ETV Bharat / bharat

ಇಂಜಿನಿಯರ್ಸ್ ಡೇ..: ಅಗ್ರಮಾನ್ಯ ತಂತ್ರಜ್ಞ ವಿಶ್ವೇಶ್ವರಯ್ಯ ಸ್ಮರಣೆ... ಶುಭಕೋರಿದ ಪಿಎಂ - Mokshagundam Visvesvaraya

ಆಂಧ್ರಪ್ರದೇಶದ ಮೋಕ್ಷಗುಂಡಂ ಎಂಬ ಸ್ಥಳದಿಂದ ವಲಸೆ ಬಂದವರೆಂಬ ಕಾರಣಕ್ಕೆ ಮೋಕ್ಷಗುಂಡಂ ಹೆಸರು ವಿಶ್ವೇಶ್ವರಯ್ಯ ಅವರ ಹೆಸರಿಗೆ ಸೇರಿಕೊಂಡಿತು.

Engineers day : Mokshagundam Visvesvaraya  Birth day
ಇಂಜಿನಿಯರ್ಸ್ ಡೇ..: ಅಗ್ರಮಾನ್ಯ ಚಿಂತಕ ವಿಶ್ವೇಶ್ವರಯ್ಯ ಅವರ ಸ್ಮರಣೆ
author img

By

Published : Sep 15, 2021, 11:23 AM IST

ಇಂಜಿನಿಯರ್​ಗಳು ಎಂದಾಕ್ಷಣ ನಮಗೆಲ್ಲರಿಗೂ ನೆನಪಿಗೆ ಬರುವುದು ಅವರೊಬ್ಬರೇ.. 'ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದೇ ಲೇಸು' ಎಂಬ ತಮ್ಮದೇ ನುಡಿಯಂತೆ ನಡೆದು ಆದರ್ಶ ಪ್ರಾಯರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನ ಇಂದು. ಅವರ ಜನ್ಮದಿನವನ್ನೇ ದೇಶಾದ್ಯಂತ ಇಂಜಿನಿಯರ್​ಗಳ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.

ಕೈಗಾರಿಕರಣ ಇಲ್ಲವೇ ನಾಶ ಎಂಬ ಎಚ್ಚರಿಕೆ ಮೂಲಕ ದೇಶಕ್ಕೆ ಹೊಸ ಆಯಾಮ ಒದಗಿಸಿಕೊಟ್ಟ ವಿಶ್ವೇಶ್ವರಯ್ಯ ಅವರು ದೇಶ ಕಂಡ ಶ್ರೇಷ್ಠ ಸಿವಿಲ್ ಇಂಜಿನಿಯರ್, ಮೈಸೂರಿನ ದಿವಾನರೂ, ಅಣೆಕಟ್ಟುಗಳ ನಿರ್ಮಾಣದ ರೂವಾರಿಗಳೂ ಹಾಗೂ ಅರ್ಥಶಾಸ್ತ್ರಜ್ಞರೂ ಆಗಿದ್ದರು. ಇವರ ದೂರ ದೃಷ್ಟಿ, ಸಾಧನೆಗಳನ್ನು ಸ್ಮರಿಸುವ ಸಲುವಾಗಿ ಅವರ ಹುಟ್ಟುಹಬ್ಬವನ್ನು ಇಂಜಿನಿಯರ್​ಗಳ ದಿನವನ್ನಾಗಿ ಆಚರಿಸಲಾಗುತ್ತದೆ.

ವಿಶ್ವೇಶ್ವರಯ್ಯ ಅವರ ಬಗ್ಗೆ..

ಸರ್​ಎಂವಿ ಎಂದೇ ಹೆಸರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಸೆಪ್ಟೆಂಬರ್ 15, 1861ರಂದು ಕೋಲಾರ ಜಿಲ್ಲೆಯ ಮುದ್ದೇನಹಳ್ಳಿ (ಈಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ) ಎಂಬ ಹಳ್ಳಿಯಲ್ಲಿ ಜನಿಸಿದರು. ವಿಶ್ವೇಶ್ವರಯ್ಯ ಅವರ ತಂದೆ ಶ್ರೀನಿವಾಸ ಶಾಸ್ತ್ರಿ, ತಾಯಿ ವೆಂಕಟಲಕ್ಷ್ಮಮ್ಮ. ಇವರು ಆಂಧ್ರ ಪ್ರದೇಶದ ಮೋಕ್ಷಗುಂಡಂ ಎಂಬ ಸ್ಥಳದಿಂದ ವಲಸೆ ಬಂದವರೆಂಬ ಕಾರಣಕ್ಕೆ ಮೋಕ್ಷಗುಂಡಂ ಹೆಸರು ಇವರ ಹೆಸರಿಗೆ ಸೇರಿಕೊಂಡಿತು.

ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ಪಡೆದ ಸರ್​ಎಂವಿ ಭಾರತ ರತ್ನ ಪುರಸ್ಕೃತ ವಿಶ್ವೇಶ್ವರಯ್ಯ ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ಅಧ್ಯಯನ ಮಾಡಿದ್ದು, ಪುಣೆಯ ಕಾಲೇಜ್ ಆಫ್ ಸೈನ್ಸ್‌ನಲ್ಲಿ ಸಿವಿಲ್ ಎಂಜಿನಿಯರಿಂಗ್ ಓದಿದ್ದಾರೆ.

ಮತ್ತೊಬ್ಬ ಇಂಜಿನಿಯರ್ ಅರ್ಥರ್ ಕಾಟನ್ ಅವರಿಂದ ಭಾರಿ ಪ್ರಭಾವಿತರಾಗಿದ್ದ ಅವರು ಮೊದಲಿಗೆ ಅವರು ಮುಂಬೈನ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ಆದಾದ ನಂತರ ನೀರಾವರಿ ಇಲಾಖೆಗೆ ಸೇರ್ಪಡೆಯಾಗಿದ್ದರು. ಮೈಸೂರು ರಾಜ್ಯದಲ್ಲಿ ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸವೊಂದನ್ನು ಕಂಡು ಹಿಡಿದು ಅದಕ್ಕಾಗಿ 'ಪೇಟೆಂಟ್' ಪಡೆದರು. ಇವರು ಕಟ್ಟಿದ ಕೃಷ್ಣರಾಜಸಾಗರ ಅಭೂತಪೂರ್ಣ ಮತ್ತು ಅತ್ಯದ್ಭುತ..

ವಿಶ್ವೇಶ್ವರಯ್ಯ ಅವರಿಗೆ ಸಿಕ್ಕ ಗೌರವಗಳು

  • ಮೊದಲಿಗೆ ಬ್ರಿಟಿಷ್ ಸರ್ಕಾರದಿಂದ ಸರ್ ಗೌರವ
  • 1955ರಲ್ಲಿ ಭಾರತ ರತ್ನ ಪುರಸ್ಕಾರ
  • ಬೆಳಗಾವಿಯಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
  • ವಿಶ್ವೇಶ್ವರಯ್ಯ ಸ್ಮರಣೆಗೆ ಪ್ರತೀವರ್ಷ ಇಂಜಿನಿಯರಿಂಗ್ ದಿನ

ಮೋದಿಯಿಂದ ಟ್ವೀಟ್

ಇಂಜಿನಿಯರ್​ಗಳ ದಿನದಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಶ್ರಮಜೀವನ ಎಂಜಿನಿಯರ್‌ಗಳಿಗೆ ಎಂಜಿನಿಯರ್‌ ಡೇ ದಿನದ ಶುಭಾಶಯಗಳು. ಭೂಮಿಯನ್ನು ಉತ್ತಮ ಮತ್ತು ತಾಂತ್ರಿಕವಾಗಿ ಅಭಿವೃದ್ಧಿಪಡಿಸುವಲ್ಲಿ ಅವರ ಪಾತ್ರ ದೊಡ್ಡದು ಎಂದಿದ್ದಾರೆ.

  • Greetings on #EngineersDay to all hardworking engineers. No words are enough to thank them for their pivotal role in making our planet better and technologically advanced. I pay homage to the remarkable Shri M. Visvesvaraya on his birth anniversary and recall his accomplishments.

    — Narendra Modi (@narendramodi) September 15, 2021 " class="align-text-top noRightClick twitterSection" data=" ">

ಜೊತೆಗೆ ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸುವುದರ ಜೊತೆಗೆ ಅವರ ಸಾಧನೆಗಳನ್ನು ಸ್ಮರಿಸುತ್ತೇವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.