ಕಟಕ್(ಒಡಿಶಾ) : ಕಟಕ್ನ ಭುವನಾನಂದ ಒಡಿಶಾ ಸ್ಕೂಲ್ ಆಫ್ ಎಂಜಿನಿಯರಿಂಗ್ (BOSE) ನ ವಿದ್ಯಾರ್ಥಿ ಸ್ವಾಧಿನ್ ದಾಸ್, ಒಂದು ಕೊಠಡಿಯಲ್ಲಿನ ವಿದ್ಯುತ್ ಬಲ್ಬ್, ಫ್ಯಾನ್, ಎಸಿ ಮತ್ತು ಇತರ ಎಲೆಕ್ಟ್ರಾನಿಕ್ ಡಿವೈಸ್ಗಳನ್ನು ನಿರ್ವಹಿಸಬಲ್ಲ 'ಸ್ಮಾರ್ಟ್ ಮಿರರ್' ಅನ್ನು ಕಂಡು ಹಿಡಿದಿದ್ದಾರೆ.
ಈ ಸ್ಮಾರ್ಟ್ ಕನ್ನಡಿ ಧ್ವನಿ ಆಜ್ಞೆ (voice command) ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಮ್ಯೂಸಿಕ್ ಪ್ಲೆ ಮಾಡುವುದು, ನ್ಯೂಸ್ ಓದುವುದು, ಹವಾಮಾನ ವರದಿಯನ್ನು ನೀಡುವುದಲ್ಲದೆ ಮತ್ತು ಅಲೆಕ್ಸಾನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟು ಎದುರಾದ ಹಿನ್ನೆಲೆಯಲ್ಲಿ ಕಚ್ಚಾ ವಸ್ತುಗಳು ಲಭ್ಯವಿಲ್ಲದ ಕಾರಣ ಸ್ಮಾರ್ಟ್ ಮಿರರ್ ತಯಾರಿಸಲು ವಿದ್ಯಾರ್ಥಿ ಸುಮಾರು ನಾಲ್ಕು ತಿಂಗಳು ತೆಗೆದುಕೊಂಡಿದ್ದಾನೆ. ಎಲ್‌ಇಡಿ ಮಾನಿಟರ್, ರಾಸ್‌ಪ್ಬೆರಿ ಪೈ ಮತ್ತು ಎಐ ಸಾಧನ ಒಳಗೊಂಡಂತೆ ಹಾರ್ಡ್‌ವೇರ್ ತಂತ್ರಜ್ಞಾನವನ್ನು ಹೊಂದಿರುವ (2-way mirror) ಈ ಕನ್ನಡಿಯಿಂದ ಸ್ಮಾರ್ಟ್ ಮಿರರ್ ಅನ್ನು ಮಾಡಲಾಗಿದೆ ಎಂದು ವಿದ್ಯಾರ್ಥಿ ಸ್ವಾಧಿನ್ ಹೇಳಿದ್ದಾರೆ. ತಯಾರಿಕೆಗೆ ಸುಮಾರು ರೂ. 20,000 ರೂ. ಹಣ ಖರ್ಚಾಗಿದೆ.
ಈ ಸ್ಮಾರ್ಟ್ ತಂತ್ರಜ್ಞಾನವು ವಯಸ್ಸಾದವರು ಮತ್ತು ವಿಕಲಚೇತನರಿಗೆ ಹಾಸಿಗೆಯಿಂದ ಚಲಿಸದೆ ದೂರದಿಂದಲೇ ತಮ್ಮ ಮನೆಗಳಲ್ಲಿನ ಎಲೆಕ್ಟ್ರಾನಿಕ್ ಸಾಧನಗಳನ್ನು ನಿರ್ವಹಿಸಲು ಸಹಾಯಕವಾಗಿದೆ.
ಇದನ್ನೂ ಓದಿ:Video: ಸೇನಾ ಸಮವಸ್ತ್ರ ಧರಿಸಿ ರಾಷ್ಟ್ರಗೀತೆ ಹಾಡಿದ ಐದರ ಬಾಲೆಗೆ ಸಿಎಂ ಶ್ಲಾಘನೆ