ತಿರುವನಂತಪುರಂ: ನಾನು ಈ ವಯಸ್ಸಿನಲ್ಲಿ ರಾಜಕೀಯಕ್ಕೆ ಏಕೆ ಪ್ರವೇಶಿಸಿದೆ ಎಂದು ಅನೇಕರು ನನ್ನನ್ನು ಕೇಳುತ್ತಾರೆ. ನನ್ನ ಉತ್ತರವೆಂದರೆ- ನಾನು ದೇಶಕ್ಕಾಗಿ ಅನೇಕ ಯೋಜನೆಗಳಲ್ಲಿ ಕೆಲಸ ಮಾಡಿದ್ದೇನೆ. ಈ ವಯಸ್ಸಿನಲ್ಲಿಯೂ ಕೆಲಸ ಮಾಡಲು ಮತ್ತು ಕೇರಳದ ಅಭಿವೃದ್ಧಿಗೆ ಬಳಸಲು ನನಗೆ ಸಾಕಷ್ಟು ಶಕ್ತಿ ಇದೆ. ಅದನ್ನು ನಾನು ಬಳಸಿಕೊಳ್ಳಲು ಬಯಸುತ್ತೇನೆ. ಅದಕ್ಕಾಗಿಯೇ ನಾನು ಬಿಜೆಪಿಗೆ ಸೇರಿಕೊಂಡೆ ಎಂದು ಹೇಳಿದರು.
ಇದನ್ನೂ ಓದಿ: ಕುಟುಂಬ ಯೋಜನೆ ಪರಿಕಲ್ಪನೆಗೆ ಇಸ್ಲಾಂ ವಿರೋಧಿಯಲ್ಲ: ಎಸ್.ವೈ.ಖುರೇಷಿ
ಕೇರಳದ ಶಂಗುಮುಖಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜತೆ ಬಿಜೆಪಿಯ ಕೇರಳ ವಿಜಯ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಇ. ಶ್ರೀಧರನ್, ಬಿಜೆಪಿ ಮಾತ್ರ ಕೇರಳವನ್ನು ಉಳಿಸಬಲ್ಲದು. ಇಲ್ಲಿನ ಜನರು ಎಲ್ಡಿಎಫ್ ಮತ್ತು ಕಾಂಗ್ರೆಸ್ನ ಭ್ರಷ್ಟ ರಂಗಗಳಿಂದ ಬದಲಾವಣೆ ಬಯಸುತ್ತಿದ್ದಾರೆ. ಸುಧಾರಣಾವಾದಿಗಳು ಹೊಸ ಕೇರಳದ ಕನಸು ಕಂಡಿದ್ದಾರೆ ಎಂದರು.
ಬಿಜೆಪಿ ನಟರಾದ ದೇವನ್ ಮತ್ತು ರಾಧಾ ಹಾಗೂ ಮಾಜಿ ಅಧಿಕಾರಿ ಕೆ.ವಿ. ಬಾಲಕೃಷ್ಣನ್ ಕೂಡ ಬಿಜೆಪಿಗೆ ಸೇರ್ಪಡೆಯಾದರು.