ಸಾಮಾನ್ಯವಾಗಿ ಪಿಎಫ್(ಭವಿಷ್ಯ ನಿಧಿ)ನಿಂದ ಹಣ ಪಡೆದುಕೊಳ್ಳಲು ಕನಿಷ್ಠ ಮೂರರಿಂದ ನಾಲ್ಕು ದಿನ ಬೇಕಾಗುತ್ತದೆ. ಇದರ ಮಧ್ಯೆ ಅನೇಕ ರೀತಿಯ ತೊಂದರೆ ಸಹ ಎದುರಾಗ್ತವೆ. ಆದರೆ, ಇದೀಗ ಹೊಸ ನಿಯಮದ ಪ್ರಕಾರ ಪಿಎಫ್ ಖಾತೆದಾರರು ಕೇವಲ ಒಂದು ಗಂಟೆಯಲ್ಲಿ ಹಣ ವಿತ್‌ಡ್ರಾ ಮಾಡಬಹುದಾಗಿದೆ. ಯಾವುದೇ ವ್ಯಕ್ತಿ ಭವಿಷ್ಯ ನಿಧಿಯಿಂದ ಮುಂಗಡವಾಗಿ 1 ಲಕ್ಷ ರೂ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಹಣವನ್ನು ಆನ್ಲೈನ್ ಮೂಲಕ ಪಡೆದುಕೊಳ್ಳಲು ಇದೀಗ ಅವಕಾಶ ನೀಡಲಾಗಿದೆ.
EPFOನ ವೆಬ್ಸೈಟ್ನಲ್ಲಿ ಅಗತ್ಯ ಮಾಹಿತಿ ನೀಡುವ ಮೂಲಕ ಕೇವಲ ಒಂದು ಗಂಟೆಯಲ್ಲಿ ಹಣ ಪಡೆದುಕೊಳ್ಳಬಹುದಾಗಿದೆ. EPF ಹಣ ಪಡೆದುಕೊಳ್ಳಲು ಯುಎಎನ್ ಅಕೌಂಟ್ ನಂಬರ್ ಆಧಾರ್ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯ. ವ್ಯಕ್ತಿ ಕೆಲಸದಿಂದ ನಿವೃತ್ತರಾದಾಗ ಅಥವಾ ಎರಡು ತಿಂಗಳಗಿಂತಲೂ ಹೆಚ್ಚು ಕಾಲ ನಿರುದ್ಯೋಗಿಯಾದ ಸಂದರ್ಭದಲ್ಲಿ ಪಿಎಫ್ನ ಸಂಪೂರ್ಣ ಹಣ ಪಡೆದುಕೊಳ್ಳುವ ಅವಕಾಶವಿದೆ. ಇದರ ಜೊತೆಗೆ ವೈದ್ಯಕೀಯ, ಗೃಹ ಸಾಲ, ಗೃಹ ಸಾಲ ಮರುಪಾವತಿ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಭಾಗಶಃ ಹಣ ಪಡೆದುಕೊಳ್ಳಬಹುದು.
ಇದನ್ನೂ ಓದಿ: 'ವಿಶ್ವದ ವೃಕ್ಷಗಳ ನಗರ' ಎಂಬ ಹೆಗ್ಗಳಿಕೆಗೆ ಪಾತ್ರವಾದ ಮುತ್ತಿನ ನಗರಿ ಹೈದರಾಬಾದ್!
ಹಣ ಪಡೆದುಕೊಳ್ಳುವ ವಿಧಾನ:
1. epfindia.gov.inಗೆ ಲಾಗಿನ್ ಮಾಡಿ.
2. ವೆಬ್ಸೈಟ್ನ ಮುಖಪುಟದ ಬಲ ಮೂಲೆಯಲ್ಲಿ ಆನ್ಲೈನ್ ಮುಂಗಡ ಕ್ಲೈಮ್ ಆಯ್ಕೆಯ ಮೇಲೆ ಕ್ಲಿಕ್ಕಿಸಿ.
3. ಸೇವೆಗಳಿಗೆ ಹೋಗಿ, ಕ್ಲೈಮ್ ಫಾರ್ಮ್-31,19,10C ಮತ್ತು 10D ಭರ್ತಿ ಮಾಡಿ. ಫಾರ್ಮ್ ಭರ್ತಿ ಮಾಡಿದ ಬಳಿಕ ನಿಮ್ಮ ಬ್ಯಾಂಕ್ ಖಾತೆಯ ಕೊನೆಯ 4 ನಂಬರ್ ನಮೂದಿಸಿ, ಪರಿಶೀಲನೆ ಮಾಡಬೇಕು.
4. ಆನ್ಲೈನ್ ಕ್ಲೈಮ್ಗಾಗಿ ಮುಂದುವರಿಕೆ ಕ್ಲಿಕ್ ಮಾಡ್ಬೇಕು. ಇದಾದ ಬಳಿಕ ಪಿಎಫ್ ಅಡ್ವಾನ್ಸ್ ಆಯ್ಕೆ ಮಾಡಿ, ಹಣ ಪಡೆದುಕೊಳ್ಳುವ ಕಾರಣ ನಮೂದಿಸಬೇಕು.
5. ಇದಾದ ಬಳಿಕ ನಿಮಗೆ ಬೇಕಾದ ಮೊತ್ತ ಭರ್ತಿ ಮಾಡಿ, ಚೆಕ್ನ ಸ್ಕ್ಯಾನ್ ಮಾಡಿದ ಪ್ರತಿ ಅಪ್ಲೋಡ್ ಮಾಡಬೇಕು.
6. ಅರ್ಜಿದಾರನ ಪೂರ್ಣ ವಿಳಾಸ ನೀಡುವುದು ಕಡ್ಡಾಯ.
7. ಗೆಟ್ ಆಧಾರ್ ಒಟಿಪಿ ಮೇಲೆ ಕ್ಲಿಕ್ ಮಾಡಿ, ಆಧಾರ್ ಕಾರ್ಡ್ಗೆ ನೋಂದಣಿ ಮಾಡಿರುವ ಮೊಬೈಲ್ ನಂಬರ್ಗೆ ಬರುವ OTP ನಮೂದಿಸಬೇಕು.
8. ಇದಾದ ಬಳಿಕ ಒಂದು ಗಂಟೆಯಲ್ಲಿ ನಿಮ್ಮ ಖಾತೆಗೆ ಹಣ ಬರಲಿದೆ. ಇದರ ಜೊತೆಗೆ UMANG ವೆಬ್ಸೈಟ್ ಮೂಲಕ ಹಣ ಪಡೆದುಕೊಳ್ಳಬಹುದಾಗಿದೆ.
ಜೀವನದಲ್ಲಿ ಉಂಟಾಗುವ ಹಠಾತ್ ಸಮಸ್ಯೆಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಭವಿಷ್ಯ ನಿಧಿ ಈ ನಿರ್ಧಾರ ಕೈಗೊಂಡಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.