ಮೇಷ : ನಿಮ್ಮ ಸುತ್ತಲೂ ಇರುವವರು ನಿಮ್ಮನ್ನು ಶ್ಲಾಘಿಸುತ್ತಾರೆ ಮತ್ತು ಸ್ಫೂರ್ತಿ ಹೊಂದುತ್ತಾರೆ. ನಿಮ್ಮ ಬುದ್ಧಿಶಕ್ತಿ ಮತ್ತು ಹೊಂದಿಕೊಳ್ಳುವಿಕೆ ಬಹಳಷ್ಟು ಮಂದಿಗೆ ಪ್ರೇರೇಪಣೆಯ ಅಂಶವಾಗುತ್ತದೆ. ನಿಮ್ಮ ಪ್ರೀತಿಯ ಜೀವನ ಕುರಿತಂತೆ ನೀವು ಆಶ್ಚರ್ಯದಲ್ಲಿರಬಹುದು. ಪ್ರೀತಿಯಲ್ಲಿರುವವರಿಗೆ ಏನೋ ಮಹತ್ತರವಾದುದು ಕಾಯುತ್ತಿದೆ. ಇಂದು ನಿಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತೀರಿ. ನಿಮ್ಮ ಕುಟುಂಬದ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಿ ಮತ್ತು ಜವಾಬ್ದಾರಿಗಳು ಅಥವಾ ಆಚರಣೆಗಳಿಗೆ ಬಂದರೆ ಸಂಪೂರ್ಣವಾಗಿ ಭಾಗವಹಿಸಿ.
ವೃಷಭ : ನೀವು ಇಂದು ಕೂಗಾಡುತ್ತೀರಿ ಮತ್ತು ದೂರುತ್ತೀರಿ, ಆದರೆ ಕೆಲಸವಾಗದೇ ಇರುವುದಕ್ಕೆ ನಿಮ್ಮ ಸಹೋದ್ಯೋಗಿಗಳು ಅಥವಾ ಕಿರಿಯ ಉದ್ಯೋಗಿಗಳು ಕ್ಷಮೆ ಕೇಳುತ್ತಾರೆ. ನೀವು ಇತರರಿಗೆ ನೆರವಾಗುವ ಮೊದಲು ನಿಮ್ಮ ಕೆಲಸ ಪೂರೈಸುವುದನ್ನು ಗಮನಿಸಿ. ನಿಮ್ಮ ಕೋಪವನ್ನು ನಿಮ್ಮ ಪ್ರೀತಿಪಾತ್ರರು ತಣ್ಣಗಾಗಿಸುತ್ತಾರೆ ಎಂದು ತಾರೆಗಳು ಹೇಳುತ್ತಿವೆ.
ಮಿಥುನ : ಒಂಟಿಯಾಗಿರುವವರು, ನೀವು ನಿಮ್ಮ ಕನಸಿನ ವ್ಯಕ್ತಿಯನ್ನು ಭೇಟಿ ಮಾಡುತ್ತೀರಿ ಮತ್ತು ಒಟ್ಟಿಗೆ ಭವಿಷ್ಯವನ್ನು ಯೋಜಿಸುತ್ತೀರಿ. ನಿಮ್ಮ ಜೀವನ ಸಂಗಾತಿಯನ್ನು ಭೇಟಿ ಮಾಡಿದ ಆನಂದ ಮತ್ತು ಉತ್ಸಾಹ ಅನುಭವಿಸುತ್ತೀರಿ ಮತ್ತು ಯಾರೋ ಒಬ್ಬರ ಬಳಿ ನಿಮ್ಮ ಹೃದಯವನ್ನು ತೆರೆಯುತ್ತೀರಿ. ಈ ಎಲ್ಲವೂ ಒಂದೇ ಕಡೆಯದಲ್ಲ. ನಿಮ್ಮ ಪ್ರಿಯತಮೆ ಕೂಡಾ ನಿಮ್ಮ ಮೇಲೆ ಷರತ್ತು ರಹಿತ ಪ್ರೀತಿ ಮತ್ತು ಮಮತೆಯನ್ನು ಹಂಚುತ್ತಾರೆ.
ಕರ್ಕಾಟಕ : ನೀವು ಕಷ್ಟಪಟ್ಟು ದುಡಿದ ಹಣವನ್ನು ಖರ್ಚು ಮಾಡುವಲ್ಲಿ ಅತ್ಯಂತ ವಿವೇಕಯುತರಾಗಿರುತ್ತೀರಿ, ಆದರೂ ಇಂದು ಕೊಂಚ ಜಿಪುಣರಾಗಿರುತ್ತೀರಿ. ಅಲ್ಲದೆ ನೀವು ಹಾಗೆಯೇ ಇರಬೇಕು, ಏಕೆಂದರೆ ನಿಮ್ಮ ಪ್ರೀತಿಪಾತ್ರರು ಹಾಗೂ ಹತ್ತಿರದವರ ಬೇಡಿಕೆಗಳಿಂದ ನಿಮಗೆ ಅನಗತ್ಯ ಹೊರೆಯಾಗುತ್ತದೆ. ನಿಮ್ಮ ಕೆಲಸದ ಸ್ವರೂಪ ಅಥವಾ ವ್ಯಾಪ್ತಿ(ಅಥವಾ ಎರಡೂ)ಯಲ್ಲಿ ಕೆಲ ಬದಲಾವಣೆಗಳು ಆಗುವ ಸಾಧ್ಯತೆ ಹೆಚ್ಚಾಗಿವೆ.
ಸಿಂಹ : ನಿಮಗೆ ಪ್ರತಿಯೊಂದನ್ನೂ ಬೆಳ್ಳಿ ತಟ್ಟೆಯಲ್ಲಿಟ್ಟು ಕೊಡಲಾಗುತ್ತದೆ ಎಂದು ನಿರೀಕ್ಷೆ ಮಾಡಬೇಡಿ. ಅದರಲ್ಲೂ ಇಂದು ನೀವು ಅಂತಹ ನಿರೀಕ್ಷೆಗಳಿಂದ ಹಿಂದಕ್ಕೆ ಸರಿಸಬೇಕು. ಇಂದು, ನೀವು ದೀರ್ಘ ಪ್ರಯತ್ನದ ಸಂಪನ್ಮೂಲಗಳನ್ನು ಆಳವಾಗಿ ಅಗಿಯುವುದು ಸೂಕ್ತ, ಏಕೆಂದರೆ ಕಡಿಮೆ ಉತ್ಪಾದಕತೆಯ ದಿನ ನಿಮಗಾಗಿ ಕಾದಿದೆ.
ಕನ್ಯಾ : ನೀವು ಇಂದು ಪ್ರತ್ಯೇಕವಾಗಿ ಉಳಿಯಲು ಬಯಸುತ್ತೀರಿ. ನೀವು ಹಾಕುವ ಪ್ರಯತ್ನಗಳಿಗೆ ನೀವು ಇತರರಿಂದ ಪ್ರಶಂಸೆ ಪಡೆಯುತ್ತೀರಿ, ಆದರೆ ನೀವು ನಿಮ್ಮ ಪರಿಣಿತಿಯನ್ನು ನಿಮ್ಮ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಬೇಕು. ಇಂದು ಬಜೆಟ್ ಕುರಿತ ಕಠಿಣ ನಿಯಂತ್ರಣ ಅನುಕೂಲಕರವಾಗುತ್ತದೆ.
ತುಲಾ : ನೀವು ಮಾಡಿದ ಪ್ರಯತ್ನಗಳು ಎಂದೂ ವ್ಯರ್ಥವಾಗುವುದಿಲ್ಲ. ಇದು ಇಂದು ನಿಮ್ಮ ಧ್ಯೇಯವಾಕ್ಯವಾಗಿರಲಿ. ಇಂದು ಮುಖ್ಯವಾಗಿ ಸಂದರ್ಶನಗಳಲ್ಲಿ ಅತ್ಯಂತ ಉತ್ಪಾದಕ ದಿನವಾಗಿ ಕಾಣುವುದಿಲ್ಲ. ಬಿಡದೆ ಪ್ರಯತ್ನ ನಡೆಸುತ್ತಿರಿ ನಿಮ್ಮ ಪ್ರಯತ್ನಗಳು ಫಲ ನೀಡುತ್ತವೆ.
ವೃಶ್ಚಿಕ : ಜೀವನ ಎನ್ನುವುದು ರೋಲರ್-ಕೋಸ್ಟರ್ ಆಗಿದ್ದು ನಿಮ್ಮನ್ನು ಏರಿಳಿತಗಳಿಗೆ ಕೊಂಡೊಯ್ಯುತ್ತದೆ. ಇಂದು ಅಂತಹ ಒಂದು ದಿನ. ನೀವು ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಉಳಿವಿನ ತಂತ್ರಗಳನ್ನು ಕಲಿಯಬಹುದು. ನಿಮ್ಮ ತೀವ್ರ ಆಸಕ್ತಿ ಈರ್ಷ್ಯೆಯನ್ನು ಆಹ್ವಾನಿಸಬಹುದು ಆದರೆ ಯಾವುದೂ ನಿಮ್ಮನ್ನು ಬಾಧಿಸಬಾರದು. ನೀವು ಇಂದು ತಪ್ಪಾದ ಕುದುರೆಯ ಮೇಲೆ ಬಾಜಿ ಕಟ್ಟಿದ್ದೀರಿ, ಆದರೆ ಮನುಷ್ಯರು ಮಾತ್ರ ಕೆಲ ತಪ್ಪುಗಳನ್ನು ಮಾಡುತ್ತಾರೆ.
ಧನು : ಹೊಸ ಮತ್ತು ನವೀಕರಿಸಿದ ನೀವು, ಇಂದು ನಿಮ್ಮ ಎಲ್ಲ ಗಮನ ನಿಮ್ಮ ಬಂಧು ಬಾಂಧವರ ಮೇಲಿರುತ್ತದೆ. ಇದರಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಕೊಂಚ ಕಾಲ ಕಳೆಯುವುದೂ ಒಳಗೊಂಡಿದೆ!. ನೀವಿಬ್ಬರೂ ಕೆಲ ಅರ್ಥಪೂರ್ಣ ಸಂವಹನಗಳಲ್ಲಿ ಬಂಧ ಬೆಳೆಸಿಕೊಳ್ಳುತ್ತೀರಿ. ಕುಟುಂಬದ ನಂತರ ಮಿತ್ರರೂ ತಮ್ಮ ಪಾಲು ಪಡೆಯಲು ಬರುತ್ತಾರೆ. ಉತ್ಸಾಹದ ಸಂಜೆ ನಿಮಗಾಗಿ ಕಾದಿದೆ.
ಮಕರ : ಇಂದು ಮನೆಯಲ್ಲಿ ಆನಂದ, ಸಂತೋಷ ಮತ್ತು ಹಬ್ಬಗಳ ದಿನವಾಗಿದೆ. ನೀವು ಮಕ್ಕಳೊಂದಿಗೆ ಎಷ್ಟು ಸಾಧ್ಯವೋ ಅಷ್ಟು ಸಮಯ ಕಳೆಯಲು ಪ್ರಯತ್ನಿಸುತ್ತೀರಿ ಮತ್ತು ಗೃಹ ಸುಧಾರಣೆ ಯೋಜನೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತೀರಿ. ಮನೆಯಲ್ಲಿ ಬಾಕಿ ಇರುವ ಸಮಸ್ಯೆಗಳನ್ನು ಜಾಣ್ಮೆಯಿಂದ ಪರಿಹರಿಸುತ್ತೀರಿ.
ಕುಂಭ : ನೀವು ಇಂದು ನಿಮ್ಮ ವ್ಯವಹಾರಗಳನ್ನು ನಿಭಾಯಿಸುವಾಗ ಅತ್ಯಂತ ಯೋಜಿತ ಮತ್ತು ಸಮತೋಲಿತ ಮತ್ತು ಪ್ರಾಯೋಗಿಕವಾಗಿರುತ್ತೀರಿ. ನೀವು ಪರಿಸ್ಥಿತಿಗೆ ಅನುಗುಣವಾಗಿ ಅತ್ಯುತ್ತಮ ಕಾರ್ಯತಂತ್ರ, ಕ್ರಿಯಾಯೋಜನೆ ರೂಪಿಸುವಲ್ಲಿ ಸಮರ್ಥರಾಗುತ್ತೀರಿ. ಈ ದಿನ ನೀವು ಸ್ಪೆಷಲಿಸ್ಟ್, ನೈಜ ತಜ್ಞನಂತೆ ಕೆಲಸ ಮಾಡುತ್ತೀರಿ ಮತ್ತು ನೀವು ಏನು ಮಾಡಬೇಕೆಂದಿರುವಿರೋ ಅದನ್ನು ಈಡೇರಿಸುವಲ್ಲಿ ವಿಫಲರಾಗುವುದಿಲ್ಲ.
ಮೀನ : ನಿಮಗೆ ತಂಡವೊಂದರ ಭಾಗವಾಗಲು ಮತ್ತು ಎರಡು ತಂಡಗಳ ಸದಸ್ಯರಾಗಿ ಕೆಲಸ ಮಾಡುವುದು ಕಷ್ಟ. ಆದರೆ, ಇಂದು ನಿಮಗೆ ಏನೆನ್ನಿಸುತ್ತದೋ ಅದನ್ನು ಮಾಡಲು ಸಾಧ್ಯವಾಗುತ್ತದೆ. ನೀವು ನಿಮ್ಮ ಪರಿಣಿತಿಯನ್ನು ನಿಮ್ಮ ತಂಡಕ್ಕೆ ಇಂದು ಪ್ರದರ್ಶಿಸಲು ಸಮರ್ಥರಾಗುತ್ತೀರಿ ಮತ್ತು ಅದಕ್ಕೆ ಎಲ್ಲರಿಂದ ಪ್ರಶಂಸೆ ಪಡೆಯುತ್ತೀರಿ. ಮಹಿಳೆಯರು ಇಂದು ಲಾಭ ಮಾಡುತ್ತಾರೆ ಮತ್ತು ಉತ್ತೇಜನದ ಭಾವನೆ ಹೊಂದುತ್ತಾರೆ.