ಶ್ರೀನಗರ(ಜಮ್ಮು-ಕಾಶ್ಮೀರ): ಜಮ್ಮು ಕಾಶ್ಮೀರ ರಾಜಧಾನಿ ಶ್ರೀನಗರದ ಹೊರವಲಯದಲ್ಲಿ ನಡೆದ ಎನ್ಕೌಂಟರ್ನಲ್ಲಿ ಓರ್ವ ಉಗ್ರನನ್ನು ಯೋಧರು ಬೇಟೆಯಾಡಿದ್ದಾರೆ. ಸೈನಿಕರು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿಯಲ್ಲಿ ವಿದೇಶಿ ಉಗ್ರನನ್ನು ಸದೆಬಡಿಯಲಾಗಿದೆ.
ಶ್ರೀನಗರ ಉಗ್ರರ ಎನ್ಕೌಂಟರ್ : ಶ್ರೀನಗರದ ಧರ್ಬಾಘ್ ಧರಾ ಪ್ರದೇಶದ ಹರ್ವಾನ್ನಲ್ಲಿ ಇಂದು ಬೆಳ್ಳಂಬೆಳಗ್ಗೆ ಈ ಎನ್ಕೌಂಟರ್ ನಡೆದಿದೆ ಎಂದು ತಿಳಿದುಬಂದಿದೆ. ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿಯೊಂದಿಗೆ ಪೊಲೀಸರು, ಆರ್ಮಿ ಮತ್ತು ಸಿಆರ್ಪಿಎಫ್ ಸೈನಿಕರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಸೈನಿಕರು ಸಹ ತಕ್ಕ ಪ್ರತಿಕ್ರಿಯೆ ನೀಡಿ ಓರ್ವ ಉಗ್ರನನ್ನು ಸದೆಬಡಿದಿದ್ದಾರೆ.
-
#SrinagarEncounterUpdate: 01 unidentified #terrorist killed. Search going on. Further details shall follow. @JmuKmrPolice https://t.co/WkdidJ4YQn
— Kashmir Zone Police (@KashmirPolice) December 18, 2021 " class="align-text-top noRightClick twitterSection" data="
">#SrinagarEncounterUpdate: 01 unidentified #terrorist killed. Search going on. Further details shall follow. @JmuKmrPolice https://t.co/WkdidJ4YQn
— Kashmir Zone Police (@KashmirPolice) December 18, 2021#SrinagarEncounterUpdate: 01 unidentified #terrorist killed. Search going on. Further details shall follow. @JmuKmrPolice https://t.co/WkdidJ4YQn
— Kashmir Zone Police (@KashmirPolice) December 18, 2021
ಹತನಾಗಿರುವ ಉಗ್ರನ ಮಾಹಿತಿ ಪತ್ತೆಯಾಗಿದ್ದು, ಈತ ವಿದೇಶಿ ಭಯೋತ್ಪಾದಕನಾಗಿದ್ದಾನೆ. ಡಿಸೆಂಬರ್ 16 ರಂದು ದಕ್ಷಿಣ ಕಾಶ್ಮೀರದ ಕುಲ್ಗಾಮ್ನಲ್ಲಿ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಇಬ್ಬರು ಅಪರಿಚಿತ ಉಗ್ರರನ್ನು ಯೋಧರು ಹೊಡೆದುರುಳಿಸಿದ್ದರು.
ಅಂತೆಯೇ ಡಿ. 15 ರಂದು ಪುಲ್ವಾಮಾ ಜಿಲ್ಲೆಯಲ್ಲಿ ಸ್ಥಳೀಯ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಫಿರೋಜ್ ಅಹ್ಮದ್ ದರ್ ಎಂಬಾತನನ್ನು ಎನ್ಕೌಂಟರ್ ವೇಳೆ ಸೈನಿಕರು ಬೇಟೆಯಾಡಿದ್ದರು.