ನೀವು ಪ್ರವಾಸಕ್ಕೆ ಹೋಗಬಹುದು. ಇದು ಅಧಿಕೃತ ಭೇಟಿ ಆಗಿರಬಹುದು. ನಿಮ್ಮ ಅಧಿಕೃತ ಕೆಲಸವನ್ನು ಪೂರ್ಣಗೊಳಿಸಲು ನೀವು ಕಠಿಣ ಪ್ರಯತ್ನ ಮಾಡಲಿದ್ದೀರಿ. ಅಲ್ಲದೆ ಈ ಪ್ರಯಾಣದಲ್ಲಿ ನೀವು ಉತ್ತಮ ಫಲಿತಾಂಶ ಪಡೆಯಬಹುದು. ಸದ್ಯಕ್ಕೆ ನಿಮ್ಮ ಕೆಲಸದ ಬಗ್ಗೆ ನಿಮಗೆ ತೃಪ್ತಿ ಸಿಗದು. ಆದರೆ ನೀವು ಈ ಕೆಲಸವನ್ನು ಮುಂದುವರಿಸಬೇಕು. ಏಕೆಂದರೆ ನಿಮ್ಮ ಕಠಿಣ ಶ್ರಮವು ಕಾಲ ಕಳೆದಂತೆ ಉತ್ತಮ ಫಲ ನೀಡಲಿದೆ. ವ್ಯಾಪಾರೋದ್ಯಮಿಗಳಿಗೆ ಇದು ಸಕಾಲ. ನಿಮ್ಮ ವ್ಯವಹಾರವು ವೇಗವಾಗಿ ಬೆಳೆಯಲಿದೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಆದರೂ ಇದು ಪ್ರೇಮಿಗಳಿಗೆ ಉತ್ತಮ ಕಾಲವಲ್ಲ.

ಕರ್ಕಾಟಕ: ವಾರದ ಆರಂಭದಲ್ಲಿ ನೀವು ಒತ್ತಡಕ್ಕೆ ಒಳಗಾಗಬಹುದು. ಹೀಗಾಗಿ ನೀವು ಅವಸರದಿಂದ ವರ್ತಿಸಬಹುದು. ನಿಮ್ಮ ಯೋಚನೆಗಳನ್ನು ಇತರರ ಮೇಲೆ ಹೇರಲು ನೀವು ಪ್ರಯತ್ನಿಸಬಹುದು. ಆದರೂ ನಿಮ್ಮ ಸಂಬಂಧಗಳ ಕುರಿತು ನೀವು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಅಲ್ಲದೆ ಈ ಹಂತದಲ್ಲಿ ನಿಮ್ಮ ಪ್ರೇಮ ಜೀವನದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಲಿದ್ದು ಇದು ನಿಮ್ಮ ಸಂಬಂಧವನ್ನು ಪರೀಕ್ಷೆಗೆ ಒಡ್ಡಲಿದೆ. ಇದು ನಿಮ್ಮ ಪಾಲಿಗೆ ತುಂಬಾ ಸೂಕ್ಷ್ಮ ಸಮಯ. ಆದರೆ ನೀವು ಸಂಬಂಧದ ವಿವಿಧ ಆಯಾಮಗಳನ್ನು ಅರಿತುಕೊಳ್ಳಲಿದ್ದೀರಿ. ಋತುಮಾನಕ್ಕೆ ಸಂಬಂಧಿಸಿದ ಬದಲಾವಣೆಗಳು ನಿಮ್ಮ ಆರೋಗ್ಯವನ್ನು ಬಾಧಿಸಬಹುದು. ಆದರೆ ನಿಮ್ಮ ಸ್ಥಿತಿಯಲ್ಲಿ ಮೆಲ್ಲನೆ ಸುಧಾರಣೆ ಕಂಡುಬರಲಿದೆ. ಅಲ್ಲದೆ ನಿಮ್ಮ ವೃತ್ತಿಯಲ್ಲಿ ಪ್ರಗತಿ ಸಾಧಿಸಲು ನೀವು ಯತ್ನಿಸಲಿದ್ದೀರಿ. ಕೊನೆಯ ಹಂತದಲ್ಲಿ ಒಂದಷ್ಟು ಲಾಭ ಪಡೆಯಲಿದ್ದೀರಿ. ಜೀವನ ಸಂಗಾತಿಗಾಗಿ ಎದುರು ನೋಡುತ್ತಿರುವವರ ಹುಡುಕಾಟವು ಕೊನೆಗೊಳ್ಳಲಿದೆ. ಜತೆಗೆ ನೀವು ಕಚೇರಿಗೆ ಸಂಬಂಧಿಸಿದ ಪ್ರವಾಸಕ್ಕೆ ಹೋಗಬಹುದು.

ಸಿಂಹ: ಈ ವಾರದಲ್ಲಿ ನೀವು ಒಳ್ಳೆಯ ಫಲವನ್ನು ಪಡೆಯಲಿದ್ದೀರಿ. ನಿಮ್ಮ ಸೌಂದರ್ಯ ವರ್ಧನೆಗಾಗಿ ನೀವು ಗಮನ ನೀಡಲಿದ್ದು ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಲಿದ್ದೀರಿ. ನೀವು ಕೆಲವು ಹೊಸ ಬಟ್ಟೆಗಳನ್ನು ಖರೀದಿಸಬಹುದು. ವಾರವು ಪ್ರಾರಂಭವಾದಂತೆ ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ನೀವು ನಿಮ್ಮ ಕೆಲಸದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಇದೇ ವೇಳೆ ನಿಮ್ಮ ಕೌಟುಂಬಿಕ ಬದುಕಿನಲ್ಲಿ ಸಮಸ್ಯೆಗಳು ಉಂಟಾಗಲಿವೆ. ಆದರೆ ಇದರಿಂದ ಹೇಗೆ ಹೊರಬರಬೇಕು ಎನ್ನುವುದು ನಿಮಗೆ ತಿಳಿದಿದೆ. ವ್ಯಾಪಾರೋದ್ಯಮಗಳಲ್ಲಿ ತೊಡಗಿರುವವರು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಈ ವಾರವು ಉದ್ಯೋಗಿಗಳ ಪಾಲಿಕೆ ಉತ್ತಮ ಫಲ ನೀಡಲಿದೆ. ನಿಮ್ಮ ಬದುಕಿನಲ್ಲಿ ಸಂತಸ ಕಾಣಲಿದ್ದೀರಿ. ಪ್ರೀತಿ ಉಕ್ಕಿ ಹರಿಯಲಿದ್ದು ಪ್ರೇಮಿಗಳ ಪಾಲಿಗೆ ಇದು ಸಕಾಲ. ಆದರೂ ನಿಮ್ಮ ಸಂಗಾತಿಗೆ ಅಸ್ವಸ್ಥತೆ ಕಾಡಬಹುದು. ಹೀಗಾಗಿ ಅವರ ಕುರಿತು ನೀವು ಕಾಳಜಿ ವಹಿಸಬೇಕು. ನಿಮ್ಮ ಪ್ರಣಯ ಸಂಗಾತಿಯು ನಿಮ್ಮನ್ನು ಅವರ ಕುಟುಂಬದ ಸದಸ್ಯರಿಗೆ ಪರಿಚಯಿಸಬಹುದು. ಇದರಿಂದ ಸಂಬಂಧ ಗಟ್ಟಿಗೊಳ್ಳಬಹುದು. ಅಲ್ಲದೆ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.

ಕನ್ಯಾ: ವಾರದ ಆರಂಭದಲ್ಲಿ ನೀವು ಸಾಮಾನ್ಯ ಬದುಕನ್ನು ಅನುಭವಿಸಲಿದ್ದು ಪ್ರವಾಸಕ್ಕೆ ಹೋಗುವ ಸಂಭವವಿದೆ. ಈ ಪ್ರಯಾಣದ ವೇಳೆ ನಿಮಗೆ ಹೊಸ ಜನರನ್ನು ಭೇಟಿಯಾಗುವ ಅವಕಾಶ ಸಿಗಬಹುದು. ಅಲ್ಲದೆ ವಿಶೇಷ ವ್ಯಕ್ತಿಯ ಜೊತೆಗಿನ ನಿಮ್ಮ ನಂಟು ಇನ್ನೂ ವೃದ್ಧಿಸಬಹುದು. ಪ್ರೇಮಿಗಳ ಪಾಲಿಗೆ ಇದು ಸಕಾಲ ಹಾಗೂ ನಿಮ್ಮ ಬಂಧ ಇನ್ನೂ ಗಟ್ಟಿಗೊಳ್ಳಲಿದೆ. ವಿವಾಹಿತ ಜೋಡಿಗಳ ಪಾಲಿಗೆ ಇದು ಸಕಾಲ. ಕೆಲವೊಮ್ಮೆ ನಿಮ್ಮ ಸಂಗಾತಿಯು ನಿಮ್ಮ ವರ್ತನೆಯ ಕುರಿತು ಅಸಮಾಧಾನ ವ್ಯಕ್ತಪಡಿಸಬಹುದು. ನೀವು ಹೇಗೆ ಮಾತನಾಡುತ್ತೀರಿ ಹಾಗೂ ಏನು ಮಾಡುತ್ತೀರಿ ಎನ್ನುವ ಕುರಿತು ಎಚ್ಚರಿಕೆ ಇರಲಿ. ಕೆಲಸಕ್ಕೆ ಹೊಸದಾಗಿ ಸೇರಿದವರು ತಮ್ಮ ಹಿರಿಯರಿಗೆ ಸಾಕಷ್ಟು ವರದಿ ಮಾಡಬೇಕಾಗಿ ಬರಬಹುದು. ಸರ್ಕಾರಿ ನೀತಿಗಳ ಕಾರಣ ವ್ಯಾಪಾರೋದ್ಯಮಿಗಳು ಇನ್ನಷ್ಟು ಕಠಿಣ ಶ್ರಮ ಪಡಬೇಕಾಗಿ ಬರಬಹುದು. ಇಲ್ಲದಿದ್ದರೆ ಇದು ನಿಮ್ಮ ಪಾಲಿಗೆ ದುಬಾರಿ ಎನಿಸಬಹುದು. ನಿಮ್ಮ ಆರೋಗ್ಯವು ಸಾಮಾನ್ಯ ಮಟ್ಟದಲ್ಲಿರಲಿದೆ. ಋತುಮಾನಕ್ಕೆ ಸಂಬಂಧಿಸಿದ ರೋಗಗಳ ಕುರಿತು ಎಚ್ಚರಿಕೆಯಿಂದ ಇರಿ.

ತುಲಾ: ಒಟ್ಟಾರೆ ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಆದರೆ ವಾರದ ಮಧ್ಯ ಭಾಗದಲ್ಲಿ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಖರ್ಚುವೆಚ್ಚಗಳನ್ನು ನೀವು ಪರಿಣಾಮಕಾರಿಯಾಗಿ ನಿಭಾಯಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿಯು ಕೈಮೀರಿ ಹೋಗಬಹುದು. ವಾರದ ಕೊನೆಯ ದಿನಗಳು ನಿಮ್ಮ ಪಾಲಿಗೆ ತುಂಬಾ ಒಳ್ಳೆಯವು. ನಿಮ್ಮ ವೈವಾಹಿಕ ಜೀವನಕ್ಕೆ ಇನ್ನಷ್ಟು ಮೆರುಗು ನೀಡಲು ನೀವು ಯತ್ನಿಸುವಿರಿ. ಆದರೂ ನಿಮ್ಮ ಜೀವನ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಬಹುದು. ಹೀಗಾಗಿ ಅವರ ಕುರಿತು ಚೆನ್ನಾಗಿ ಕಾಳಜಿ ವಹಿಸಿ. ಪ್ರೇಮಿಗಳಿಗೆ ಇದು ಸಕಾಲ. ಜೊತೆಗೆ ನೀವು ಒಂದಷ್ಟು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಲಿದ್ದು ಇತರರ ಪ್ರಶಂಸೆಯನ್ನು ಗಳಿಸಲಿದ್ದೀರಿ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನೀವು ಹಣವನ್ನು ಒಗ್ಗೂಡಿಸಲು ಪ್ರಯತ್ನಿಸಲಿದ್ದೀರಿ. ವ್ಯಾಪಾರೋದ್ಯಮಿಗಳಿಗೆ ಸರಾಸರಿ ಫಲ ದೊರೆಯಲಿದೆ. ಉದ್ಯೋಗದಲ್ಲಿರುವವರು ಉತ್ತಮ ಸಮಯವನ್ನು ಆನಂದಿಸಲಿದ್ದಾರೆ.

ವೃಶ್ಚಿಕ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ಕೆಲಸಗಳ ಮೇಲೆ ನೀವು ಗಮನ ಹರಿಸಲಿದ್ದೀರಿ. ಇದು ಕೆಲಸದ ಮೇಲಿನ ನಿಮ್ಮ ಹಿಡಿತವನ್ನು ಬಲಪಡಿಸಲಿದೆ. ನಿಮ್ಮ ಮೇಲಾಧಿಕಾರಿ ನಿಮ್ಮ ಕುರಿತು ತೃಪ್ತಿ ವ್ಯಕ್ತಪಡಿಸಲಿದ್ದಾರೆ ಹಾಗೂ ನಿಮ್ಮ ಭಡ್ತಿಯನ್ನು ಅವರು ಪರಿಗಣಿಸಬಹುದು. ನಿಮ್ಮ ಮೇಲಾಧಿಕಾರಿಗೆ ಕಹಿಯಾದ ಮಾತನ್ನು ಹೇಳಬೇಡಿ. ಇಲ್ಲದಿದ್ದರೆ ನೀವು ಗಂಭೀರ ಸಮಸ್ಯೆಯಲ್ಲಿ ಸಿಲುಕಬಹುದು. ವ್ಯಾಪಾರೋದ್ಯಮಿಗಳ ಪ್ರಯತ್ನಗಳಿಗೆ ಯಶಸ್ಸು ದೊರೆಯಬಹುದು ಹಾಗೂ ನಿಮ್ಮ ವ್ಯವಹಾರಕ್ಕೆ ಉತ್ತಮ ಚಾಲನೆ ದೊರೆಯಬಹುದು. ವ್ಯವಹಾರದಲ್ಲಿ ನೀವು ಉತ್ತಮ ಲಾಭ ಮಾಡಲಿದ್ದೀರಿ. ಜೊತೆಗೆ ನೀವು ಪ್ರೀತಿಯನ್ನು ಅನುಭವಿಸಲಿದ್ದೀರಿ ಹಾಗೂ ಅಭ್ಯಸಿಸಲಿದ್ದೀರಿ. ಹೀಗಾಗಿ ನಿಮ್ಮ ಜೀವನ ಸಂಗಾತಿಯ ಜೊತೆಗಿನ ನಿಮ್ಮ ಸಂಬಂಧವು ಗಟ್ಟಿಗೊಳ್ಳಲಿದೆ. ನೀವು ಯಾವುದಾದರೂ ಒಂದು ರೊಮ್ಯಾಂಟಿಕ್‌ ತಾಣಕ್ಕೆ ಭೇಟಿ ನೀಡಿ ನಿಮ್ಮ ಸಂಬಂಧಕ್ಕೆ ಹೊಸಕಳೆ ನೀಡಬಹುದು. ಪ್ರೇಮಿಗಳ ನಡುವಿನ ಸಂಬಂಧವು ವೃದ್ಧಿಸಲಿದೆ. ಸಂವಹನದ ಯಾವುದೇ ಅಂತರ ಬರದಂತೆ ನೋಡಿಕೊಳ್ಳಿ ಹಾಗೂ ನಿಮ್ಮ ಪ್ರೇಮ ಸಂಗಾತಿಯ ಜೊತೆ ಮಾತನಾಡುವುದನ್ನು ಮುಂದುವರಿಸಿ. ವಾರದ ಮಧ್ಯ ಭಾಗವು ಪ್ರಯಾಣಕ್ಕೆ ಹೋಗಲು ಅನುಕೂಲಕರ.

ಧನು: ಇದು ನಿಮ್ಮ ಪಾಲಿಗೆ ಅತ್ಯಂತ ಲಾಭದಾಯಕ ವಾರ ಎನಿಸಲಿದೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲವನ್ನು ನೀವು ಪಡೆಯಲಿದ್ದೀರಿ. ನೀವು ದೀರ್ಘ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಈ ಪ್ರಯಾಣವು ನಿಮ್ಮ ಪಾಲಿಗೆ ಏನಾದರೂ ಹೊಸತನ್ನು ತರಲಿದ್ದು, ಇದು ನಿಮ್ಮ ಬದುಕಿನ ದಿಕ್ಕನ್ನು ಬದಲಾಯಿಸಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ ಹಾಗೂ ನೀವು ನಿಜಕ್ಕೂ ಒಳ್ಳೆಯ ಕೆಲಸವನ್ನು ಮಾಡಲಿದ್ದೀರಿ. ವ್ಯಾಪಾರೋದ್ಯಮಿಗಳಿಗೆ ಇದು ಉತ್ತಮ ಸಮಯವಾಗಿದೆ. ಮಾರುಕಟ್ಟೆಯಲ್ಲಿ ಯಾವುದಕ್ಕೆ ಹೆಚ್ಚು ಬೇಡಿಕೆ ಇದೆ ಎಂಬುದರ ಕುರಿತು ನೀವು ಗಮನ ಹರಿಸಬೇಕು ಮತ್ತು ಇದಕ್ಕೆ ತಕ್ಕುದಾಗಿ ನಿಮ್ಮ ಆದಾಯವನ್ನು ಹೆಚ್ಚಿಸಲು ಯತ್ನಿಸಿ. ನಿಮ್ಮ ವೃದ್ಧಿ ಉಂಟಾಗಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನಿಮ್ಮ ಗೃಹ ಸಂಬಂಧಿ ಬದುಕಿನಲ್ಲಿ ಒಂದಷ್ಟು ಸವಾಲುಗಳು ಉಂಟಾಗಬಹುದು. ವಾರದ ಆರಂಭವು ಪ್ರವಾಸಕ್ಕೆ ಹೋಗಲು ನಿಮಗೆ ಸಕಾಲ.

ಮಕರ: ಈ ವಾರ ನಿಮಗೆ ಅತ್ಯಂತ ಪ್ರಮುಖವಾದುದು. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಕಠಿಣ ಶ್ರಮ ಪಡುವಿರಿ. ಈ ದಿಸೆಯಲ್ಲಿ ಉತ್ತಮ ಪ್ರಯತ್ನ ಪಡಲಿದ್ದು ಮೆಲ್ಲನೆ ನಿರೀಕ್ಷಿತ ಫಲಿತಾಂಶ ಪಡೆಯಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ತಮ್ಮ ಮೇಲಾಧಿಕಾರಿ ಕಡೆಯಿಂದ ಬೆಂಬಲ ದೊರೆಯಲಿದೆ. ನೀವು ನಿಮ್ಮ ಕೆಲಸದಲ್ಲಿ ಉತ್ತಮ ಪ್ರಗತಿ ಮಾಡಲಿದ್ದೀರಿ. ನೀವು ಅಧಿಕ ನೈತಿಕ ಮಾನದಂಡಗಳಿಗೆ ಹೊಂದಿಕೊಳ್ಳಲಿದ್ದೀರಿ. ಜನರ ಕಲ್ಯಾಣಕ್ಕಾಗಿ ನೀವು ಸಮಯ ಮತ್ತು ಹಣವನ್ನು ಖರ್ಚು ಮಾಡಲಿದ್ದೀರಿ. ಇದೇ ವೇಳೆ ಅನಗತ್ಯ ಖರ್ಚುವೆಚ್ಚಗಳಲ್ಲಿ ಇಳಿತ ಉಂಟಾಗಬಹುದು. ವ್ಯಾಪಾರೋದ್ಯಮಿಗಳ ಆದಾಯದಲ್ಲಿ ವೃದ್ಧಿ ಉಂಟಾಗಲಿದೆ. ಗೃಹಸ್ಥರು ಉತ್ತಮ ಹಾಗೂ ಶಾಂತಿಯುತ ಜೀವನ ನಡೆಸಲಿದ್ದಾರೆ ಹಾಗೂ ತೀರಾ ಅಗತ್ಯವೆನಿಸುವ ಸಂತೋಷವನ್ನು ಪಡೆಯಲಿದ್ದಾರೆ. ಪ್ರೇಮಿಗಳೂ ಈ ಸಮಯವನ್ನು ಆನಂದಿಸಲಿದ್ದಾರೆ. ಅಲ್ಲದೆ ನೀವು ನಿಮ್ಮ ಪ್ರೇಮ ಸಂಗಾತಿಗೆ ಒಳ್ಳೆಯ ಉಡುಗೊರೆಯನ್ನು ನೀಡಲಿದ್ದೀರಿ. ವಾರದ ಎರಡನೇ ಮತ್ತು ಮೂರನೇ ದಿನ ನೀವು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ.

ಕುಂಭ: ಈ ವಾರದಲ್ಲಿ ನೀವು ಅದ್ಭುತವಾಗಿ ಕಾಲ ಕಳೆಯಲಿದ್ದೀರಿ. ವಾರದ ಆರಂಭದಲ್ಲಿ ವಿವಾಹಿತ ಜೋಡಿಗಳು ಸಮಯವನ್ನು ಆನಂದಿಸಲಿದ್ದಾರೆ. ನೀವು ನಿಮ್ಮ ಪ್ರೇಮಿಗಾಗಿ ಸರ್ವಸ್ವವನ್ನೂ ಧಾರೆ ಎರೆಯಲಿದ್ದು ಇದು ನಿಮ್ಮ ಅನುಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ನಿಮ್ಮ ಪ್ರೇಮ ಸಂಗಾತಿಯು ನಿಮ್ಮ ಹೃದಯವನ್ನು ಗೆಲ್ಲಲು ಎಲ್ಲಾ ಪ್ರಯತ್ನ ಮಾಡಲಿದ್ದಾರೆ. ಪ್ರೇಮಿಗಳ ಪಾಲಿಗೆ ಇದು ಒಳ್ಳೆಯ ಸಮಯ. ಆದರೂ ನಿಮ್ಮಲ್ಲಿ ಕೆಲವರ ಪಾಲಿಗೆ ನಿಮ್ಮ ಪ್ರೇಮ ಸಂಗಾತಿಯು ಸಂಬಂಧವನ್ನೇ ಮರೆಯಬಹುದು. ಉದ್ಯೋಗದಲ್ಲಿರುವವರು ಉತ್ತಮ ಸಮಯವನ್ನು ಆನಂದಿಸಲಿದ್ದಾರೆ. ವ್ಯಾಪಾರೋದ್ಯಮಿಗಳ ವಿಚಾರದಲ್ಲಿ ಹೇಳುವುದಾದರೆ, ನೀವು ನಿಮ್ಮ ವೃತ್ತಿಪರ ಹಿತಾಸಕ್ತಿಗಳಿಗೆ ಅಂಟಿಕೊಂಡಿರಬೇಕು ಮತ್ತು ಅನಗತ್ಯ ವಿಚಾರಗಳಲ್ಲಿ ಭಾಗಿಯಾಗಬಾರದು. ವ್ಯಾಪಾರೋದ್ಯಮಿಗಳಿಗೆ ಇದು ಸಾಧಾರಣ ಕಾಲ. ತೆರಿಗೆಯನ್ನು ತಪ್ಪಿಸಬೇಡಿ. ಏಕೆಂದರೆ ಇದು ಅಪಾಯಕಾರಿ ಪರಿಣಾಮವನ್ನುಂಟು ಮಾಡಬಹುದು. ನಿಮ್ಮ ಆರೋಗ್ಯ ಕ್ಷೀಣಿಸಬಹುದು. ವಾರದ ಆರಂಭಿಕ ದಿನಗಳು ಪ್ರಯಾಣಿಸಲು ಅನುಕೂಲಕರ.

ಮೀನ: ಅಕ್ಟೋಬರ್‌ ತಿಂಗಳ ಮೊದಲ ವಾರದಲ್ಲಿ ನೀವು ಅತ್ಯುತ್ತಮ ಫಲವನ್ನು ಪಡೆಯಲಿದ್ದೀರಿ. ವಾರದ ಆರಂಭದಲ್ಲಿ ನೀವು ನಿಮ್ಮ ಇತಿಮಿತಿಗಳನ್ನು ಸರಿಪಡಿಸಲು ಪ್ರಯತ್ನಿಸಲಿದ್ದೀರಿ. ಇದರೊಂದಿಗೆ ನಿಮ್ಮೊಳಗೆಯೇ ನೀವು ಬದಲಾವಣೆಯನ್ನು ಅನುಭವಿಸಲಿದ್ದೀರಿ. ವ್ಯಾಪಾರೋದ್ಯಮಿಗಳು ತಮ್ಮ ಕೆಲಸಗಳಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ನೀವು ಉತ್ತಮ ಲಾಭ ಗಳಿಸಲಿದ್ದೀರಿ. ಅಲ್ಲದೆ ನಿಮ್ಮ ಸುತ್ತಮುತ್ತಲಿನ ಜನರು ನಿಮ್ಮನ್ನು ಮೆಚ್ಚಿಕೊಳ್ಳಲಿದ್ದಾರೆ. ನಿಮ್ಮ ಆತ್ಮವಿಶ್ವಾಸವು ವೃದ್ಧಿಸಲಿದೆ. ಉದ್ಯೋಗದಲ್ಲಿರುವವರು ಸಂಪೂರ್ಣ ಗಮನಹರಿಸಿ ಕೆಲಸ ಮಾಡಲಿದ್ದಾರೆ. ಹೀಗಾಗಿ ಒಳ್ಳೆಯ ಕೆಲಸಗಾರರ ಪಟ್ಟಿಯಲ್ಲಿ ನಿಮಗೂ ಸ್ಥಾನ ದೊರೆಯಲಿದೆ. ನಿಮ್ಮ ಮೇಲಾಧಿಕಾರಿ ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ ಹಾಗೂ ಸಂಪೂರ್ಣವಾಗಿ ನಿಮ್ಮನ್ನು ಬೆಂಬಲಿಸಲಿದ್ದಾರೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ ಹಾಗೂ ಯಾವುದೇ ದೊಡ್ಡ ಸಮಸ್ಯೆಗಳು ಎದುರಾಗುವುದಿಲ್ಲ. ನಿಮ್ಮ ವೃತ್ತಿಪರ ಚಟುವಟಿಕೆಗಳಲ್ಲಿ ನಿಮ್ಮ ಕುಟುಂಬವು ನಿಮ್ಮನ್ನು ಬೆಂಬಲಿಸಲಿದೆ. ಪ್ರೇಮಿಗಳಿಗೆ ಇದು ಸಾಧಾರಣ ಕಾಲ. ವಿವಾಹಿತ ವ್ಯಕ್ತಿಗಳು ಸಹ ಬದುಕನ್ನು ಚೆನ್ನಾಗಿ ಆನಂದಿಸಲಿದ್ದಾರೆ. ವಾರದ ಮಧ್ಯ ಭಾಗವು ಪ್ರಯಾಣಿಸಲು ಸೂಕ್ತ ಸಮಯ. ವಾರಾಂತ್ಯದಲ್ಲಿ ಪ್ರಯಾಣಿಸಬೇಡಿ. ವಿದ್ಯಾರ್ಥಿಗಳಿಗೆ ಇದು ಸಕಾಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.