ETV Bharat / bharat

ಮಂಗಳವಾರದ ಭವಿಷ್ಯ: ಇಂದು ಈ ರಾಶಿಯವರಿಗೆ ಮಂಗಳಕರ ದಿನ - ಇಂದಿನ ರಾಶಿಫಲ

ಇಂದಿನ ರಾಶಿ ಭವಿಷ್ಯ ಹೀಗಿದೆ.

Etv bharat horoscope today
ಮಂಗಳವಾರದ ಭವಿಷ್ಯ
author img

By

Published : Mar 15, 2022, 5:00 AM IST

ಮೇಷ: ನಿಮ್ಮ ದಿನ ಯಶಸ್ಸಿನ ಬೆಳಕಿನಿಂದ ಹೊಳೆಯುತ್ತಿದೆ. ನೀವು ದೂರದೃಷ್ಟಿ ಉಳ್ಳ ತೀಕ್ಷ್ಣಮತಿಯಾಗಿದ್ದೀರಿ. ನಿಮ್ಮ ಮಹತ್ವಾಕಾಂಕ್ಷೆ ನಿಮಗೆ ಸಾಧ್ಯವಾಗುತ್ತದೆ, ಕೆಲಸದ ಒತ್ತಡ ಕಡಿಮೆ ಇರಲಿ. ನಿಮ್ಮ ಆಶಾವಾದದ ಸಾಮರ್ಥ್ಯಗಳು ನಿಮಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಅವಕಾಶ ನೀಡುತ್ತವೆ. ಸರ್ವಶಕ್ತನ ಮೇಲೆ ನಂಬಿಕೆ ಇರಲಿ.

ವೃಷಭ: ನೀವು ನಿಮ್ಮೊಂದಿಗೆ ಸ್ವಲ್ಪ ಗುಣಮಟ್ಟದ ಸಮಯ ಕಳೆಯಲು ಸೂಕ್ತವಾದ ದಿನ. ಹಿಂದೆಂದೂ ಇಲ್ಲದಂತೆ ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ನವೋತ್ಸಾಹ ತುಂಬಿಕೊಳ್ಳಿರಿ. ನಿಮ್ಮ ದಿನವು ಮಿತ್ರರು ಹಾಗೂ ಕುಟುಂಬದೊಂದಿಗೆ ಆಕರ್ಷಕ ಭೋಜನ ಮತ್ತು ಮನರಂಜನೆಯೊಂದಿಗೆ ಸ್ನೇಹಮಯ ಭೋಜನಕೂಟ ಒಳಗೊಂಡಿರುತ್ತದೆ. ನೀವು ಕಟುವಾದ, ಭರ್ಜರಿಯಾದ ಮತ್ತು ಅತ್ಯಂತ ಸ್ವಾದಿಷ್ಟ ರುಚಿಯನ್ನು ಬಯಸುತ್ತೀರಿ, ನಿಮ್ಮ ಮನಸೋ ಇಚ್ಛೆ ಅದನ್ನು ನೆರವೇರಿಸಿಕೊಳ್ಳಿ.

ಮಿಥುನ: ನೀವು ಆತಂಕ ಮತ್ತು ಅಸೌಖ್ಯ ಅನುಭವಿಸಬಹುದು ಮತ್ತು ನೀವು ಅದನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಇರಬಹುದು. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಮಾತ್ರವೇ ನೀವು ಪ್ರೀತಿಸಿದವರ ಗೋಪ್ಯ ಪ್ರೀತಿಯನ್ನು ಪಡೆಯುತ್ತೀರಿ. ಇಲ್ಲಿಯವರೆಗೂ ಆಗಿದ್ದು ಆಗಿಹೋಯಿತು. ಹಳೆಯದನ್ನು ಹಿಂದಕ್ಕೆ ಬಿಡಿ ಮತ್ತು ವಿಶ್ವಾಸದಿಂದ ಉಜ್ವಲ ನಾಳೆಯತ್ತ ಮುನ್ನಡೆಯಿರಿ.

ಕರ್ಕಾಟಕ: ಕುಟುಂಬ ಸದಸ್ಯರಿಂದ ಬೆಂಬಲದ ಕೊರತೆ ನಿಮ್ಮ ಪ್ರಯತ್ನಗಳನ್ನು ವಿಫಲಗೊಳಿಸುತ್ತದೆ. ಮಕ್ಕಳು ಕೂಡಾ ನಿಮ್ಮನ್ನು ನಿರಾಸೆಗೊಳಿಸುತ್ತಾರೆ. ಕುಟುಂಬದಲ್ಲಿ ನಿರ್ಲಕ್ಷ್ಯ ಅಥವಾ ಭಿನ್ನಾಭಿಪ್ರಾಯ ಉಂಟಾಗಬಹುದು. ನೆರೆಹೊರೆಯವರ ಬಗ್ಗೆ ಎಚ್ಚರದಿಂದಿರಿ. ಪರಿಸ್ಥಿತಿಗಳನ್ನು ಕಿರುನಗೆಯಿಂದ ನಿಭಾಯಿಸಿ.

ಸಿಂಹ: ನಿರ್ಧಾರಗಳನ್ನು ಕೈಗೊಳ್ಳಲು ಇತರರ ಅಭಿಪ್ರಾಯಗಳನ್ನು ನಿರೀಕ್ಷಿಸುತ್ತೀರಿ. ನೀವು ಸಂವಹನದಲ್ಲಿ ಇತರರನ್ನು ತಾಳ್ಮೆಯಿಂದ ಆಲಿಸಬೇಕು. ನಿಮ್ಮ ಆತ್ಮವಿಶ್ವಾಸ ಕುಸಿಯುತ್ತಿದೆ, ಆದ್ದರಿಂದ, ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.

ಕನ್ಯಾ: ನಿಮ್ಮತ್ತ ಎಸೆಯಲಾಗಿರುವ ಹಣಕಾಸಿನ ಸವಾಲುಗಳನ್ನು ನೀವು ಪ್ರೀತಿಸುವುದು ಖಂಡಿತವಾಗಿಯೂ ಸಾಧ್ಯ. ಏಕೆಂದರೆ ಅವು ನಿಮ್ಮ ಯಶಸ್ಸಿಗೆ ನಿಮ್ಮನ್ನು ಮತ್ತಷ್ಟು ಸಾಣೆ ಹಿಡಿಯುತ್ತವೆ. ನೀವು ಸಮಸ್ಯೆ ಪರಿಹಾರದ ಆವಿಷ್ಕಾರಕ ಆಲೋಚನೆಗಳು ಮತ್ತು ಸುಧಾರಿತ ವಿಧಾನಗಳನ್ನು ಕಂಡುಕೊಳ್ಳುತ್ತೀರಿ. ನಿಮ್ಮ ಪ್ರಸ್ತುತದ ವ್ಯಾಪಾರದ ಆಲೋಚನೆಗಳು ಅದ್ಭುತಗಳನ್ನು ಉಂಟು ಮಾಡಲಿವೆ.

ತುಲಾ: ಕ್ಷುಲ್ಲಕ ವಿಷಯಗಳ ಕುರಿತು ನೀವು ತಲೆ ಕೆಡಿಸಿಕೊಳ್ಳುವುದು ಅಥವಾ ಆತಂಕಗೊಳ್ಳುವುದು ಅಗತ್ಯವಿಲ್ಲ. ಒತ್ತಡ ನಿವಾರಿಸಲು ಪ್ರಯತ್ನಿಸುವಾಗ ಧ್ಯಾನ ನಿಮಗೆ ಅತ್ಯಂತ ಪ್ರಯೋಜನಕಾರಿಯಾಗುತ್ತದೆ. ನೀವು ಅತಿಯಾದ ಕೆಲಸದ ಒತ್ತಡಕ್ಕೆ ಸಿಲುಕಬಹುದು. ಆದ್ದರಿಂದ ಕೆಲಸದಲ್ಲಿ ಅಥವಾ ಮತ್ತಾವುದರಲ್ಲೇ ಆಗಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅನುಕೂಲ ಮತ್ತು ಅನನುಕೂಲಗಳನ್ನು ಅಳೆದು ತೂಗಿರಿ.

ವೃಶ್ಚಿಕ: ನೀವು ಅತ್ಯಂತ ಪರಿಪೂರ್ಣವಾಗಿದ್ದೀರಿ. ನಿಮ್ಮ ಕೆಲಸವನ್ನು ತಲುಪುವ ಮೊದಲಿಗರು ನೀವು ಮತ್ತು ಕೆಲಸದಲ್ಲಿ ಸಂಘಟಿತ ಫ್ಲೋ-ಚಾರ್ಟ್ ಅನುಸರಿಸುತ್ತೀರಿ. ಇಂದು ನೀವು ನಿಮ್ಮ ಸುತ್ತಲಿನವರಿಗೆ ಉದಾಹರಣೆಯಾಗುತ್ತೀರಿ.

ಧನು: ನಿಮ್ಮ ಹಡಗು ಪ್ರಚಂಡ ವಿವಾದದ ಅಲೆಗಳಿಗೆ ಸಿಲುಕಿಕೊಳ್ಳುತ್ತದೆ. ನೀವು ಮನಸ್ಸಿಗೆ ಬಂದಂತೆ ನಿಮಗೆ ಸಲಹೆ ನೀಡುವ ಜನರಿಂದ ದೂರ ಉಳಿಯುವುದು ಉತ್ತಮ. ಎಲ್ಲ ಅಂಶಗಳಿಗೂ ನೀವು ತಾಳ್ಮೆಯಿಂದ ಕಿವಿಗೊಟ್ಟರೆ ಚಂಡಮಾರುತ ತಣ್ಣಗಾಗುತ್ತದೆ ಮತ್ತು ಅವರ ಅಭಿಪ್ರಾಯಗಳನ್ನು ಸ್ವೀಕರಿಸಲು ಪ್ರಯತ್ನಿಸಿ.

ಮಕರ: ನೀವು ಹೆಚ್ಚುಕಾಲ ಅತಿಯಾದ ಭಾರದ ಕಾರ್ಯದೊತ್ತಡ ಸಹಿಸಲು ಸಾಧ್ಯವಿಲ್ಲ. ಅತ್ಯಂತ ಜಾಣ್ಮೆಯಿಂದ ನೀವು ನಿಮ್ಮ ಕೆಲಸಗಳನ್ನು ಪೂರೈಸುತ್ತೀರಿ ಮತ್ತು ನಿಧಾನವಾಗಿಯಾದರೂ ಸ್ಥಿರವಾಗಿ ನಿಮ್ಮ ಭಾರವನ್ನು ಭುಜಗಳಿಂದ ಕೆಳಗೆ ಇಳಿಸುತ್ತೀರಿ. ತಪ್ಪುಗಳಾಗುವ ಸಾಧ್ಯತೆಯನ್ನು ಕಡಿಮೆ ಮಾಡಲು ಎಚ್ಚರ ಮತ್ತು ಲಕ್ಷ್ಯ ನೀಡಿರಿ.

ಕುಂಭ: ನೀವು ವಿದೇಶದಿಂದ ಕೆಲ ಶುಭಸುದ್ದಿಗಳನ್ನು ಪಡೆಯುತ್ತೀರಿ. ಈ ದಿನ ನಿಮಗೆ ಧನಾತ್ಮಕವಾಗಿರುತ್ತದೆ ಮತ್ತು 24 ಗಂಟೆಗಳೂ ಹಾಗೆಯೇ ಇರಲಿದೆ. ನೀವು ಆನಂದಿಸುವ ಮನಸ್ಥಿತಿಯಲ್ಲಿದ್ದೀರಿ ಮತ್ತು ನಿಮ್ಮನ್ನು ಸೇರುವ ಪ್ರತಿಯೊಬ್ಬರೂ ನಿಮ್ಮೊಂದಿಗೆ ಆನಂದಿಸುತ್ತಾರೆ.

ಮೀನ: ಗ್ರಹಗಳು ಪರಿಪೂರ್ಣವಾಗಿ ಇರುವುದರಿಂದ ಕೆಲಸ ಮಾಡುವವರಿಗೆ ಈ ದಿನ ಅತ್ಯುತ್ತಮವಾಗಿದೆ. ಕಚೇರಿ/ಅಥವಾ ಕೆಲಸದಲ್ಲಿ ಇಂದು ನೀವು ಎಲ್ಲ ನಿರೀಕ್ಷಿತ ಫಲಿತಾಂಶಗಳನ್ನು ಸಾಧಿಸುತ್ತೀರಿ. ವಿದೇಶಗಳಲ್ಲಿ ಮತ್ತಷ್ಟು ಅಧ್ಯಯನಕ್ಕಾಗಿ ಎದುರು ನೋಡುತ್ತಿರುವವರು ಕೂಡಾ ಪ್ರಗತಿ ಕಾಣುತ್ತಾರೆ ಮತ್ತು ಅವರ ಕನಸುಗಳನ್ನು ಈಡೇರಿಸಿಕೊಳ್ಳಲು ಹತ್ತಿರವಾಗುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.