ETV Bharat / bharat

ಭವಿಷ್ಯದ ಕ್ರೀಡಾಳುಗಳಿಗೆ ಸ್ಫೂರ್ತಿ ಕಾಮನ್‌ವೆಲ್ತ್‌ ಗೇಮ್ಸ್‌ ಪದಕ ವಿಜೇತೆ ಪಿಂಕಿ ಸಿಂಗ್ ಸಾಧನೆ: ಸಂದರ್ಶನ

ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರ ಕೊಡಮಾಡುವ ಪ್ರತಿಷ್ಟಿತ ಗೌರವವೇ 'ಅರ್ಜುನ ಪ್ರಶಸ್ತಿ'. ಈ ಪ್ರಶಸ್ತಿಗೆ ಆಯ್ಕೆಯಾದ ಆಟಗಾರ್ತಿಯೊಬ್ಬರ ಸಾಧನೆಯ ಪರಿಚಯ ಇಲ್ಲಿದೆ.

Pinky Singh
ಪಿಂಕಿ ಸಿಂಗ್​
author img

By ETV Bharat Karnataka Team

Published : Dec 25, 2023, 3:07 PM IST

ನವದೆಹಲಿ: ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪದಕ ಗೆದ್ದ ಭಾರತೀಯ ಆಟಗಾರರಿಗೆ ಕೇಂದ್ರ ಸರ್ಕಾರ ಡಿಸೆಂಬರ್ 20ರಂದು 'ಅರ್ಜುನ ಪ್ರಶಸ್ತಿ' ಪ್ರಕಟಿಸಿದೆ. ಆಟಗಾರರಾದ ನಸ್ರೀನ್ (ಖೋ-ಖೋ), ಪಿಂಕಿ (ಲಾನ್ ಬಾಲ್ಸ್) ಮತ್ತು ಪವನ್ ಸೆಹ್ರಾವತ್ (ಕಬಡ್ಡಿ) ಅವರಿಗೆ ಅರ್ಜುನ ಪ್ರಶಸ್ತಿ ಲಭಿಸಿದೆ.

'ಈಟಿವಿ ಭಾರತ್' ಪ್ರತಿನಿಧಿ ಲಾನ್ ಬೌಲ್ಸ್ ಆಟಗಾರ್ತಿ ಪಿಂಕಿ ಅವರೊಂದಿಗೆ ವಿಶೇಷ ಸಂವಾದ ನಡೆಸಿದ್ದಾರೆ. ಈ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರಶ್ನೆ: ಲಾನ್ ಬೌಲ್‌ನಲ್ಲಿ ನಿಮಗೆ ಹೇಗೆ ಒಲವು ಮೂಡಿತು?

ಉತ್ತರ: ನಾನು 2007ರಿಂದ ಈ ಆಟ ಆಡುತ್ತಿದ್ದೇನೆ. ನನ್ನನ್ನು ಈ ಕ್ರೀಡೆಗೆ ಕರೆತಂದವರು ಆರ್.ಕೆ.ಪುರಂನ ಡಿಪಿಎಸ್ ಶಾಲೆಯ ಮಾಜಿ ಉಪಪ್ರಾಂಶುಪಾಲ ಡಾ.ಡಿ.ಆರ್.ಸೈನಿ. 2009ರಲ್ಲಿ ಮೊದಲ ಅಂತರರಾಷ್ಟ್ರೀಯ ಪಂದ್ಯಾವಳಿ ಆಡಿದೆ. ಇದಾದ ನಂತರ ನಡೆದ ಎಲ್ಲಾ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ಗೆದ್ದಿದ್ದೇನೆ. 2022ರಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಮ್ಮ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ. ಇದಲ್ಲದೆ, ಎಲ್ಲಾ ರಾಷ್ಟ್ರೀಯ ಮಟ್ಟದ ಲಾನ್ ಬೌಲ್ ಸ್ಪರ್ಧೆಗಳಲ್ಲೂ ಚಿನ್ನ ಗೆದ್ದಿದ್ದೇನೆ.

ಪ್ರಶ್ನೆ: ಲಾನ್ ಬಾಲ್‌ ಎಂಬುದು ಯಾವ ರೀತಿಯ ಆಟ, ಇದನ್ನು ಹೇಗೆ ಆಡಲಾಗುತ್ತದೆ?

ಉತ್ತರ: ಇದು ಸಿಂಗಲ್​, ಡಬಲ್, ಮೂರು ಮತ್ತು ನಾಲ್ಕು ಆಟಗಾರರು ಆಡುವ ಕ್ರೀಡೆ. ಆಟದ ಅವಧಿ 2 ಗಂಟೆ 15 ನಿಮಿಷಗಳು. ಇದರಲ್ಲಿ, ಒಬ್ಬ ಆಟಗಾರನಿದ್ದರೆ, ಆತ ಎರಡೂ ಬದಿಗಳಲ್ಲಿ ತಲಾ ನಾಲ್ಕು ಚೆಂಡುಗಳನ್ನು ಹೊಂದಿರುತ್ತಾನೆ.

ಪ್ರಶ್ನೆ: ನೀವು ಯಾವ ವಿಭಾಗದಲ್ಲಿ ಆಡುತ್ತೀರಿ?, ತಂಡದೊಂದಿಗೆ ಆಡುತ್ತೀರಾ ಅಥವಾ ಸಿಂಗಲ್ಸ್ ಆಡುತ್ತೀರಾ?

ಉತ್ತರ: ನಾನು ಹಿರಿಯರ ವಿಭಾಗದಲ್ಲಿ ಮೂರು/ನಾಲ್ಕು ಆಟಗಾರರ ತಂಡದಲ್ಲಿ ಆಡುತ್ತೇನೆ.

ಪ್ರಶ್ನೆ: ಸರ್ಕಾರ ನಿಮ್ಮನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಸಾಧನೆಯ ಬಗ್ಗೆ ನಿಮಗೆ ಏನನ್ನಿಸುತ್ತಿದೆ?

ಉತ್ತರ: ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿರುವುದು ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಎನಿಸುತ್ತಿದೆ. ನಾಲ್ಕೈದು ವರ್ಷಗಳಿಂದ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸುತ್ತಿದ್ದೆ. ಈಗ ಪ್ರಶಸ್ತಿಗೆ ಆಯ್ಕೆಯಾಗಿರುವುದರಿಂದ ನನ್ನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ.

ಪ್ರಶ್ನೆ: ಮೊದಲು ನಿಮಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಇತ್ತು. ಹಾಗಾದರೆ ನಿಮಗೆ ಕ್ರಿಕೆಟ್‌ನಿಂದ ಈ ಆಟದೆಡೆಗೆ ಹೇಗೆ ಒಲವು ಮೂಡಿತು?

ಉತ್ತರ: 2007ರಲ್ಲಿ ನಾನು ಡಿಪಿಎಸ್ ಶಾಲೆಗೆ ಕ್ರಿಕೆಟ್ ಕೋಚ್ ಆಗಿ ಸೇರಿಕೊಂಡೆ. ಆಗ ಅಲ್ಲಿ ವೈಸ್ ಪ್ರಿನ್ಸಿಪಾಲ್ ಆಗಿ ಡಿ.ಆರ್.ಸೈನಿ ಇದ್ದರು. 2010ರಲ್ಲಿ ದೆಹಲಿಯಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಸಿದ್ಧತೆ ನಡೆದಿತ್ತು. ಮೊದಲ ಬಾರಿಗೆ, ನಮ್ಮ ಶಾಲಾ ತಂಡ ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಹೋಗಿತ್ತು. ಅಲ್ಲಿ ನಾನು ತಂಡದ ಜೊತೆಗಿದ್ದೆ. ಆ ಸಮಯದಲ್ಲಿ ನಮ್ಮ ಶಾಲೆಯ ಆಟಗಾರರೊಬ್ಬರು ಅಸ್ವಸ್ಥರಾಗಿದ್ದರು. ನಂತರ ನನಗೆ ಲಾನ್ ಬಾಲ್ ಆಡಲು ಅವಕಾಶ ನೀಡಿದರು.

ಇದಾದ ನಂತರ, ನಮ್ಮ ಶಾಲೆಯ ತಂಡವು ಲಾನ್ ಬೌಲ್‌ಗಳಲ್ಲಿ ಕಂಚಿನ ಪದಕ ಪಡೆಯಿತು. ನಾನು ಬೆಳ್ಳಿ ಪದಕ ಗೆದ್ದೆ. ಉಪ ಪ್ರಾಂಶುಪಾಲರು ನನಗೆ ಈ ಆಟವನ್ನು ಮತ್ತಷ್ಟು ಆಡಲು ಪ್ರೇರೇಪಿಸಿದರು. 2009ರಲ್ಲಿ ಶಿಬಿರ ನಡೆದಾಗ ನಾನೂ ಕೂಡ ಈ ಕ್ರೀಡೆಗೆ ಆಯ್ಕೆಯಾದೆ. ಅಂದಿನಿಂದ ನಿರಂತರವಾಗಿ ಎಲ್ಲಾ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ಆಡುತ್ತಿದ್ದೇನೆ.

ಪ್ರಶ್ನೆ: ನಿಮ್ಮ ಯಶಸ್ಸಿನ ಕ್ರೆಡಿಟ್ ಯಾರಿಗೆ?

ಉತ್ತರ: ಈ ಆಟವನ್ನು ತಂದ ನಮ್ಮ ಒಕ್ಕೂಟಕ್ಕೆ ಕ್ರೆಡಿಟ್ ನೀಡಲು ಬಯಸುತ್ತೇನೆ. ವಿಶೇಷವಾಗಿ ಡಾ.ರಾಜಾ ರಣಧೀರ್ ಸಿಂಗ್, ಸುನೈನಾ ಕುಮಾರಿ, ಪ್ರಧಾನ ಕಾರ್ಯದರ್ಶಿ ಲೋಕೇಂದ್ರ, ಮ್ಯಾನೇಜರ್ ಅಂಜು ಮತ್ತು ಫೆಡರೇಶನ್‌ನ ಹಾಲಿ ಅಧ್ಯಕ್ಷ ರವಿಬೆಂಗ್ನಿ ಬೆಂಬಲವಿಲ್ಲದೆ ನಾನು ಬಹುಶಃ ಇಲ್ಲಿಯವರೆಗೆ ತಲುಪಲು ಸಾಧ್ಯವಿಲ್ಲ. ಇವರು ನನಗೆ ಮಾರ್ಗದರ್ಶನ ನೀಡಿದ್ದಾರೆ. ಪಂದ್ಯಾವಳಿಗೆ ಪ್ರಯಾಣಿಸಲು ಹಣಕಾಸು ವ್ಯವಸ್ಥೆ ಮಾಡಿದ್ದಾರೆ. ಇದಲ್ಲದೆ, ನನ್ನನ್ನು ಸಂಪೂರ್ಣವಾಗಿ ಬೆಂಬಲಿಸಿದ ನನ್ನ ಕುಟುಂಬ, ಪೋಷಕರು ಮತ್ತು ನನ್ನ ಸ್ನೇಹಿತರಿಗೆ ಕ್ರೆಡಿಟ್ ನೀಡುತ್ತೇನೆ.

ಪ್ರಶ್ನೆ: ನಿಮ್ಮ 12 ವರ್ಷಗಳ ಪ್ರಯಾಣದಲ್ಲಿ ಅತ್ಯಂತ ಸವಾಲಿನ ಸಂದರ್ಭ ಯಾವುದು?

ಉತ್ತರ: ನನಗೆ ಅತ್ಯಂತ ಸವಾಲಿನ ಸಮಯ 2022. ಆ ವರ್ಷ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ತಂಡವನ್ನು ಆಯ್ಕೆ ಮಾಡಬೇಕಿತ್ತು. ಅದೇ ವರ್ಷ ನಾನು ವಿಚ್ಛೇದನ​ ಪಡೆದೆ. ಇದರಿಂದಾಗಿ ತುಂಬಾ ಒತ್ತಡದಲ್ಲಿದ್ದೆ. 2019ರಲ್ಲಿ ವಿವಾಹವಾದೆ. ಆದರೆ ಕೋವಿಡ್‌ನಿಂದಾಗಿ ವಿಚ್ಛೇದನವನ್ನು 2022ರಲ್ಲಿ ಅಂತಿಮಗೊಳಿಸಲಾಯಿತು. ಹೀಗಿದ್ದರೂ ಕ್ರೀಡೆಯಲ್ಲಿ ಬಿಡದೆ ತೊಡಗಿಸಿಕೊಂಡೆ. ತಂಡಕ್ಕೆ ಆಯ್ಕೆಯಾದೆ. ನಾವೆಲ್ಲರೂ ಒಟ್ಟಾಗಿ ಉತ್ತಮ ಪ್ರದರ್ಶನ ನೀಡಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದೆವು.

ಪ್ರಶ್ನೆ: ಲಾನ್ ಬಾಲ್ ಆಟ ಹೆಚ್ಚು ಜನಪ್ರಿಯವಾಗಿಲ್ಲ. ಈ ಕ್ರೀಡೆಗೆ ದೇಶದಲ್ಲಿ ಸೌಲಭ್ಯಗಳ ಕೊರತೆ ಇದೆಯೇ?

ಉತ್ತರ: ಮೊದಲು ಈ ಆಟ ಯಾರಿಗೂ ತಿಳಿದಿರಲಿಲ್ಲ. ಆದರೆ ನಾವು ಕಾಮನ್‌ವೆಲ್ತ್‌ನಲ್ಲಿ ಚಿನ್ನದ ಪದಕ ಗೆದ್ದಾಗಿನಿಂದ ಈ ಆಟದ ಬಗ್ಗೆ ಜನರಿಗೆ ತಿಳಿದಿದೆ. ಕ್ರಮೇಣ ತಂಡಗಳೂ ಹೆಚ್ಚುತ್ತಿವೆ. ಈ ಹಿಂದೆ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಲಾನ್ ಬೌಲ್‌ಗಳ ಏಳು-ಎಂಟು ತಂಡಗಳು ಬರುತ್ತಿದ್ದವು. ಆದರೆ ಈ ಬಾರಿ 17-18 ತಂಡಗಳು ಹೋಗಿರುವುದು ಒಳ್ಳೆಯದು. ನಾನು ಶಿಕ್ಷಕಿಯಾಗಿರುವ ದೆಹಲಿಯ ಡಿಪಿಎಸ್ ಆರ್‌.ಕೆ.ಪುರಂನಲ್ಲಿ ಒಂದು ಮೈದಾನವಿದೆ. ಇನ್ನೊಂದು ಮೈದಾನವು ಯಮುನಾ ಕ್ರೀಡಾ ಸಂಕೀರ್ಣದಲ್ಲಿದೆ. ಇದಕ್ಕಾಗಿ ರಾಂಚಿ ಮತ್ತು ಕೋಲ್ಕತ್ತಾದಲ್ಲಿ ತಲಾ ಒಂದು ಮೈದಾನವಿದೆ. ದೆಹಲಿ ಸರ್ಕಾರವು ಲಾನ್ ಬಾಲ್‌ಗಳಿಗಾಗಿ ದೆಹಲಿಯಲ್ಲಿ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಬೇಕೆಂದು ನಾನು ಬಯಸುತ್ತೇನೆ. ಅದೇ ಸಮಯದಲ್ಲಿ, ಅದರ ಉಪಕರಣಗಳನ್ನು ವಿದೇಶದಲ್ಲಿ ತಯಾರಿಸಲಾಗುತ್ತದೆ. ಇದನ್ನು ದೇಶದಲ್ಲಿ ತಯಾರಿಸಲು ಪ್ರಾರಂಭಿಸಿದರೆ ಅದು ನಮಗೆ ಸುಲಭವಾಗುತ್ತದೆ.

ಪ್ರಶ್ನೆ: ಕ್ರಿಕೆಟ್ ಮತ್ತು ಹಾಕಿ ಆಟಗಾರರಂತೆ ಇತರ ಕ್ರೀಡೆಗಳ ಆಟಗಾರರಿಗೆ ಪ್ರೋತ್ಸಾಹವಿಲ್ಲ ಎಂದು ನೀವು ಭಾವಿಸುತ್ತೀರಾ?

ಉತ್ತರ: 2022ರಲ್ಲಿ ನಾವು ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದಾಗ ಕೇಂದ್ರ ಸರ್ಕಾರವು ನಮಗೆ ಪ್ರೋತ್ಸಾಹಧನ ನೀಡಿತು. ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಆದರೆ ನಮಗೆ ಕ್ರಿಕೆಟ್ ಅಥವಾ ಹಾಕಿ ತಂಡದ ಆಟಗಾರರಷ್ಟು ಪ್ರೋತ್ಸಾಹ ಸಿಕ್ಕಿಲ್ಲ ಎನ್ನುವುದು ಸತ್ಯ. ಸರ್ಕಾರದಿಂದ ಯಾವುದೇ ಉದ್ಯೋಗಾವಕಾಶವನ್ನೂ ನೀಡಿಲ್ಲ. ಇಷ್ಟೇ ಅಲ್ಲ, ನಮ್ಮನ್ನು ಬ್ರಾಂಡ್ ಅಂಬಾಸಿಡರ್‌ಗಳನ್ನಾಗಿ ಮಾಡಲು ಅಥವಾ ಕೆಲವು ಖಾಸಗಿ ಕಂಪನಿಗಳಿಂದ ಪ್ರೋತ್ಸಾಹಧನ ನೀಡಲು ಮುಂದಾಗಿದೆ.

ಪ್ರಶ್ನೆ: ಭವಿಷ್ಯದಲ್ಲಿ ನೀವೇನು ಮಾಡಲು ಬಯಸುತ್ತೀರಿ?

ಉತ್ತರ: ನಾನು ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದೇನೆ. ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗುವುದು ನನ್ನ ಕನಸಾಗಿದೆ. ಇದಲ್ಲದೆ, ನಾನು ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರನ್ನು ಭೇಟಿ ಮಾಡಲು ಬಯಸುತ್ತೇನೆ. ಏಕೆಂದರೆ ಅವರ ಕಂಪನಿಯು ನನ್ನ ನೆಚ್ಚಿನ ಕಾರ್​ ಆದ 'ಥಾರ್' ತಯಾರಿಸುತ್ತದೆ.

ಪ್ರಶ್ನೆ: ನಿಮ್ಮ ಮುಂದಿನ ಗುರಿ ಏನು? ಮುಂದೆ ಯಾವ ಟೂರ್ನಿಯಲ್ಲಿ ಭಾಗವಹಿಸಲಿದ್ದೀರಿ?

ಉತ್ತರ: ಮುಂದಿನ ಪಂದ್ಯಾವಳಿ ಮಾರ್ಚ್‌ನಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಶಿಪ್. ಅದು ಥಾಯ್ಲೆಂಡ್‌ನಲ್ಲಿ ನಡೆಯಲಿದೆ. ಅದಕ್ಕಾಗಿ ತಂಡವನ್ನು ಆಯ್ಕೆ ಮಾಡಿ ಜನವರಿ ವೇಳೆಗೆ ಶಿಬಿರ ಆರಂಭಿಸಲಾಗುವುದು. ಶಿಬಿರ ಎಲ್ಲಿಂದ ಆರಂಭವಾಗಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ನಾನು ಹೊಸ ವರ್ಷವನ್ನು ಶಿರಡಿಯಲ್ಲಿ ಆಚರಿಸುತ್ತೇನೆ. ಅಲ್ಲಿಂದ ಮರಳಿ ಬಂದ ನಂತರ ಚಾಂಪಿಯನ್​ಶಿಪ್​ಗೆ ತಯಾರಿ ಆರಂಭಿಸುತ್ತೇನೆ. ಈ ಬಾರಿಯೂ ಚಿನ್ನದ ಪದಕ ಗೆಲ್ಲುವ ಪ್ರಯತ್ನ ನಡೆಸುತ್ತೇವೆ.

ಇದನ್ನೂ ಓದಿ: ಹಾರ್ದಿಕ್​ ಪಾಂಡ್ಯ ಬಿಕರಿಗೆ ಗುಜರಾತ್​ ಟೈಟಾನ್ಸ್​ಗೆ ₹100 ಕೋಟಿ ನೀಡಿತಾ ಮುಂಬೈ ಇಂಡಿಯನ್ಸ್​?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.