ETV Bharat / bharat

ವಿಮಾನ ಹಾರಾಟ ಮುನ್ನ ಕಾಕ್‌ಪಿಟ್‌, ಕ್ಯಾಬಿನ್‌ನ ಸಿಬ್ಬಂದಿಗೆ ಆಲ್ಕೋಹಾಲ್ ಪರೀಕ್ಷೆ ಕಡ್ಡಾಯ - ಡಿಜಿಸಿಎ

ಇನ್ಮುಂದೆ ವಿಮಾನ ಹಾರಾಟ ಆರಂಭಕ್ಕೂ ಮುನ್ನ ಕಾಕ್‌ಪಿಟ್‌ ಮತ್ತು ಕ್ಯಾಬಿನ್‌ನ ಶೇ.50 ರಷ್ಟು ಸಿಬ್ಬಂದಿಯನ್ನು ನಿತ್ಯ ಆಲ್ಕೋಹಾಲ್ ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯವಾಗಿದೆ.

Ensure pre-flight alcohol test of 50 pc crew members, DGCA tells airlines
ವಿಮಾನ ಹಾರಾಟ ಮುನ್ನ ಕಾಕ್‌ಪಿಟ್‌, ಕ್ಯಾಬಿನ್‌ನ ಶೇ.50 ರಷ್ಟು ಸಿಬ್ಬಂದಿಗೆ ಆಲ್ಕೋಹಾಲ್ ಪರೀಕ್ಷೆ ಕಡ್ಡಾಯ - ಡಿಜಿಸಿಎ
author img

By

Published : Mar 30, 2022, 1:34 PM IST

ನವದೆಹಲಿ: ವಿಮಾನಯಾನ ಸಂಸ್ಥೆಗಳು ಕಾಕ್‌ಪಿಟ್‌ ಮತ್ತು ಕ್ಯಾಬಿನ್‌ನ ಶೇ.50 ರಷ್ಟು ಸಿಬ್ಬಂದಿಯನ್ನು ನಿತ್ಯ ವಿಮಾನಯಾನಕ್ಕೂ ಮುನ್ನ ಆಲ್ಕೋಹಾಲ್ ಪರೀಕ್ಷೆಗೆ ಒಳಪಡಿಸಬೇಕು ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ಸೂಚನೆ ನೀಡಿದೆ. ಕೋವಿಡ್‌ ಬರುವುದಕ್ಕೂ ಮೊದಲು ಎಲ್ಲ ಸಿಬ್ಬಂದಿ ಸದಸ್ಯರು ವಿಮಾನ ಹಾರಾಟಕ್ಕೂ ಮುನ್ನ ಆಲ್ಕೋಹಾಲ್ ಪರೀಕ್ಷೆಗಳಿಗೆ ಒಳಗಾಗಬೇಕಾಗಿತ್ತು. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗ ಈ ಪರೀಕ್ಷೆಗಳನ್ನು ಒಂದೆರಡು ತಿಂಗಳವರೆಗೆ ಸ್ಥಗಿತಗೊಳಿಸಲಾಗಿತ್ತು. ನಂತರ ಪರೀಕ್ಷೆಗಳನ್ನು ಪುನಾರಂಭಿಸಿದರೂ ಸಣ್ಣ ಪ್ರಮಾಣದಲ್ಲಿ ಮಾಡಲಾಗುತ್ತಿದೆ.

ಸಿವಿಲ್ ಏವಿಯೇಷನ್ ​​ಡೈರೆಕ್ಟರೇಟ್ ಜನರಲ್ (ಡಿಜಿಸಿಎ) ನಿನ್ನೆ ಸೂಚನೆ ಹೊರಡಿಸಿದ್ದು, ದೇಶದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಕಡಿಮೆ ಹಾಗೂ ಸಾಮಾನ್ಯ ಸ್ಥಿತಿಗೆ ಮರಳುವ ಪರಿಣಾಮವಾಗಿ ವಾಯು ಸಂಚಾರದ ಪ್ರಮಾಣದಲ್ಲಿ ಹೆಚ್ಚಳದ ದೃಷ್ಟಿಯಿಂದ ಶೇ. 50 ರಷ್ಟು ಸಿಬ್ಬಂದಿ ಈ ಪರೀಕ್ಷೆಗಳಿಗೆ ಒಳಗಾಗುತ್ತಾರೆ ಎಂದು ಉಲ್ಲೇಖಿಸಿದೆ. ಫ್ಲೈಯಿಂಗ್ ತರಬೇತಿ ಸಂಸ್ಥೆಗಳ ಸಂದರ್ಭದಲ್ಲಿ ಶೇ.50 ರಷ್ಟು ಬೋಧಕರು ಮತ್ತು ಶೇ.40 ರಷ್ಟು ವಿದ್ಯಾರ್ಥಿ ಪೈಲಟ್‌ಗಳನ್ನು ನಿತ್ಯ ಪೂರ್ವ - ಫ್ಲೈಟ್ ಬ್ರೀತ್ - ಅನಾಲೈಸರ್‌ಗೆ ಒಳಪಡಿಸಬೇಕು ಎಂದು ಡಿಜಿಸಿಎ ತನ್ನ ಸೂಚನೆಯಲ್ಲಿ ತಿಳಿಸಿದೆ.

ಚಾರ್ಟರ್ ವಿಮಾನಗಳ ನಿರ್ವಾಹಕರು ಅಥವಾ ಮಾಲೀಕರು ತಮ್ಮ ಸಿಬ್ಬಂದಿಯ ಶೇ.50 ರಷ್ಟು ಮಂದಿ ಈ ಪರೀಕ್ಷೆಗಳಿಗೆ ಒಳಗಾಗುತ್ತಾರೆ ಎಂಬುದನ್ನ ಖಚಿತಪಡಿಸಿಕೊಳ್ಳಬೇಕು. ಕರ್ತವ್ಯಕ್ಕೆ ವರದಿ ಮಾಡುವ ಪ್ರತಿಯೊಬ್ಬ ವಿಮಾನಯಾನ ಉದ್ಯೋಗಿ ತಾನು ಮದ್ಯದ ಅಮಲಿನಲ್ಲಿಲ್ಲ ಮತ್ತು ಕರ್ತವ್ಯಕ್ಕೆ ವರದಿ ಮಾಡಿದ ಕೊನೆಯ 12 ಗಂಟೆಗಳಲ್ಲಿ ಅವನು ಅಥವಾ ಅವಳು ಆಲ್ಕೊಹಾಲ್ ಸೇವಿಸಿಲ್ಲ ಎಂದು ಪ್ರತಿಜ್ಞೆ ಸಲ್ಲಿಸಬೇಕು. ಕಾಕ್‌ಪಿಟ್ ಸಿಬ್ಬಂದಿ, ಕ್ಯಾಬಿನ್ ಸಿಬ್ಬಂದಿ ವೈದ್ಯಕೀಯ ಸಿಬ್ಬಂದಿಯ ಸಮ್ಮುಖದಲ್ಲಿ ಒಪ್ಪಂದವನ್ನು ಸಲ್ಲಿಸಬೇಕು. ಅದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಬೇಕು ಎಂದು ಡಿಜಿಸಿಎ ಉಲ್ಲೇಖಿಸಿದೆ.

ಮಂಗಳವಾರ ಹೊರಡಿಸಿದ ನೋಟಿಸ್‌ 3 ತಿಂಗಳ ಅವಧಿಗೆ ಮಾತ್ರ ಜಾರಿಯಲ್ಲಿರುತ್ತದೆ. ಭಾರತವು ಈ ವರ್ಷ ಮಾರ್ಚ್ 27 ರಂದು ಪೂರ್ಣ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳನ್ನು ಪುನಾರಂಭಿಸಿದೆ.

ಇದನ್ನೂ ಓದಿ: ಕೋವಿಡ್‌ನಿಂದ ವಿಮಾನ ಸಂಸ್ಥೆಗಳಿಗೆ ₹19 ಸಾವಿರ ಕೋಟಿ, ಏರ್ಪೋರ್ಟ್‌ಗಳಿಗೆ ₹5 ಸಾವಿರ ಕೋಟಿ ನಷ್ಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.