ETV Bharat / bharat

ಈಟಿವಿ ಬಾಲ ಭಾರತ್​ನಲ್ಲಿ ಬೇಸಿಗೆ ರಜೆಗೆ ನೂತನ ಕಾರ್ಯಕ್ರಮಗಳು.. ಮಕ್ಕಳ ಮನರಂಜನೆಗಿಲ್ಲ ಕೊರತೆ

ಈಟಿವಿ ಬಾಲ ಭಾರತ ಬೇಸಿಗೆ ರಜೆಗೆ ಮಕ್ಕಳ ರಂಜಿಸಲು ಹಲವು ನೂತನ ಕಾರ್ಯಕ್ರಮಗಳನ್ನು ತಂದಿದೆ.

ಮಕ್ಕಳ ಮನರಂಜನೆಗಿಲ್ಲ ಕೊರತೆ
ಮಕ್ಕಳ ಮನರಂಜನೆಗಿಲ್ಲ ಕೊರತೆ
author img

By

Published : Apr 4, 2023, 7:35 AM IST

Updated : Apr 7, 2023, 3:35 PM IST

ಹೈದರಾಬಾದ್​: ಮನರಂಜನಾ ಲೋಕದಲ್ಲಿ ಈಟಿವಿ ನೆಟ್​ವರ್ಕ್​ ದೊಡ್ಡ ಸ್ಥಾನ ಹೊಂದಿದೆ. ಕಿರಿಯ ವೀಕ್ಷಕರಾದ ಮಕ್ಕಳ ವಿಷಯಕ್ಕೆ ಸಂಬಂಧಿಸಿದಂತೆಯೂ ಹಿಂದೆ ಬೀಳದ ಸಂಸ್ಥೆ ಅವರಿಗಾಗಿ "ಈಟಿವಿ ಬಾಲ ಭಾರತ" ಪ್ರತ್ಯೇಕ ವಾಹಿನಿ ಹೊಂದಿದೆ. ಇದರಲ್ಲಿ ಆನಿಮೇಟೆಡ್ ಸರಣಿಗಳು ಮತ್ತು ವ್ಯಂಗ್ಯಚಿತ್ರಗಳೊಂದಿಗೆ ಉತ್ತಮವಾದ ಮತ್ತು ರೋಮಾಂಚನಕಾರಿ ಕಥಾ ಸರಣಿಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಬಾರಿಯ ಬೇಸಿಗೆ ರಜೆಯಲ್ಲಿ ಮಕ್ಕಳನ್ನು ರಂಜಿಸಲು ಇನ್ನಷ್ಟು ಸರಣಿಗಳನ್ನು ವಾಹಿನಿ ಭಿತ್ತರಿಸುತ್ತಿದೆ.

ಬೇಸಿಗೆ ರಜೆಯಲ್ಲಿ ಯಾವೆಲ್ಲಾ ಕಾರ್ಯಕ್ರಮ ಪ್ರಸಾರ : ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಏಪ್ರಿಲ್ 1 ರಿಂದಲೇ ನೂತನ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ವಾಹಿನಿಯು ಮಕ್ಕಳನ್ನು ರಂಜಿಸಲು ಭಾರತೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಆಧಾರದ ಮೇಲೆ ಹಲವು ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.

ಸಾಹಸ ಮತ್ತು ಆ್ಯಕ್ಷನ್​ ಆಧರಿತ 'ಡೆನ್ನಿಸ್ ಮತ್ತು ಗ್ನಾಶರ್', ಬೇಬಿಸಿಟ್ಟಿಂಗ್​ ಮಕ್ಕಳಿಗಾಗಿ 'ಬೇಬಿ ಶಾರ್ಕ್​', ಉತ್ತಮ ಮನರಂಜನೆ ಮತ್ತು ಹಾಸ್ಯಭರಿತ ಜನಪ್ರಿಯವಾದ ‘ಸ್ಪಾಂಜ್‌ಬಾಬ್ ಸ್ಕ್ವೇರ್​ಪ್ಯಾಂಟ್ಸ್​​' ಎಂಬ ನೂತನ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿದೆ..

ಹೊಸ ಕಾರ್ಯಕ್ರಮಗಳಲ್ಲದೇ, ವಾಹಿನಿಯಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿರುವ ಪ್ರಮುಖ ಮೂರು ಕಾರ್ಯಕ್ರಮಗಳಾದ ಮಹಿಳಾ ಆಧರಿತ ಶೋ ಆದ 'ದಿ ಸಿಸ್ಟರ್ಸ್', ಕ್ಲಾಸಿಕ್ ಅಡ್ವೆಂಚರ್ ಸೀರೀಸ್ 'ದಿ ಜಂಗಲ್ ಬುಕ್' ಮತ್ತು 'ಪಾಂಡೇಜಿ ಪೆಹೆಲ್ವಾನ್’ ಅಲ್ಲದೇ, ಈಟಿವಿ ಬಾಲ ಭಾರತದ್ದೇ ಕಥಾನಕವಾದ ಸೂಪರ್‌ಹೀರೋ ಕೈಲಾಸಪುರ ಕೂಡ ಈ ಬಾರಿಯ ಬೇಸಿಗೆಯಲ್ಲಿ ಮಕ್ಕಳನ್ನು ರಂಜಿಸಲಿವೆ.

  • " class="align-text-top noRightClick twitterSection" data="">

ಸ್ಪಾಂಜ್‌ಬಾಬ್ ಸ್ಕ್ವೇರ್​ಪ್ಯಾಂಟ್ಸ್: ಸ್ಪಾಂಜ್‌ಬಾಬ್ ಸ್ಕ್ವೇರ್​ಪ್ಯಾಂಟ್ಸ್ ಸಮುದ್ರದ ಅಡಿ ವಾಸಿಸುವ ಸ್ಪಂಜುವಾಗಿದ್ದು, ರೆಸ್ಟೋರೆಂಟ್​ ಅನ್ನು ನಡೆಸಿಕೊಂಡು ಸರಳವಾಗಿ ಜೀವನವನ್ನು ನಡೆಸುತ್ತದೆ. ಸ್ಪಂಜು ಎಂಬ ಕಾರ್ಟೂನ್​ ತಮಾಷೆಗಳು ಮಕ್ಕಳಿಗೆ ಬಹುಪ್ರಿಯವಾಗಿರಲಿದೆ.

ಬೇಬಿ ಶಾರ್ಕ್: ಬೇಬಿ ಶಾರ್ಕ್ ತನ್ನ ಕುಟುಂಬದೊಂದಿಗೆ ವಾಸಿಸುವ ಕಾರ್ಟೂನ್​​ ಪ್ರಾಣಿಯಾಗಿದೆ. ಅದು ಮತ್ತು ಅವನ ಸ್ನೇಹಿತ ವಿಲಿಯಂ ಮಾಡುವ ಮೋಜಿನ ಜೊತೆ ನೀವು ನಲಿಯಬಹುದು.

ಡೆನ್ನಿಸ್ ಮತ್ತು ಗ್ನಾಶರ್: ಈ ಕಥೆಯು ಡೆನ್ನಿಸ್ ಎಂಬ ಹುಡುಗ ಮತ್ತು ಅವನ ಸ್ನೇಹಿತರಾದ ಗ್ನಾಶರ್, ರೂಬಿ, ಜೆಜೆ ಮತ್ತ್ತು ಪೈಫೇಸ್ ಅವರ ಸುತ್ತ ಹೆಣೆದ ಕಥೆಯಾಗಿದೆ. ಈ ಸರಣಿಯು ಅವರ ಶಾಲಾ ಜೀವನದ ಸಮಸ್ಯೆಗಳು ಮತ್ತು ರೋಚಕತೆಗಳನ್ನು ಹೊಂದಿದೆ. ಇದು ಮಕ್ಕಳನ್ನು ಬೇರೆಯದೇ ಜಗತ್ತಿಗೆ ಕೊಂಡೊಯ್ಯುತ್ತದೆ.

ದಿ ಸಿಸ್ಟರ್ಸ್: ಮಕ್ಕಳನ್ನು ದಿನದಲ್ಲಿ ಉತ್ಸಾಹಿಗಳನ್ನಾಗಿ ಮಾಡುವ ಕತೆಯಾಗಿದೆ. ಮಿಲಿ ಮತ್ತು ಜೂಲಿ ಇಬ್ಬರು ಸಹೋದರಿಯರು ಉತ್ತಮ ಸ್ನೇಹಿತರ ಜೊತೆಗೆ ಸ್ಪರ್ಧಾಳುಗಳಾಗಿರುತ್ತಾರೆ. ಅವರು ಮಾಡುವ ಜಗಳ, ಕೀಟಲೆ, ಸ್ಪರ್ಧೆ ಮತ್ತು ಅವರ ನಡುವಿನ ಪರಸ್ಪರ ಪ್ರೀತಿ ಮನ ಸೆಳೆಯುತ್ತದೆ.

ದಿ ಜಂಗಲ್ ಬುಕ್: ಇದು ಕಾಡಿನಲ್ಲಿ ಬೆಳೆದ ಹುಡುಗನ ಕತೆಯಾಗಿದೆ. ದಿ ಜಂಗಲ್ ಬುಕ್​ನ ಹೀರೋ ಮೋಗ್ಲಿ. ಈತ ಬಾಲೂ ಮತ್ತು ಬಘೀರಾ ಮಾರ್ಗದರ್ಶನದಲ್ಲಿ ಬೆಳೆದಿರುತ್ತಾನೆ. ಆತ ಕಾಡಿನಲ್ಲಿ ಪ್ರಾಣಿ, ಪಕ್ಷಿಗಳಿಗೆ ಸ್ನೇಹಿತನಾಗಿರುತ್ತಾನೆ.

ಪಾಂಡೇಜಿ ಪೆಹಲ್ವಾನ್: ಇದು ಬಲಾಢ್ಯನ ಕಥಾನಕವಾಗಿದೆ. ಪೆಹಲ್ವಾನ್​ ಪಾಂಡೇಜಿ ಕೈಲಾಸಪುರದ ಹೆಮ್ಮೆ. ಅವನು ಅಪಾರ ಆಹಾರ ಪ್ರೇಮಿ ಮತ್ತು ಅತ್ಯಂತ ಶಕ್ತಿಶಾಲಿ ಕೂಡ ಹೌದು. ಆತನ ಬಲ ಒನ್ ಮ್ಯಾನ್ ಆರ್ಮಿ ಇದ್ದಂತೆ. ಆತನ ಶಕ್ತಿ ಸಾಮರ್ಥ್ಯವನ್ನು ಈಟಿವಿ ಬಾಲ ಭಾರತ್ ಮಾತ್ರ ಪ್ರಸಾರ ಮಾಡುತ್ತದೆ.

ಬಾಲ ಬಾಹುಬಲಿ: ಬಾಲ ಬಾಹುಬಲಿ ಸೂರ್ಯನನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿರುವ ಏಕೈಕ ರಕ್ಷಕನಾಗಿರುತ್ತಾನೆ. ಕ್ಷುದ್ರಗ್ರಹದಿಂದ ಬ್ರಹ್ಮಾಂಡದ ಸಮತೋಲನವನ್ನು ಕಾಪಾಡುವ ದೈತ್ಯಾಕಾರದ ಮನುಷ್ಯನಾಗಿರುತ್ತಾನೆ. ಗ್ರಹದ ಶಕ್ತಿಯನ್ನು ಪಡೆದು ಸೂರ್ಯನನ್ನು ನುಂಗಲು ನುಂಗಲು ಬಯಸುತ್ತಾರೋ ಅವರ ವಿರುದ್ಧ ಈತ ಹೋರಾಡುತ್ತಾನೆ.

ಅಭಿಮನ್ಯು: ಈ ಧಾರಾವಾಹಿಯ ನಾಯಕ ಅಭಿಮನ್ಯು ಭಾರೀ ತುಂಟ. ಆದರೆ, ಪುಟ್ಟ ಹುಡುಗ ಯೋಧನಾಗುವ ನಿರಂತರ ಕನಸು ಕಂಡಿರುತ್ತಾನೆ. ಆದರೆ, ಆತನ ತಂದೆ ದೊಡ್ಡ ಉದ್ಯಮಿ. ಆತನಂತೆ ಮಗನೂ ಉದ್ಯಮಿಯಾಗಬೇಕು ಎಂಬುದು ತಂದೆಯ ಕೋರಿಕೆ. ಮುಂದೇನಾಗುತ್ತದೆ ಎಂಬುದು ಕತೆಯ ತಿರುಳಾಗಿದೆ.

ಈಟಿವಿ ಬಾಲ ಭಾರತ್​ ಕುರಿತು: ಈಟಿವಿ ಬಾಲ ಭಾರತ ಹೈದರಾಬಾದ್ ಮೂಲದ ಈಟಿವಿ ನೆಟ್‌ವರ್ಕ್​ನ ಪ್ರಮುಖ ಮನರಂಜನಾ ಬ್ರ್ಯಾಂಡ್​ ಆಗಿದೆ. 'ಈಟಿವಿ ಬಾಲ ಭಾರತ' ಕನ್ನಡ ಭಾಷೆಯೊಂದಿಗೆ ಇತರ ಪ್ರಮುಖ ಭಾರತೀಯ ಭಾಷೆಗಳಾದ ಅಸ್ಸಾಮಿ, ಬಂಗಾಳಿ, ಗುಜರಾತಿ, ಹಿಂದಿ, ಮರಾಠಿ, ಮಲಯಾಳಂ, ಒಡಿಯಾ, ಪಂಜಾಬಿ, ತೆಲುಗು, ತಮಿಳು, ಇಂಗ್ಲಿಷ್​ನಲ್ಲೂ ಲಭ್ಯವಿಲಿದೆ. ಇದು 'ETV ಬಾಲ ಭಾರತ HD' ಮತ್ತು 'ETV ಬಾಲ ಭಾರತ SD' ಅನ್ನು ಸಹ ಹೊಂದಿದೆ.

ಓದಿ: ಮಾಲ್ಡಾದಲ್ಲಿ ಫ್ಯಾಮಿಲಿ ಪ್ಯಾನ್ ಕೆಫೆ ಪ್ರಾರಂಭ.. ಮುಗಿಬಿದ್ದ ಗ್ರಾಹಕರು.. ಏಕೆ ಗೊತ್ತಾ?

Last Updated : Apr 7, 2023, 3:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.