ಮೇಷ: ಇಂದು ನೀವು ನಿಮ್ಮ ಪ್ರೀತಿ ಪಾತ್ರರನ್ನು ಸಂತೋಷಗೊಳಿಸಲು ಪ್ರಯತ್ನಿಸಬಹುದು. ಮತ್ತು ಹೊಸ ರೀತಿಯಲ್ಲಿ ವ್ಯಕ್ತಿಯನ್ನು ಮನವೊಲಿಸಲೂ ಬಯಸಬಹುದು. ನಿಮ್ಮ ಮಿತ್ರರು ಮತ್ತು ಬಂಧುಗಳಿಂದ ನೀವು ಅತ್ಯಂತ ಸಂತೋಷಗೊಳ್ಳದೇ ಇರಬಹುದು. ಆದರೆ ನೀವು ಸಂಜೆ ಪಾರ್ಟಿಗೆ ಹೋಗುವ ಮೂಲಕ ಹೊಸ ಮಿತ್ರರನ್ನು ಮಾಡಿಕೊಳ್ಳುತ್ತೀರಿ.
ವೃಷಭ: ಇಂದು ನಿಮ್ಮ ಭಾವನೆಗಳು ಮತ್ತು ಅಭಿಪ್ರಾಯಗಳು ಉನ್ನತ ಮಟ್ಟದಲ್ಲಿರುತ್ತವೆ. ನಿಮಗೆ ಹತ್ತಿರದಲ್ಲಿರುವವರೊಂದಿಗೆ ಭಾವನಾತ್ಮಕ ಭೇಟಿಯ ದೃಢವಾದ ಸಾಧ್ಯತೆಯಿದೆ. ನೀವು ಈ ಕಾರ್ಯಕ್ರಮ ಅಥವಾ ಸಭೆಯಲ್ಲಿ ಇತರರಿಂದ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ.
ಮಿಥುನ: ನೀವು ನಿಜಕ್ಕೂ ಇಷ್ಟಪಡುವ ಕೆಲಸಗಳನ್ನು ಮಾಡುತ್ತಾ ದಿನವನ್ನು ಕಳೆಯುವ ಮನಸ್ಥಿತಿಯಲ್ಲಿರುತ್ತೀರಿ. ಜನರ ಕಷ್ಟಗಳಲ್ಲಿ ನೆರವಾಗುವುದನ್ನು ಇಷ್ಟಪಡುತ್ತೀರಿ ಮತ್ತು ಉದಾರ ಮನಸ್ಥಿತಿಯಲ್ಲಿರುತ್ತೀರಿ. ನಿಮ್ಮ ಮನಸ್ಸಿನ ಸೇವಾಸಕ್ತಿ ಎತ್ತರಿಸಿದ ಸಾಮಾಜಿಕ ಸ್ಥಾನಮಾನ ಮತ್ತು ಆತ್ಮಗೌರವ ತರುತ್ತದೆ.
ಕರ್ಕಾಟಕ: ನಿಮ್ಮ ಉದ್ಯೋಗ ಪ್ರಮುಖ ಕ್ಷಣ ತಲುಪಲಿದೆ. ನೀವು ವರ್ಗಾವಣೆ, ಬಡ್ತಿ ಅಥವಾ ವೇತನ ಹೆಚ್ಚಳ ನಿರೀಕ್ಷಿಸಬಹುದು. ಇದರೊಂದಿಗೆ ನಿಮ್ಮ ಜವಾಬ್ದಾರಿಗಳೂ ಹೆಚ್ಚಲಿವೆ. ಹೊಸ ಉದ್ಯೋಗದ ಸಾಧ್ಯತೆ ಇದೆ. ನೀವು ಆಕರ್ಷಕ ಉದ್ಯೋಗದ ಅವಕಾಶವನ್ನು ನಿರಾಕರಿಸುತ್ತೀರಿ.
ಸಿಂಹ: ಹಳೆಯ ಸಹೋದ್ಯೋಗಿಗಳೊಂದಿಗೆ ಸಮೀಕರಣಕ್ಕೆ ಮತ್ತು ಹೊಸ ಸಂಪರ್ಕಗಳನ್ನು ಸಾಧಿಸಲು ಇದು ಒಳ್ಳೆಯ ದಿನ. ನಿಮ್ಮ ಬಂಧುಗಳು ನಿಮ್ಮನ್ನು ಭೇಟಿ ಮಾಡಲು ಸಂಭವನೀಯತೆ ಇದೆ. ನಿಮ್ಮ ಮನೆಯಲ್ಲಿ ಆನಂದದಾಯಕ ಒಲವು ಹರಡುತ್ತದೆ. ನೀವು ನಿಮ್ಮ ಅತಿಥಿಗಳಿಗೆ ಅದ್ಭುತ ಕಾರ್ಯಕ್ರಮ ಆಯೋಜಿಸುತ್ತೀರಿ.
ಕನ್ಯಾ: ತರ್ಕ ಹಾಗೂ ಭಾವನೆಗಳು ನಿಮ್ಮ ಬಾಂಧವ್ಯದಲ್ಲಿ ಇಂದು ಪ್ರಭಾವ ಬೀರುತ್ತವೆ. ಭಾವನಾತ್ಮಕವಾಗಿ ನೀವು ಕೊಂಚ ಗೊಂದಲದ ಭಾವನೆ ಅನುಭವಿಸುತ್ತೀರಿ ಮತ್ತು ಇದು ನಿಮ್ಮ ಭಾವನೆಗಳು ಹಾಗೂ ನೀವು ವಾಸ್ತವವಾಗಿ ಏನನ್ನು ನಿರೀಕ್ಷಿಸಿದ್ದರೋ ಅದರ ನಡುವೆ ಓಲಾಡುತ್ತದೆ. ಆದಾಗ್ಯೂ, ನೀವು ಇತರರ ಅಭಿಪ್ರಾಯಗಳ ಮೇಲೆ ಆಧಾರಪಡುವುದಕ್ಕಿಂತ ನಿಮ್ಮ ಆಂತರಿಕ ಧ್ವನಿಯ ಮೇಲೆ ಆಧಾರಪಡುತ್ತೀರಿ.
ತುಲಾ: ನಾಟಕೀಯವಾದ ನೀವು ಪ್ರದರ್ಶನವನ್ನು ಸ್ವಾಧೀನಪಡಿಸಿಕೊಳ್ಳುತ್ತೀರಿ. ನೀವು ನಿಮ್ಮ ಕೆಲಸದಲ್ಲಿ ಬದ್ಧತೆಯಾಗಿರಲಿ, ಅಥವಾ ನಿಮ್ಮ ಕುಟುಂಬಕ್ಕೆ ನಿಷ್ಠೆಯಾಗಿರಲಿ ಕಾರ್ಯಸಾಧನೆ ತೋರುವುದನ್ನು ನಿರೀಕ್ಷಿಸುತ್ತೀರಿ. ನಿಮಗೆ ನೀಡಲಾದ ಎಲ್ಲ ಕೆಲಸಗಳಲ್ಲೂ ಸೂಕ್ತ ನಿರ್ಧಾರ ಕೈಗೊಳ್ಳುವ ಮೂಲಕ ನೀವು ವ್ಯಾಪಾರಕ್ಕೆ ಹಣಕ್ಕಾಗಿ ಓಡುವಂತೆ ಮಾಡುತ್ತೀರಿ.
ವೃಶ್ಚಿಕ: ನಿಮ್ಮ ತಾರೆಗಳು ಇಂದು ಹಣದ ಆಡಂಬರವನ್ನು ಸೂಚಿಸುತ್ತಿವೆ. ಅಲ್ಲದೆ ಈ ಬಾರಿ ಅದನ್ನು ನೀವು ನಿಮ್ಮ ಪ್ರೀತಿಪಾತ್ರರಿಗೆ ಮಾಡುತ್ತೀರಿ. ಹಣ ಮಿತ್ರರು ಮತ್ತು ಕುಟುಂಬಕ್ಕಿಂತ ಹೆಚ್ಚೇ? ಹೊರಗಡೆ ಸುತ್ತಾಟ ಮತ್ತು ಸಂಭ್ರಮಗಳಿಂದ ನೀವು ಅವರನ್ನು ಸಂತೋಷಪಡಿಸುವ ಮೂಲಕ ಅವರ ದಾರಿಯಲ್ಲೂ ಹೋಗಬಹುದು.
ಧನು: ನಿಮ್ಮ ತಾರೆಗಳು ಇಂದು ಪ್ರಬಲವಾಗಿವೆ ಮತ್ತು ನಿಮಗೆ ಸಂತೋಷದ ದಿನವನ್ನು ಯೋಜಿಸಿರಿ. ನೀವು ವೃತ್ತಿಪರರಾಗಿದ್ದೀರಿ ಮತ್ತು ಈ ಪ್ರವೃತ್ತಿಗೆ ಮೆಚ್ಚುಗೆಯನ್ನೂ ಪಡೆಯುತ್ತೀರಿ. ಕೆಲಸದಲ್ಲಿ ನಿಮಗೆ ಎಲ್ಲ ಸಮಸ್ಯೆಗಳನ್ನೂ ದಾಟಿ ಹೋಗುವ ಜಾಣ್ಮೆ ಇದೆ. ನಿಮ್ಮ ಈ ವಿಧಾನವು ಖಂಡಿತಾ ಜನರ ಹೃದಯಗಳನ್ನು ಗೆಲ್ಲುತ್ತದೆ ಮತ್ತು ನಿಮ್ಮ ಮಿತ್ರರ ಪಟ್ಟಿಗೆ ಕೆಲ ಹೆಸರುಗಳನ್ನು ಸೇರಿಸುತ್ತದೆ.
ಮಕರ: ಕೆಲಸದಲ್ಲಿ ನಿಮಗೆ ಮಾನ್ಯತೆ ಮತ್ತು ಪುರಸ್ಕಾರಗಳು ಕಾಯುತ್ತಿವೆ. ಮತ್ತು ಬಹಳಷ್ಟು ಸಂದರ್ಭಗಳಲ್ಲಿ ಆಗುವಂತೆ ಸಹೋದ್ಯೋಗಿಗಳು ನಿಮ್ಮ ಯಶಸ್ಸಿನ ಕುರಿತು ಈರ್ಷ್ಯೆ (ಅಸೂಯೆ) ಪಡುವುದಿಲ್ಲ. ಅವರು ಹೊಸ ಹಾಗೂ ಸವಾಲಿನ ಯೋಜನೆಗಳನ್ನು ಕೈಗೊಳ್ಳಲು ಅತ್ಯಂತ ಅಗತ್ಯವಾದ ಉತ್ತೇಜನ ನೀಡುತ್ತಾರೆ. ಉದ್ಯೋಗ ಬದಲಿಸಲು ಬಯಸಿರುವವರು ಕೊಂಚ ಕಾಯಿರಿ. ಇದು ನಿಮಗೆ ಸರಿಯಾದ ಕಾಲವಲ್ಲ.
ಕುಂಭ: ಇಂದು ನಿಮ್ಮ ದಿನವಲ್ಲ. ನಿಮ್ಮ ಮನೆಯಲ್ಲಿ ಶಾಂತಿಯುತ ವಾತಾವರಣ ಸೃಷ್ಟಿಸಲು ನೀವು ವಿಫಲರಾಗುತ್ತೀರಿ ಮತ್ತು ಈ ಸಮಸ್ಯೆಗೆ ಪೂರವಾಗಿ ನಿಮ್ಮ ಮಕ್ಕಳು ನಿಮಗೆ ನಿರ್ವಹಿಸಲೇ ಕಷ್ಟವಾಗುವಂತೆ ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ. ಕೆಲ ಕೌಟುಂಬಿಕ ವಿವಾದಗಳೂ ಉಂಟಾಗಬಹುದು. ಮತ್ತು ಅಸೂಯೆ ಹೊಂದಿರುವ ನೆರೆಹೊರೆಯವರು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಾರೆ.
ಮೀನ: ನೀವು ಸ್ವಭಾವತಃ ಕಿರಿಕಿರಿ ಅಥವಾ ಅಸೂಯೆ ಉಳ್ಳವರಲ್ಲ. ಆದರೆ, ಇಂದು ಈ ಎರಡರ ಕುರಿತು ಎಚ್ಚರಿಕೆ ವಹಿಸಬೇಕು. ಯಾರೋ ಒಬ್ಬರು ಇಂದು ನಿಮ್ಮ ಘನತೆಗೆ ಧಕ್ಕೆಯುಂಟು ಮಾಡಬಹುದು ಅಥವಾ ನಿಮ್ಮ ಹೆಸರು ಕೆಡಿಸಬಹುದು. ಆದರೆ, ಪ್ರಚೋದನೆಯನ್ನು ಎದುರಿಸುವ ಅತ್ಯುತ್ತಮ ವಿಧಾನವೆಂದರೆ ತಾಳ್ಮೆ ಕಳೆದುಕೊಳ್ಳದೆ ಸಹಜವಾಗಿ ನಿಮ್ಮ ದೈನಂದಿನ ಕಾರ್ಯಗಳನ್ನು ಮುಂದುವರೆಸುವುದು.