ಮೇಷ: ಇಂದು ನೀವು ಪರಿಸರ ಸ್ನೇಹಿ ಕೆಲಸಗಳನ್ನು ಮಾಡುತ್ತೀರಿ. ನೀವು ಗಿಡ ನೆಡಬಹುದು. ನೆರೆಹೊರೆಯನ್ನು ಸ್ವಚ್ಛವಾಗಿರಿಸಲು ಬೀದಿಯಲ್ಲಿನ ಕಸ ತೆಗೆಯಬಹುದು. ಪರಿಸರಕ್ಕೆ ಒಳ್ಳೆಯ ಹೆಚ್ಚು ಚಟುವಟಿಕೆಗಳನ್ನು ಮಾಡಲು ಬಯಸಿದ್ದೀರಿ, ಆದ್ದರಿಂದ ಒಂದು ಸಲಕ್ಕೆ ಒಂದು ಕೆಲಸ ಮಾಡಿ.
ವೃಷಭ: ನಿಮ್ಮ ಸಿಹಿಮಾತುಗಳು ಸುಲಭವಾಗಿ ವ್ಯಾಪಾರ ವ್ಯವಹಾರಗಳನ್ನು ಮುಗಿಸುತ್ತವೆ. ದಿನ ಮುಂದುವರಿದಂತೆ ಕಾರ್ಯ ಮತ್ತು ಚಟುವಟಿಕೆ ನಿಧಾನಗೊಳ್ಳುತ್ತವೆ. ಭಾವುಕ ಅಥವಾ ಭಾವನಾತ್ಮಕತೆ ಹೊಂದದೇ ಇರಲು ಪ್ರಯತ್ನಿಸಿ, ಏಕೆಂದರೆ ಅದು ಸಂಘರ್ಷಗಳಿಗೆ ಎಡೆ ಮಾಡಿಕೊಟ್ಟು ಮುಂದಿನ ದಿನಗಳಲ್ಲಿ ಸುಲಭವಾಗಿ ಮರೆಯದಂತೆ ಮಾಡುತ್ತದೆ.
ಮಿಥುನ: ನೀವು ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳ ಕುರಿತು ಆಲೋಚಿಸುತ್ತೀರಿ ಮತ್ತು ಈ ವಿಷಯಗಳನ್ನು ಕುಟುಂಬದ ಸದಸ್ಯರೊಂದಿಗೆ ಚರ್ಚಿಸುತ್ತೀರಿ ಹಾಗೂ ನಿಮ್ಮ ಅಭಿಪ್ರಾಯ ಅವರಿಗೆ ಗೊತ್ತಾಗುವಂತೆ ಮಾಡುತ್ತೀರಿ. ಇದಲ್ಲದೆ ನೀವು ನಿಮಗೆ ಹತ್ತಿರವಾದ ಕಾನೂನು, ಶಿಕ್ಷಣ, ಸಾಮಾಜಿಕ ಹೊಣೆಗಾರಿಕೆಗಳು ಮತ್ತು ಸಂಸ್ಕೃತಿಯ ಕುರಿತೂ ಚರ್ಚೆ ಮಾಡುತ್ತೀರಿ.
ಕರ್ಕಾಟಕ: ನೀವು ಬದ್ಧತೆಯಿಂದ ಕೆಲಸ ಮಾಡಿದರೂ ನೀವು ತಿರಸ್ಕಾರಕ್ಕೆ ಒಳಗಾಗುತ್ತೀರಿ. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಬದ್ಧತೆಯನ್ನು ಪೂರ್ಣ ಪ್ರಶಂಸೆ ಮಾಡುವುದಿಲ್ಲ. ಅದನ್ನು ಹೃದಯಕ್ಕೆ ತೆಗೆದುಕೊಳ್ಳಬೇಡಿ ಮತ್ತು ದುಃಖಿತರಾಗಬೇಡಿ. ಕೊನೆಯಲ್ಲಿ ನೀವು ನಿಮ್ಮ ದೃಢತೆಯಿಂದ ಮತ್ತು ದಿಟ್ಟತೆಯಿದ ಗೆಲ್ಲುತ್ತೀರಿ. ಸಂಜೆಯ ವೇಳೆಗೆ ನಿಮಗೆ ಆತಂಕದ ಕ್ಷಣಗಳ ಸಾಧ್ಯತೆ ಇದೆ.
ಸಿಂಹ: ವ್ಯಾಪಾರಿಗಳು ಮತ್ತು ಉದ್ಯಮದಾರರು ಇಂದು ಸ್ಪರ್ಧೆ ಎದುರಿಸುತ್ತಾರೆ. ಹಣಕಾಸಿನ ನಷ್ಟಗಳು ಸಾಧ್ಯ. ಹೂಡಿಕೆಗಳು ಮತ್ತು ವ್ಯವಹಾರಕ್ಕೆ ಇದು ಒಳ್ಳೆಯ ದಿನವಲ್ಲ. ಜನರೊಂದಿಗೆ ವಾಗ್ವಾದ ತಪ್ಪಿಸಿ. ಇಂದು ನಿಮ್ಮ ಎಲ್ಲ ವಹಿವಾಟುಗಳಲ್ಲೂ ಎಚ್ಚರಿಕೆ ವಹಿಸಿ.
ಕನ್ಯಾ: ಇಂದು ನಿಮಗೆ ತಿರುವಿನ ದಿನವಾಗಿದೆ. ನೀವು ಹಣ ಪಡೆಯುವ ಅವಕಾಶಗಳನ್ನು ಅನ್ವೇಷಿಸುತ್ತೀರಿ ಇದರಿಂದ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಬಾಂಧವ್ಯಗಳಿಗೆ ಸಂಬಂಧಿಸಿದ ವಿಷಯಗಳು ಇಂದು ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಮೊದಲಲ್ಲಿವೆ. ನೀವು ಆಧ್ಯಾತ್ಮಿಕತೆಯತ್ತ ವಾಲಿದ್ದೀರಿ ಮತ್ತು ನೀವು ಧ್ಯಾನ ಮತ್ತು ಯೋಗವನ್ನೂ ಪ್ರಯತ್ನಿಸಬಹುದು.
ತುಲಾ: ನೀವು ಇಂದು ವಿಭಿನ್ನ ವ್ಯಕ್ತಿಯಾಗಿದ್ದೀರಿ, ಸಂಪೂರ್ಣ ಹುರುಪು ಮತ್ತು ಉತ್ಸಾಹ. ನೀವು ನಿಮ್ಮ ವೈಯಕ್ತಿಕ ಜೀವನದಲ್ಲಿ ನಿಮ್ಮ ಸೃಜನಶೀಲ ಕೌಶಲ್ಯಗಳನ್ನು ಪ್ರದರ್ಶಿಸಲು ಶಕ್ತರಾಗುತ್ತೀರಿ, ಅದೇ ಸಮಯಕ್ಕೆ ನೀವು ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಮುನ್ನಡೆದು ಪ್ರತಿಷ್ಠೆಯನ್ನೂ ಸಂಪಾದಿಸುತ್ತೀರಿ. ನೀವು ವಿದೇಶದಲ್ಲಿ ಉನ್ನತ ಶಿಕ್ಷಣ ಕುರಿತು ನಿರ್ಧರಿಸಬೇಕಾಗುತ್ತದೆ.
ವೃಶ್ಚಿಕ: ಇದು ನಿಮ್ಮ ಎಲ್ಲ ಶಕ್ತಿಗಳೂ ಪ್ರೀತಿಯ ವಸ್ತುವಿನತ್ತ ತಿರುಗಿವೆ. ಸಂಶೋಧನೆ ಆಧರಿತ ಕೆಲಸ ಒಂದು ಆಯ್ಕೆಯೂ ಆಗಿದೆ. ನೀವು ಹಳೆಯ ಒಳ್ಳೆಯ ಸಮಯದ ಬಗ್ಗೆ ಮಾತನಾಡಲು ಮತ್ತು ಮಹತ್ತರ ಸಮಯ ಕಳೆಯಲು ವಿಶೇಷ ವ್ಯಕ್ತಿಯನ್ನು ಕಂಡುಕೊಳ್ಳುತ್ತೀರಿ.
ಧನು: ಹಣ ಇಂದು ಸುಲಭವಾಗಿ ಕೈಜಾರಿ ಹೋಗುತ್ತದೆ. ಅನಗತ್ಯ ವೆಚ್ಚ ನಿವಾರಿಸಲು ಯತ್ನಿಸಿ. ಇಡೀ ದಿನ ಹಣ ನಿರ್ವಹಣೆಗೆ ಹೋಗುತ್ತದೆ, ಸಂಜೆ ಅದರೊಂದಿಗೆ ಸಾಕಷ್ಟು ಸಕಾರಾತ್ಮಕ ಶಕ್ತಿ ತರುತ್ತದೆ. ನೀವು ಕುಳಿತು ನಿರಾಳರಾಗಲು ಬಯಸುತ್ತೀರಿ.
ಮಕರ: ಕಠಿಣ ಪರಿಸ್ಥಿತಿಯಲ್ಲಿ ಮಾನಸಿಕ ಸಮತೋಲನ ಕಳೆದುಕೊಳ್ಳುವುದು ಸುಲಭ. ಆದರೆ ನೀವು ನಿಮ್ಮ ತಾಳ್ಮೆಯನ್ನು ಉಳಿಸಿಕೊಳ್ಳುವುದು ನಿಮ್ಮ ಗುರಿ ತಲುಪಲು ನೆರವಾಗುತ್ತದೆ. ಕೆಲಸದಲ್ಲಿ ಯಾರೊಂದಿಗೂ ವಾಗ್ಯುದ್ಧ ಮಾಡಬೇಡಿ, ಅದು ನಿಮ್ಮನ್ನು ಗಂಭೀರವಾಗಿ ಹಾನಿಯುಂಟು ಮಾಡುತ್ತದೆ. ವೈಯಕ್ತಿಕವಾಗಿ, ನೀವು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿರುತ್ತೀರಿ ಮತ್ತು ಅವರು ವಿಶೇಷ ವ್ಯಕ್ತಿ ಎಂದು ಭಾವಿಸುವಂತೆ ಮಾಡುತ್ತೀರಿ.
ಕುಂಭ: ನೀವು ಭವಿಷ್ಯದ ಯೋಜನೆಗಳಿಂದ ನಿರ್ಬಂಧಕ್ಕೆ ಒಳಪಟ್ಟಿದ್ದೀರಿ. ಯೋಜನೆಗಳು ಸರಿ, ಆದರೆ ನೀವು ನಿಮ್ಮ ಕನಸುಗಳನ್ನು ನನಸಾಗಿಸುವ ಬ್ರಹ್ಮಾಂಡದ ಶಕ್ತಿಯನ್ನು ಪಡೆಯಲು ಪ್ರಸ್ತುತದಲ್ಲಿ ಜೀವಿಸಬೇಕು. ಕೆಲಸದಲ್ಲಿ ನಿಮ್ಮ ಉದಾರ ಸ್ಫೂರ್ತಿ ನೀವು ಈಗಾಗಲೇ ಪಡೆದಿರುವ ಸದಾಶಯಕ್ಕೆ ಸೇರ್ಪಡೆಯಾಗುತ್ತದೆ.
ಮೀನ: ನೀವು ಹೆಚ್ಚು ಹಣದ ಬೆನ್ನು ಹತ್ತಿದ ವ್ಯಕ್ತಿಯಲ್ಲ. ಭವಿಷ್ಯಕ್ಕೆ ನಿಮ್ಮ ಹಣ ಯೋಜಿಸುವುದು ನಿಜಕ್ಕೂ ಸುಲಭವಲ್ಲ. ಪ್ರತಿದಿನವನ್ನೂ ಅದು ಬಂದಂತೆ ತೆಗೆದುಕೊಳ್ಳುತ್ತೀರಿ. ಆದರೆ, ಇಂದು ನಿಮಗೆ ಒಂದು ಬಗೆಯ ಸಾಕ್ಷಾತ್ಕಾರವಾಗುತ್ತದೆ ಮತ್ತು ಜೀವನ ಕುರಿತು ಹೆಚ್ಚು ಗಂಭೀರವಾಗುತ್ತೀರಿ. ಅಂತಿಮವಾಗಿ ನೀವು ನಿಮ್ಮ ಹಣಕಾಸಿನ ಯೋಜನೆಯ ಮೌಲ್ಯ ಕಂಡುಕೊಳ್ಳುತ್ತೀರಿ. ಅದನ್ನು ಅಪಮೌಲ್ಯ ಮಾಡದಿರಿ.