ಮೇಷ: ಇಂದು ಯಾವುದೇ ದಿನದಂತೆ ಒಪ್ಪಬಲ್ಲ ದಿನವಾಗಿದೆ. ನೀವು ನಿಮ್ಮಲ್ಲಿ ಏನಿದೆಯೋ ಅದರಿಂದ ಸಂತೃಪ್ತರಾಗುತ್ತೀರಿ. ಅಲ್ಲದೇ, ನೀವು ಏನು ಬಯಸುತ್ತೀರಿ ಎಂದು ಯೋಜಿಸಿದ್ದೀರಿ ಮತ್ತು ಅದರತ್ತ ಹೊರಳುತ್ತೀರಿ. ಪ್ರಣಯದ ಜೊತೆ ಆಸಕ್ತಿದಾಯಕವಾಗಬಹುದು ಅಥವಾ ಅದು ವಿವಾದಕ್ಕೆ ಎಡೆ ಮಾಡಿಕೊಡಬಹುದು.
ವೃಷಭ: ನಿಮ್ಮ ಕಾರ್ಯದೊತ್ತಡದಿಂದ ಕೊಂಚ ಬಿಡುವು ಪಡೆದು ಕೊಂಚ ವಿನೋದ ಮತ್ತು ವಿಶ್ರಾಂತಿ ಪಡೆಯುವ ದಿನ. ಆದ್ದರಿಂದ ನಿಮ್ಮ ಮಿತ್ರರು ಹಾಗೂ ಕುಟುಂಬ ಸದಸ್ಯರನ್ನು ವಿನೋದ ತುಂಬಿದ ಸಂಜೆಗೆ ಮತ್ತು ನಂತರ ಡಿನ್ನರ್ ಹಾಗೂ ತಡರಾತ್ರಿಯ ಚಲನ ಚಿತ್ರಕ್ಕೆ ಕರೆದೊಯ್ಯುತ್ತೀರಿ. ಬಿಸಿ, ಮಸಾಲೆ ಮತ್ತು ಸ್ವಾದಿಷ್ಟ ತಿನಿಸು ತಿನ್ನುವ ಬಯಕೆ ನಿಮಗೆ ಒಳ್ಳೆಯದನ್ನೇ ತರುತ್ತದೆ. ಆದ್ದರಿಂದ ಮುನ್ನುಗ್ಗಿರಿ ಆನಂದಿಸಿರಿ.
ಮಿಥುನ: ನೀವು ಇಂದು ಅತ್ಯಂತ ಒತ್ತಡ ಹಾಗೂ ಬೇಡಿಕೆಯ ದಿನವನ್ನು ಇಂದು ಎದುರಿಸುತ್ತೀರಿ. ನೀವು ಇಡೀ ದಿನವನ್ನು ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಒಂದು ದಾರಿಗೆ ತರುವುದು ಹೇಗೆಂದು ಆಲೋಚಿಸುತ್ತೀರುತ್ತೀರಿ. ಧ್ಯಾನದ ತಂತ್ರಗಳು ನಿಮ್ಮ ಮನಸ್ಸನ್ನು ಶಾಂತವಾಗಿರಿಸಲು ನೆರವಾಗುತ್ತವೆ.
ಕರ್ಕಾಟಕ: ಭಾವುಕರಾಗುವುದು ನಿಮ್ಮ ಯಶಸ್ಸಿನ ದಾರಿಯಲ್ಲಿ ಅಡ್ಡಿಯಾಗುತ್ತದೆ. ಆದ್ದರಿಂದ ಅತಿಯಾದ ಭಾವನಾತ್ಮಕತೆಯನ್ನು ಬಿಟ್ಟುಬಿಡಿ. ಇದು ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿ. ಮಾತಿನ ಬಲ ಮತ್ತು ಸೌಜನ್ಯಪೂರ್ಣ ನಡವಳಿಕೆಯಿಂದ ನೀವು ಜನರನ್ನು ಗೆಲ್ಲುತ್ತೀರಿ.
ಸಿಂಹ: ನೀವು ಅಸಾಧಾರಣ ಆತ್ಮವಿಶ್ವಾಸದಿಂದ ತುಂಬಿರುತ್ತೀರಿ ಮತ್ತು ಅಪಾರ ರಿಸ್ಕ್ಗಳನ್ನು ತೆಗೆದುಕೊಳ್ಳಲು ಸಮರ್ಥರಾಗುತ್ತೀರಿ. ಕ್ರೀಡಾಪಟುಗಳು ತಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಕಾಣಲು ಶಕ್ತರಾಗುತ್ತಾರೆ. ನಿಮ್ಮ ದಾರಿಯಲ್ಲಿ ಎದುರಾಗುವ ಯಾವುದೇ ಅಡೆತಡೆಗಳನ್ನು ನಿವಾರಿಸಲು ನಿಮ್ಮ ಇಡೀ ಶಕ್ತಿ ಬಳಸಿ ಸಫಲರಾಗುತ್ತೀರಿ. ಇದು ನಿಮಗೆ ಒಳ್ಳೆಯ ದಿನವಾಗಿದೆ, ವದಂತಿಗಳನ್ನು ನಿಯಂತ್ರಿಸಿರಿ.
ಕನ್ಯಾ: ಇಂದು ನೀವು ಅತ್ಯಂತ ಉತ್ಸಾಹ ಮತ್ತು ಶಕ್ತಿಯುತವಾಗಿದ್ದೀರಿ. ನಿಮ್ಮ ದಕ್ಷತೆ ಮತ್ತು ಬುದ್ಧಿಮತ್ತೆ ನಿಮ್ಮನ್ನು ಶ್ರೇಷ್ಠ ಕಲಾವಿದನಾಗಿ ಪ್ರತ್ಯೇಕವಾಗಿ ನಿಲ್ಲಿಸುತ್ತದೆ. ನಿಮ್ಮ ಮಾತುಗಳನ್ನು ಕಾರ್ಯರೂಪಕ್ಕೆ ತಂದರೆ ಸೃಜನಶೀಲತೆ ಅಪಾರವಾಗಿ ಹರಿಯುತ್ತದೆ. ನೀವು ಹಾಡಿರಿ ಅಥವಾ ಕುಣಿಯಿರಿ ಅದು ನಿಖರ ಮತ್ತು ಕರಾರುವಾಕ್ಕಾಗಿರಬೇಕು. ಪ್ರದರ್ಶನ ಕಲೆ ಅಥವಾ ಸೃಜನಶೀಲ ಬರವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತೀರಿ.
ತುಲಾ: ನಿಮ್ಮಲ್ಲಿರುವ ಒಳಗಿನ ಕಲಾವಿದ ಇಂದು ಮೇಲೆ ಬರುತ್ತಾನೆ ಮತ್ತು ನೀವು ನಿಮ್ಮ ಕಲ್ಪಾಶಕ್ತಿಯನ್ನೂ ಪ್ರದರ್ಶಿಸುತ್ತೀರಿ. ನೀವು ನಿಮ್ಮ ಆಸಕ್ತಿಯ ವಿಷಯಗಳತ್ತ ಗಮನ ನೀಡಲು ಸಾಧ್ಯವಾಗುತ್ತದೆ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಕೊಂಡವರು ಮತ್ತಷ್ಟು ಮುಂದೆ ಸಾಗುತ್ತಾರೆ. ನೀವು ಇಂದು ಅನುಕೂಲಕರ ಕಾನೂನು ವ್ಯವಹಾರಗಳನ್ನು ಸಹಿ ಹಾಕುವ ಸಾಧ್ಯತೆ ಇದೆ. ಈ ದಿನ ನಿಮಗೆ ಅತ್ಯಂತ ಉತ್ತಮ ಮತ್ತು ಯಶಸ್ವಿ ದಿನವಾಗಿರುತ್ತದೆ.
ವೃಶ್ಚಿಕ: ನೀವು ಇಂದು ಆಕಾಶಕ್ಕೆ ಏಣಿ ಹಾಕುವ ಮನಸ್ಥಿತಿಯಲ್ಲಿರುತ್ತೀರಿ. ನೀವು ಹಲವು ಆಲೋಚನೆಗಳು ಮತ್ತು ಹಳೆಯ ನೆನಪುಗಳ ಸುಳಿಯಲ್ಲಿ ಸಿಲುಕುತ್ತೀರಿ. ಆದರೆ, ಬಹಳ ಬೇಗನೆ ನೀವು ಒಮ್ಮೆ ಕಳೆದು ಹೋದ ಸಮಯ ನಂತರ ಮತ್ತೆ ಬಾರದು ಎಂದು ತಿಳಿಯುತ್ತೀರಿ. ಆದ್ದರಿಂದ ನೀವು ಮನಸ್ಸು ಬದಲಿಸಿ ನಿಮ್ಮ ಜೀವನಕ್ಕೆ ಇಂದಿನಿಂದಲೇ ಹೊಸ ಅಧ್ಯಾಯದ ಪ್ರಾರಂಭ ಮಾಡುತ್ತೀರಿ.
ಧನು: ಇದನ್ನು ಒಂದು ಸಣ್ಣ ಸಲಹೆ ಎಂದು ಪರಿಗಣಿಸಿ. ಅತ್ಯಂತ ಸಂಕಷ್ಟದ ಸಮಯದಲ್ಲೂ ಭರವಸೆಯ ಬೆಳಕು ಇದ್ದೇ ಇರುತ್ತದೆ. ಈ ದಿನ ನಿಮಗೆ ಸಾಕಷ್ಟು ಏರಿಳಿತಗಳನ್ನು ಹೊಂದಿದೆ. ಆದರೆ, ನೀವು ಪ್ರಚಂಡ ಅಲೆಗಳ ನಡುವೆ ದೋಣಿ ನಡೆಸುತ್ತಿದ್ದೀರಿ ಮತ್ತು ಎಲ್ಲ ಸಮಸ್ಯೆಗಳ ಅಲೆಗಳನ್ನೂ ದಾಟಿ ದಡ ಸೇರುತ್ತೀರಿ. ನಿಮ್ಮ ಪ್ರೀತಿಪಾತ್ರರು ನೀಡುವ ಸಲಹೆಯನ್ನು ಸ್ವೀಕರಿಸಿ.
ಮಕರ: ನಿಮ್ಮ ಪ್ರಿಯತಮೆ ಇಂದು ಹಲವು ಆಶ್ಚರ್ಯಗಳನ್ನು ಎದುರಿಸುತ್ತಾರೆ. ನೀವು ಅತ್ಯಂತ ಪ್ರಣಯದ ಮನಸ್ಥಿತಿಯಲ್ಲಿದ್ದು, ನಿಮ್ಮ ಪ್ರಿಯತಮೆ ನಿಮಗೆ ಹೇಳುವ ಪ್ರತಿಯೊಂದು ಬಯಕೆಯನ್ನೂ ಈಡೇರಿಸುತ್ತೀರಿ. ನೀವಿಬ್ಬರೂ ಶಾಪಿಂಗ್ ನಡೆಸಿ ಆನಂದಿಸುತ್ತೀರಿ. ಅತಿಯಾದ ಖರ್ಚುಗಳು ನಿಮ್ಮನ್ನು ಇಂದು ಉತ್ಸಾಹದಲ್ಲಿರಿಸುತ್ತವೆ. ನಿಮ್ಮ ಪ್ರಿಯತಮೆಯ ಸಂತೋಷ ನಿಮಗೆ ಬೇಕಾಗಿದ್ದು, ಅದನ್ನು ನೀವು ಸಾಧಿಸುತ್ತೀರಿ. ಆದರೆ, ದಿನದ ಅಂತ್ಯಕ್ಕೆ, ನಿಮ್ಮ ಜೇಬು ಖಾಲಿಯಾಗಿದ್ದಕ್ಕೆ ವಿಷಾದಪಡುತ್ತೀರಿ.
ಕುಂಭ: ಇಂದು ನಿಮಗೆ ಪ್ರವಾಸದ ಸಾಧ್ಯತೆಗಳಿವೆ. ನೀವು ಒಂಟಿಯಾಗಿ ಪ್ರಯಾಣ ಮಾಡುವುದು ಸೂಕ್ತ. ಏಕೆಂದರೆ ನಿಮ್ಮೊಂದಿಗೆ ವಿಭಿನ್ನ ಅಭಿರುಚಿಯ ವ್ಯಕ್ತಿಗಳನ್ನು ಕರೆದೊಯ್ದರೆ, ಅವರ ಆದ್ಯತೆಗಳು ನಿಮ್ಮ ಮನಸ್ಸು ಹಾಳು ಮಾಡಿ ಪ್ರವಾಸ ಹಾಳು ಮಾಡುತ್ತವೆ. ಆದಾಗ್ಯೂ, ಒಮ್ಮೆ ಅಂತಹ ಪರಿಸ್ಥಿತಿಗೆ ಬಂದರೆ ನೀವು ನಿಮ್ಮನ್ನು ಹೊಂದಿಕೊಳ್ಳಲು ಪ್ರಯತ್ನಿಸುತ್ತೀರಿ ಮತ್ತು ಅದರಲ್ಲಿಯೇ ಆನಂದವನ್ನೂ ಅನುಭವಿಸುತ್ತೀರಿ. ನಿಮ್ಮ ದೊಡ್ಡ ಅನುಕೂಲವೆಂದರೆ ಕೊರತೆಯನ್ನು ಸಾಮರ್ಥ್ಯವಾಗಿ ಪರಿವರ್ತಿಸುವುದು.
ಮೀನ: ಅಜಾಗರೂಕತೆಯ ಪ್ರವೃತ್ತಿ ನಿಮ್ಮ ಕುಸಿತಕ್ಕೆ ಪ್ರಮುಖ ಕಾರಣ. ನಿಮ್ಮ ಕೆಲಸದ ಸ್ಥಳದಲ್ಲಿ ಇಂದು ಜವಾಬ್ದಾರಿಯುತ ವರ್ತನೆ ಮತ್ತು ಕಾರ್ಯಗಳನ್ನು ಮಾಡಿರಿ. ಜಾಗರೂಕತೆ ಹಾಗೂ ಗಮನ ಕೇಂದ್ರೀಕೃತವಾಗಿರಲಿ. ಮತ್ತು ನೀವು ಯಾವುದೇ ತೊಂದರೆಗಳನ್ನು ನಿವಾರಿಸಲು ಶಕ್ತರಾಗುತ್ತೀರಿ. ಇಂದು ವಾಸ್ತವಗೊಳ್ಳುವ ದಿನ ಮತ್ತು ಬಹಳ ದೀರ್ಘಕಾಲದಿಂದ ಶ್ರಮಿಸುತ್ತಿರುವ ಯೋಜನೆಗಳು ಮತ್ತಿತರೆ ಸಂಗತಿಗಳು ಪೂರ್ಣಗೊಳ್ಳಲು ಹತ್ತಿರವಾಗುತ್ತವೆ ಮತ್ತು ಫಲ ನೀಡಲು ಪ್ರಾರಂಭಿಸುತ್ತವೆ.