ETV Bharat / bharat

ಬೆಳ್ಳಂಬೆಳಗ್ಗೆ ಕಣಿವೆ ನಾಡಿನಲ್ಲಿ ಗುಂಡಿನ ಮೊರೆತ: ಎರಡು ಕಡೆಗಳಲ್ಲಿ ಎನ್​ಕೌಂಟರ್​ ಶುರು - ಎನ್​ಕೌಂಟರ್

ಬೆಳ್ಳಂಬೆಳಗ್ಗೆ ಕಣಿವೆ ನಾಡಿನಲ್ಲಿ ಗುಂಡಿನ ಸದ್ದು ಮೊಳಗಿದೆ. ಭದ್ರತಾ ಪಡೆಗಳು ಉಗ್ರರ ಅಡಗು ತಾಣಗಳ ಮೇಲೆ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಉಗ್ರರು ಮತ್ತು ಭದ್ರತಾ ಪಡೆಗಳ ಮಧ್ಯೆ ಗುಂಡಿನ ಕಾಳಗ ಶುರುವಾಗಿದೆ.

Encounter Breaks Out In South Kashmir  encounters break out at Shopian and Baramulla  encounter between terrorists and security forces  Encounter has started in Jammu and Kashmir  ಬೆಳ್ಳಂಬೆಳಗ್ಗೆ ಕಣಿವೆ ನಾಡಿನಲ್ಲಿ ಗುಂಡಿನ ಸದ್ದು  ಎರಡು ಕಡೆಗಳಲ್ಲಿ ಎನ್​ಕೌಂಟರ್​ ಶುರು  ಭದ್ರತಾ ಪಡೆಗಳು ಉಗ್ರರ ಅಡುಗು ತಾಣಗಳ ಮೇಲೆ ಕಾರ್ಯಾಚರಣೆ  ಉಗ್ರರು ಮತ್ತು ಭದ್ರತಾ ಪಡೆಗಳ ಮಧ್ಯೆ ಗುಂಡಿನ ಕಾಳಗ  ಶೋಪಿಯಾನ್ ಮತ್ತು ಬಾರಾಮುಲ್ಲಾದಲ್ಲಿ ಭಯೋತ್ಪಾದಕರು  ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ದಾಳಿ  ಉಗ್ರರು ಭದ್ರತಾ ಪಡೆಗಳ ಮಧ್ಯೆ ಗುಂಡಿನ ಕಾಳಗ
ಬೆಳ್ಳಂಬೆಳಗ್ಗೆ ಕಣಿವೆ ನಾಡಿನಲ್ಲಿ ಗುಂಡಿನ ಸದ್ದು
author img

By

Published : Sep 30, 2022, 6:59 AM IST

Updated : Sep 30, 2022, 7:37 AM IST

ಶ್ರೀನಗರ: ಶುಕ್ರವಾರ ಮುಂಜಾನೆ ಶೋಪಿಯಾನ್ ಮತ್ತು ಬಾರಾಮುಲ್ಲಾದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ.

ಗುಂಡಿನ ಕಾಳಗ: ಬಾರಾಮುಲ್ಲಾದ ಯಡಿಪೋರಾ, ಪಟ್ಟನ್ ಪ್ರದೇಶದಲ್ಲಿ ಎನ್‌ಕೌಂಟರ್ ಆರಂಭಗೊಂಡಿದೆ. 'ಬಾರಾಮುಲ್ಲಾದ ಯಡಿಪೋರಾದ ಪಟ್ಟನ್ ಪ್ರದೇಶದಲ್ಲಿ ಎನ್‌ಕೌಂಟರ್ ಶುರುವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ' ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

ಚಿತ್ರಗಾಮ್​ನಲ್ಲಿ ಗುಂಡಿನ ದಾಳಿ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚಿತ್ರಗಾಮ್ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಪ್ರದೇಶದಲ್ಲಿ ಕೆಲವು ಉಗ್ರಗಾಮಿಗಳ ಇರುವಿಕೆ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಪಡೆದ ಸೇನೆ, ಸಿಆರ್‌ಪಿಎಫ್ ಮತ್ತು ಪೊಲೀಸರ ಜಂಟಿ ತಂಡಗಳು ಚಿತ್ರಗಾಮ್ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ನಡೆಸಿವೆ ಎಂದು ವರದಿಗಳು ತಿಳಿಸಿವೆ.

ಸೇನೆ, ಪೊಲೀಸ್ ಮತ್ತು ಸಿಆರ್‌ಪಿಎಫ್‌ನ ಜಂಟಿ ತಂಡವು ಶಂಕಿತ ಸ್ಥಳವನ್ನು ಸಮೀಪಿಸುತ್ತಿದ್ದಂತೆ ಅಡಗಿಕೊಂಡಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಭದ್ರತಾ ಪಡೆಗಳೂ ಪ್ರತಿದಾಳಿ ನಡೆಸಿದೆ. ಈ ಎನ್​ಕೌಂಟರ್​ ಕುರಿತು ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.

ಓದಿ: ಹಾವಿಗೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ಭದ್ರಾವತಿಯ ಸ್ನೇಕ್ ಮಾಸ್ಟರ್​​​

Last Updated : Sep 30, 2022, 7:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.